Fatty Liver Disease: ಕೇವಲ ಅಲ್ಕೋಹಾಲ್‌ ಮಾತ್ರವಲ್ಲ ಈ ಅಭ್ಯಾಸಗಳಿಂದಲೂ ಫ್ಯಾಟಿ ಲಿವರ್ ಸಮಸ್ಯೆ ಬರುತ್ತೆ!

Fatty Liver Disease: ಈ ಲೇಖನದಲ್ಲಿ ನಾವು ಫ್ಯಾಟಿ ಲಿವರ್ ಸಮಸ್ಯೆಯ ಬಗ್ಗೆ ಮಾಹಿತಿ ನೀಡಲಿದ್ದೇವೆ. ಇದರೊಂದಿಗೆ ಫ್ಯಾಟಿ ಲೀವರ್ ಸಮಸ್ಯೆಯಿಂದ ಹೇಗೆ ಪಾರಾಗಬೇಕು ಅನ್ನೋದರ ಬಗ್ಗೆಯೂ ನಿಮಗೆ ತಿಳಿಸಿಕೊಡಲಿದ್ದೇವೆ. 

Fatty Liver Disease: ನಮ್ಮ ದೇಹವನ್ನ ಆರೋಗ್ಯವಾಗಿಡಲು‌ ಯಕೃತ್‌ ಅಥವಾ ಲಿವರ್ ಪಾತ್ರ ಬಹುಮುಖ್ಯ. ದೇಹಕ್ಕೆ ಪ್ರೋಟೀನ್ ಉತ್ಪಾದನೆಯಾಗಲಿ ಅಥವಾ ಜೀರ್ಣಕ್ರಿಯೆಗೆ ಪಿತ್ತರಸದ ಉತ್ಪಾದನೆಯಾಗಲಿ ಲಿವರ್ ಈ ಎಲ್ಲಾ ಕೆಲಸ ಮಾಡುತ್ತದೆ. ಇದಲ್ಲದೇ ಪಿತ್ತಜನಕಾಂಗವು ಪೋಷಕಾಂಶಗಳನ್ನ ಶಕ್ತಿಯನ್ನಾಗಿ ಪರಿವರ್ತಿಸಲು, ರೋಗನಿರೋಧಕ ಅಂಶಗಳನ್ನು ತಯಾರಿಸಲು ಮತ್ತು ರಕ್ತದಿಂದ ಬ್ಯಾಕ್ಟೀರಿಯಾ ಹಾಗೂ  ಜೀವಾಣುಗಳನ್ನು ತೆಗೆದುಹಾಕುವ ಮೂಲಕ ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ದೇಹದ ಒಂದು ಪ್ರಮುಖ ಭಾಗವಾಗಿರುವ ಲಿವರ್‌ ಬಗ್ಗೆ ಸ್ವಲ್ಪವೇ ಸ್ವಲ್ಪ ನಿರ್ಲಕ್ಷ್ಯವಹಿಸಿದರೂ ನಿಮ್ಮ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಉಂಟಾಗುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /6

ಆಲ್ಕೊಹಾಲ್ ಸೇವಿಸದಿದ್ದರೆ ಎಂದಿಗೂ ಫ್ಯಾಟಿ ಲೀವರ್ ಸಮಸ್ಯೆ ಎದುರಾಗಲ್ಲವೆಂದು ನೀವೂ ಭಾವಿಸಿದರೆ ಅದು ನಿಮ್ಮ ತಪ್ಪು ಕಲ್ಪನೆ. ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನಶೈಲಿ, ಒತ್ತಡ ಮತ್ತು ಕೆಟ್ಟ ಆಹಾರ ಪದ್ಧತಿಯಿಂದ ಹೆಚ್ಚಿನ ಜನರು ಫ್ಯಾಟಿ ಲೀವರ್ ಸಮಸ್ಯೆಗೆ ಬಲಿಯಾಗುತ್ತಿದ್ದಾರೆ. ಈ ಫ್ಯಾಟಿ ಲೀವರ್ ಸಮಸ್ಯೆ ಏನು? ಮತ್ತು ಅದನ್ನು ತಪ್ಪಿಸುವುದು ಹೇಗೆ? ಅನ್ನೋದರ ಬಗ್ಗೆ ಉಪಯುಕ್ತ ಮಾಹಿತಿ ಇಲ್ಲಿದೆ ನೋಡಿ...

2 /6

ಫ್ಯಾಟಿ ಲಿವರ್ ಎಂದರೆ ಯಕೃತ್ತಿನಲ್ಲಿ ಅಧಿಕ ಕೊಬ್ಬಿನ ಶೇಖರಣೆಯಾಗುವುದು ಎಂದರ್ಥ. ಲಿವರ್‌ನಲ್ಲಿ ಅಧಿಕ ಕೊಬ್ಬು ಸಂಗ್ರಹವಾಗಲು ಪ್ರಾರಂಭಿಸಿದಾಗ ಇದು ಲಿವರ್ ವೈಫಲ್ಯ ಅಥವಾ ಲಿವರ್ ಸಿರೋಸಿಸ್ಗೆ ಕಾರಣವಾಗಬಹುದು. ಕೊಬ್ಬಿನ ಲಿವರ್ ಸಮಸ್ಯೆಯನ್ನು ಹೊಂದಿರುವ ಜನರು ಸಾಮಾನ್ಯವಾಗಿ ಹೊಟ್ಟೆಗೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ಹೊಂದಿರುತ್ತಾರೆ.

3 /6

ಈ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳ ಹೊಟ್ಟೆಯ ಬಲಭಾಗದಲ್ಲಿ ನೋವು ಅಥವಾ ಊತ ಇರುತ್ತದೆ. ರೋಗಿಗಳು ಹಠಾತ್ ಹಸಿವು ಕಳೆದುಕೊಳ್ಳುತ್ತಾರೆ, ತೂಕ ನಷ್ಟ ಅನುಭವಿಸುತ್ತಾರೆ, ಆಯಾಸ ಮತ್ತು  ದೌರ್ಬಲ್ಯ ಕಾಣಿಸಿಕೊಳ್ಳುತ್ತದೆ ಮತ್ತು ಪಾದಗಳು ಊದಿಕೊಳ್ಳುತ್ತವೆ. ಕಣ್ಣುಗಳ ಬಣ್ಣ ಕಡಿಮೆಯಾಗಬಹುದು, ಚರ್ಮದ ಮೇಲೆ ಹಳದಿ ಕಲೆಗಳು ಅಥವಾ ರಕ್ತ ಹೆಪ್ಪುಗಟ್ಟಬಹುದು. ತುರಿಕೆ, ಭ್ರಮೆ ಅಥವಾ ಮೂತ್ರದ ಗಾಢ ಬಣ್ಣ ಕೂಡ ಫ್ಯಾಟಿ ಲಿವರ್ ಅನ್ನು ಸೂಚಿಸಬಹುದು. ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ ಅಥವಾ ಹೊಟ್ಟೆ ನೋವಿನ ಸಮಸ್ಯೆ ಹೆಚ್ಚಾಗುತ್ತದೆ.

4 /6

ಅಧಿಕ ಬೊಜ್ಜು, ಅತಿಯಾದ ಮದ್ಯಪಾನ, ಕಳಪೆ ಆಹಾರ, ಟೈಪ್-2 ಮಧುಮೇಹ, ಆನುವಂಶಿಕತೆ, ಮಧುಮೇಹ ಅಥವಾ ಅಧಿಕ ಕೊಲೆಸ್ಟ್ರಾಲ್ ಫ್ಯಾಟಿ ಲಿವರ್‌ ಸಮಸ್ಯೆಗೆ ಸಾಮಾನ್ಯ ಕಾರಣಗಳಾಗಿವೆ.

5 /6

ಆರೋಗ್ಯ ತಜ್ಞರ ಹೇಳುವ ಪ್ರಕಾರ, ಫ್ಯಾಟಿ ಲೀವರ್ ಸಮಸ್ಯೆಯಿಂದ ಪಾರಾಗಲು ಮದ್ಯಪಾನವನ್ನು ತ್ಯಜಿಸಬೇಕು. ಥೈರಾಯ್ಡ್ ಮತ್ತು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಬೇಕು. ಸ್ಥೂಲಕಾಯವನ್ನು ಕಡಿಮೆ ಮಾಡಬೇಕು. ಸಮಯಕ್ಕೆ ಸರಿಯಾಗಿ ಮಧುಮೇಹವನ್ನು ನಿಯಂತ್ರಿಸಲು ಔಷಧಿಗಳನ್ನು ತೆಗೆದುಕೊಳ್ಳಬೇಕು. ಇದರೊಂದಿಗೆ ನಿಯಮಿತವಾಗಿ ವ್ಯಾಯಾಮ ಮಾಡಬೇಕು. 

6 /6

ಆಹಾರ ತಜ್ಞರ ಪ್ರಕಾರ, ಫ್ಯಾಟಿ ಲಿವರ್ ಸಮಸ್ಯೆ ತಪ್ಪಿಸಲು ತಾಜಾ ಹಣ್ಣುಗಳು ಮತ್ತು ತರಕಾರಿಗಳು, ಫೈಬರ್ ಭರಿತ ದ್ವಿದಳ ಧಾನ್ಯಗಳನ್ನು ಆಹಾರದಲ್ಲಿ ಸೇರಿಸಬೇಕು. ನೀವು ಸಕ್ಕರೆ, ಉಪ್ಪು, ಟ್ರಾನ್ಸ್ ಕೊಬ್ಬು, ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ಮತ್ತು ಸ್ಯಾಚುರೇಟೆಡ್ ಕೊಬ್ಬಿನ ಸೇವನೆ ಕಡಿಮೆ ಮಾಡಬೇಕು. ಮದ್ಯಪಾನ ತ್ಯಜಿಸುವುದು ಬಹಳ ಮುಖ್ಯ. ಕಡಿಮೆ ಕೊಬ್ಬಿನ, ಕ್ಯಾಲೋರಿ ಆಹಾರವು ತೂಕವನ್ನು ಕಡಿಮೆ ಮಾಡುವ ಮೂಲಕ ನಿಮ್ಮ ಕೊಬ್ಬಿನ ಯಕೃತ್ತಿನ ಅಪಾಯವು ಕಡಿಮೆಯಾಗುತ್ತದೆ.