ಕರ್ನಾಟಕ ಮಾಧ್ಯಮ ಅಕಾಡೆಮಿ: ಛಾಯಾಚಿತ್ರ ಸ್ಪರ್ಧೆಗೆ ಫೋಟೋಗಳ ಆಹ್ವಾನ

ಕರ್ನಾಟಕ ಮಾಧ್ಯಮ ಅಕಾಡೆಮಿಯು ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಕರ್ನಾಟಕದ ಸುದ್ದಿ ಛಾಯಾ ಚಿತ್ರಗ್ರಾಹಕರಿಗಾಗಿ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆ ಹಾಗೂ ಪ್ರದರ್ಶನವನ್ನು ಏರ್ಪಡಿಸಿದೆ.

Written by - Manjunath N | Last Updated : Feb 6, 2025, 06:14 PM IST
  • ಮೊಬೈಲ್ ಕ್ಯಾಮೆರಾದಲ್ಲಿ ಚಿತ್ರಿಸಿರುವ ಚಿತ್ರಗಳನ್ನು ಸ್ಪರ್ಧೆಗೆ ಸ್ವೀಕರಿಸಲಾಗುವುದಿಲ್ಲ.
  • ಸ್ಪರ್ಧೆಯಲ್ಲಿ ಭಾಗವಹಿಸುವ ಸುದ್ದಿ ಛಾಯಾಚಿತ್ರಗಳು ಸಹಜವಾಗಿರಬೇಕು.
  • ಚಿತ್ರದಲ್ಲಿನ ಯಾವುದೇ ಭಾಗವನ್ನು ತೆಗೆಯುವುದಾಗಲಿ ಅಥವಾ ಸೇರಿಸುವುದಾಗಲಿ ಮಾಡಿರಬಾರದು.
ಕರ್ನಾಟಕ ಮಾಧ್ಯಮ ಅಕಾಡೆಮಿ: ಛಾಯಾಚಿತ್ರ ಸ್ಪರ್ಧೆಗೆ ಫೋಟೋಗಳ ಆಹ್ವಾನ title=

ಬೆಂಗಳೂರು : ಕರ್ನಾಟಕ ಮಾಧ್ಯಮ ಅಕಾಡೆಮಿಯು ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಕರ್ನಾಟಕದ ಸುದ್ದಿ ಛಾಯಾ ಚಿತ್ರಗ್ರಾಹಕರಿಗಾಗಿ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆ ಹಾಗೂ ಪ್ರದರ್ಶನವನ್ನು ಏರ್ಪಡಿಸಿದೆ.

ಈ ಸ್ಪರ್ಧೆಯಲ್ಲಿ ಆಯ್ಕೆಯಾಗುವ ಮೊದಲ ಮೂರು ಛಾಯಾಚಿತ್ರಗಳಿಗೆ ಕ್ರಮವಾಗಿ ರೂ. 35,000 ರೂ. 25,000 ರೂ. ಹಾಗೂ 15,000 ರೂ. ನಗದು ಬಹುಮಾನ ನೀಡಲಾಗುವುದು. ಆಯ್ದ ಅತ್ಯುತ್ತಮ ಛಾಯಾಚಿತ್ರಗಳನ್ನು ಹುಬ್ಬಳ್ಳಿ-ಧಾರವಾಡದಲ್ಲಿ ಮಾರ್ಚ್ ತಿಂಗಳಲ್ಲಿ ಅಕಾಡೆಮಿ ವತಿಯಿಂದ ಏರ್ಪಡಿಸಲಾಗುವ ಸುದ್ದಿ ಛಾಯಾಗ್ರಹಣ ಕುರಿತ ಕಾರ್ಯಾಗಾರದ ಸಂದರ್ಭದಲ್ಲಿ ಛಾಯಾಚಿತ್ರ ಪ್ರದರ್ಶನದಲ್ಲಿ ಇರಿಸಲಾಗುವುದು.

ಸ್ಪರ್ಧೆಯ ಷರತ್ತುಗಳು: ಈ ಸ್ಪರ್ಧೆಗೆ ಪ್ರವೇಶ ಉಚಿತವಾಗಿದ್ದು, ದಿನಾಂಕ:01-01-2024 ರಿಂದ 31-01-2025 ರ ಅವಧಿಯಲ್ಲಿ ಚಿತ್ರಿಸಿರುವ ಚಿತ್ರಗಳನ್ನು ಮಾತ್ರ ಸ್ಪರ್ಧೆಗೆ ಸ್ವೀಕರಿಸಲಾಗುವುದು. ಪ್ರತಿ ಸುದ್ದಿ ಛಾಯಾಚಿತ್ರ ಗ್ರಾಹಕರು ತಾವೇ ಚಿತ್ರಿಸಿರುವ ಎರಡು ಸುದ್ದಿ ಛಾಯಾಚಿತ್ರಗಳನ್ನು ಮಾತ್ರ ಸ್ಪರ್ಧೆಗೆ ಸಲ್ಲಿಸಬಹುದು.

ಇದನ್ನೂ ಓದಿ : Delhi Assembly Election 2025: ಇಂದು ದೆಹಲಿ ವಿಧಾನಸಭಾ ಚುನಾವಣೆ... 70 ಕ್ಷೇತ್ರಗಳಲ್ಲಿ ನಡೆಯಲಿದೆ ಮತದಾನ!

ಸುದ್ದಿ ಛಾಯಾಚಿತ್ರಗಳನ್ನು ಚಿತ್ರಿಸಿರುವುದಕ್ಕೆ ಯಾವುದೇ ಭೌಗೋಳಿಕ ಪರಿಮಿತಿ ಇರುವುದಿಲ್ಲ. ಪ್ರತಿ ಸ್ಪರ್ಧಿಯೂ ಅವರು ಸುದ್ದಿ ಛಾಯಾಚಿತ್ರಗ್ರಾಹಕರಾಗಿ ಕಾರ್ಯನಿರ್ವಹಿಸುತ್ತಿರುವ ಪತ್ರಿಕೆಯ ಸಂಪಾದಕರಿಂದ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ದೃಢೀಕರಣ ಪತ್ರ ಅಥವಾ ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪತ್ರಕರ್ತರಿಗಾಗಿ ನೀಡುವ ಮಾಧ್ಯಮ ಮಾನ್ಯತಾ ಕಾರ್ಡ ಹೊಂದಿರುವವರು ಅದರ ದೃಢೀಕೃತ ಪ್ರತಿಯನ್ನು ಕಡ್ಡಾಯವಾಗಿ ಅರ್ಜಿಯೊಂದಿಗೆ ಲಗತ್ತಿಸಬೇಕು. ಛಾಯಾಚಿತ್ರಗಳ ಮೇಲೆ ಹೆಸರು, ಶೀರ್ಷಿಕೆ ಹಾಗೂ ವಾಟರ್ ಮಾರ್ಕ್‍ಗಳು ಇರಬಾರದು. ಸ್ಪರ್ಧೆಗೆ ಕಳಿಸುವ ಛಾಯಾಚಿತ್ರಗಳ ಅಂದರೆ ಡಿಜಿಟಲ್ ಇಮೇಜ್‍ಗಳನ್ನು ಜೆಪಿಇಜಿ ಪಾಮ್ರ್ಯಾಟ್ (JPEG format) ನಲ್ಲಿ ಮಾತ್ರ ಸಲ್ಲಿಸಬೇಕು.May be an image of 2 people and text that says "ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಮಾಧ್ಯಮ ಅಕಾಡೆಮಿಯಿಂದ 海川 ಪ್ರಥಮ ಛಾಯಾಚಿತ್ರ ಸ್ರ್ಧೆ ಹಾಗೂ ಪ್ರದರ್ಶನ ಉಚಿತ ಪ್ರವೇಶ ಪ್ರಥಮು ಬಹುಮಾನ マ35,000 ದ್ಿತೀಯ ಬಹುಮಾನ ₹25,000 ತೃತೀಯ ಬಹುಮಾನ ₹15,000 ಜನವರಿ 2024 ರಿಂದ ಜನವರಿ 31, 20250 ಅವಧಿಯಲ್ಲಿ ಚಿತ್ರಿಸಿದ ಚಿತ್ರಗಳನ್ನು ಸ್ವೀಕರಿಸಲಾಗುವುದು ಕೊನೆಯ ದಿನಾಂಕ: ಫೆಬ್ರವರಿ 15, 2025 ಸಂಜೆ ಗಂಟೆಯವರೆಗೆ ಅರ್ಜಿ ಸಲ್ಲಿಸಲು ಸ್ಯ್ಯಾನ್ ಮಾಡಿ ಕರ್ನಾಟಕದ ನವ ನಿರ್ಮಾಣಕ್ಕೆ ಗ್ಯಾರಂಟಿ ಸರ್ಕಾರ ಭಾವಜಿತ್ತ ಹಾಗೂ ಛಭಾಯಾಚಿತ್ರವನ್ನು ಇ-ಮೇಲ್ ದಿಳಾಸಕ್ಕ್ ಕಳುಹಿಸಿ photokarnatakamedladey@mal. ಸ್ಪರ್ಧಥೆಯ ಸರತ್ತುಗಳು ಹಾಗೂ ಹೆಜ್ಚನ ಮಾಹಿತಿಗಾಗಿ ಸಂಪರ್ಕಿಸಿ: 9448227768, 9448227768 ವಾರ್ತಾ ಪಾ್ತಮಖ್ಸರ್ವಜಿಕಸಂಪರ್ಕಇಲಖ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ DEPARTMENT INFORNATION ND CRELATION oe @KarnatakaVarthe KarnntakaVarthe:0"

ಪ್ರದರ್ಶನಕ್ಕೆ ಆಯ್ಕೆಯಾಗುವ ಛಾಯಾಚಿತ್ರಗಳನ್ನು 20''x30'' ಅಳತೆಯಲ್ಲಿ ಮುದ್ರಣ ಮಾಡಿಸಬೇಕಾಗಿರುವುದರಿಂದ ನೀವು ಕಳಿಸುವ ಇಮೇಜ್‍ಗಳು 20''x 30'' ಅಳತೆಯ 300 ಡಿಪಿಐ ನಲ್ಲಿದ್ದು ಕನಿಷ್ಠ 5 ಎಮ್‍ಬಿ ಗಾತ್ರದಲ್ಲಿರಬೇಕು.

ಇದನ್ನೂ ಓದಿ : Daily GK Quiz: ಮನುಷ್ಯರಲ್ಲಿ ಎಷ್ಟನೇ ವಯಸ್ಸಿಗೆ ಬುದ್ಧಿವಂತ ಹಲ್ಲು ಕಾಣಿಸಿಕೊಳ್ಳುತ್ತದೆ?

ಮೊಬೈಲ್ ಕ್ಯಾಮೆರಾದಲ್ಲಿ ಚಿತ್ರಿಸಿರುವ ಚಿತ್ರಗಳನ್ನು ಸ್ಪರ್ಧೆಗೆ ಸ್ವೀಕರಿಸಲಾಗುವುದಿಲ್ಲ. ಸ್ಪರ್ಧೆಯಲ್ಲಿ ಭಾಗವಹಿಸುವ ಸುದ್ದಿ ಛಾಯಾಚಿತ್ರಗಳು ಸಹಜವಾಗಿರಬೇಕು. ಚಿತ್ರದಲ್ಲಿನ ಯಾವುದೇ ಭಾಗವನ್ನು ತೆಗೆಯುವುದಾಗಲಿ ಅಥವಾ ಸೇರಿಸುವುದಾಗಲಿ ಮಾಡಿರಬಾರದು.

ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ಛಾಯಾಗ್ರಾಹಕರು mediaacademy.karnataka.gov.in ವೆಬ್‍ಸೈಟ್‍ನಲ್ಲಿ ಇರುವ ನಿಗದಿತ ಅರ್ಜಿಯನ್ನು Download ಮಾಡಿಕೊಂಡು ಭರ್ತಿಮಾಡಿ, ತಮ್ಮ ಪಾಸ್ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ ಇಮೇಜ್‍ಗಳನ್ನು photo.karnatakamediaacademy@gmail.com ಇ-ಮೇಲ್ ವಿಳಾಸಕ್ಕೆ ಫೆಬ್ರವರಿ 15, 2025 ರಂದು ಸಂಜೆ 5 ಗಂಟೆ ಒಳಗಾಗಿ ಸಲ್ಲಿಸತಕ್ಕದ್ದು. ನಂತರ ಬಂದ ಚಿತ್ರಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.

ಸ್ಪರ್ಧೆಗೆ ಬಂದಿರುವ ಛಾಯಾಚಿತ್ರಗಳನ್ನು ಪ್ರಶಸ್ತಿಗೆ ಹಾಗೂ ಪ್ರದರ್ಶನಕ್ಕೆ ಆಯ್ಕೆ ಮಾಡಲು ಸುದ್ದಿ ಛಾಯಾಗ್ರಹಣ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಮೂವರು ತೀರ್ಪುಗಾರರಿದ್ದು ಅವರು ತೆಗೆದುಕೊಂಡ ತೀರ್ಮಾನವೇ ಅಂತಿಮವಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9448227768 ಹಾಗೂ 9449245980 ನ್ನು ಸಂಪರ್ಕಿಸಬಹುದು ಎಂದು ಮಾಧ್ಯಮ ಅಕಾಡೆಮಿಯ ಕಾರ್ಯದರ್ಶಿ ಸಹನಾ ಎಂ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News