Veena Nair divorce Case: ದಕ್ಷಿಣ ಭಾರತದ ಮಲೆಯಾಳಂ ಸಿನಿಮಾ ಮತ್ತು ಧಾರಾವಾಹಿ ನಟಿಯಾಗಿರುವ ವೀಣಾ ನಾಯರ್ ಅವರು ತಮ್ಮ ವೈಯಕ್ತಿಕ ಜೀವನ, ಮಗನ ವಿಚಾರ ಮತ್ತು ಇತರ ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
Veena Nair divorce Case: ಇತ್ತೀಚೆಗೆ ಬಿಗ್ ಬಾಸ್ ಮನೆಗೆ ಹೋಗಿಬಂದ ಧಾರಾವಾಹಿ ನಟಿ ಇದೀಗ ಗಂಡನಿಂದ ದೂರವಾಗಿದ್ದಾರೆಂದು ಸುದ್ದಿಯಾಗಿದೆ. ಬಿಗ್ ಬಾಸ್ ಮನೆಯಲ್ಲಿ ಮುಕ್ತವಾಗಿ ಬೇರೊಬ್ಬ ವ್ಯಕ್ತಿಯನ್ನು ಸ್ನೇಹಿತನನ್ನಾಗಿ ಮಾಡಿಕೊಂಡಿದ್ದೇ ಆ ನಟಿಯ ಗಂಡನ ಕೋಪಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಇದೀಗ ಗಂಡನಿಂದ ಡಿವೋರ್ಸ್ ಕೇಳಲಾಗಿದೆ ಎಂಬ ಗಾಳಿಸುದ್ದಿ ಹರಡಿದ್ದು, ಇದಕ್ಕೆ ಸ್ವತಃ ನಟಿಯೇ ಉತ್ತರ ನೀಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ದಕ್ಷಿಣ ಭಾರತದ ಮಲೆಯಾಳಂ ಸಿನಿಮಾ ಮತ್ತು ಧಾರಾವಾಹಿ ನಟಿಯಾಗಿರುವ ವೀಣಾ ನಾಯರ್ ಅವರು ತಮ್ಮ ವೈಯಕ್ತಿಕ ಜೀವನ, ಮಗನ ವಿಚಾರ ಮತ್ತು ಇತರ ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ತಮ್ಮ ಪತಿಯಿಂದ ದೂರವಾಗಿ ವಾಸ ಮಾಡುತ್ತಿದ್ದರೂ ಕಾನೂನುಬದ್ಧವಾಗಿ ವಿಚ್ಛೇದನ ಪಡೆದಿಲ್ಲವೆಂದು ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ʼನನ್ನ ಮಗ ತುಂಬಾ ಸಂತೋಷವಾಗಿದ್ದಾನೆ. ಅವನು ನಮ್ಮಿಬ್ಬರನ್ನೂ ಮಿಸ್ ಮಾಡಿಕೊಳ್ಳುತ್ತಿಲ್ಲ. ಅವನ ತಂದೆ ಬಂದಾಗ ಅವರ ಜೊತೆ ಹೊರಗೆ ಹೋಗುತ್ತಾನೆ. ನಾನು ಒಬ್ಬ ತಾಯಿಯ ಪ್ರೀತಿಯನ್ನು ಮಾತ್ರ ಕೊಡಬಲ್ಲೆ. ತಂದೆಯ ಪ್ರೀತಿ ಕೊಡಲು ಸಾಧ್ಯವಿಲ್ಲ. ಅದು ಅವನಿಗೆ ಅವರಪ್ಪನ ಮೂಲಕವೇ ಸಿಗುತ್ತಿದೆ' ಅಂತಾ ವೀಣಾ ನಾಯರ್ ಹೇಳಿದ್ದಾರೆ. ನಮ್ಮಿಬ್ಬರ ನಡುವಿನ ಸಮಸ್ಯೆಯಿಂದ ನಾವು ದೂರವಾಗಿದ್ದೇವೆ. ಅದು ನನ್ನ ಮಗನ ಮೇಲೆ ಪರಿಣಾಮ ಬೀರಬಾರದು ಅಂತಾ ನಾನು ಬಯಸುತ್ತೇನೆಂದು ಹೇಳಿದ್ದಾರೆ. ಬಿಗ್ ಬಾಸ್ ತಮ್ಮ ದಾಂಪತ್ಯ ಜೀವನದ ಮೇಲೆ ಪರಿಣಾಮ ಬೀರಿದೆ ಅನ್ನೋ ವದಂತಿಗಳನ್ನ ಅವರು ನಿರಾಕರಿಸಿದ್ದಾರೆ.
ತಾವು ಎದುರಿಸುತ್ತಿರುವ ಬಾಡಿ ಶೇಮಿಂಗ್ ಬಗ್ಗೆಯೂ ವೀಣಾ ಅವರು ಮುಕ್ತವಾಗಿ ಮಾತನಾಡಿದ್ದಾರೆ. ʼಇಂತಹ ಕಾಮೆಂಟ್ಗಳು ಸಾಮಾನ್ಯವಾಗಿ ಕೇಳಿಬರುತ್ತವೆ. ಹೇಳುವವರು ಹೇಳುತ್ತಲೇ ಇರುತ್ತಾರೆ. ಮೊದಲು ಕೆಲವರು ತಮಾಷೆಯಾಗಿ ಕೇಳುತ್ತಿದ್ದರು, ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಬಹಿರಂಗವಾಗಿ ಈ ಬಗ್ಗೆ ಟ್ರೋಲ್ ಮಾಡುತ್ತಿದ್ದಾರೆ. ಇದರಿಂದ ನನಗೆ ಅನೇಕ ಬಾರಿ ಬೇಜಾರು ಆಗುತ್ತದೆ. ಆದರೆ ಕಾಮೆಂಟ್ ಮಾಡುವವರನ್ನ ಮತ್ತು ಟ್ರೋಲ್ ಮಾಡುವವರನ್ನ ನಿಲ್ಲಿಸುವವರು ಯಾರು? ಅಂತಾ ಪ್ರಶ್ನಿಸಿದ್ದಾರೆ.
ʼತೂಕ ಹೆಚ್ಚಾಗಿದೆ ಎಂದು ನನಗೆ ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲ. ನಾನು ಚಿಕ್ಕಂದಿನಿಂದಲೂ ಹೀಗೆಯೇ ಇದ್ದೇನೆ. ಎರಡ್ಮೂರು ವರ್ಷಗಳ ಹಿಂದೆ 20 ಕೆಜಿ ತೂಕ ಇಳಿಸಿಕೊಂಡಾಗ ನನ್ನನ್ನು ಸ್ವಲ್ಪ ತೂಕ ಕಡಿಮೆಯಾಗಿ ಎಲ್ಲರೂ ನೋಡಿರಬಹುದು. ಶಾಲೆಯಲ್ಲಿ ಓದುವಾಗ ತೂಕದ ಕಾರಣದಿಂದ ನನ್ನನ್ನು ಕೀಟಲೆ ಮಾಡುತ್ತಿದ್ದರು. ಹೇಳುವವರು ಹೇಳಲಿ ಬಿಡಿ, ಇದಕ್ಕೆ ನಾನು ಯಾವುದೇ ರೀತಿ ತಲೆ ಕೆಡಿಸಿಕೊಳ್ಳದೇ ಮುಂದೆ ಹೋಗುವುದರ ಬಗ್ಗೆ ಆಲೋಚನೆ ಮಾಡುತ್ತೇನೆ' ಅಂತಾ ವೀಣಾ ಹೇಳಿದ್ದಾರೆ.
ಕಿರುತೆರೆ ಧಾರಾವಾಹಿಗಳ ಮೂಲಕ ಅಭಿನಯ ಕ್ಷೇತ್ರಕ್ಕೆ ಪ್ರವೇಶಿಸಿದ ವೀಣಾ ನಾಯರ್ ಅವರು, ಹಾಸ್ಯ ನಟಿಯಾಗಿ ಗುರುತಿಸಿಕೊಂಡರು. ನಂತರ ಸಿನಿಮಾಗಳಲ್ಲೂ ಸಕ್ರಿಯರಾದರು. 'ವೆಳ್ಳಿಮೂಂಗ' ಚಿತ್ರದಲ್ಲಿನ ಅವರ ಪಾತ್ರ ಗಮನ ಸೆಳೆಯಿತು. ಬಿಗ್ ಬಾಸ್ ಮಲಯಾಳಂನ 2ನೇ ಸೀಸನ್ನಲ್ಲಿ ಸ್ಪರ್ಧಿಸಿದ್ದರು. ಇದಾದ ನಂತರ ಗಂಡ ತಮ್ಮಿಂದ ದೂರವಾಗುತ್ತಿದ್ದಾರೆಂಬ ಮಾಹಿತಿ ಸುಳ್ಳು ಎಂದು ಹೇಳಿಕೊಂಡಿದ್ದಾರೆ. ಇದೀಗ ಬೆಳ್ಳಿತೆರೆ ಮತ್ತು ಕಿರುತೆರೆಯಲ್ಲಿ ಈ ನಟಿ ಸಕ್ರಿಯರಾಗಿದ್ದಾರೆ.