ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡ್ತೀರಾ..? ಮೊದಲು ಈ ವಿಷಯ ತಿಳಿದುಕೊಳ್ಳಿ, ನಂತರ ಮಾಡಿ

Pre workout food : ಅನೇಕ ಜನರು ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡುತ್ತಾರೆ. ಇದರಿಂದ ಅವರಿಗೆ ವಾಂತಿ ಮತ್ತು ವಾಕರಿಕೆಯಂತಹ ತೊಂದರೆಗೆ ಒಳಗಾಗುತ್ತಾರೆ. ವಾಸ್ತವವಾಗಿ, ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡುವುದು ಒಳ್ಳೆಯದಾ ಅಥವಾ ಕೆಟ್ಟದ್ದಾ..? ವೈದ್ಯರು ಏನ್‌ ಹೇಳ್ತಾರೆ..? ಬನ್ನಿ ನೋಡೋಣ..
 

1 /5

ನಾವು ತೂಕವನ್ನು ಕಳೆದುಕೊಳ್ಳುವ ಬಗ್ಗೆ ಯೋಚಿಸಿದಾಗ, ಮನಸ್ಸಿಗೆ ಬರುವ ಮೊದಲ ವಿಷಯವೆಂದರೆ ವ್ಯಾಯಾಮ. ಕೆಲವರು ತೂಕವನ್ನು ವೇಗವಾಗಿ ಕಳೆದುಕೊಳ್ಳಲು ಪ್ರತಿದಿನ ವಿವಿಧ ವ್ಯಾಯಾಮಗಳನ್ನು ಮಾಡುತ್ತಾರೆ. ಅದರಂತೆ, ಕೆಲವರು ಜಿಮ್‌ಗೆ ಹೋಗುತ್ತಾರೆ, ಇನ್ನೂ ಕೆಲವರು ವಾಕಿಂಗ್, ಓಟ ಇತ್ಯಾದಿ ಹಾದಿ ಹಿಡಿಯುತ್ತಾರೆ..   

2 /5

ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡುವುದು ಒಳ್ಳೆಯದಲ್ಲ. ದೇಹದ ಕೊಬ್ಬನ್ನು ತ್ವರಿತವಾಗಿ ಹೊರಹಾಕಬಹುದಾದರೂ, ವ್ಯಾಯಾಮ ಮಾಡುವಾಗ ಗ್ಲೈಕೊಜೆನ್ ಸವಕಳಿ ಹೆಚ್ಚು ತೀವ್ರವಾಗಿರುತ್ತದೆ. ಇದು ದೇಹವನ್ನು ದುರ್ಬಲಗೊಳಿಸುತ್ತದೆ. ಮತ್ತೆ ವ್ಯಾಯಾಮ ಮಾಡಲು ಕಷ್ಟವಾಗುತ್ತದೆ. ಆದ್ದರಿಂದ ವ್ಯಾಯಾಮ ಮಾಡುವ ಮುನ್ನ ಸ್ವಲ್ಪ ತಿನ್ನುವುದು ಪ್ರಯೋಜನಕಾರಿ.   

3 /5

ಪ್ರತಿದಿನ ಬೆಳಿಗ್ಗೆ ವ್ಯಾಯಾಮದ ಮೊದಲು ಬಾಳೆಹಣ್ಣು ತಿನ್ನಿರಿ. ಬಾಳೆಹಣ್ಣು ತಿನ್ನುವುದರಿಂದ ದೇಹಕ್ಕೆ ಅಗತ್ಯವಾದ ಶಕ್ತಿ ಸಿಗುತ್ತದೆ. ಕಾರ್ಬೋಹೈಡ್ರೇಟ್‌ಗಳು ಮತ್ತು ಪೊಟ್ಯಾಸಿಯಮ್ ಸ್ನಾಯುಗಳು ಮತ್ತು ನರಗಳನ್ನು ಸಕ್ರಿಯವಾಗಿಡಲು ಸಹಾಯ ಮಾಡುತ್ತದೆ. ನಿಮಗೆ ಬಾಳೆಹಣ್ಣು ಇಷ್ಟವಿಲ್ಲದಿದ್ದರೆ, ಸೇಬನ್ನು ಸೇವಿಸಬಹುದು.   

4 /5

ಸೇಬುಗಳಲ್ಲಿ ಫೈಬರ್ ಅಧಿಕವಾಗಿರುತ್ತದೆ. ಇದು ಹೆಚ್ಚು ಕಾಲ ಹೊಟ್ಟೆ ಹಸಿವಾಗದಂತೆ ನೋಡಿಕೊಳ್ಳುತ್ತದೆ. ಪರಿಣಾಮವಾಗಿ ನೀವು ಆರೋಗ್ಯಕರ ರೀತಿಯಲ್ಲಿ ತೂಕವನ್ನು ಕಳೆದುಕೊಳ್ಳಬಹುದು. ಊಟದ ನಂತರ ವ್ಯಾಯಾಮ ಮಾಡುವುದು ಸೂಕ್ತವಲ್ಲ... ಆದ್ದರಿಂದ ಮುಂದಿನ ಬಾರಿ ವ್ಯಾಯಾಮ ಮಾಡುವ ಮುನ್ನ ಈ ಎರಡಲ್ಲಿ ಯಾವುದಾದರೂ ಒಂದು ಹಣ್ಣನ್ನ ತಿನ್ನಿ..   

5 /5

(ಸೂಚನೆ : ಈ ವಿವರಗಳನ್ನು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಬರೆಯಲಾಗಿದೆ. ವಿಷಯಗಳು ಮಾಹಿತಿಗಾಗಿ ಮಾತ್ರ. ಅಳವಡಿಸಿಕೊಳ್ಳುವ ಮೊದಲು ಸಂಬಂಧಿತ ತಜ್ಞರ ಸಲಹೆಯನ್ನು ತೆಗೆದುಕೊಳ್ಳಿ. ಯಾವುದೇ ಅಡ್ಡ ಪರಿಣಾಮಗಳಿಗೆ Zee Kannada News ಜವಾಬ್ದಾರನಾಗಿರುವುದಿಲ್ಲ.)