ಹೆಣ್ಣು ಬೇಕಿಲ್ಲ.. ಇಬ್ಬರು ಪುರುಷರು ಒಟ್ಟಿಗೆ ಸೇರಿ ಮಗುವಿಗೆ ಜನ್ಮ ನೀಡಬಹುದು..! ವಿಜ್ಞಾನಿಗಳ ಪ್ರಯೋಗ ಯಶಸ್ವಿ

ಇಂದಿನವರೆಗೂ.. ಮಗುವನ್ನು ಹೊಂದಲು ಹೆಣ್ಣು-ಗಂಡು ಮಿಲನ ಅಗತ್ಯವಾಗಿತ್ತು.. ಆದರೆ, ಇಬ್ಬರು ಪುರುಷರು ಒಟ್ಟಿಗೆ ಮಗುವನ್ನು ಹೊಂದಲು ಸಾಧ್ಯವೇ..? ತಾಯಿ ಇಲ್ಲದೆ ಮಗು ಜನಿಸಲು ಸಾಧ್ಯವೇ..? ಈ ಪ್ರಶ್ನೆಗೆ ಉತ್ತರವನ್ನು ಕಂಡುಹಿಡಿಯಲು ಹಲವು ವರ್ಷಗಳಿಂದ ವೈಜ್ಞಾನಿಕ ಪ್ರಯೋಗಗಳು ನಡೆಯುತ್ತಿತ್ತು.. ಆದರೆ ಈಗ.. ಸಂಪೂರ್ಣ ವಿವರ ಇಲ್ಲಿದೆ.. 

Written by - Krishna N K | Last Updated : Feb 7, 2025, 09:44 PM IST
    • ಪುರುಷರಿಂದ ಮಗು ಜನನದ ಕುರಿತು ಎಷ್ಟೋ ಪ್ರಯೋಗಗಳು ನಡೆದಿವೆ.
    • ಎಷ್ಟೋ ಪ್ರಯೋಗಗಳ ನಡುವೆ ಹೆಚ್ಚಿನ ಯಶಸ್ಸನ್ನು ಗಳಿಸಲು ಸಾಧ್ಯವಾಗಲಿಲ್ಲ.
    • ಈಗ, ಚೀನಾದಲ್ಲಿ ನಡೆದ ಐತಿಹಾಸಿಕ ಪ್ರಯೋಗವೊಂದ ಯಶಸ್ವಿಯಾಗಿದೆ.
ಹೆಣ್ಣು ಬೇಕಿಲ್ಲ.. ಇಬ್ಬರು ಪುರುಷರು ಒಟ್ಟಿಗೆ ಸೇರಿ ಮಗುವಿಗೆ ಜನ್ಮ ನೀಡಬಹುದು..! ವಿಜ್ಞಾನಿಗಳ ಪ್ರಯೋಗ ಯಶಸ್ವಿ title=

ಜೀನಾ : ಪುರುಷರಿಂದ ಮಗು ಜನನದ ಕುರಿತು ಎಷ್ಟೋ ಪ್ರಯೋಗಗಳ ನಡುವೆ ಹೆಚ್ಚಿನ ಯಶಸ್ಸನ್ನು ಗಳಿಸಲು ಸಾಧ್ಯವಾಗಲಿಲ್ಲ.. ಈಗ, ಚೀನಾದಲ್ಲಿ ನಡೆದ ಐತಿಹಾಸಿಕ ಪ್ರಯೋಗವೊಂದರಲ್ಲಿ, ವಿಜ್ಞಾನಿಗಳು ಇಬ್ಬರು ಪುರುಷರಿಂದ ಮಗುವನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ..

ಚೀನಾದ ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್ (CAS) ನ ಝಿ ಕುನ್ ಲಿ ನೇತೃತ್ವದ ವಿಜ್ಞಾನಿಗಳು ಕಾಂಡಕೋಶ ಎಂಜಿನಿಯರಿಂಗ್ ಬಳಸಿ ಎರಡು ಗಂಡು ಇಲಿಯನ್ನು ರಚಿಸಿದ್ದಾರೆ. ಹೀಗೆ ಆಗುತ್ತಿರುವುದು ಇದೇ ಮೊದಲಲ್ಲ. ಜಪಾನಿನ ವಿಜ್ಞಾನಿಗಳು 2023 ರಲ್ಲಿ ಇದೇ ರೀತಿಯ ಪ್ರಯೋಗವನ್ನು ನಡೆಸಿದರು, ಆದರೆ ಆ ಇಲಿಯ ಜೀವಿತಾವಧಿ ಸೀಮಿತವಾಗಿತ್ತು. ಆದರೆ, ಚೀನಾದ ವಿಜ್ಞಾನಿಗಳು ನಡೆಸಿದ ಪ್ರಯೋಗದಲ್ಲಿ, ಒಂದು ಇಲಿ ಹುಟ್ಟಿ ಶೈಶವಾವಸ್ಥೆಯಿಂದ ಪ್ರೌಢಾವಸ್ಥೆಗೆ ಬೆಳೆದಿದೆ.. ಇದು ಈ ಪ್ರಯೋಗ ಮುನ್ನೆಲೆಗೆ ಬಂದಿದೆ.. 

ಇದನ್ನೂ ಓದಿ:ಈ ವಿಡಿಯೋ ನೋಡಿದ್ರೆ ನಿಮ್ಮ ಮನಸು ಕಲ್ಲಾಗಿದ್ರೂ ಕಣ್ಣೀರು ಬರುತ್ತೆ..! ಎಲ್ಲಾರು ಮಾಡುವುದು ಹೊಟ್ಟೆಗಾಗಿ.. ಗೇಣು ಬಟ್ಟೆಗಾಗಿ

ಪುರುಷ ಕಾಂಡಕೋಶಗಳಿಂದ ಮೊಟ್ಟೆಗಳನ್ನು ಸೃಷ್ಟಿಸುವ ಹಿಂದಿನ ಪ್ರಯತ್ನಗಳು ವಿಫಲವಾಗಿವೆ. ಕೆಲವು ದಂಪತಿಗಳು ಸರೊಗಸಿ ಮೂಲಕ ಮಕ್ಕಳನ್ನು ಪಡೆಯಬಹುದು, ಆದರೆ ಈ ಮಾರ್ಗವು ಅನೇಕ ತೊಂದರೆಗಳಿಂದ ಕೂಡಿದೆ. ಚೀನಾದ ವಿಜ್ಞಾನಿಗಳು ನಡೆಸಿದ ಪ್ರಯೋಗದಲ್ಲಿ ಜನಿಸಿದ ಇಲಿಗಳು ತಮ್ಮನ್ನು ತಾವು ಸಂತಾನೋತ್ಪತ್ತಿ ಮಾಡಲು ಸಾಧ್ಯವಾಗದಿದ್ದರೂ, ಅವು ಇತರ ಇಲಿಗಳಿಗಿಂತ ಆರೋಗ್ಯಕರವಾಗಿದ್ದವು. ಭವಿಷ್ಯದ ಪ್ರಯೋಗಗಳಿಗೆ ಇದು ಒಂದು ಪ್ರಮುಖ ಸಾಧನೆ ಎಂದು ಪರಿಗಣಿಸಲಾಗಿದೆ.

ಪ್ರಸ್ತುತ ಪ್ರಯೋಗದಲ್ಲಿ, ಸುಮಾರು 90% ಭ್ರೂಣಗಳು ಬದುಕುಳಿಯಲಿಲ್ಲ, ಮತ್ತು ಅರ್ಧದಷ್ಟು ಇಲಿಗಳು ಪ್ರೌಢಾವಸ್ಥೆಯನ್ನು ತಲುಪುವ ಮೊದಲೇ ಸತ್ತವು. ಆದ್ದರಿಂದ ಈ ಪ್ರಕ್ರಿಯೆಯು ಇನ್ನೂ ತುಂಬಾ ಕಷ್ಟಕರವಾಗಿದೆ. ಈ ಪ್ರಯೋಗವನ್ನು ಮನುಷ್ಯರಿಗೆ ತಕ್ಷಣ ಅನ್ವಯಿಸಲು ಸಾಧ್ಯವಿಲ್ಲ ಎಂದು ವಿಜ್ಞಾನಿಗಳು ಹೇಳುತ್ತಾರೆ. 

ಇದನ್ನೂ ಓದಿ:ಪ್ರೇಮಿಗಳ ದಿನದಂದು ನಿಮ್ಮ ಹುಡುಗಿಗೆ ಈ ಗುಲಾಬಿ ಕೊಟ್ರೆ ಬ್ರೇಕಪ್‌ ಆಗುವುದೇ ಇಲ್ಲ..! ಬೆಲೆ ಜಸ್ಟ್‌ 1,38,33,68,063 ರೂ.

ಆದರೂ, ಇದು ಮಾನಸಿಕ ಮತ್ತು ಆನುವಂಶಿಕ ಕಾಯಿಲೆಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಒದಗಿಸುತ್ತದೆ. ಭವಿಷ್ಯದಲ್ಲಿ ಈ ತಂತ್ರಜ್ಞಾನವನ್ನು ಸುಧಾರಿಸಿದರೆ, ನೈಸರ್ಗಿಕವಾಗಿ ಮಕ್ಕಳನ್ನು ಪಡೆಯಲು ಸಾಧ್ಯವಾಗದವರಿಗೆ ಇದು ಹೊಸ ಭರವಸೆಯ ಕಿರಣವಾಗಬಹುದು ಎನ್ನಲಾಗುತ್ತಿದೆ..

ಈ ಪ್ರಯೋಗವನ್ನು ಜೆನೆಟಿಕ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಒಂದು ಪ್ರಮುಖ ಪ್ರಗತಿ ಎಂದು ಪರಿಗಣಿಸಲಾಗಿದೆ. ಆದರೂ, ಮಾನವ ಪುನರುತ್ಪಾದನೆಯಲ್ಲಿ ಇದನ್ನು ಬಳಸಲು ಹಲವು ಅಡೆತಡೆಗಳಿವೆ. ಈ ಪ್ರಯೋಗದಲ್ಲಿ ಮತ್ತಷ್ಟು ಸುಧಾರಣೆಗಳನ್ನು ಮಾಡಿದರೆ, ಭವಿಷ್ಯದಲ್ಲಿ ಸಂತಾನೋತ್ಪತ್ತಿ ತಂತ್ರಜ್ಞಾನಕ್ಕೆ ಹೊಸ ಮಾರ್ಗಗಳನ್ನು ತೆರೆಯಬಹುದು. ಆದರೆ.. ಭವಿಷ್ಯದಲ್ಲಿ ಇದನ್ನು ಮನುಷ್ಯರಿಗೆ ಹೇಗೆ ಬಳಸಲಾಗುವುದು ಎಂಬುದನ್ನು ಕಾಯ್ದು ನೋಡಬೇಕಿದೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News