Viral Image: ಬರೋಬ್ಬರಿ 11 ಲಕ್ಷ ಖರ್ಚು ಮಾಡಿ ನಾಯಿಯಂತಾದ ವ್ಯಕ್ತಿ!

ಮಾಹಿತಿ ಪ್ರಕಾರ, ಜಪಾನ್ ಮೂಲದ ಈ ವ್ಯಕ್ತಿಯ ಹೆಸರು ಟೊಕೊ. ಈ ವ್ಯಕ್ತಿ ನಾಯಿಯಂತೆ ಕಾಣಲು ಇಷ್ಟಪಟ್ಟಿದ್ದು, ಅದಕ್ಕಾಗಿ 11 ಲಕ್ಷ ರೂಪಾಯಿ ಖರ್ಚು ಮಾಡಿದ್ದಾನೆ. ಇಷ್ಟು ಹಣ ಖರ್ಚು ಮಾಡಿ ನಾಯಿಯಂತೆ ಕಾಣುವ ವೇಷಭೂಷಣ ತೊಟ್ಟಿದ್ದಾನೆ. ವೇಷ ತೊಟ್ಟ ಬಳಿಕ ಯಾರೂ ಅವನನ್ನು ಗುರುತಿಸಲು ಸಾಧ್ಯವಿಲ್ಲ. ಟೊಕೊ ತನ್ನ ಟ್ವಿಟರ್‌ನಲ್ಲಿ ಈ ಫೋಟೋಗಳನ್ನು ಶೇರ್‌ ಮಾಡಿದ್ದಾನೆ.   

Written by - Bhavishya Shetty | Last Updated : May 25, 2022, 01:32 PM IST
  • ಜಪಾನ್‌ ವ್ಯಕ್ತಿಯ ವಿಚಿತ್ರ ಬಯಕೆ
  • ನಾಯಿಯಂತೆ ಕಾಣಲು ಲಕ್ಷಾಂತರ ರೂ ಖರ್ಚು
  • ಸೋಶಿಯಲ್‌ ಮೀಡಿಯಾದಲ್ಲಿ ಫೋಟೋ ವೈರಲ್‌
Viral Image: ಬರೋಬ್ಬರಿ 11 ಲಕ್ಷ ಖರ್ಚು ಮಾಡಿ ನಾಯಿಯಂತಾದ ವ್ಯಕ್ತಿ!   title=
Man wears dog Costume

ಜಪಾನ್: ಜಗತ್ತಿನಲ್ಲಿ ಅನೇಕರು ಚಿತ್ರ ವಿಚಿತ್ರವಾಗಿ ಬದುಕೋದನ್ನು ನಾವು ನೋಡಿರುತ್ತೇವೆ. ಅಂತೆಯೇ ಜಪಾನ್‌ ಮೂಲದ ವ್ಯಕ್ತಿಯೊಬ್ಬ ಲಕ್ಷಾಂತರ ರುಪಾಯಿ ಖರ್ಚು ಮಾಡಿ, ನಾಯಿಯಂತೆ ಬದುಕು ಪ್ರಾರಂಭಿಸಲು ಮುಂದಾಗಿದ್ದಾನೆ. ಈ ಸುದ್ದಿ ನಿಮಗೆ ಆಶ್ಚರ್ಯ ಮೂಡಿಸಿದರೂ ಸತ್ಯ. 

ಮಾಹಿತಿ ಪ್ರಕಾರ, ಜಪಾನ್ ಮೂಲದ ಈ ವ್ಯಕ್ತಿಯ ಹೆಸರು ಟೊಕೊ. ಈ ವ್ಯಕ್ತಿ ನಾಯಿಯಂತೆ ಕಾಣಲು ಇಷ್ಟಪಟ್ಟಿದ್ದು, ಅದಕ್ಕಾಗಿ 11 ಲಕ್ಷ ರೂಪಾಯಿ ಖರ್ಚು ಮಾಡಿದ್ದಾನೆ. ಇಷ್ಟು ಹಣ ಖರ್ಚು ಮಾಡಿ ನಾಯಿಯಂತೆ ಕಾಣುವ ವೇಷಭೂಷಣ ತೊಟ್ಟಿದ್ದಾನೆ. ವೇಷ ತೊಟ್ಟ ಬಳಿಕ ಯಾರೂ ಅವನನ್ನು ಗುರುತಿಸಲು ಸಾಧ್ಯವಿಲ್ಲ. ಟೊಕೊ ತನ್ನ ಟ್ವಿಟರ್‌ನಲ್ಲಿ ಈ ಫೋಟೋಗಳನ್ನು ಶೇರ್‌ ಮಾಡಿದ್ದಾನೆ. 

ಇದನ್ನು ಓದಿ: Shocking: ಪಂಜರದಲ್ಲಿರುವ ಸಿಂಹದ ಜೊತೆಗೆ ಚೆಲ್ಲಾಟ, ನೋಡುತ್ತಲೇ ನಡೆದ್ಹೋಯ್ತು ಈ ಘಟನೆ

ಪ್ರಾಣಿಯಂತೆ ಬದುಕುವ ಬಯಕೆ: 
ಟೊಕೊ ಫೋಟೋಗಳನ್ನು ಕಂಡ ಜನರು, ಈತ ಯಾಕೆ ಹೀಗೆ ಬದುಕುತ್ತಿದ್ದಾನೆ ಎಂದು ಯೋಚಿಸಬಹುದು. ವಾಸ್ತವವಾಗಿ ಆತನಿಗೆ ಬಾಲ್ಯದಿಂದಲೂ ಪ್ರಾಣಿಗಳೆಂದರೆ ಬಲು ಇಷ್ಟವಂತೆ.  ಹೀಗಾಗಿ ಯಾವಾಗಲೂ ಪ್ರಾಣಿಯಂತೆ ಬದುಕಲು ಬಯಸಿದ್ದನಂತೆ.  ಪ್ರಾಣಿಗಳಲ್ಲಿ ಮುಖ್ಯವಾಗಿ ಆತನಿಗೆ ನಾಯಿಗಳೆಂದರೆ ಹೆಚ್ಚು ಇಷ್ಟವಂತೆ. ಹೀಗಾಗಿ ಅವನು ಹನ್ನೊಂದು ಲಕ್ಷ ಖರ್ಚು ಮಾಡಿ ಅಲ್ಟ್ರಾ ರಿಯಲಿಸ್ಟಿಕ್ ನಾಯಿಯ ವೇಷ ಖರೀದಿಸಿದ್ದಾನೆ. 

ಕಾಸ್ಟ್ಯೂಮ್ ಮೇಕಿಂಗ್ ಸುಲಭವಾಗಿರಲಿಲ್ಲ: 
ಈತನ ಇಚ್ಛೆಗೆ ಅನುಗುಣವಾಗಿ ನಾಯಿಯ ವೇಷವನ್ನು ಜೆಪ್ಪೆಟ್‌ ಎಂಬ ಸಂಸ್ಥೆ ತಯಾರು ಮಾಡಿದೆ. ಅದನ್ನು ಧರಿಸಿದ ನಂತರ ಅವನು ನಾಯಿಯಂತೆ ಕಾಣಲಾರಂಭಿಸಿದ . ಈ ವೇಷದಲ್ಲಿರುವ ವ್ಯಕ್ತಿಯನ್ನು ಯಾರೂ ಗುರುತಿಸಲು ಸಾಧ್ಯವಿಲ್ಲ. ಇದು ನಿಜವಾಗಿಯೂ ನಾಯಿ ಎಂದು ಎಲ್ಲರೂ ಭಾವಿಸುತ್ತಾರೆ. ಅಂತಹ ಪರಿಪೂರ್ಣ ವೇಷವನ್ನು ಮಾಡುವುದು ಸುಲಭವಲ್ಲ. ಆದರೆ ಜೆಪ್ಪೆಟ್, ವ್ಯಕ್ತಿಯ ಆಸೆಯನ್ನು ಪೂರೈಸಲು ಈ ಕಠಿಣ ಕೆಲಸವನ್ನು ಮಾಡಿದೆ. 

ಇದನ್ನು ಓದಿ: Guinness Record: 50 ವರ್ಷಗಳ ಕಾಲ ಬರ್ಗರ್ ತಿಂದು ವಿಶ್ವದಾಖಲೆ ಮಾಡಿದ ವ್ಯಕ್ತಿ

40 ದಿನಗಳಲ್ಲಿ ತಯಾರಿಸಿದ ನಾಯಿ ವೇಷ:
ಜೆಪ್ಪೆಟ್ ಕಂಪನಿಯ ಪ್ರಕಾರ, ನಾಯಿ ವೇಷವನ್ನು ತಯಾರಿಸಲು ಸಿಂಥೆಟಿಕ್ ತುಪ್ಪಳವನ್ನು ಬಳಸಲಾಗಿದೆ. ಈ ವಿಶೇಷ ವೇಷವನ್ನು ತಯಾರಿಸಲು ಕಂಪನಿಯು 40 ದಿನಗಳನ್ನು ತೆಗೆದುಕೊಂಡಿದೆ. ಈ ವೇಷಕ್ಕೆ ಕಂಪನಿಯು 2 ಮಿಲಿಯನ್ ಯೆನ್ ಅಂದರೆ ಸುಮಾರು 11 ಲಕ್ಷದ 63 ಸಾವಿರ ರೂಪಾಯಿಗಳನ್ನು ತೆಗೆದುಕೊಂಡಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News