ಅಚ್ಚ ಕನ್ನಡದಲ್ಲಿ ಸ್ವಚ್ಛವಾಗಿ ಮಾತನಾಡಿದ ರಜನಿಕಾಂತ್‌.. ಬೆಂಗಳೂರಿನ ಬಾಲ್ಯದ ಮೆಲುಕು! ತಲೈವಾ ಬಾಯಲ್ಲಿ ನಲಿದಾಡಿದ ಕನ್ನಡಾಂಬೆ!

ರಜನಿಕಾಂತ್ ತಮಿಳಿನಲ್ಲಿ ಸ್ಟಾರ್‌ ನಟನಾದರೂ ಕನ್ನಡವನ್ನು ಮರೆತಿಲ್ಲ. ರಜನಿಕಾಂತ್ ಬೆಂಗಳೂರಿನವರು ಎಂಬುದೇ ಹೆಮ್ಮೆ. 

Written by - Chetana Devarmani | Last Updated : Jan 18, 2025, 02:04 PM IST
    • ಅಚ್ಚ ಕನ್ನಡದಲ್ಲಿ ಮಾತನಾಡಿದ ರಜನಿಕಾಂತ್‌
    • ಬೆಂಗಳೂರಿನ ಬಾಲ್ಯದ ಮೆಲುಕು!
    • ತಲೈವಾ ಬಾಯಲ್ಲಿ ನಲಿದಾಡಿದ ಕನ್ನಡಾಂಬೆ!
ಅಚ್ಚ ಕನ್ನಡದಲ್ಲಿ ಸ್ವಚ್ಛವಾಗಿ ಮಾತನಾಡಿದ ರಜನಿಕಾಂತ್‌.. ಬೆಂಗಳೂರಿನ ಬಾಲ್ಯದ ಮೆಲುಕು! ತಲೈವಾ ಬಾಯಲ್ಲಿ ನಲಿದಾಡಿದ ಕನ್ನಡಾಂಬೆ! title=
ರಜನಿಕಾಂತ್‌

ರಜನಿಕಾಂತ್ ತಮಿಳಿನಲ್ಲಿ ಸ್ಟಾರ್‌ ನಟನಾದರೂ ಕನ್ನಡವನ್ನು ಮರೆತಿಲ್ಲ. ರಜನಿಕಾಂತ್ ಬೆಂಗಳೂರಿನವರು ಎಂಬುದೇ ಹೆಮ್ಮೆ. ಇದೀಗ ಕನ್ನಡದಲ್ಲಿ ಮಾತನಾಡಿರುವ ರಜನಿಕಾಂತ್‌ ತಮ್ಮ ಸ್ಕೂಲ್ ಡೇಸ್ ಬಗ್ಗೆ ಮಾತನಾಡಿದ್ದಾರೆ. ರಜನಿಕಾಂತ್ ಬಾಯಲ್ಲಿ ಕನ್ನಡ ನಲಿದಾಡುವುದನ್ನು ಕಂಡು ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ಕನ್ನಡದಲ್ಲಿ ನಿರರ್ಗಳವಾಗಿ ರಜನಿಕಾಂತ್‌ ಮಾತನಾಡಿದ್ದಾರೆ.

ಬೆಂಗಳೂರಿನಲ್ಲಿ ಎಪಿಎಸ್ ಸ್ಕೂಲ್ ಕಾಲೇಜಿನಲ್ಲಿ ಓದಿದ್ದೇನೆ. ಇದಕ್ಕಾಗಿ ನನಗೆ ಹೆಮ್ಮೆ ಇದೆ. ಮೊದಲು ನಾನು ಗವಿಪುರದಲ್ಲಿರುವ ಗಂಗಧಾರೇಶ್ವರ ದೇವಾಲಯದ ಬಳಿ ಇರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದೆ. ನಾನು ಕ್ಲಾಸ್‌ಗೆ ಫಸ್ಟ್ ಮತ್ತು ಬೆಸ್ಟ್ ಸ್ಟುಡೆಂಟ್ ಆಗಿದ್ದೆ. ಕ್ಲಾಸ್‌ ಮಾನಿಟರ್ ಆಗಿದ್ದೆ. ಮಿಡಲ್​ ಸ್ಕೂಲ್‌ನಲ್ಲಿ 98 ಪರ್ಸೆಂಟ್‌ ಸ್ಕೋರ್ ಮಾಡಿದ್ದೆ. ತುಂಬಾ ಒಳ್ಳೆಯ ಮಾರ್ಕ್ಸ್​​ ತೆಗೆದುಕೊಳ್ಳುತ್ತಿದ್ದೆ. ಅದರಿಂದ ನಮ್ಮ ಅಣ್ಣ ನನ್ನನ್ನು ಎಪಿಎಸ್ ಹೈಸ್ಕೂಲ್‌ ಇಂಗ್ಲಿಷ್ ಮೀಡಿಯಂಗೆ ಸೇರಿಸಿಬಿಟ್ಟರು. ಇದರಿಂದ ನಾನು ಫಂಕ್ ಆಗಿ ಹೋಗಿಬಿಟ್ಟೆ ಎಂದಿದ್ದಾರೆ.

ಮೊದಲ ಬೆಂಚ್‌ನಲ್ಲಿದ್ದ ವಿದ್ಯಾರ್ಥಿ ಕೊನೆ ಬೆಂಚ್‌ಗೆ ಬಂದೆ. ಆಗ ಡಿಪ್ರೆಶನ್‌ಗೆ ಹೋದೆ. ಆದರೆ ಎಪಿಎಸ್ ಸ್ಕೂಲ್ ಕಾಲೇಜಿನಲ್ಲಿ ಶಿಕ್ಷಕರು ನನ್ನ ಮೇಲೆ ಸಾಕಷ್ಟು ಪ್ರೀತಿ ತೋರಿಸಿದರು. ಪಾಠ ಹೇಳಿ ಕೊಟ್ಟರು. ನಾನು 8, 9ನೇ ತರಗತಿಯನ್ನು ಪಾಸ್ ಮಾಡಲು ಸಾಧ್ಯವಾಯಿತು. ಆದರೆ 10ನೇ ತರಗತಿ ಪಬ್ಲಿಕ್ ಎಕ್ಸಾಂ ನಲ್ಲಿ ಪಿಸಿಎಂ ವಿಷಯ ತೆಗೆದುಕೊಂಡಿದ್ದೆ. ಓದುವುದರಲ್ಲಿ ಬಹಳ ವೀಕ್ ಆಗಿದ್ದೆ. ಇದರಿಂದ ಈ ವಿಷಯಗಳಲ್ಲಿ ಫೇಲ್ ಕೂಡ ಆದೆ ಎಂದಿದ್ದಾರೆ.

ಇದನ್ನೂ ಓದಿ: 7 ಕೆಜಿ ಚಿನ್ನ, 60 ಕೆಜಿ ಬೆಳ್ಳಿ, 50 ಎಲ್‌ಐಸಿ ಪಾಲಿಸಿಗಳು.. ನಟಿ ಕಂಗನಾ ರಣಾವತ್‌ ಆಸ್ತಿ ಎಷ್ಟು ಕೋಟಿ ಗೊತ್ತೇ !

ನಮ್ಮ ಕೆಮಿಸ್ಟ್ರಿ ಟೀಚರ್ ಮನಗೆ ಬಂದು 6 ಗಂಟೆಗೆ ಕ್ಲಾಸ್ ತೆಗೆದುಕೊಳ್ಳುತ್ತಿದ್ದರು. ಸ್ಪೆಷಲ್ ಇಂಟ್ರೆಸ್ಟ್​ ತೆಗೆದುಕೊಂಡು ಫ್ರೀ ಆಗಿ ಕ್ಲಾಸ್ ಹೇಳುತ್ತಿದ್ದರು. ಹೀಗಾಗಿ 10ನೇ ಕ್ಲಾಸ್ ಪಾಸ್ ಆದೆ. ಬಳಿಕ ಎಪಿಎಸ್ ಕಾಲೇಜಿಗೆ ಸೇರಿದೆ. ಆಮೇಲೆ ಕೆಲ ಕಾಲೇಜು ಕಂಟಿನ್ಯೂ ಮಾಡಲಾಗಲಿಲ್ಲ. ಎಪಿಎಸ್ ಸ್ಕೂಲ್‌ನಲ್ಲಿ ಓದುವಾಗ ಪ್ರತಿ ವರ್ಷದಂತೆ ಇಂಟರ್ ಹೈಸ್ಕೂಲ್ ಡ್ರಾಮಾದಲ್ಲಿ 10, 15 ಶಾಲೆಗಳು ಭಾಗಿಯಾಗುತ್ತಿದ್ದವು. ಇಂಟರ್ ಹೈಸ್ಕೂಲ್ ಡ್ರಾಮಾ ಕಾರ್ಯಕ್ರದಮಲ್ಲಿ ನೀನು ಡ್ರಾಮಾ ಮಾಡಬೇಕು ಎಂದು ಟೀಚರ್‌ ಹೇಳಿದ್ದರು. ನಟನೆಯ ಮೊದಲ ಎಳೆ ಅಲ್ಲಿಂದ ಶುರುವಾಯಿತು ಅಂತ ರಜನಿಕಾಂತ್‌ ಹೇಳಿದರು.

ಆ ದಿನಗಳಲ್ಲಿ ನಾವು ಆದಿ ಶಂಕರಚಾರ್ಯರು ಚಂಡಾಲನನ್ನು ಭೇಟಿ ಆಗುವ ನಾಟಕ ಮಾಡಿದ್ದೆವು. ಇದರಲ್ಲಿ ನಾನು ಚಂಡಾಲನ ಆಗಿದ್ದೆ. ನಮ್ಮ ಡ್ರಾಮಾಕ್ಕೆ ಪ್ರಶಸ್ತಿ ಬಂತು. ನನಗೆ ಬೆಸ್ಟ್ ಆ್ಯಕ್ಟರ್ ಪ್ರಶಸ್ತಿ ಕೊಟ್ಟರು. ಆವಾಗ ಅಲ್ಲಿ ಆಡಿದ ಕ್ರಿಕೆಟ್, ಪುಟ್ಬಾಲ್, ಖೋಖೋ, ಕಬ್ಬಡ್ಡಿ ಎಲ್ಲ ಮರೆಯೋಕೆ ಸಾಧ್ಯವಿಲ್ಲ. ಮನೆಯಿಂದ ಶಾಲೆಗೆ ಹೋಗಬೇಕಾದರೆ ದೊಡ್ಡಗಣೇಶ, ಬಸವನಗುಡಿ ಅಲ್ಲಿ ಓಡಾಡಿದ್ದೇವೆ. ಈಗಲೂ ನನ್ನ ಮನಸಿಲ್ಲಿ ಹಚ್ಚ ಹಸಿರಾಗಿದೆ. ಶೂಟಿಂಗ್‌ಗಾಗಿ ಬ್ಯಾಂಕಾಕ್‌ನಲ್ಲಿದ್ದೇನೆ. ಎಪಿಎಸ್ ಹೈಸ್ಕೂಲ್​- ಕಾಲೇಜಿನ ಹಳೆಯ ವಿದ್ಯಾರ್ಥಿಗಳ ದಿನಾಚರಣೆಗೆ ಬರುತ್ತಿಲ್ಲ. ಹೀಗಾಗಿ ಬ್ಯಾಂಕಾಕ್‌​ನಿಂದಲೇ ಶುಭಾಶಯ ತಿಳಿಸುತ್ತಿದ್ದೇನೆ ಎಂದು ರಜನಿಕಾಂತ್‌ ಹೇಳಿದ್ದಾರೆ.

ಇದನ್ನೂ ಓದಿ:  ವಿಚ್ಛೇದನದ ಹಾದಿಯಲ್ಲಿ ಮತ್ತೊಂದು ತಾರಾ ಜೋಡಿ! ಹಾಲು ಜೇನಿನಂತಿದ್ದ ಸಂಸಾರದಲ್ಲಿ ಧಿಡೀರ್‌ ಡಿವೋರ್ಸ್‌ ಬಿರುಗಾಳಿ!!   

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News