Kiccha Sudeep CCL 2025 : ಕರ್ನಾಟಕ ಬುಲ್ಡೋಜರ್ಸ್ ತಂಡವನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮುನ್ನಡೆಸಲಿದ್ದು, ತಂಡದ ಮಾಲೀಕರಾಗಿ ಅಶೋಕ್ ಖೇಣಿ ಸಾಥ್ ಕೊಡುತ್ತಿದ್ದಾರೆ. ಕಳೆದ ಬಾರಿ ರನ್ನರ್ ಅಪ್ ಆಗಿ ಹೊರಗಹೊಮ್ಮಿದ್ದ ಕರ್ನಾಟಕ ಬುಲ್ಡೋಜರ್ಸ್ ತಂಡ ಈ ಬಾರಿ ಕಪ್ ಗೆಲ್ಲುವ ತವಕದಲ್ಲಿದ್ದಾರೆ.
ಈ ಬಾರಿಯ ವಿಶೇಷ ಅಂದ್ರೆ ಕಳೆದ ಬಾರಿ ಮಿಸ್ ಆಗಿದ್ದ ಗೋಲ್ಡನ್ ಸ್ಟಾರ್ ಗಣೇಶ್ ತಂಡ ಸೇರ್ಪಡೆಯಾಗಿದ್ದಾರೆ. ಸಿಸಿಎಲ್ ಸೀಸನ್ 11ಕ್ಕೆ ದಿನಗಣನೆ ಶುರುವಾಗಿದ್ದು, ಈ ಹಿನ್ನೆಲೆ ಬೆಂಗಳೂರಿನಲ್ಲಿ ನಿನ್ನೆ ಸುದ್ದಿ ಗೋಷ್ಟಿ ಆಯೋಜಿಸಲಾಗಿತ್ತು. ಈ ವೇಳೆ ಕಿಚ್ಚ ಸುದೀಪ್, ಸಿಸಿಎಲ್ ಆಯೋಜಕರಾದ ವಿಷ್ಣು ಇಂದೋರಿ ಹಾಗೂ ಕರ್ನಾಟಕ ಬುಲ್ಡೋಜರ್ಸ್ ತಂಡದ ನಾಯಕ ಅಶೋಕ್ ಖೇಣಿ ಉಪಸ್ಥಿತರಿದ್ದರು.
ಇದನ್ನೂ ಓದಿ:ಪ್ರಜ್ವಲ್ ದೇವರಾಜ್ ಗೆ ಸೋನಲ್ ಮೊಂಥೆರೋ ನಾಯಕಿ..ಶಿವರಾತ್ರಿ ಹಬ್ಬಕ್ಕೆ 'ರಾಕ್ಷಸ' ದರ್ಶನ
ಕರ್ನಾಟಕ ಬುಲ್ಡೋಜರ್ಸ್ ತಂಡದ ನಾಯಕ ಸುದೀಪ್ ಮಾತನಾಡಿ, ಸಿಸಿಎಲ್ ನಡೆಸುವುದೇ ಬಹಳ ಕಷ್ಟ. ನಾಲ್ಕು ಟೀಂ ಒಟ್ಟಿಗೆ ಶುರುವಾದ ಜರ್ನಿ ಇದು. ಇದೇ ಮೈದಾನದಲ್ಲಿ ಮುಂಬೈ ಮೇಲೆ ಮೊದಲ ಮ್ಯಾಚ್ ಆಡಿದ್ದೇವು. ಅದ್ಭುತ ವಾತಾವರಣ ಆ ದಿನ ಇತ್ತು. ನಾವೆಲ್ಲಾ ಚಿಕ್ಕ ಚಿಕ್ಕ ಗ್ರೌಂಡ್ ನಲ್ಲಿ ಆಟವಾಡುತ್ತಿದ್ದರು. ಅವತ್ತಿಗೆ ಗ್ರೌಂಡ್ ಫುಲ್ ಆಗುತ್ತದೆ. ಇಷ್ಟು ಜನಗಳ ಮಧ್ಯೆ ಆಡುವುದು. ಭಯ ಎಂದರೇನು ಅನ್ನುವುದು ಅವತ್ತು ಗೊತ್ತಾಯ್ತು. ನಮಗೆ ಅದು ಕೊಟ್ಟ ಅದ್ಭುತ ಗಿಫ್ಟ್...ಚಿತ್ರರಂಗದ ಬೇರೆ ಬೇರೆ ಭಾಷೆಗಳ ಜೊತೆ ನಮಗೆ ಒಡನಾಟ ಇರಲಿಲ್ಲ. ಸೇತುವೆ ಇರಲಿಲ್ಲ. ಆದರೆ ಸಿಸಿಎಲ್ ನಿಂದ ಸಂಪರ್ಕವಾಯಿತು ಎಂದು ತಿಳಿಸಿದರು.
ಅಶೋಕ್ ಖೇಣಿ ಮಾತನಾಡಿ, ಮ್ಯಾಕ್ಸ್ ಸಿನಿಮಾದ ಸಕ್ಸಸ್ ಗೆ ಶುಭಾಶಯ. ಕರ್ನಾಟಕ ಬುಲ್ಡೋಜರ್ಸ್ ನಾಲ್ಕು ಬಾರಿ ಕಪ್ ಗೆದ್ದಿದೆ. ಈ ಬಾರಿ ಕಪ್ ಗೆಲ್ಲುತ್ತೇವೆ ಎಂಬ ಭರವಸೆ ಇದೆ ಎಂದರು.
ಸಿಸಿಎಲ್ ಆಯೋಜಕರಾದ ವಿಷ್ಣು ಇಂದೂರಿ ಮಾತನಾಡಿ, ಸಿಸಿಎಲ್ ಶುರುವಾಗಿ 11 ವರ್ಷವಾಯ್ತು. ಇದು 11ನೇ ಸೀಸನ್. ಮೊದಲ ಟೂರ್ನಮೆಂಟ್ ಬೆಂಗಳೂರಲ್ಲಿ ಆಯೋಜಿಸಿದಾಗ ಅತಿ ಹೆಚ್ಚು ಜನ ನೋಡಿರುವುದು ದಾಖಲೆ. ಕರ್ನಾಟಕ ಬುಲ್ಡೋಸರ್ಸ್ ತಂಡ ನನ್ನ ಹೃದಯಕ್ಕೆ ಹತ್ತಿರಕ್ಕೆ ಇದೆ. ಸುದೀಪ್ ಸರ್ ನೀವು ಸ್ಟಾರ್ ಅನ್ನುವುದಕ್ಕಿಂತ ನಮ್ಮೆಲ್ಲರಿಗೆ ಸಹೋದರ ಇದ್ದಂತೆ. ನಿಮ್ಮ ಬೆಂಬಲಕ್ಕೆ ಧನ್ಯವಾದ ಸಣ್ಣ ಪದ. ನೈಸ್ ಮುಖ್ಯಸ್ಥರಾದ ಖೇಣಿ ಸರ್ ನೀವು ಸಿಸಿಎಲ್ ಬಲ ಎಂದರು.
ಇದನ್ನೂ ಓದಿ:ರಾಯಲ್ ಸಿನಿಮಾಗೆ ಬೆವರಲ್ಲ, ರಕ್ತ ಹರಿಸಿದ್ದಾರೆ ವಿರಾಟ್..!
ತಂಡಗಳು ಪಟ್ಟಿ ಈ ಬಾರಿ ಒಟ್ಟು 7 ತಂಡಗಳು ಕ್ರಿಕೆಟ್ ಆಡಲಿದ್ದು, ಆ ಟೀಮ್ಗಳ ಬಗ್ಗೆ ಇಲ್ಲಿದೆ ಮಾಹಿತಿ
ಕರ್ನಾಟಕ ಬುಲ್ಡೋಜರ್ಸ್, ಚೆನ್ನೈ ರೈನೋಸ್, ಬೆಂಗಾಲ್ ಟೈಗರ್ಸ್, ಪಂಜಾಬ್ ಡಿ ಶೇರ್, ಮುಂಬೈ ಹೀರೋಸ್, ಭೋಜ್ಪುರಿ ದಬಾಂಗ್ಸ್, ತೆಲುಗು ವಾರಿಯರ್ಸ್ ಸೇರಿದಂತೆ 7 ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ.
ಸಿಸಿಎಲ್ ಸೀಸನ್ 11ಕ್ಕೆ Blobs ಟೈಟಲ್ ಸ್ಪಾನ್ಸರ್ ಮಾಡುತ್ತಿದ್ದು, ಏರ್ ಟೆಲ್ ಪೇಮೆಂಟ್ ಬ್ಯಾಂಕ್ ಕೋ ಸ್ಪಾನ್ಸರ್ ಮಾಡುತ್ತಿದ್ದಾರೆ. ಅಸೋಸಿಯೇಟ್ ಸ್ಪಾನ್ಸರ್ ಆಗಿ NICE ಲಿಮಿಟೆಡ್ , ಇಕ್ಯೂಪ್ಮೆಂಟ್ ಸ್ಪಾನ್ಸರ್ SG, ಅನಾಲೈಟಿಕ್ ಸ್ಪಾನ್ಸರ್ St8bat ಸಾಥ್ ಕೊಡುತ್ತಿದ್ದಾರೆ.
ಕರ್ನಾಟಕ ಬುಲ್ಡೋಜರ್ಸ್ ತಂಡ
ಕಿಚ್ಚ ಸುದೀಪ್
ಗೋಲ್ಡನ್ ಸ್ಟಾರ್ ಗಣೇಶ್
ಕಾರ್ತಿಕ್ ಜಯರಾಮ್
ಡಾರ್ಲಿಂಗ್ ಕೃಷ್ಣ
ಸುನಿಲ್ ರಾವ್
ರಾಜೀವ್ ಹನು
ಚಂದನ್ ಕುಮಾರ್
ಪ್ರತಾಪ್ ನಾರಾಯಣ್
ನಿರೂಪ್ ಭಂಡಾರಿ
ಅನೂಪ್ ಭಂಡಾರಿ
ಕರಣ್ ಆರ್ಯನ್
ಮಂಜುನಾಥ್ ಗೌಡ
ಸಾಗರ್ ಗೌಡ
ಅಲಕಾನಂದ
ತ್ರಿವಿಕ್ರಮ್
CCL-2025 ಹೊಸ ವೇಳಾಪಟ್ಟಿ
ಬೆಂಗಳೂರಿನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ರಿನ್ಹೋಸ್ ಮತ್ತು ಬೆಂಗಾಲ್ ಟೈಗರ್ಸ್ ಮುಖಾಮುಖಿಯಾಗಲಿದ್ದು, ಅದೇ ದಿನ ನಡೆಯುವ ಎರಡನೇ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ಮತ್ತು ತೆಲುಗು ವಾರಿಯರ್ಸ್ ಸೆಣೆಸಲಿವೆ.
ನಾಲ್ಕು ತಂಡಗಳಾದ ಭೋಜ್ಪುರಿ ದಬಾಂಗ್ಸ್, ಬೆಂಗಾಲ್ ಟೈಗರ್ಸ್, ಮುಂಬೈ ಹೀರೋಸ್ ಮತ್ತು ಪಂಜಾಬ್ ಡಿ ಶೇರ್ ಫೆಬ್ರವರಿ 9 ರಂದು ದೆಹಲಿಯಲ್ಲಿ ಆಡಲಿವೆ. ಆನಂತರದ ಪಂದ್ಯಗಳು ಕ್ರಮವಾಗಿ ಹೈದರಾಬಾದ್, ಕಟಕ್, ಸೂರತ್ನಲ್ಲಿ ನಡೆಯಲಿವೆ. ಮಾರ್ಚ್ 1ರಂದು ಸೆಮಿಫೈನಲ್ ಪಂದ್ಯ ನಡೆಯಲಿದ್ದು ಮತ್ತು ಮಾರ್ಚ್ 2ರಂದು ಫೈನಲ್ ಪಂದ್ ನಡೆಯಲಿದೆ. ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಿಗೆ ಸ್ಥಳವನ್ನು ಇನ್ನೂ ಅಂತಿಮಗೊಳಿಸಿಲ್ಲ.
ಕರ್ನಾಟಕ ಬುಲ್ಡೋಜರ್ಸ್ ಪಂದ್ಯಗಳ ವಿವರ
8 ಫೆಬ್ರವರಿ - ತೆಲುಗು ವಾರಿಯರ್ಸ್ - ಬೆಂಗಳೂರು
14 ಫೆಬ್ರವರಿ - ಚೆನ್ನೈ ರೈನೋಸ್ - ಹೈದರಾಬಾದ್
15 ಫೆಬ್ರವರಿ - ಮುಂಬೈ ಹೀರೋಸ್ - ಹೈದರಾಬಾದ್
22 ಫೆಬ್ರವರಿ - ಪಂಜಾಬ್ ಶೇರ್ - ಸೂರತ್
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.