ಶವ ಸಂಸ್ಕಾರದ ರಹಸ್ಯ: ಅಗ್ನಿಯಲ್ಲಿ ಇಡೀ ದೇಹ ಸುಟ್ಟು ಕರಕಲಾದರೂ ಇದೊಂದು ಭಾಗ ಮಾತ್ರ ಸುಡುವುದಿಲ್ಲ!ಇದು ಅಕ್ಷರಷಃ ಸತ್ಯ

ಅಂತ್ಯ ಕ್ರಿಯೆ ನಡೆಸಿದ ಸ್ವಲ್ಪ ಸಮಯದ ನಂತರ ಇಡೀ ದೇಹ  ಸುಟ್ಟು ಬೂದಿಯಾಗುತ್ತದೆ. ಆದರೆ ಶವಸಂಸ್ಕಾರ ಮಾಡಿದ ನಂತರವೂ ಸುಡದ ದೇಹದ ಒಂದು ಭಾಗವಿದೆ.  

Written by - Ranjitha R K | Last Updated : Jan 23, 2025, 03:05 PM IST
  • ಶವಸಂಸ್ಕಾರದಲ್ಲಿ ದೇಹದ ಯಾವ ಭಾಗ ಸುಡುವುದಿಲ್ಲ?
  • ಶವಸಂಸ್ಕಾರ ಮಾಡಿದ ನಂತರವೂ ಸುಡದ ದೇಹದ ಒಂದು ಭಾಗವಿದೆ.
  • ಈ ಸಮಯದಲ್ಲಿ ಒಂದು ಭಾಗವು ಸುಡದೆ ಹಾಗೆಯೇ ಉಳಿಯುತ್ತದೆ.
ಶವ ಸಂಸ್ಕಾರದ ರಹಸ್ಯ: ಅಗ್ನಿಯಲ್ಲಿ ಇಡೀ ದೇಹ ಸುಟ್ಟು ಕರಕಲಾದರೂ ಇದೊಂದು ಭಾಗ ಮಾತ್ರ ಸುಡುವುದಿಲ್ಲ!ಇದು ಅಕ್ಷರಷಃ ಸತ್ಯ title=

Which part of the body does not burn during cremation: ಹುಟ್ಟಿದ ಮೇಲೆ ಸಾವು ಬರಲೇ ಬೇಕು ಇದು ಜೀವನದ ಕಠೋರ ಸತ್ಯ. ಸಾವು ಎನ್ನುವುದು ಪ್ರತಿಯೊಬ್ಬನ ಜೀವನದ ಬದಲಾಯಿಸಲಾಗದ ಸತ್ಯ. ಶ್ರೀಮದ್ ಭಗವತ್ ಗೀತೆಯ ಪ್ರಕಾರ ಈ ಜಗತ್ತಿನಲ್ಲಿ ಹುಟ್ಟಿದವನು ಮುಂದೊಂದು ದಿನ ಸಾಯುವುದು ನಿಶ್ಚಿತ. ಸನಾತನ ಧರ್ಮದಲ್ಲಿ, ಮರಣದ ನಂತರ, ಮೃತ ದೇಹವನ್ನು ವಿಧಿವಿಧಾನಗಳೊಂದಿಗೆ ಬೆಂಕಿಯಲ್ಲಿ ಸುಡಲಾಗುತ್ತದೆ.ಹೀಗೆ ಅಂತ್ಯ ಕ್ರಿಯೆ ನಡೆಸಿದ ಸ್ವಲ್ಪ ಸಮಯದ ನಂತರ ಇಡೀ ದೇಹ  ಸುಟ್ಟು ಬೂದಿಯಾಗುತ್ತದೆ. ಆದರೆ ಶವಸಂಸ್ಕಾರ ಮಾಡಿದ ನಂತರವೂ ಸುಡದ ದೇಹದ ಒಂದು ಭಾಗವಿದೆ.   

ಶವಸಂಸ್ಕಾರದಲ್ಲಿ ದೇಹದ ಯಾವ ಭಾಗ ಸುಡುವುದಿಲ್ಲ? :
ಧಾರ್ಮಿಕ ವಿದ್ವಾಂಸರ ಪ್ರಕಾರ, ಮೃತದೇಹವನ್ನು ಚಿತಾಗಾರದಲ್ಲಿ ಇರಿಸಿದಾಗ, ಮೂಳೆಗಳು ಸೇರಿದಂತೆ ದೇಹದ ಸಂಪೂರ್ಣ ಭಾಗವು ಕೆಲವೇ ಗಂಟೆಗಳಲ್ಲಿ ಸುಟ್ಟುಹೋಗುತ್ತದೆ.ಆದರೆ ಈ ಸಮಯದಲ್ಲಿ ಒಂದು ಭಾಗವು ಸುಡದೆ ಹಾಗೆಯೇ ಉಳಿಯುತ್ತದೆ. ಅದುವೇ ಮಾನವ ಹಲ್ಲುಗಳು. ವಾಸ್ತವವಾಗಿ ಹಲ್ಲುಗಳು ಕ್ಯಾಲ್ಸಿಯಂ ಫಾಸ್ಫೇಟ್ ನಿಂದ ಮಾಡಲ್ಪಟ್ಟಿದೆ.ಹಾಗಾಗಿ ಬೆಂಕಿ ಕೂಡಾ ಅದನ್ನು ಸುಡುವುದು ಸಾಧ್ಯವಾಗುವುದಿಲ್ಲ. ಅಂತ್ಯ ಸಂಸ್ಕಾರದ ವೇಳೆ ಇಡೀ ದೇಹವೇ ಸುಟ್ಟು ಕರಕಲಾದರೂ ಹಲ್ಲುಗಳು ಮಾತ್ರ ಹಾಗೆಯೇ ಉಳಿದುಕೊಳ್ಳುತ್ತವೆ. 

ಇದನ್ನೂ ಓದಿ :  ಒಂದು ದೀಪದಿಂದ ಮತ್ತೊಂದು ದೀಪವನ್ನು ಏಕೆ ಹಚ್ಚಬಾರದು, ಜ್ಯೋತಿಷ್ಯ ಏನು ಹೇಳುತ್ತೇ?

ಹಲ್ಲಿನ ಈ ಭಾಗವು ತುಂಬಾ ಗಟ್ಟಿಯಾಗಿದೆ :
ವಿಜ್ಞಾನಿಗಳ ಪ್ರಕಾರ, ಶವಸಂಸ್ಕಾರದ ಸಮಯದಲ್ಲಿ ಅತಿ ಹೆಚ್ಚು ಶಾಖವು (ಸುಮಾರು 1292 ಡಿಗ್ರಿ ಫ್ಯಾರನ್‌ಹೀಟ್) ಬಿಡುಗಡೆಯಾಗುತ್ತದೆ. ಇದರಿಂದ ಚರ್ಮ, ನರಗಳು ಮತ್ತು ಮೂಳೆಗಳು ಸುಟ್ಟು ಹೋಗುತ್ತವೆ. ಈ ಭೀಕರ ಬೆಂಕಿಯಲ್ಲಿ ಹಲ್ಲಿನ ಮೃದುವಾದ ಭಾಗವೂ ಸುಟ್ಟುಹೋಗುತ್ತದೆ. ಆದರೆ ದಂತಕವಚ ಎಂಬ ಅದರ ಗಟ್ಟಿಯಾದ ಭಾಗವು ಹಾಗೆಯೇ ಉಳಿಯುತ್ತದೆ.  ಈ ಭಾಗವು ಕ್ಯಾಲ್ಸಿಯಂ ಫಾಸ್ಫೇಟ್ ನಿಂದ ಮಾಡಲ್ಪಟ್ಟಿದೆ. ಬೆಂಕಿ ಕೂಡಾ ಈ ವಸ್ತುವನ್ನು ಸುಡುವುದು ಸಾಧ್ಯವಿಲ್ಲ.

ಶವಸಂಸ್ಕಾರದ ಸಮಯದಲ್ಲಿ ಉಳಿದ ಹಲ್ಲುಗಳಿಗೆ ಏನಾಗುತ್ತದೆ? :
ಶವಸಂಸ್ಕಾರದ ಎರಡು ದಿನಗಳ ನಂತರ ಚಿತಾಭಸ್ಮವನ್ನು ಸ್ಮಶಾನದಿಂದ ಸಂಗ್ರಹಿಸಲಾಗುತ್ತದೆ. ಈ ಸಮಯದಲ್ಲಿ, ಮೂಳೆಗಳ ಜೊತೆಗೆ, ಕೆಲವು ಸುಡದ ಮೂಳೆ ತುಣುಕುಗಳು ಮತ್ತು ಹಲ್ಲುಗಳ ಭಾಗಗಳನ್ನು ಸಂಗ್ರಹಿಸಿ ಚೀಲದಲ್ಲಿ ತುಂಬಿಸಲಾಗುತ್ತದೆ.ಇದರ ನಂತರ,ಅವುಗಳನ್ನು ಪವಿತ್ರ ನದಿಯಲಿ ಹರಿಯ ಬಿಡಲಾಗುತ್ತದೆ. 

ಇದನ್ನೂ ಓದಿ : ಜನವರಿ 28 ರಂದು ಮಾಲವ್ಯ ರಾಜಯೋಗದೊಂದಿಗೆ ʻಈʼ ರಾಶಿಯವರಿಗೆ ಕೂಡಿ ಬರಲಿದೆ ಮಹಾರಾಜಯೋಗ..! ಇನ್ನು ಮುಂದೆ ಇವರು ಮುಟ್ಟಿದ್ದೆಲ್ಲಾ ಚಿನ್ನ

 (ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News