ಸುಂದರ ಏರಿಳಿತ ಪಯಣ 'ಎಲ್ಲೋ ಜೋಗಪ್ಪ ನಿನ್ನರಮನೆ'....ಫೆ.21ಕ್ಕೆ ಹಯವದನ-ಅಂಜನ್ ನಾಗೇಂದ್ರ ಚಿತ್ರ ರಿಲೀಸ್

Ello Jogappa Ninnaramane: ಬಿಡುಗಡೆ ಹೊಸ್ತಿಲಿನಲ್ಲಿರುವ ಎಲ್ಲೋ ಜೋಗಪ್ಪ ನಿನ್ನರಮನೆ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಚೊಚ್ಚಲ ನಿರ್ದೇಶನದಲ್ಲಿ ನಿರ್ದೇಶಕ ಹಯವದನ ಹೊಸತನದ ಕಥೆಯನ್ನು ಪ್ರೇಕ್ಷಕರ ಮುಂದೆ ಹರವಿಡೋದಿಕ್ಕೆ ಹೊರಟ್ಟಿದ್ದಾರೆ. ಎರಡು ನಿಮಿಷ 49 ಸೆಕೆಂಡ್ ಇರುವ ಎಲ್ಲೋ ಜೋಗಪ್ಪ ನಿನ್ನರಮನೆ ಟ್ರೇಲರ್ ಪ್ರಾಮಿಸಿಂಗ್ ಆಗಿದೆ. ಸುಂದರ ಪಯಣದ ಕಥೆ ಜೊತೆಗೆ ಆಕ್ಷನ್, ಎಮೋಷನ್, ಲವ್, ಕಾಮಿಡಿ ಅಂಶಗಳನ್ನು ಬ್ಲೆಂಡ್ ಮಾಡಿ ಟ್ರೇಲರ್ ಕಟ್ಟಿಕೊಡಲಾಗಿದೆ.   

Written by - YASHODHA POOJARI | Edited by - Zee Kannada News Desk | Last Updated : Feb 13, 2025, 08:09 PM IST
  • ಟ್ರೇಲರ್ ನಲ್ಲಿ 'ಎಲ್ಲೋ ಜೋಗಪ್ಪ ನಿನ್ನರಮನೆ'..ಫೆ.21ಕ್ಕೆ ಬೆಂಗಳೂರಿನಿಂದ ಹಿಮಾಲಯ ತನಕ ಸಾಗುವ ಕಥೆ ತೆರೆಗೆ
  • ಕಾಡುವ ಕಥೆಯೊಂದಿಗೆ ಬಂದ ಜೋಗಪ್ಪ...ಫೆ.21ಕ್ಕೆ ಕಂಬ್ಳಿಹುಳ ನಾಯಕನ ಹೊಸ ಚಿತ್ರ ಬಿಡುಗಡೆ
  • ಅರಮನೆ ಹುಡುಗಾಟದಲ್ಲಿ ಜೋಗಪ್ಪ..ಫೆ.21ಕ್ಕೆ ಹಯವದನ ನಿರ್ದೇಶನದ ಎಲ್ಲೋ ಜೋಗಪ್ಪ ನಿನ್ನರಮನೆ ಸಿನಿಮಾ ಬೆಳ್ಳಿತೆರೆಗೆ ಎಂಟ್ರಿ
ಸುಂದರ ಏರಿಳಿತ ಪಯಣ 'ಎಲ್ಲೋ ಜೋಗಪ್ಪ ನಿನ್ನರಮನೆ'....ಫೆ.21ಕ್ಕೆ ಹಯವದನ-ಅಂಜನ್ ನಾಗೇಂದ್ರ ಚಿತ್ರ ರಿಲೀಸ್ title=

Ello Jogappa Ninnaramane: ಬಿಡುಗಡೆ ಹೊಸ್ತಿಲಿನಲ್ಲಿರುವ ಎಲ್ಲೋ ಜೋಗಪ್ಪ ನಿನ್ನರಮನೆ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಚೊಚ್ಚಲ ನಿರ್ದೇಶನದಲ್ಲಿ ನಿರ್ದೇಶಕ ಹಯವದನ ಹೊಸತನದ ಕಥೆಯನ್ನು ಪ್ರೇಕ್ಷಕರ ಮುಂದೆ ಹರವಿಡೋದಿಕ್ಕೆ ಹೊರಟ್ಟಿದ್ದಾರೆ. ಎರಡು ನಿಮಿಷ 49 ಸೆಕೆಂಡ್ ಇರುವ ಎಲ್ಲೋ ಜೋಗಪ್ಪ ನಿನ್ನರಮನೆ ಟ್ರೇಲರ್ ಪ್ರಾಮಿಸಿಂಗ್ ಆಗಿದೆ. ಸುಂದರ ಪಯಣದ ಕಥೆ ಜೊತೆಗೆ ಆಕ್ಷನ್, ಎಮೋಷನ್, ಲವ್, ಕಾಮಿಡಿ ಅಂಶಗಳನ್ನು ಬ್ಲೆಂಡ್ ಮಾಡಿ ಟ್ರೇಲರ್ ಕಟ್ಟಿಕೊಡಲಾಗಿದೆ. 

ಕಂಬ್ಳಿಹುಳ ಸಿನಿಮಾ ನಾಯಕ ಅಂಜನ್ ನಾಗೇಂದ್ರ ಹೀರೋ ಆಗಿ ನಟಿಸಿದ್ದು, ಯುವ ನಟಿ ವೆನ್ಯ ರೈ ನಾಯಕಿ ಸಾಥ್ ಕೊಟ್ಟಿದ್ದಾರೆ. 'ಕೆಟಿಎಂ', 'ಮೂನ್ ವಾಕ್' ಹಾಗೂ ಮಲಯಾಳಂನ'ಮನಸ್ಮಿತ' ಅನ್ನೋ ಸಿನಿಮಾದ ನಟಿ ಸಂಜನಾ ದಾಸ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಿರಾದರ್, ಶರತ್ ಲೋಹಿತಾಶ್ವ, ದಾನಪ್ಪ, ಸ್ವಾತಿ, ದಿನೇಶ್ ಮಂಗಳೂರು, ಲಕ್ಷ್ಮೀ ನಾಡಗೌಡ ಮುಂತಾದವರು ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. 

ಎಲ್ಲೋ ಜೋಗಪ್ಪ ನಿನ್ನರಮನೆ ಜರ್ನಿಯ ಕಥಾನಕ. ಜೊತೆಗೆ ಅಪ್ಪನ ಮಗನ ಬಾಂಧವ್ಯದ ಎಳೆಯೂ ಚಿತ್ರದಲ್ಲಿದೆ. ಬೆಂಗಳೂರಿನಿಂದ ಶುರುವಾದ ಪ್ರಯಾಣ ಹಿಮಾಲಯದವರೆಗೆ ಸಾಗುತ್ತದೆ. ಭಾವನಾತ್ಮಕವಾದ ಈ ಸಿನಿಮಾ ಯುವ ಜನರಿಗೆ ಹೆಚ್ಚು ಮನರಂಜನೆ ನೀಡುತ್ತದೆ. ಹಲವು ರಾಜ್ಯಗಳ ಅನೇಕ ಲೊಕೇಷನ್ಗಳಲ್ಲಿ ಈ ಸಿನಿಮಾದ ಶೂಟಿಂಗ್ ಮಾಡಲಾಗಿದೆ. ಸೂಪರ್‌ ಹಿಟ್‌  ಸೀರಿಯಲ್ ಗಳಾದ ಅಗ್ನಿಸಾಕ್ಷಿ, ನಾಗಿಣಿ, ಕಮಲಿ ನಿರ್ದೇಶಸಿರುವ ಹಯವದನ  ಅವರು ಚೊಚ್ಚಲ ಬಾರಿಗೆ ಆಕ್ಷನ್‌ ಕಟ್‌ ಹೇಳಿರುವ ಎಲ್ಲೋ ಜೋಗಪ್ಪ ನಿನ್ನರಮನೆ ಸಿನಿಮಾಗೆ ಶಿವ ಪ್ರಸಾದ್ ಸಂಗೀತ, ನಟರಾಜ್ ಮದ್ದಾಲ ಛಾಯಾಗ್ರಹಣ, ರವಿಚಂದ್ರನ್ ಸಂಕಲನ ಒದಗಿಸಿದ್ದಾರೆ. ಪ್ರಮೋದ್ ಮರವಂತೆ ಮತ್ತು ರವೀಂದ್ರ ಮುದ್ದಿ ಸಾಹಿತ್ಯ ಬರೆದಿದ್ದಾರೆ. ಭಜರಂಗಿ ಮೋಹನ್ ನೃತ್ಯ ನಿರ್ದೇಶನ ಮಾಡಿದ್ದಾರೆ. ನರಸಿಂಹ ಸಾಹಸ ನಿರ್ದೇಶನ ಈ ಸಿನಿಮಾಗಿದೆ.

‘ಪೆಂಡೋರಾಸ್ ಬಾಕ್ಸ್ ಪ್ರೊಡಕ್ಷನ್’ ಮತ್ತು ‘ಕೃಷ್ಣಛಾಯಾ ಚಿತ್ರ’ ಬ್ಯಾನರ್ ಮೂಲಕ ಪವನ್ ಸಿಮಿಕೇರಿ ಹಾಗೂ ಸಿಂಧು ಹಯವದನ ಅವರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಟ್ರೇಲರ್ ಮೂಲಕ ಪ್ರೇಕ್ಷಕರಿಗೆ ಆಮಂತ್ರಣ ಕೊಟ್ಟಿರುವ ಚಿತ್ರತಂಡ ಇದೇ ತಿಂಗಳ 21ಕ್ಕೆ ಎಲ್ಲೋ ಜೋಗಪ್ಪ ನಿನ್ನರಮನೆ ಸಿನಿಮಾವನ್ನು ಥಿಯೇಟರ್ ಗೆ ತರಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News