Unknown Fact: ರಾಮಮಂದಿರ ಪ್ರಾಣ ಪ್ರತಿಷ್ಠಾ ವಾರ್ಷಿಕೋತ್ಸವ ಸಂದರ್ಭದಲ್ಲಿ ಯಾರೋ ಭಕ್ತರು ಭಕ್ತಿಯ ಪರಾಕಾಷ್ಠೆಯಲ್ಲಿ ಶ್ರೀರಾಮಚಂದ್ರ ಮತ್ತು ಆತನ ಸಹೋದರ ಲಕ್ಷಣ್ ಹೆಸರಿನಲ್ಲಿ ಚೆಕ್ ಬರೆದಿದ್ದಾರೆ. ಈ ಸುದ್ದಿ ಸೋಷಿಯಲ್ ಮೀಡಿಯಾ ಜಮಾನದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ ಎಂದುಕೊಳ್ಳಬೇಡಿ. ಈ ಚೆಕ್ ನಿಜಕ್ಕೂ ಶ್ರೀರಾಮಚಂದ್ರ ಲಕ್ಷ್ಮಣ್ ಬ್ಯಾಂಕ್ ಎನ್ನುವ ಹೆಸರಿನಲ್ಲೇ ಇದೆ. ರಾಮ-ಲಕ್ಷ್ಮಣರ ಭಾವಚಿತ್ರದೊಂದಿಗೆ ಇರುವ ಈ ಚೆಕ್ ಅಸಲಿ ಎನ್ನುವುದು ಕೂಡ ಸಾಬೀತಾಗಿದೆ.
ಹೇಗೆಂದರೆ… ನಮ್ಮ ದೇಶದಲ್ಲಿ ಬ್ಯಾಂಕುಗಳಿಗೆ ಬಹಳ ದೊಡ್ಡ ಇತಿಹಾಸ ಇದೆ. ರಾಜಮಹಾರಾಜರ ಕಾಲದಲ್ಲಿಯೇ ಬ್ಯಾಂಕುಗಳು ಹುಟ್ಟುಕೊಂಡಿದ್ದವು. ಅದೇ ರೀತಿ ರಾಜಾಸ್ಥಾನದ ಡುಂಗರಪುರದ ಮಹಾರಾಜರ ಕಾಲದಲ್ಲೂ ಬ್ಯಾಂಕುಗಳು ಇದ್ದವು. ಅಷ್ಟೇಯಲ್ಲ, ಶ್ರೀರಾಮಚಂದ್ರ ಲಕ್ಷ್ಮಣ್ ಬ್ಯಾಂಕ್ ಎಂಬ ಹೆಸರಿನ ಬ್ಯಾಂಕ್ ಕೂಡ ಇತ್ತು. ಆ ಬ್ಯಾಂಕ್ ಹೆಸರಿನಲ್ಲಿ ಕೊಟ್ಟಿದ್ದ ಅಸಲಿ ಚೆಕ್ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ಇದನ್ನೂ ಓದಿ- 2025ರ ಬಜೆಟ್ನಲ್ಲಿ ಹಳೆ ತೆರಿಗೆ ಪದ್ಧತಿ ಬದಲಿಸ್ತಾರಾ ನಿರ್ಮಲಾ ಸೀತಾರಾಮನ್? ತೆರಿಗೆದಾರರ ಮೇಲೆ ಏನು ಪರಿಣಾಮ..!
19ನೇ ಶತಮಾನದಲ್ಲಿ ಡುಂಗರಪುರ ಮಹಾರಾಜ ಮಹಾರಾವಲ್ ಲಕ್ಷ್ಮಣ್ ಸಿಂಗ್ ಶ್ರೀರಾಮಚಂದ್ರ ಲಕ್ಷ್ಮಣ್ ಬ್ಯಾಂಕ್ ಸ್ಥಾಪಿಸಿದ್ದ. ಬ್ಯಾಂಕ್ ಮತ್ತು ಚೆಕ್ ಎರಡೂ ಶ್ರೀರಾಮನ ಹೆಸರಿನಲ್ಲಿ ನಡೆಯುತ್ತಿತ್ತು. ಅದೇ ಚೆಕ್ ಈಗ ವೈರಲ್ ಆಗಿದೆ ಎಂದು ಕೆಲ ಇತಿಹಾಸ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹಲವು ದಶಕಗಳಿಂದ ಅಸ್ತಿತ್ವದಲ್ಲಿದ್ದ ಈ ಬ್ಯಾಂಕ್ ಅನ್ನು ಸ್ವಾತಂತ್ರ್ಯ ಬಂದ ನಂತರ ಇತರೆ ಬ್ಯಾಂಕ್ ಜೊತೆ ವಿಲೀನಗೊಳಿಸಲಾಯಿತು.
ಇದನ್ನೂ ಓದಿ- ತೆರಿಗೆ ಮಿತಿ ಹೆಚ್ಚಳ: ಆದಾಯ ತೆರಿಗೆ ಕಟ್ಟುವವರಿಗೆ ಗುಡ್ ನ್ಯೂಸ್, ಮಧ್ಯಮ ವರ್ಗದವರಿಗೆ ಜಾಕ್ ಪಾಟ್
ಡುಂಗರಪುರ ಮಹಾರಾಜರ ಕಾಲದ ಆಳ್ವಿಕೆಯ ಶ್ರೀರಾಮಚಂದ್ರ ಲಕ್ಷ್ಮಣ್ ಬ್ಯಾಂಕಿನ ಚೆಕ್ ಗಳು ಆಕರ್ಷಕ ವಿನ್ಯಾಸ ಹೊಂದಿದ್ದವು. ಚೆಕ್ ಮೇಲೆ ಸೀತಾರಾಮನ ಚಿತ್ರವಿತ್ತು. ಈ ಚೆಕ್ ಗಳನ್ನು ಲಕ್ನೋದ ಏನ್ ಕೆ ಪ್ರೆಸ್ ನಲ್ಲಿ ಮುದ್ರಿಸಲಾಗುತ್ತಿತ್ತು. ರಾಜರ ಕಾಲದ ಬ್ಯಾಂಕುಗಳಿಗೆ ಯಾವುದೇ ಲಿಖಿತ ಸಂವಿಧಾನ ಇರಲಿಲ್ಲ. ಅನೇಕ ರಾಜರುಗಳ ಜೊತೆ ಸಾರ್ವಜನಿಕರು ಕೂಡ ಬ್ಯಾಂಕುಗಳಲ್ಲಿ ಖಾತೆ ಹೊಂದಿದ್ದರು.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.