ಮಹಿಳೆಯರಲ್ಲಿ ಹಾರ್ಮೋನ್ ಸಮಸ್ಯೆ ನಿವಾರಿಸಲು ಈ '7' ಸೂಪರ್‌ಫುಡ್ ಟ್ರೈ ಮಾಡಿ...!

Women Health: ಮಹಿಳೆಯರಲ್ಲಿ ಕಾಡುವ ಹಾರ್ಮೋನ್ ಸಮಸ್ಯೆಗೆ  ನಿಮ್ಮ ಮನೆಯಲ್ಲಿಯೇ ಇದೆ ಅತ್ಯುತ್ತಮ ಪರಿಹಾರ. ಮನೆಯಲ್ಲಿರುವ ಆಹಾರಗಳ ಸಹಾಯದಿಂದಲೇ ಮಹಿಳೆಯರನ್ನು ಕಾಡುವ ಹಾರ್ಮೋನ್ ಸಮಸ್ಯೆಯನ್ನು  ಸುಲಭವಾಗಿ ನಿವಾರಿಸಬಹುದು. 

Written by - Yashaswini V | Last Updated : Feb 12, 2025, 07:57 PM IST
  • ಮಹಿಳೆಯರಲ್ಲಿ ಹಾರ್ಮೋನ್ ಸಮಸ್ಯೆ ಸರ್ವೇ ಸಾಮಾನ್ಯವಾದ ಸಮಸ್ಯೆ ಆಗಿದೆ.
  • ಮಹಿಳೆಯರಲ್ಲಿ ಹಾರ್ಮೋನ್ ಸಮಸ್ಯೆಗೆ ಹಲವು ಕಾರಣಗಳಿರಬಹುದು.
  • ಆದರೆ, ನಿಮ್ಮ ಮನೆಯಲ್ಲಿಯೇ ಇರುವ ಆಹಾರಗಳ ಸೇವನೆಯಿಂದ ಈ ಸಮಸ್ಯೆಗೆ ಸುಲಭ ಪರಿಹಾರ ಪಡೆಯಬಹುದು.
ಮಹಿಳೆಯರಲ್ಲಿ ಹಾರ್ಮೋನ್ ಸಮಸ್ಯೆ ನಿವಾರಿಸಲು ಈ '7' ಸೂಪರ್‌ಫುಡ್ ಟ್ರೈ ಮಾಡಿ...!  title=

Home Remedies To Control Hormonal Problems In Women: ಈ ಬದಲಾದ ಜೀವನಶೈಲಿಯಿಂದಾಗಿ ಮಹಿಳೆಯರ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮಗಳು ಹೆಚ್ಚಾಗಿವೆ. ಅದರಲ್ಲಿ, ಹಾರ್ಮೋನ್ ಅಸಮತೋಲನದಿಂದಾಗಿ ಪಿ‌ಸಿ‌ಓ‌ಡಿ, ಪಿ‌ಸಿ‌ಓ‌ಎಸ್ ನಂತಹ ಸಮಸ್ಯೆ ಸರ್ವೇ ಸಾಮಾನ್ಯವಾಗಿ ಕಾಡುವ ಆರೋಗ್ಯ ಸಮಸ್ಯೆಯಾಗಿದೆ. ಮಹಿಳೆಯರಲ್ಲಿ ಹಾರ್ಮೋನ್ ಅಸಮತೋಲನದಿಂದಾಗಿ ಮುಟ್ಟಿನ ಸಮಸ್ಯೆ, ಖಿನ್ನತೆ, ಒತ್ತಡ, ಮೊಡವೆ, ತೂಕ ಹೆಚ್ಚಳ,  ನಿದ್ರಾಹೀನತೆ, ಬಂಜೆತನದಂಥ ಹಲವು ಸಮಸ್ಯೆಗಳು ಕಾಡಬಹುದು. ಆದಾಗ್ಯೂ ಮನೆಯಲ್ಲಿರುವ ಆಹಾರ ಪದಾರ್ಥಗಳ ಸಹಾಯದಿಂದ ಹಾರ್ಮೋನ್ ಸಮಸ್ಯೆಯಿಂದ ಸುಲಭ ಪರಿಹಾರ ಪಡೆಯಬಹುದು. 

ಮಹಿಳೆಯರಲ್ಲಿ ಹಾರ್ಮೋನ್ ಸಮಸ್ಯೆ ನಿವಾರಿಸಲು 'ಏಳು' ಆಹಾರಗಳನ್ನು ಸೂಪರ್‌ಫುಡ್ ಎಂದು ಪರಿಗಣಿಸಲಾಗಿದೆ. ಅಂತಹ ಆಹಾರಗಳೆಂದರೆ... 
* ಅಗಸೆ ಬೀಜಗಳು: 

ಅಗಸೆ ಬೀಜದಲ್ಲಿ ಲಿಗ್ನಾನ್ ಗಳು ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳು ಹೇರಳವಾಗಿವೆ. ಇವು ದೇಹದಲ್ಲಿ ಈಸ್ಟ್ರೋಜಾನ್ ಮಟ್ಟವನ್ನು ಸಮತೋಲನಗೊಳಿಸುವುದರಿಂದ ಪಿ‌ಸಿ‌ಓ‌ಎಸ್ ಸಮಸ್ಯೆಯನ್ನು ನಿವಾರಿಸುವಲ್ಲಿ ಪರಿಣಾಮಕಾರಿ ಆಗಿದೆ. 

ಆವಕಾಡೊ: 
ಆರೋಗ್ಯಕರ ಕೊಬ್ಬುಗಳಲ್ಲಿ ಸಮೃದ್ಧವಾಗಿರುವ ಆವಕಾಡೊ ಮಹಿಳೆಯರಲ್ಲಿ ಹಾರ್ಮೋನ್ ಉತ್ಪಾದನೆಗೆ ಸಹಾಯಕವಾಗಿದೆ. 

ಇದನ್ನೂ ಓದಿ- ಸಕ್ಕರೆ ಮಾತ್ರವಲ್ಲ, ಈ ಆಹಾರಗಳೂ ಸಹ ಮಧುಮೇಹಿಗಳಿಗೆ ವಿಷಕ್ಕೆ ಸಮಾನ..!

ತಾಜಾ ಹಸಿರು ಸೊಪ್ಪುಗಳು: 
ಪಾಲಕ್ ನಂತಹ ಸೊಪ್ಪುಗಳಲ್ಲಿ ಮೆಗ್ನೀಸಿಯಮ್ ಸಮೃದ್ಧವಾಗಿದ್ದು ಇದು ಒತ್ತಡ ನಿವಾರಿಸಿ ಮಹಿಳೆಯರಲ್ಲಿ ಒಟ್ಟಾರೆ ಹಾರ್ಮೋನ್ ಸಮತೋಲನಕ್ಕೆ ಪರಿಣಾಮಕಾರಿ ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ. 

ಬೀಜಗಳು: 
ಚಿಯಾ ಸೀಡ್ಸ್, ಬಾದಾಮಿ, ವಾಲ್ನಟ್ಸ್, ಕುಂಬಳ ಬೀಜಗಳಲ್ಲಿ ಕೊಬ್ಬಿನಾಮ್ಲಗಳು ಹೇರಳವಾಗಿವೆ. ದೇಹದಲ್ಲಿ ಇನ್ಸುಲಿನ್ ಮಟ್ಟವನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿ ಆಗಿರುವ ಈ ಆಹಾರಗಳಲ್ಲಿ ಹಾರ್ಮೋನ್ ಸಮತೋಲನಕ್ಕೆ ಸಹಾಯಕವಾಗಿದೆ. 

ಹಣ್ಣುಗಳು: 
ದೈನಂದಿನ ಆಹಾರದಲ್ಲಿ ಸ್ಟ್ರಾಬೆರ್ರಿ, ರಾಸ್ಬೆರ್ರಿ ಅಂತಹ ಹಣ್ಣುಗಳನ್ನು ಸೇವಿಸುವುದರಿಂದ ಒತ್ತಡ ನಿವಾರಣೆಯಾಗಿ ಹಾರ್ಮೋನ್ ಸಹ ಸಮತೋಲನದಲ್ಲಿರುತ್ತದೆ. 

ಇದನ್ನೂ ಓದಿ- ಆರೋಗ್ಯಕ್ಕೆ ವರದಾನ ತೆಂಗಿನ ನೀರು; ಚಳಿಗಾಲದಲ್ಲಿ ಯಾವ ಸಮಯದಲ್ಲಿ ಕುಡಿಯಬೇಕೆಂದು ತಿಳಿಯಿರಿ

ಅರಿಶಿನ: 
ಹಲವು ರೋಗಗಳಿಗೆ ದಿವ್ಯೌಷಧವಾಗಿರುವ ಅರಿಶಿನದಲ್ಲಿ ಕರ್ಕ್ಯುಮೀನ್ ಉರಿಯೂತ ನಿವಾರಕ ಗುಣಗಳು ಹೆಚ್ಚಾಗಿದ್ದು ಪಿ‌ಸಿ‌ಓ‌ಡಿ, ಪಿ‌ಸಿ‌ಓ‌ಎಸ್ ಮತ್ತು ಎಂಡೋಮೆಟ್ರಿಯೋಸಿಸ್ ನಂತಹ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವಲ್ಲಿ ಪರಿಣಾಮಕಾರಿ ಆಗಿದೆ. 

ಮೀನು: 
ನೀವು ಮಾಂಸಾಹಾರಿಗಳಾಗಿದ್ದಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿರುವ ಸಾಲ್ಮಾನ್, ಮ್ಯಾಕೆರೆಲ್, ಸಾರ್ಡಿನ್ ನಂತಹ ಮೀನುಗಳನ್ನು ಸೇವಿಸುವುದರಿಂದ ಹಾರ್ಮೋನ್ ಸಮಸ್ಯೆಗೆ ಸುಲಭ ಪರಿಹಾರ ಪಡೆಯಬಹುದು. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News