Tax Update : 10 ಲಕ್ಷದವರೆಗಿನ ಆದಾಯದ ಮೇಲೆ ತೆರಿಗೆ ಇಲ್ಲ : ಹಣಕಾಸು ಸಚಿವರ ಬಿಗ್ ಗಿಫ್ಟ್

2025 ರ ಬಜೆಟ್‌ನಲ್ಲಿ ಹೊಸ ತೆರಿಗೆ ಪದ್ಧತಿಯಲ್ಲಿ ಪ್ರಮುಖ ಬದಲಾವಣೆಯನ್ನು ಕಾಣಬಹುದು. 10 ಲಕ್ಷದವರೆಗಿನ ಆದಾಯವನ್ನು ತೆರಿಗೆ ಮುಕ್ತಗೊಳಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ.

Written by - Ranjitha R K | Last Updated : Jan 23, 2025, 12:53 PM IST
  • ದೇಶದ ಸಾಮಾನ್ಯ ಬಜೆಟ್ ಅನ್ನು ಫೆಬ್ರವರಿ 1, 2025 ರಂದು ಮಂಡನೆ
  • ಹೊಸ ತೆರಿಗೆ ಪದ್ಧತಿಯಲ್ಲಿ ದೊಡ್ಡ ಬದಲಾವಣೆ
  • 10 ಲಕ್ಷದವರೆಗಿನ ಆದಾಯದ ಮೇಲೆ ತೆರಿಗೆ ವಿನಾಯಿತಿ?
Tax Update : 10 ಲಕ್ಷದವರೆಗಿನ ಆದಾಯದ ಮೇಲೆ ತೆರಿಗೆ ಇಲ್ಲ : ಹಣಕಾಸು ಸಚಿವರ ಬಿಗ್ ಗಿಫ್ಟ್   title=

Budget 20205 : ದೇಶದ ಸಾಮಾನ್ಯ ಬಜೆಟ್ ಅನ್ನು ಫೆಬ್ರವರಿ 1, 2025 ರಂದು ಮಂಡಿಸಲಾಗುವುದು. ಈ ಬಾರಿ ತೆರಿಗೆ ಸ್ಲ್ಯಾಬ್‌ಗಳಲ್ಲಿನ ಬದಲಾವಣೆಗಳು ಮತ್ತು ಹೊಸ ತೆರಿಗೆ ಪದ್ಧತಿಯ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ.  ಈ ಬಜೆಟ್ ಸಾಮಾನ್ಯ ನಾಗರಿಕರಿಗೆ, ಅದರಲ್ಲಿಯೂ ವಿಶೇಷವಾಗಿ ಮಧ್ಯಮ ವರ್ಗ ಮತ್ತು ಹೆಚ್ಚಿನ ಆದಾಯ ಹೊಂದಿರುವವರಿಗೆ ಆದಾಯ ತೆರಿಗೆಯಲ್ಲಿ ಅನೇಕ ಪರಿಹಾರಗಳ ಭರವಸೆಯನ್ನು ನೀಡುತ್ತದೆ. 

ಹೊಸ ತೆರಿಗೆ ಪದ್ಧತಿಯಲ್ಲಿ ದೊಡ್ಡ ಬದಲಾವಣೆ: 10 ಲಕ್ಷದವರೆಗಿನ ಆದಾಯದ ಮೇಲೆ ತೆರಿಗೆ ವಿನಾಯಿತಿ?: 
2025 ರ ಬಜೆಟ್‌ನಲ್ಲಿ ಹೊಸ ತೆರಿಗೆ ಪದ್ಧತಿಯಲ್ಲಿ ಪ್ರಮುಖ ಬದಲಾವಣೆಯನ್ನು ಕಾಣಬಹುದು. 10 ಲಕ್ಷದವರೆಗಿನ ಆದಾಯವನ್ನು ತೆರಿಗೆ ಮುಕ್ತಗೊಳಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ಅಂದರೆ ನಿಮ್ಮ ವಾರ್ಷಿಕ ಆದಾಯ 10 ಲಕ್ಷದವರೆಗೆ ಇದ್ದರೆ, ನೀವು ತೆರಿಗೆ ಪಾವತಿಸಬೇಕಾಗಿಲ್ಲ. ಈ ಪ್ರಸ್ತಾವನೆ ಕಾರ್ಯರೂಪಕ್ಕೆ ಬಂದರೆ ಮಧ್ಯಮ ವರ್ಗದವರಿಗೆ ದೊಡ್ಡ ಪರಿಹಾರ ಸಿಗಬಹುದು ಮತ್ತು ಖರ್ಚು ಮಾಡುವ ಶಕ್ತಿಯೂ ಹೆಚ್ಚಾಗಬಹುದು.

ಇದನ್ನೂ ಓದಿ : ಕೇಂದ್ರ ಬಜೆಟ್ 2025: ಈ ಎಲ್ಲಾ ಬದಲಾವಣೆಗಳಾಗುತ್ತಾ ಎಂಬುದೇ ದೇಶದ ಜನರ ಅತೀವ ನಿರೀಕ್ಷೆ

15 ಲಕ್ಷದಿಂದ 20 ಲಕ್ಷದವರೆಗೆ ಆದಾಯವಿರುವವರಿಗೂ ಪರಿಹಾರ : 
ಪ್ರಸ್ತುತ, ಯಾರೊಬ್ಬರ ವಾರ್ಷಿಕ ಆದಾಯವು 15 ಲಕ್ಷ ರೂ.ಗಿಂತ ಹೆಚ್ಚಿದ್ದರೆ, ಅದರ ಮೇಲೆ 30% ತೆರಿಗೆ ವಿಧಿಸಲಾಗುತ್ತದೆ. ಆದರೆ, 15 ಲಕ್ಷದಿಂದ 20 ಲಕ್ಷದವರೆಗಿನ ಆದಾಯ ಹೊಂದಿರುವವರಿಗೆ 2025ರ ಬಜೆಟ್‌ನಲ್ಲಿ ಹೊಸ ಸ್ಲ್ಯಾಬ್ ಅನ್ನು ಪರಿಚಯಿಸಬಹುದು.ಈ ಹೊಸ ಸ್ಲ್ಯಾಬ್‌ನಲ್ಲಿ ತೆರಿಗೆಯನ್ನು 30% ರಿಂದ 25% ಕ್ಕೆ ಇಳಿಸಬಹುದು. ಈ ಬದಲಾವಣೆಯು ವಿಶೇಷವಾಗಿ ಹೆಚ್ಚಿನ ಆದಾಯ ಹೊಂದಿರುವವರಿಗೆ ಪರಿಹಾರವಾಗಬಹುದು. 

ಹೊಸ ತೆರಿಗೆ ಪದ್ಧತಿಯಲ್ಲಿ ಬದಲಾವಣೆ : 
ಪ್ರಸ್ತುತ ಹೊಸ ತೆರಿಗೆ ಪದ್ಧತಿಯಲ್ಲಿ 7.75 ಲಕ್ಷ ರೂ.ವರೆಗಿನ ಆದಾಯದ ಮೇಲೆ ಯಾವುದೇ ತೆರಿಗೆ ಇರುವುದಿಲ್ಲ. ಈ ಮಿತಿಯನ್ನು 10 ಲಕ್ಷಕ್ಕೆ ಹೆಚ್ಚಿಸಿದರೆ ಲಕ್ಷಾಂತರ ಜನರಿಗೆ ಇದರ ಲಾಭವಾಗಲಿದೆ. ಈ ಬದಲಾವಣೆಯ ನಂತರ, 10 ಲಕ್ಷದವರೆಗಿನ ಆದಾಯವನ್ನು ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿರುತ್ತದೆ. ಇದರಿಂದಾಗಿ ಸಣ್ಣ ಮತ್ತು ಮಧ್ಯಮ ವರ್ಗದ ಜನರು ಹೆಚ್ಚಿನ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ. ಹೊಸ ತೆರಿಗೆ ಪದ್ಧತಿಯಲ್ಲಿ ಹೆಚ್ಚು ಹೆಚ್ಚು ತೆರಿಗೆದಾರರನ್ನು ಸೇರಿಸುವುದು ಈ ಬದಲಾವಣೆಯ ಉದ್ದೇಶಗಳಲ್ಲಿ ಒಂದಾಗಿದೆ. 

ಇದನ್ನೂ ಓದಿ : ಸರ್ಕಾರಿ ನೌಕರರಿಗೆ ಒಂದರ ಹಿಂದೆ ಒಂದು ಗುಡ್ ನ್ಯೂಸ್ ! 8ನೇ ವೇತನ ಆಯೋಗ ಜಾರಿ ಜೊತೆಗೆ ನಿವೃತ್ತಿ ವಯಸ್ಸಿನಲ್ಲಿಯೂ ಬದಲಾವಣೆ

ಹಳೆಯ ತೆರಿಗೆ ಪದ್ಧತಿ vs ಹೊಸ ತೆರಿಗೆ ಪದ್ಧತಿ
ಹಳೆಯ ತೆರಿಗೆ ಪದ್ಧತಿಯ ಸ್ಲ್ಯಾಬ್
₹0-2.5 ಲಕ್ಷ: 0% ತೆರಿಗೆ
₹2.5-5 ಲಕ್ಷ: 5% ತೆರಿಗೆ
₹5-10 ಲಕ್ಷ: 20% ತೆರಿಗೆ
₹10 ಲಕ್ಷ+: 30% ತೆರಿಗೆ

ಹೊಸ ತೆರಿಗೆ ಸ್ಲ್ಯಾಬ್
₹0-3 ಲಕ್ಷ: 0% ತೆರಿಗೆ
₹3-6 ಲಕ್ಷ: 5% ತೆರಿಗೆ
₹6-9 ಲಕ್ಷ: 10% ತೆರಿಗೆ
₹9-12 ಲಕ್ಷ: 15% ತೆರಿಗೆ
₹12-15 ಲಕ್ಷ: 20% ತೆರಿಗೆ
₹15 ಲಕ್ಷ+: 30 % ತೆರಿಗೆ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News