ಶೂಟಿಂಗ್‌ ವೇಳೆ "ಗೋಮಾಂಸ"ವನ್ನು ಪುರುಷರಷ್ಟೇ ತಿಂದರು, ನನಗೆ ಕೊಡಲಿಲ್ಲ..! ನಿರ್ಮಾಪಕಿ ಹೇಳಿಕೆ ವೈರಲ್‌..

ನಿರ್ಮಾಪಕಿಯೊಬ್ಬರು ನೀಡಿರುವ ಹೇಳಿಕೆ ಸಧ್ಯ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.. ತಾರತಮ್ಯದ ಬಗ್ಗೆ ಮಾತನಾಡುತ್ತ.. ಸೆಟ್‌ನಲ್ಲಿ ತಮಗೆ ಗೋಮಾಂಸ ನೀಡದೇ ಅಲ್ಲಿದ್ದ ಪುರುಷರಷ್ಟೇ ತಿಂದಿದ್ದಾರೆ ಎಂದು ಹೇಳಿಕೊಂಡಿದ್ದಾರೆ.. ಇದೀಗ ಈ ವಿಚಾರ ಚರ್ಚೆಗೆ ಗ್ರಾಸವಾಗಿದೆ..

Written by - Krishna N K | Last Updated : Feb 12, 2025, 05:25 PM IST
    • ನಿರ್ಮಾಪಕಿಯೊಬ್ಬರು ನೀಡಿರುವ ಹೇಳಿಕೆ ಸಧ್ಯ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ
    • ಸಾಂಡ್ರಾ ಥಾಮಸ್ ಮಲಯಾಳಂ ಚಿತ್ರರಂಗದ ಪ್ರಮುಖ ನಿರ್ಮಾಪಕರಲ್ಲಿ ಒಬ್ಬರು.
    • ಸಾಂಡ್ರಾ ತನ್ನದೇ ಆದ ಸಿನಿಮಾ ಸೆಟ್‌ನಲ್ಲಿ ಎದುರಿಸಿದ ತಾರತಮ್ಯದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ..
ಶೂಟಿಂಗ್‌ ವೇಳೆ "ಗೋಮಾಂಸ"ವನ್ನು ಪುರುಷರಷ್ಟೇ ತಿಂದರು, ನನಗೆ ಕೊಡಲಿಲ್ಲ..! ನಿರ್ಮಾಪಕಿ ಹೇಳಿಕೆ ವೈರಲ್‌.. title=

Sandra Thomas : ಸಾಂಡ್ರಾ ಥಾಮಸ್ ಮಲಯಾಳಂ ಚಿತ್ರರಂಗದ ಪ್ರಮುಖ ನಿರ್ಮಾಪಕರಲ್ಲಿ ಒಬ್ಬರು. ಈಗಾಗಲೇ ಇವರು ಹಲವಾರು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ತಮ್ಮ ಅಭಿಪ್ರಾಯಗಳನ್ನು ಬಹಿರಂಗವಾಗಿ ವ್ಯಕ್ತಪಡಿಸಲು ಹಿಂಜರಿಯದ ಸಾಂಡ್ರಾ, ಪ್ರಸ್ತುತ ನಿರ್ಮಾಪಕರ ಸಂಘದ ಜೊತೆ ವಿವಾದದಲ್ಲಿದ್ದಾರೆ. ಈ ಸಂದರ್ಭದಲ್ಲಿ, ಸಾಂಡ್ರಾ ತನ್ನದೇ ಆದ ಸಿನಿಮಾ ಸೆಟ್‌ನಲ್ಲಿ ಎದುರಿಸಿದ ತಾರತಮ್ಯದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.. 

ಆಹಾರದ ವಿಚಾರದಲ್ಲಿ ತಾವು ಎದುರಿಸಿದ ತಾರತಮ್ಯದ ಬಗ್ಗೆ ಸಾಂಡ್ರಾ ಮಾತನಾಡಿದ್ದಾರೆ.. 'ನಾನು ನಿರ್ಮಾಪಕಿ. ನನ್ನ ಸಿನಿಮಾಗಳ ಸೆಟ್‌ಗಳಲ್ಲಿ ವಿಷಯಗಳನ್ನು ನಿರ್ಧರಿಸುವವನು ನಾನೇ. ಸೆಟ್‌ಗೆ ಆಹಾರ ತರಿಸುವುದು ನಾನೇ.. ಅದಕ್ಕೆ ಹಣ ಕೊಡುವವಳೂ ನಾನೆ.. ಅದನ್ನೇ ಎಲ್ಲರೂ ತಿನ್ನುತ್ತಾರೆ. 

ಇದನ್ನೂ ಓದಿ:ಮಹಾ ಶಿವರಾತ್ರಿಯಂದು ಬದಲಾಗಲಿದೆ ಈ ರಾಶಿಯವರ ಭವಿಷ್ಯ..! ಶ್ರೀಮಂತನ ಜೊತೆ ಮದುವೆ, ಹಣ, ಉದ್ಯೋಗ ಲಾಭ

ಕಳೆದ ಸಿನಿಮಾದ ಕ್ಯಾಮೆರಾಮನ್ ಒಬ್ಬರು.. ನಿನ್ನೆ ಗೋಮಾಂಸ ತುಂಬಾ ರುಚಿಯಾಗಿತ್ತು ಅಂತ ಸೆಟ್‌ನಲ್ಲಿ ಮಾತನಾಡುತ್ತಿದ್ದರು.. ಆ ವಿಚಾರ ನನಗೆ ಅರ್ಥವಾಗಲಿಲ್ಲ.. ನಾನು ನಿರ್ದೇಶಕರನ್ನು ಕೇಳಿದಾಗ, ಅವರಿಗೂ ಒಂದು ರೀತಿಯ ಸನ್ನೆ ಮಾಡಿದರು.. ಇದರರ್ಥ ಸೆಟ್‌ನಲ್ಲಿ ಎಲ್ಲಾ ಪುರುಷರು ಗೋಮಾಂಸವನ್ನು ಸ್ವೀಕರಿಸಿದ್ದಾರೆ. ಒಬ್ಬ ನಿರ್ಮಾಪಕನಾಗಿ ನನಗೆ ಕೊಟ್ಟಿಲ್ಲ.. ಕೊನೆಗೆ, ನಾನು ಮೆಸ್ ನಡೆಸುತ್ತಿದ್ದ ವ್ಯಕ್ತಿಗೆ ಕರೆ ಮಾಡಿ ಎಚ್ಚರಿಕೆ ನೀಡಿದೆ ಎಂದರು ಸ್ಯಾಂಡ್ರಾ.. 

ನಾನು 23ನೇ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಬಂದವಳು. ಇದು ನಾನು ಮಾಡಿದ ಮೊದಲ ವ್ಯವಹಾರವಾಗಿತ್ತು. ಅದೃಷ್ಟವಶಾತ್, ಅದು ಚೆನ್ನಾಗಿ ಆಯಿತು. ನಾನು ಎಲ್ಲವನ್ನೂ ಸಿನಿಮಾಗಳಿಂದ ಕಲಿತಿದ್ದೇನೆ. ಎಲ್ಲವೂ ಉತ್ತಮ ಪಾಠಗಳಾಗಿದ್ದವು ಎಂದು ಸಾಂಡ್ರಾ ಥಾಮಸ್ ಹೇಳಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News