Bigg Boss Season 11: ಕಿಚ್ಚ ಸುದೀಪ್ ಬಿಗ್ ​ಬಾಸ್ ಬಿಡಲು ಅಸಲಿ ಕಾರಣ ತಿಳಿಸಿದ ಪ್ರಥಮ್!!

Bigg Boss Kannada season 11 Updates: ಬಿಗ್‌ ಬಾಸ್‌ ಪ್ರಾರಂಭದ ಎಪಿಸೋಡ್‌ ಮತ್ತು ಫಿನಾಲೆ ಎಪಿಸೋಡ್‌ಗೆ ಅತಿಹೆಚ್ಚಿನ ಅವಧಿಯ ನಿರೂಪಣೆ ಮಾಡಬೇಕಾಗುತ್ತದೆ. ಬಹುಶಃ ಕನ್ನಡದ ಯಾವ ಕಲಾವಿದರು ಸಹ ಆ ರೀತಿ ಶೂಟ್‌ ಮಾಡಲು ಸಾಧ್ಯವಿಲ್ಲವೆಂದು ಪ್ರಥಮ್‌ ತಿಳಿಸಿದ್ದಾರೆ.

Bigg Boss Kannada season 11: ಮಾಜಿ ಬಿಗ್​ಬಾಸ್ ವಿನ್ನರ್, ಒಳ್ಳೆ ಹುಡ್ಗ ಖ್ಯಾತಿಯ ಪ್ರಥಮ್ ಅವರು ನಟ ಕಿಚ್ಚ ಸುದೀಪ್​ರಿಂದ ಹೊಗಳಿಸಿಕೊಂಡಿದ್ದೂ ಇದೆ, ಬೈಸಿಕೊಂಡಿದ್ದೂ ಇದೆ. ಬಿಗ್​ ಬಾಸ್ ವಿನ್ನರ್ ಆದ ಬಳಿಕ ಕೆಲ ಬಾರಿ ದೊಡ್ಮನೆಗೆ ಹೋಗಿ ಬಂದಿದ್ದಾರೆ. ಬಿಗ್‌ ಬಾಸ್‌ ಸೀಸನ್‌ 11ರ ಬಳಿಕ ತಾವು ನಿರೂಪಣೆ ಮಾಡುವುದಿಲ್ಲವೆಂದು ಕಿಚ್ಚ ಸುದೀಫ್‌ ಘೋಷಿಸಿದ್ದಾರೆ. ಇದಕ್ಕೆ ಕಾರಣ ಏನಿರಬಹುದು ಅಂತಾ ಲಕ್ಷಾಂತರ ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಕಿಚ್ಚ ಸುದೀಪ್‌ ಬಿಗ್‌ ಬಾಸ್‌ ಶೋ ನಿರೂಪಣೆ ಮಾಡದಿರಲು ಕೈಗೊಂಡಿರುವ ನಿರ್ಧಾರದ ಹಿಂದಿನ ಅಸಲಿ ಕಾರಣವನ್ನು ಪ್ರಥಮ್‌ ತಿಳಿಸಿದ್ದಾರೆ. ಅವರು ಏನು ಹೇಳಿದ್ದಾರೆ ನೋಡಿ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /5

ತಾವಿನ್ನೂ ಬಿಗ್‌ ಬಾಸ್‌ ಶೋ ನಿರೂಪಣೆ ಮಾಡುವುದಿಲ್ಲವೆಂದು ನಟ ಕಿಚ್ಚ ಸುದೀಪ್‌ ಘೋಷಿಸಿದ್ದಾರೆ. ಸುದೀಪ್‌ ನಿರೂಪಣೆ ಇಲ್ಲದೆ ಬಿಗ್‌ ಬಾಸ್‌ ಶೋ ಊಹಿಸುವುದು ಕಷ್ಟವೆಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಕಿಚ್ಚ ಈ ನಿರ್ಧಾರ ಕೈಗೊಂಡಿದ್ದೇಕೆ? ಈ ಬಗ್ಗೆ ಅನೇಕರು ತಲೆ ಕೆಡಿಸಿಕೊಂಡಿದ್ದಾರೆ. ಅನೇಕರು ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಆದರೆ ಯಾರಿಗೂ ಸಹ ಅಸಲಿ ಕಾರಣ ತಿಳಿದಿಲ್ಲ. 

2 /5

ಸುದೀಪ್‌ ಅವರು ಬಿಗ್‌ ಬಾಸ್‌ ಶೋ ನಿರೂಪಣೆಯಿಂದ ಹಿಂದೆ ಸರಿದಿರುವ ವಿಚಾರವಾಗಿ ಒಳ್ಳೆ ಹುಡ್ಗ ಪ್ರಥಮ್‌ ಮಾತನಾಡಿದ್ದಾರೆ. ಕಿಚ್ಚ ಬಿಗ್​ಬಾಸ್ ಬಿಡಲು ಕಾರಣವೇನು ಅನ್ನೋದನ್ನ ವಿವರಿಸಿದ್ದಾರೆ. ಬಿಗ್​ಬಾಸ್ ಶೂಟಿಂಗ್​ ಮಾಡಲು ಸುದೀಪ್ ಪಡುವ ಕಷ್ಟ ಹೇಗಿರುತ್ತದೆ ಅನ್ನೋದರ ಬಗ್ಗೆ ಅವರು ತಿಳಿಸಿದ್ದಾರೆ. ಇದಲ್ಲದೆ ಸುದೀಪ್ ಅವರು ಬಿಗ್ ​ಬಾಸ್ ನಿರೂಪಣೆ ಮುಂದುವರೆಸಬೇಕು ಅಂತಲೂ ಅವರು ಮನವಿ ಮಾಡಿಕೊಳ್ಳುವುದಾಗಿಯೂ ಹೇಳಿದ್ದಾರೆ.

3 /5

ಬಿಗ್‌ ಬಾಸ್‌ ಶೋ ನಿರೂಪಣೆಗೆ ಕಿಚ್ಚ ಸುದೀಪ್‌ ಅವರಿಗೆ ಕಷ್ಟವಾಗುತ್ತಿತ್ತು. ಗುರುವಾರ ರಾತ್ರಿ ಬಿಗ್‌ ಬಾಸ್‌ ಮನೆಗೆ ಬರುತ್ತಿದ್ದ ಸುದೀಪ್‌ ಅವರು ಶುಕ್ರವಾರ ಅಲ್ಲೇ ಇರುತ್ತಿದ್ದರು. ಶನಿವಾರ ಇಡೀ ದಿನವೂ ಶೂಟಿಂಗ್‌ ನಡೆಯುತ್ತಿತ್ತು. ರಾತ್ರಿ 11.30 ಅಥವಾ 12 ಗಂಟೆಗೆ ಶೂಟಿಂಗ್‌ ಮುಗಿಯುತ್ತಿತ್ತು. ಗುರುವಾರ, ಶುಕ್ರವಾರ, ಶನಿವಾರ ಈ ಮೂರು ದಿನ ಅಲ್ಲೇ ಇದ್ದರೆ ಭಾನುವಾರ ವಿಶ್ರಾಂತಿ ಬೇಕಾಗುತ್ತದೆ. ವಾರದಲ್ಲಿ 4 ದಿನ ಬಿಗ್ ಬಾಸ್‌ ಮನೆಯಲ್ಲೇ ಕಳೆದರೆ ಒಬ್ಬ ಸ್ಟಾರ್‌ ನಟ ಸಿನಿಮಾ ಹೇಗೆ ಮಾಡುತ್ತಾನೆ? ಇದೇ ಕಿಚ್ಚ ಸುದೀಪ್‌ ಅವರು ಬಿಗ್‌ ಬಾಸ್‌ ನಿರೂಪಣೆಯಿಂದ ಹಿಂದೆ ಸರಿದಿರುವ ಅಸಲಿ ಕಾರಣವೆಂದು ಪ್ರಥಮ್‌ ತಿಳಿಸಿದ್ದಾರೆ. 

4 /5

ಬಿಗ್‌ ಬಾಸ್‌ ಪ್ರಾರಂಭದ ಎಪಿಸೋಡ್‌ ಮತ್ತು ಫಿನಾಲೆ ಎಪಿಸೋಡ್‌ಗೆ ಅತಿಹೆಚ್ಚಿನ ಅವಧಿಯ ನಿರೂಪಣೆ ಮಾಡಬೇಕಾಗುತ್ತದೆ. ಬಹುಶಃ ಕನ್ನಡದ ಯಾವ ಕಲಾವಿದರು ಸಹ ಆ ರೀತಿ ಶೂಟ್‌ ಮಾಡಲು ಸಾಧ್ಯವಿಲ್ಲ. ಯಾಕಂದ್ರೆ ಬಿಗ್‌ ಬಾಸ್‌ ಆರಂಭದ ಎಪಿಸೋಡ್‌ ಸಂಜೆ ೪ರಿಂದ ಪ್ರಾರಂಭವಾಗುತ್ತದೆ. ಸಂಜೆ 4 ರಿಂದ ಮರುದಿನ ಬೆಳಗ್ಗೆ 5.30ರವರೆಗೆ ಕಂಟಿನ್ಯೂ ಶೂಟಿಂಗ್‌ ಆಗುತ್ತಿರುತ್ತದೆ. ಈ ಅವಧಿಯಲ್ಲಿ ಒಂದೇ ಒಂದು ಸೆಕೆಂಡ್‌ ವಿರಾಮವಿರುವುದಿಲ್ಲ. ಪ್ರತಿಯೊಬ್ಬ ಸ್ಪರ್ಧಿಗೂ ಒಂದು ಗಂಟೆಯಂತೆ 16 ಸ್ಪರ್ಧಿಗಳನ್ನೂ ಸುದೀಪ್‌ ಅವರು ಮಾತನಾಡಿಸಬೇಕು. ಅಂದರೆ ಬರೋಬ್ಬರಿ 17-18 ಗಂಟೆ ನಿರೂಪಣೆ ಮಾಡಬೇಕು. ಇದು ಒಂದು ರೀತಿ ಚಾಲೆಂಜಿಂಗ್‌ ಟಾಸ್ಕ್‌ ಅಂತಾ ಪ್ರಥಮ್‌ ಹೇಳಿದ್ದಾರೆ.

5 /5

ಕನ್ನಡದಲ್ಲಿ ಸ್ಟಾರ್‌ ನಟರು ಹೆಚ್ಚೆಚ್ಚು ಸಿನಿಮಾಗಳನ್ನು ಮಾಡಬೇಕೆಂಬ ಕೂಗಿ ಕೇಳಿಬರುತ್ತಿದೆ. ಪರಭಾಷಾ ಚಿತ್ರಗಳ ಹಾವಳಿ ನಡುವೆ ಕನ್ನಡ ಸಿನಿಮಾಗಳಿಗೆ ಥಿಯೇಟರ್‌ ಸಿಗುತ್ತಿಲ್ಲವೆಂಬ ಕೊರಗು ಕಾಡುತ್ತಿದೆ. ಇದೆಲ್ಲದರ ಜೊತೆಗೆ ಅನೇಕ ಕಾರಣಗಳೂ ಇವೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಸುದೀಪ್‌ ಅವರು ಬಗ್‌ ಬಾಸ್‌ ನಿರೂಪಣೆ ಮಾಡುತ್ತಿದ್ದಾರೆ. ತಾಯಿ ಮೇಲಿನ ಪ್ರೀತಿಗೆ ಅವರು ಬಿಗ್‌ ಬಾಸ್‌ ಶೂ ನಿರೂಪಣೆ ಮಾಡುತ್ತಿದ್ದರು. ಅದನ್ನ ಮುಂದುವರೆಸುವ ಭರವಸೆ ಇದೆ. ಅವರು ಬಿಗ್‌ ಬಾಸ್‌ ನಿರೂಪಣೆಯನ್ನ ಮುಂದುವರೆಸಲಿ ಎಂಬುದೇ ನಮ್ಮ ಆಸೆಯಾಗಿದೆ ಎಂದು ಪ್ರಥಮ್‌ ತಿಳಿಸಿದ್ದಾರೆ.