Kumbhamela Monalsa look : ಈ ಬಾರಿ ಕುಂಭ ಮೇಳದಲ್ಲಿ ಮೊನಾಲಿಸಾ ಎನ್ನುವ ಹೆಣ್ಣು ಮಗಳು ಭಾರೀ ಸದ್ದು ಮಾಡಿದ್ದಳು. ಎಲ್ಲಿ ನೋಡಿದರೂ ಈಕೆಯದ್ದೇ ಫೋಟೋ, ವಿಡಿಯೋ. ರುದ್ರಾಕ್ಷಿ ಮಾರುತ್ತಿದ್ದ ಈ ಹುಡುಗಿ ರಾತೋರಾತ್ರಿ ನ್ಯಾಷನಲ್ ಕ್ರುಶ್ ಆಗಿ ಬಿಡುತ್ತಾಳೆ. ಇದಕ್ಕೆ ಕಾರಣ ಅವಳ ಅಂದ. ಇವಳ ಅಂದಕ್ಕೆ ಹುಡುಗರು ಮಾತ್ರ ಅಲ್ಲ,ಹುಡುಗಿಯರೂ ಮರುಳಾಗಿದ್ದಾರೆ. ಈ ಹುಡುಗಿ ಅಷ್ಟು ಸದ್ದು ಮಾಡಿದ್ದು ನೈಜ ಸುಂದರಿ ಎನ್ನುವ ಕಾರಣಕ್ಕೆ.
ಇವಳನ್ನು ಚಿತ್ರದಲ್ಲಿ ಸೇರಿಸಿಕೊಳ್ಳುವುದಾಗಿಯೂ ಘೋಷಣೆ ಮಾಡಿಯಾಗಿದೆ. ಇನ್ನು ಈಕೆ ಹೋದಲ್ಲಿ ಬಂದಲ್ಲಿ ಸೆಲ್ಫಿಗಾಗಿ ಮುಗಿ ಬೀಳುವವರೇ ಹೆಚ್ಚಾಗಿದ್ದಾರೆ. ಈ ಸೆಲ್ಫಿ ಕಾಟದಿಂದ ರುದ್ರಾಕ್ಷಿಯೂ ಮಾರಾಟವಾಗದೇ ಮನೆಮಂದಿ ಕಣ್ಣೀರು ಹಾಕಿದ್ದೂ ಆಗಿದೆ.
ಇದೆಲ್ಲದರ ನಡುವೆ ಇದೀಗ ಈ ಸುಂದರಿಯ ಮೇಕಪ್ ರಹಿತ ಫೋಟೋ ಹೊರ ಬಂದಿದೆ. ಇಲ್ಲಿ ಆಕೆಯ ನಿಜವಾದ ರೂಪವನ್ನು ಕಾಣಬಹುದು. ಇಲ್ಲಿ ಈಕೆಯ ನಿಜ ರೂಪ ಕಂಡವರು ಈಗ ನೀಡುತ್ತಿರುವ ಪ್ರತಿಕ್ರಿಯೆಯೇ ಬೇರೆ. ಈಕೆಯನ್ನು ಭೂಲೋಕದ ಅಪ್ಸರೆ, ವಿಶ್ವ ಸುಂದರಿ ಎಂದೆಲ್ಲಾ ಹಾದಿ ಹೊಗಳಿದವರು ಈಕೆಯದ್ದೂ ಮೇಕಪ್ ಸೌಂದರ್ಯವೇ ಎಂದು ಗೋಳಾಡುತ್ತಿದ್ದಾರೆ.
ಇದನ್ನೂ ಓದಿ : Jalgaon Train Accident: ಕರ್ನಾಟಕ ಎಕ್ಸ್‌ಪ್ರೆಸ್ ದುರಂತ.. ಪ್ರಯಾಣಿಕರ ಮೇಲೆ ಹರಿದ ರೈಲು! 7 ಕ್ಕೂ ಹೆಚ್ಚು ಜನ ಮೃತ
ಇದೀಗ ಮೊನಾಲಿಸಾಳ ಮೇಕಪ್ ರಹಿತ ವಿಡಿಯೋ ಒಂದು ವೈರಲ್ ಆಗಿದೆ. ಈಕೆಯದ್ದೇ ಒಂದು ಇನ್‌ಸ್ಟಾಗ್ರಾಮ್ ಖಾತೆ ಇದೆ. ಅದರಲ್ಲಿ ಕೂಡಾ ಇವಳು ಸಾಕಷ್ಟು ಮೇಕಪ್ ಮಾಡಿಕೊಂಡು ರೀಲ್ಸ್ ಮಾಡುವುದನ್ನು ಗಮನಿಸಬಹುದು. ಈಕೆಯ ಕಣ್ಣು ದೈವದತ್ತವಾಗಿಯೇ ಸುಂದರವಾಗಿರುವುದು ಸುಳ್ಳಲ್ಲ. ಆದರೆ ಉಳಿದಂತೆ ಮೇಕಪ್ ಮಾಡಿಕೊಂಡೇ ಆಕರ್ಷಕವಾಗಿ ಕಾಣುತ್ತಿರುವುದು ಕೂಡಾ ಸತ್ಯ. ಈ ವಿಡಿಯೋ ಅನ್ನು ನ್ಯೂಸ್ರೌಂಡ್ ಎನ್ನುವ ಇನ್‌ಸ್ಟಾಗ್ರಾಮ್ ಶೇರ್ ಮಾಡಿಕೊಂಡಿದೆ.
ಈ ವಿಡಿಯೋ ನೋಡಿದ ಮೇಲೆ ಈಕೆಯ ಅಂದ ಕಂಡು ಹಾಡು ಬರೆದವರು, ಹಾಡು ಹಾಡಿದವರು, ಸುಖಾ ಸುಮ್ಮನೆ ಕವನ ಬರೆದು ಕವಿಯಾದವರು ಏನು ಹೇಳುತ್ತಾರೋ ?
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.