ಪ್ರೇಮಿಗಳ ದಿನದಂದು ನಿಮ್ಮ ಹುಡುಗಿಗೆ ಈ ಗುಲಾಬಿ ಕೊಟ್ರೆ ಬ್ರೇಕಪ್‌ ಆಗುವುದೇ ಇಲ್ಲ..! ಬೆಲೆ ಜಸ್ಟ್‌ 1,38,33,68,063 ರೂ.

Rose Day gift ideas : ಪ್ರೇಮಿಗಳ ದಿನಾಚರಣೆ ಹತ್ತಿರವಾಗುತ್ತಿದೆ.. ಇದೇ ತಿಂಗಳು ಪ್ರಪಂಚದಾದ್ಯಂತ ಲವರ್‌ ಡೇ ಅನ್ನು ಪ್ರೇಮಿಗಳು ಅದ್ಧೂರಿಯಾಗಿ ಸೆಲೆಬ್ರೆಟ್‌ ಮಾಡಲಿದ್ದಾರೆ. ಅದಕ್ಕೂ ಮುನ್ನ ಗುಲಾಬಿ ದಿನವನ್ನು ಆಚರಿಸಲಾಗುತ್ತದೆ. ಹೆಚ್ಚಿನ ಜೋಡಿಗಳು ತಮ್ಮ ಸಂಗಾತಿಗೆ ಹೂಗುಚ್ಛವಾಗಿ ನೀಡಲು ಗುಲಾಬಿ ಹೂಗಳನ್ನು ಆಯ್ಕೆ ಮಾಡುತ್ತಾರೆ.. ಈ ಪೈಕಿ ಇಲ್ಲೊಂದು ದುಬಾರಿ ಗುಲಾಬಿ ಹೂ ಇದೆ ನೋಡಿ..

Written by - Krishna N K | Last Updated : Feb 7, 2025, 07:19 PM IST
    • ಪ್ರೇಮಿಗಳ ದಿನಾಚರಣೆ ಹತ್ತಿರವಾಗುತ್ತಿದೆ..
    • ಲವರ್‌ ಡೇ ಅನ್ನು ಪ್ರೇಮಿಗಳು ಅದ್ಧೂರಿಯಾಗಿ ಸೆಲೆಬ್ರೆಟ್‌ ಮಾಡಲಿದ್ದಾರೆ.
    • ಈ ಪೈಕಿ ಇಲ್ಲೊಂದು ದುಬಾರಿ ಗುಲಾಬಿ ಹೂ ಇದೆ ನೋಡಿ..
ಪ್ರೇಮಿಗಳ ದಿನದಂದು ನಿಮ್ಮ ಹುಡುಗಿಗೆ ಈ ಗುಲಾಬಿ ಕೊಟ್ರೆ ಬ್ರೇಕಪ್‌ ಆಗುವುದೇ ಇಲ್ಲ..! ಬೆಲೆ ಜಸ್ಟ್‌ 1,38,33,68,063 ರೂ. title=

Valentine day gift ideas : ಪ್ರೇಮಿಗಳ ವಾರ ಆರಂಭವಾಗಿದೆ. ಈ ಪ್ರೀತಿಯ ವಾರದ ಮೊದಲ ದಿನ, ಅಂದರೆ ಫೆಬ್ರವರಿ 7 ರಂದು ಗುಲಾಬಿ ದಿನವನ್ನು ಆಚರಿಸಲಾಗುತ್ತದೆ. ಲವರ್ಸ್‌ಗೆ ಗುಲಾಬಿ ಹೂಗಳು ಅಂದ್ರೆ ತುಂಬಾ ಇಷ್ಟ. ಹೆಚ್ಚಿನ ಜನರು ತಮ್ಮ ಸಂಗಾತಿಗೆ ಗುಲಾಬಿ ಹೂಗುಚ್ಛ ನೀಡಲು ಇಷ್ಟಪಡುತ್ತಾರೆ. ಈ ಪೈಕಿ ನೀವು ಏನಾದ್ರೂ ನಿಮ್ಮ ಲವರ್‌ ಈ ಜಗತ್ತಿನ ಅತ್ಯಂತ ದುಬಾರಿ ಗುಲಾಬಿ ಹೂ ನೀಡಿದ್ರೆ.. ಎಂದಿಗೂ ಬ್ರೇಕಪ್‌ ಆಗಲ್ಲ..

ಗುಲಾಬಿಗಳು ತಮ್ಮ ಸೌಂದರ್ಯ ಮತ್ತು ಪರಿಮಳಕ್ಕೆ ಹೆಸರುವಾಸಿ. ಜೋಡಿಗಳು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಪರಸ್ಪರ ಗುಲಾಬಿಗಳನ್ನು ನೀಡುತ್ತಾರೆ. ಗುಲಾಬಿಗಳು ಮತ್ತು ಪ್ರೀತಿಯ ನಡುವೆ ಆಳವಾದ ಸಂಬಂಧವಿದೆ. ಆದರೂ, ಈ ಲೇಖನದಲ್ಲಿ ನಾವು ವಿಶ್ವದ ಅತ್ಯಂತ ದುಬಾರಿ ಗುಲಾಬಿ ಎಂದು ಪ್ರಸಿದ್ಧವಾಗಿರುವ ಜೂಲಿಯೆಟ್ ರೋಸ್ ಬಗ್ಗೆ ಹೇಳುತ್ತಿದ್ದೇವೆ..

ಇದನ್ನೂ ಓದಿ:ಗಂಡನಿಂದ ಜೀವನ ಹಾಳು, ವೇಶ್ಯಾವಾಟಿಕೆಗೆ ತಳ್ಳಿದ ಗೆಳೆಯ..! ಈ ಸ್ಟಾರ್‌ ನಟಿಯ ಜೀವನವೇ ಒಂದು ದುರಂತ ಕಥೆ..

ಜೂಲಿಯೆಟ್ ರೋಸ್ ವಿಶ್ವದ ಅತ್ಯಂತ ದುಬಾರಿ ಗುಲಾಬಿ. ಬಹಳ ಅಪರೂಪವೆಂದು ಪರಿಗಣಿಸಲಾದ ಈ ಹೂ ಬೆಳೆಯುವುದು ಬಹಳ ಕಷ್ಟ. ಪ್ರಸಿದ್ಧ ಗುಲಾಬಿ ತಳಿಗಾರ ಡೇವಿಡ್ ಆಸ್ಟಿನ್ ಹಲವಾರು ಗುಲಾಬಿಗಳನ್ನು ಒಟ್ಟುಗೂಡಿಸಿ ಜೂಲಿಯೆಟ್ ರೋಸ್ ಅನ್ನು ಸೃಷ್ಟಿಸಿದರು. ಪೋಲನ್ ನೇಷನ್ ವರದಿಯ ಪ್ರಕಾರ, ಏಪ್ರಿಕಾಟ್-ಹ್ಯೂಡ್ ಹೈಬ್ರಿಡ್ ಎಂದು ಕರೆಯಲ್ಪಡುವ ಈ ಅಪರೂಪದ ಪ್ರಭೇದವನ್ನು ಸೃಷ್ಟಿಸಲು 15 ವರ್ಷಗಳು ಬೇಕಾಯಿತಂತೆ.. ಆಗ ಈ ಹೂವು 10 ಮಿಲಿಯನ್ ಪೌಂಡ್‌ಗಳಿಗೆ ಅಂದ್ರೆ.. 90 ಕೋಟಿ ರೂ.ಗಳಿಗೆ ಮಾರಾಟವಾಗಿತ್ತು..

ಈಗ ಬೆಲೆ ಎಷ್ಟು? : ಈ ಗುಲಾಬಿ ತುಂಬಾ ದುಬಾರಿಯಾಗಿದ್ದು, ಶ್ರೀಮಂತರು ಸಹ ಇದನ್ನು ಖರೀದಿಸುವ ಮೊದಲು 20 ಬಾರಿ ಯೋಚಿಸುತ್ತಾರೆ.. ಪ್ರಸ್ತುತ, ಇದರ ಮೌಲ್ಯ 1.58 ಮಿಲಿಯನ್ ಯುಎಸ್ ಡಾಲರ್ ಆಗಿದೆ. ಇದು ಭಾರತೀಯ ಕರೆನ್ಸಿಯಲ್ಲಿ 1,38,33,68,063 ರೂ. ಈ ಹೂವಿನ ವಿಶೇಷವೆಂದರೆ ಇದು 3 ವರ್ಷಗಳ ಕಾಲ ಬಾಡುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News