Who is Himanshu Sangwan: ದೆಹಲಿಯ ನಜಾಫ್‌ಗಢದ ಅನನುಭವಿ ವೇಗಿಯೊಬ್ಬರು ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ವಿರಾಟ್ ಕೊಹ್ಲಿಯನ್ನು ಕ್ಲೀನ್‌ಬೌಲ್ಡ್ ಮಾಡುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ. ಒಬ್ಬ ಅನನುಭವಿ ವೇಗದ ಬೌಲರ್, G.O.A.T ಎಂಬ ಬಿರುದನ್ನು ಹೊಂದಿರುವ ವಿರಾಟ್ ಕೊಹ್ಲಿಯನ್ನು ಔಟ್ ಮಾಡಿದ ರೀತಿ ನೋಡಿದರೆ, ಎಂಥಹವರಿಗೂ ಕೊಹ್ಲಿ ಫಾರ್ಮ್ ಬಗ್ಗೆ ಪ್ರಶ್ನೆ ಮೂಡುವುದು ಸಹಜ. ಕೊಹ್ಲಿ 12 ವರ್ಷಗಳ ನಂತರ ರಣಜಿ ಟ್ರೋಫಿಗೆ ಮರಳಿದ್ದಾರೆ. ಆದರೆ ಅವರ ಬ್ಯಾಟಿಂಗ್ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದೆ.
ಇದನ್ನೂ ಓದಿ: ಸಂಪೂರ್ಣ ಮೊಟ್ಟೆ ಅಥವಾ ಮೊಟ್ಟೆಯ ಬಿಳಿಭಾಗ.. ಹೆಚ್ಚು ಪ್ರೋಟೀನ್ ಯಾವುದರಲ್ಲಿ ಇದೆ..? ತಿನ್ನುವ ಮುಂಚೆ ತಿಳಿಯಿರಿ..
ರೈಲ್ವೇಸ್ ಬೌಲರ್‌ಗಳು ವಿರಾಟ್ ಕೊಹ್ಲಿಯನ್ನು ಅತ್ಯುತ್ತಮ ಇನ್-ಸ್ವಿಂಗ್ ಎಸೆತಗಳ ಮೂಲಕ ಪರೀಕ್ಷೆಗೆ ಒಳಪಡಿಸಿದ್ದರು. ವಿರಾಟ್ ಕೊಹ್ಲಿ ತಮ್ಮ ಇನ್ನಿಂಗ್ಸ್ ಅನ್ನು ಕವರ್ಸ್ ಆಡುವ ಮೂಲಕ ಪ್ರಾರಂಭಿಸಿದರು, ಮೊದ ಮೊದಲು ಒಳ್ಳೆ ರೀತಿಯಲ್ಲಿ ಕಂಬ್ಯಾಕ್ ಮಾಡುವ ಭರವಸೆ ನೀಡಿದ್ದಾದರೂ, ಇದು ಹಿಮಾಂಶು ಸಂಗ್ವಾನ್ ಆ ಭರವಸೆಯನ್ನು ನುಚ್ಚುನೂರು
ಹಿಮಾಂಶು ಸಾಂಗ್ವಾನ್ ಬೌನ್ಸ್ ಮಾಡಿದ ಚೆಂಡು ಬ್ಯಾಟ್ ಮತ್ತು ಪ್ಯಾಡ್ ನಡುವಿನ ಅಂತರವನ್ನು ದಾಟಿ ಆಫ್-ಸ್ಟಂಪ್‌ಗೆ ಬಡಿದಿತ್ತು. ವಿರಾಟ್ ಔಟ್ ಆಗುತ್ತಿದ್ದಂತೆ ದೆಹಲಿ ಪ್ರೇಕ್ಷಕರಲ್ಲಿ ಮೌನ ಆವರಿಸಿತ್ತು. ದೆಹಲಿ ಪರ 4ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಬಂದ ವಿರಾಟ್ ಕೊಹ್ಲಿ 15 ಎಸೆತಗಳಲ್ಲಿ 6 ರನ್ ಗಳಿಸಿ ಔಟಾದರು.
ಇದನ್ನೂ ಓದಿ: ಈ ಸ್ಟಾರ್ ನಟಿಗೆ 'ಕ್ಲೀನಾಗಿ ಮುಖ ತೊಳ್ಕೊಂಡು ಬನ್ನಿ' ಅಂದಿದ್ರಂತೆ ಕಮಲ್ ಹಾಸನ್ !!
ಹಿಮಾಂಶು ಸಂಗ್ವಾನ್ ಯಾರು?
ಹಿಮಾಂಶು ಸಂಗ್ವಾನ್ ದೆಹಲಿಯ ನಜಾಫ್‌ಗಢ ಪ್ರದೇಶದ ನಿವಾಸಿಯಾಗಿದ್ದು, ರೈಲ್ವೇಸ್‌ಗಾಗಿ ದೇಶೀಯ ಕ್ರಿಕೆಟ್ ಆಡುತ್ತಾರೆ. ಹಿಮಾಂಶು ಸಂಗ್ವಾನ್ ಒಬ್ಬ ಮಧ್ಯಮ ವೇಗದ ಬೌಲರ್. 2019 ರಲ್ಲಿ ವಿಜಯ್ ಹಜಾರೆ ಟ್ರೋಫಿಯ ಮೂಲಕ ಲಿಸ್ಟ್ ಎ ತಂಡಕ್ಕೆ ಪಾದಾರ್ಪಣೆ ಮಾಡಿದ ಅವರು, ನಂತರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ T20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಅದೇ ವರ್ಷ ರಣಜಿ ಟ್ರೋಫಿಯ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಹಿಮಾಂಶು ಸಂಗ್ವಾನ್ ತಮ್ಮ ಕ್ರಿಕೆಟ್ ವೃತ್ತಿಜೀವನವನ್ನು ಪ್ರಾರಂಭಿಸುವ ಮೊದಲು ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ಟಿಕೆಟ್ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. MRF ಪೇಸ್ ಫೌಂಡೇಶನ್‌ನಲ್ಲಿಯೂ ಸಮಯ ಕಳೆದಿರುವ ಅವರು, ಆಸ್ಟ್ರೇಲಿಯಾದ ವೇಗದ ಬೌಲರ್ ಗ್ಲೆನ್ ಮೆಕ್‌ಗ್ರಾತ್ ಅವರ ಅಡಿಯಲ್ಲಿ ತರಬೇತಿ ಪಡೆದಿದ್ದಾರೆ. ಇದು ಹಿಮಾಂಶು ಸಂಗ್ವಾನ್ ಅವರ ವೃತ್ತಿಜೀವನದಲ್ಲಿ ಒಂದು ಮಹತ್ವದ ಕ್ಷಣವಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ