ದಿನಭವಿಷ್ಯ 23-01-2025: ಗುರುವಾರದಂದು ವಿಶಾಖ ನಕ್ಷತ್ರದಲ್ಲಿ ಗಂಡ ಯೋಗ, ಈ ರಾಶಿಯವರಿಗೆ ದಾಂಪತ್ಯದಲ್ಲಿ ಬಿರುಕು..!

Today Horoscope 23rd January 2025: ಈ ದಿನ ಗುರುವಾರ ವಿಶಾಖಾ ನಕ್ಷತ್ರ, ಗಂಡ ಯೋಗ, ವಣಿಜ ಕರಣ. ಇಂದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 

Written by - Yashaswini V | Last Updated : Jan 23, 2025, 08:19 AM IST
  • ಉತ್ತರಾಯಣ, ಸೌರ ಶಿಶಿರ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ, ನವಮಿ ತಿಥಿಯ ಈ ದಿನ ಗುರುವಾರ
  • ಇಂದು ವಿಶಾಖಾ ನಕ್ಷತ್ರ, ಗಂಡ ಯೋಗ, ವಣಿಜ ಕರಣ.
  • ಇಂದಿನ ಎಲ್ಲಾ 12 ರಾಶಿಯವರ ಭವಿಷ್ಯ ಹೇಗಿದೆ ತಿಳಿಯಿರಿ.
ದಿನಭವಿಷ್ಯ 23-01-2025:  ಗುರುವಾರದಂದು ವಿಶಾಖ ನಕ್ಷತ್ರದಲ್ಲಿ ಗಂಡ ಯೋಗ,  ಈ ರಾಶಿಯವರಿಗೆ ದಾಂಪತ್ಯದಲ್ಲಿ ಬಿರುಕು..!  title=

Guruvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ಸೌರ ಶಿಶಿರ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ, ನವಮಿ ತಿಥಿಯ ಈ ದಿನ ಗುರುವಾರ ವಿಶಾಖಾ ನಕ್ಷತ್ರ, ಗಂಡ ಯೋಗ, ವಣಿಜ ಕರಣ. ಇಂದಿನ ಎಲ್ಲಾ 12 ರಾಶಿಯವರ ಭವಿಷ್ಯ ಹೇಗಿದೆ ತಿಳಿಯಿರಿ. 

ಮೇಷ ರಾಶಿಯವರ ಭವಿಷ್ಯ (Aries Horoscope):  
ಯಾವುದೇ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲು ಯೋಚಿಸುತ್ತಿರುವವರಿಗೆ ಇಂದು ಅನುಕೂಲಕರವಾದ ದಿನ. ಸಾಮಾಜಿಕ ಜೀವನದತ್ತ ಗಮನಹರಿಸಿ. ಹಳೆಯ ಸ್ನೇಹಿತರ ಭೇಟಿನಿಂದ ಹೊಸ ಉತ್ಸಾಹವನ್ನು ಅನುಭವಿಸುವಿರಿ. ಆರೋಗ್ಯವೂ ಸುಧಾರಿಸಲಿದೆ. ಕೆಲಸದ ಸ್ಥಳದಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿ. 

ವೃಷಭ ರಾಶಿಯವರ ಭವಿಷ್ಯ (Taurus Horoscope):  
ನಿಮ್ಮ ಕಠಿಣ ಪರಿಶ್ರಮ ಮತ್ತು ನಿರ್ಣಯಗಳು ಇಂದು ನಿಮಗೆ ಗಮನಾರ್ಹವಾದ ಫಲಿತಾಂಶವನ್ನು ನೀಡಲಿದೆ. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳೊಂದಿಗೆ ನಿಮ್ಮ ಆಲೋಚನೆಗಳನ್ನು ಮುಕ್ತವಾಗಿ ವಿನಿಮಯ ಮಾಡಿಕೊಳ್ಳುವುದು ಪ್ರಯೋಜನಕಾರಿ ಆಗಿದೆ. 

ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಇಂದು ನಿಮ್ಮ ಸಿದ್ಧಾಂತದಲ್ಲಿ ತಾಜಾತನ ಮತ್ತು ಸ್ಪಷ್ಟತೆ ಇರುತ್ತದೆ. ಸಾಮಾಜಿಕ ಜೀವನದಲ್ಲಿ ನಿಮ್ಮ ಚಟುವಟಿಕೆಗಳು ಹೆಚ್ಚಾಗಬಹುದು. ದೀರ್ಘ ಸಮಯದಿಂದ ನಿಮ್ಮನ್ನು ಕಾಡುತ್ತಿರುವ ಸಮಸ್ಯೆಯಿಂದ ಪರಿಹಾರವನ್ನು ಕಂಡು ಕೊಳ್ಳುವಿರಿ. ಕೌಟುಂಬಿಕ ವಿಚಾರಗಳಲ್ಲಿ ಸ್ವಲ್ಪ ತಾಳ್ಮೆಯಿಂದ ಮಾತನಾಡಿ. 

ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಈ ರಾಶಿಯವರಿಗೆ ಇಂದು ವಿಶೇಷ ದಿನ. ಭಾವನಾತ್ಮಕವಾಗಿ ಧನಾತ್ಮಕತೆಯನ್ನು ಅನುಭವಿಸುವಿರಿ. ಮನೆಯಲ್ಲಿ ಶಾಂತಿಯ ವಾತಾವರಣ ಇರುತ್ತದೆ. ಯಾವುದಾದರೂ ಹೊಸ ಕೆಲಸಗಳಿಗೆ ಕೈ ಹಾಕಲು ಇಂದಿನ ದಿನವು ತುಂಬಾ ಚೆನ್ನಾಗಿದೆ. ಅದೃಷ್ಟದ ಸಂಪೂರ್ಣ ಬೆಂಬಲ ನಿಮ್ಮೊಂದಿಗಿದೆ. 

ಇದನ್ನೂ ಓದಿ- ಶೀಘ್ರದಲ್ಲೇ ಶುಕ್ರ ಸಂಚಾರದಲ್ಲಿ ಬದಲಾವಣೆ: ಈ ರಾಶಿಯವರಿಗೆ ಸಂಕಷ್ಟ, ಹೆಚ್ಚಾಗಲಿದೆ ಸಾಲಭಾದೆ

ಸಿಂಹ ರಾಶಿಯವರ ಭವಿಷ್ಯ (Leo Horoscope):  
ವೃತ್ತಿಪರ ಬದುಕಿನಲ್ಲಿ ಹೊಸ ಹೊಸ ಅವಕಾಶಗಳು ನಿಮ್ಮ ಹಾದಿಯಲ್ಲಿ ಬರಬಹುದು. ವೈಯಕ್ತಿಕ ಜೀವನದಲ್ಲಿ ಬಿರುಕು ಮೂಡಿದ್ದ ಸಂಬಂಧಗಳನ್ನು ಸರಿಪಡಿಸುವ ಅವಕಾಶಗಳು ಸಿಗಳಿವೆ. ಹಣಕಾಸಿನ ವಿಚಾರದಲ್ಲಿ ಇಂದು ಯಾವುದೇ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವುದನ್ನು ತಪ್ಪಿಸಿ. 

ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಇಂದು ನಿಮಗೆ ವಿಶೇಷವಾಗಿ ಧನಾತ್ಮಕವಾದ ದಿನ. ನಿಮ್ಮ ಪ್ರಮುಖ ಯೋಜನೆಗಳ ಮೇಲೆ ಗಮನ ಕೇಂದ್ರೀಕರಿಸಿ. ನಿಮ್ಮ ವಿಶ್ಲೇಷನಾತ್ಮಕ ಸಾಮರ್ಥ್ಯವು ಕಠಿಣ ಸಂದರ್ಭಗಳಲ್ಲಿ ನಿಮಗೆ ಸಹಾಯಕವಾಗಲಿದೆ. ಹಣಕಾಸಿನ ವಿಚಾರದಲ್ಲಿ ಜಾಗರೂಕರಾಗಿರಿ. ದಾಂಪತ್ಯದಲ್ಲಿ ಕಲಹ ಸಾಧ್ಯತೆ. 

ತುಲಾ ರಾಶಿಯವರ ಭವಿಷ್ಯ (Libra Horoscope): 
ಸಾಮರಸ್ಯ ಮತ್ತು ಸಮತೋಲನದ ಹುಡುಕಾಟದಲ್ಲಿ ಇಂದು ನಿಮಗೆ ಪ್ರಮುಖ ದಿನವಾಗಿರುತ್ತದೆ. ನಿಮ್ಮಾ ಭಾವನೆಗಳು, ಆಲೋಚನೆಗಳನ್ನು ನಿಮ್ಮವರೊಂದಿಗೆ ಸ್ಪಷ್ಟವಾಗಿ ವ್ಯಕ್ತಪಡಿಸಲು ಹಿಂಜರಿಯಬೇಡಿ. ಬಹಳ ದಿನಗಳ ಬಳಿಕ ನಿಮ್ಮ ಪ್ರಾಣ ಸ್ನೇಹಿತರನ್ನು ಭೇಟಿಯಾಗುವ ಅವಕಾಶ ದೊರೆಯಬಹುದು. 

ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಇಂದು ನಿಮ್ಮ ಶನಿ, ಆತ್ಮವಿಶ್ವಾಸವು ಹೊಸ ಸವಾಲುಗಳನ್ನು ಎದುರಿಸಲು ನಿಮ್ಮನ್ನು ಪ್ರೇರೇಪಿಸುತ್ತದೆ. ವೃತ್ತಿ ಸಂಬಂಧಿತ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲು ಬಹಳ ಮುಖ್ಯವಾದ ದಿನ. ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ. ಹೂಡಿಕೆಯಿಂದ ಭಾರೀ ಲಾಭವನ್ನು ಗಳಿಸುವಿರಿ.

ಇದನ್ನೂ ಓದಿ- 2025 ರಲ್ಲಿ ಆಗಲಿದೆ ಜಗತ್ತಿನ ವಿನಾಶ.. ಎದೆ ನಡುಗಿಸುತ್ತೆ ಫ್ರೆಂಚ್‌ನ ಜನಪ್ರಿಯ ಕಾಲಜ್ಞಾನಿ ನಾಸ್ಟ್ರಾಡಾಮಸ್ ಭವಿಷ್ಯ!   

ಧನು ರಾಶಿಯವರ ಭವಿಷ್ಯ (Sagittarius Horoscope):  
ಈ ರಾಶಿಯವರಿಗೆ ಇಂದು ವಿಶೇಷವಾದ ದಿನ. ನಿಮ್ಮ ಕುಟುಂಬ ಮತ್ತೌ ಸ್ನೇಹಿತರೊಂದಿಗೆ ಉತ್ತಮ ಸಮಯವನ್ನು ಆನಂದಿಸುವಿರಿ. ಆರೋಗ್ಯದ ದೃಷ್ಟಿಯಿಂದ ಹೊರಗಿನ ಆಹಾರ ಸೇವನೆಯನ್ನು ತಪ್ಪಿಸಿ. ಸಂಗಾತಿಯೊಂದಿಗೆ ಮಾತನಾಡುವಾಗ ತಾಳ್ಮೆಯನ್ನು ಕಾಯ್ದುಕೊಳ್ಳಿ, ಇಲ್ಲವೇ ದಾಂಪತ್ಯದಲ್ಲಿ ಬಿರುಕು ಮೂಡಬಹುದು. 

ಮಕರ ರಾಶಿಯವರ ಭವಿಷ್ಯ (Capricorn Horoscope):  
ಉದ್ಯೋಗದಲ್ಲಿ ಇಂದು ಪ್ರಮುಖ ಅವಕಾಶಗಳನ್ನು ಪಡೆಯಬಹುದು. ನಿಮ್ಮ ಗುರಿಗಳ ಕಡೆಗೆ ಗಮನಹರಿಸಿ ಸರಿಯಾದ ದಿಕ್ಕಿನಲ್ಲಿ ಚಲಿಸುವುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ಶ್ರಮಕ್ಕೆ ತಕ್ಕ ಫಲ ಪಡೆಯುವಿರಿ. ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದು ನಿಮಗೆ ಅಪಾರ ಸಂತೋಷವನ್ನು ತರಲಿದೆ.

ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಇಂದು ನಿಮ್ಮೊಳಗೆ ಆಳವಾದ ಚಿಂತನೆ, ಆತ್ಮಾವಲೋಕನವನ್ನು ಅನುಭವಿಸುವಿರಿ. ನಿಮ್ಮ ಅಭ್ಯಾಸಗಳು ಮತ್ತು ಆದ್ಯತೆಗಳನ್ನು ಮರುಪರಿಶೀಲಿಸಬೇಕಾದ ಸಮಯ ಇದಾಗಿದೆ. ಕೆಲಸದಲ್ಲಿ ಶಾಂತಿ-ಸಂಯಮದಿಂದ ವರ್ತಿಸುವುದು ಹೆಚ್ಚು ಪ್ರಯೋಜನಕಾರಿ ಆಗಿದೆ. ಹಣಕಾಸಿನ ವಿಷಯದಲ್ಲಿ ಯಾರನ್ನೂ ನಂಬಬೇಡಿ. 

ಮೀನ ರಾಶಿಯವರ ಭವಿಷ್ಯ (Pisces Horoscope): 
ಪ್ರೀತಿಪಾತ್ರರೊಂದಿಗೆ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಇಂದು ಸೂಕ್ತವಾದ ದಿನ. ಸಮಾಜದಲ್ಲಿ ನಿಮ್ಮದೇ ಆದ ಛಾಪು ಮೂಡಿಸುವ ಸುವರ್ಣ ಅವಕಾಶಗಳನ್ನು ಪಡೆಯಬಹುದು. ಸಹೋದ್ಯೋಗಿಗಳೊಂದಿಗೆ ಒಂದು ಉತ್ತಮ ಸಂಭಾಷಣೆಯು ಪರಿಸ್ಥಿತಿಯನ್ನು ಇನ್ನಷ್ಟು ಉತ್ತಮಗೊಳಿಸುವಲ್ಲಿ ಸಹಕಾರಿ ಆಗಲಿದೆ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News