Samantha Ruth Prabhu: ನಟಿ ಸಮಂತಾ ಅವರು ನಾಗಚೈತನ್ಯಾ ಅವರೊಂದಿಗೆ ವಿಚ್ಛೇಧನ ಪಡೆದು ದೂರವಾಗಿದ್ದಾರೆ. ಮತ್ತೊಂದೆಡೆ ಚೈತು ಇತ್ತೀಚೆಗಷ್ಟೇ ಶೋಭಿತ ಅವರ ಕೈ ಹಿಡಿದಿದ್ದಾರೆ. ಆದರೆ, ವಿಚ್ಛೇಧನವಾದ ವರ್ಷಗಳ ನಂತರ, ಚೈತನ್ಯ ಮರು ಮದುವೆಯಾಗಿ ಜೀವನವನ್ನೂ ಪುನರಾರಂಬಿಸಿದ ನಂತರ ಇದೀಗ ಸಮಂತಾ - ನಾಗಚೈತನ್ಯ ವಿಚ್ಛೇಧನ ವಿಚಾರಕ್ಕೆ ಟ್ವಿಸ್ಟ್ ಸಿಕ್ಕಿದೆ.

ಸಮಂತಾ ಹಾಗು ನಾಗ ಚೈತನ್ಯ ಜೋಡಿ ಸಿನಿಮಾ ಇಂಡಸ್ಟ್ರಿಯಲ್ಲಿನ ಕ್ಯೂಟ್ ಕಪಲ್ ಗಳಲ್ಲಿ ಒಂದಾಗಿತ್ತು. ಮುದ್ದು ಮುದ್ದಾದ ಜೋಡಿ ಪ್ರೀತಿಸಿ ಸುಂದರ ಜೀವನವನ್ನು ಕಟ್ಟಿಕೊಂಡಿತ್ತು. ಆದರೆ ವಿಧಿಯ ವಿಪರ್ಯಾಸ ನೋಡಿ ಅದು ಯಾರ ಕೆಟ್ಟ ಕಣ್ಣು ಬಿತ್ತೋ ಏನೋ ಈ ಜೋಡಿ ವಿಚ್ಛೇಧನ ಪಡೆದು ಕೊಂಡು ದೂರವಾಗಿದ್ದರು, ಅಯ್ಯೋ.. ಇಷ್ಟು ಚೆನ್ನಾಗಿದ್ದ ಜೋಡಿ ಯಾಕೆ ದೂರ ಆದ್ರೂ ಎನ್ನುವ ಪ್ರಶ್ನೆಗೆ ಅಭಿಮಾನಿಗಳಿಗೆ ಈ ವರೆಗೂ ಉತ್ತರ ಸಿಕ್ಕಿರಲಿಲ್ಲ.
ಸಮಂತಾ ಅವರ ಅಭಿಮಾನಿಗಳು ಒಂದೆಡೆ, ನಮ್ಮ ನೆಚ್ಚಿನ ನಟಿಯ ಜೀವನ ಹಾಳಗಲು ಕಾರಣ ನಾಗಚೈತನ್ಯಾ ಅವರನ್ನು ದೋಷಿಸಿದರೆ, ನಾಗ ಚೈತನ್ಯ ಅವರ ಅಭಿಮಾನಿಗಳು, ಸಮಂತಾ ಅವರ ವಿರುದ್ಧ ಕಿಡಿ ಕಾರಿದ್ದರು, ಆದರೆ ಇದೀಗ ಚರ್ಚೆಯಾಗುತ್ತಿರುವ ಸುದ್ದಿ ಪೂರ್ತಿ ಸ್ಟೋರಿಯನ್ನು ಬದಲಾಯಿಸಿಬಿಟ್ಟಿದೆ.
ಹೌದು, ನವಚೈತನ್ಯ ಅವರಿಂದ ವಿಚ್ಛೇದನ ಪಡೆದ ನಂತರ ಸಮಂತಾ ಅನಾರೋಗ್ಯಕ್ಕೆ ತುತ್ತಾಗಿದ್ದರು, ಕಣ್ಣೀರಿಡುತ್ತಾ ಒಂಟಿಯಾಗಿ ಹೋರಾಡುತ್ತಿದ್ದಾರೆ. ನಟಿಯ ಪರಿಸ್ಥಿತಿಯನ್ನು ನೋಡಿ ಎಲ್ಲರೂ ನಾಗ ಚೈತನ್ಯ ಅವರಿಗೆ ಹಿಡಿ ಶಾಪ ಹಾಕಿದ್ದರು. ಸಮಂತಾ ಅವರಿಗೆ ಈ ಪರಿಸ್ಥಿತಿ ಬರುವಂತೆ ಮಾಡಿ ಅದ್ಹೇಗೆ ಮತ್ತೊಂದು ಮದುವೆಗೆ ರೆಡಿಯಾದ್ರಿ ಎಂದು ಧೂಷಿಸಿದ್ದರು. ಟ್ರೊಲ್ ಪೇಜ್ ನವರು ನವಚೈತನ್ಯ ಹಾಗು ಶೋಭಿತ ಇಬ್ಬರನ್ನು ಕೂಡ ದೋಷಿಸಿದ್ದರು.
ಆದರೆ, ಇದೀಗ ಸ್ಟೋರಿ ರಿವರ್ಸ್ ಆಗಿದೆ. ಏನಮ್ಮಾ ಸಮಂತಾ ಎಲ್ಲರಿಗೂ ಚಳ್ಳೆ ಹಣ್ಣು ತಿನ್ನಿಸಿಬಿತ್ಯಾಲಮ್ಮ ಅಂಥ ಅಭಿಮಾನಿಗಳು ಪ್ರಶ್ನಿಸೋಕೆ ಶುರು ಮಾಡಿದ್ದಾರೆ. ಅಷ್ಟಕ್ಕೂ, ಅಭಿಮಾನಿಗಳು ಸಮಂತಾ ವಿರುದ್ಧ ತಿರುಗಿ ಬಿದ್ದಿರೋದು ಯಾಕೆ ಅಂತಿರಾ... ನಾಗ ಚೈತನ್ಯ ಅವರು ಮದುವೆಯಾದ ನಂತರ ಸಮಂತಾ ಅವರನ್ನು ನೀವು ಒಂಟಿಯಾಗಿ ಇರಬೇಡಿ ನೀವು ಒಂದು ಮದುವೆಯಾಗಿ ಎಂದು ಅಭಿಮಾನಿಗಳು ಒತ್ತಾಯ ಮಾಡುತ್ತಿದ್ದರು, ಆದರೆ ಇದೀಗ ಚರ್ಚೆಯಾಗುತ್ತಿರುವ ವಿಚಾರ ಏನು ಅಂದ್ರೆ, ನಟಿ ಸಮಂತಾ ಅವರಿಗೆ ವಿಚ್ಛೇದನಕ್ಕೆ ಮಿಂಚೆಯಿಂದಲು ನಿರ್ದೇಶಕನ ಜೊತೆ ಅಫೇರ್ ಇತ್ತು ಎಂಬ ವಿಚಾರ ಸದ್ಯ ಇಂಡಸ್ಟ್ರಿಯಲ್ಲಿ ಸಂಚಲನ ಸೃಷ್ಟಿಸಿದೆ

ಸಮಂತಾ ಹಾಗು ನಾಗ ಚೈತನ್ಯ ಅವರ ವಿಚ್ಛೇದನಕ್ಕೆ ಕಾರಣ, ಒಬ್ಬ ನಿರ್ದೇಶಕ ಎಂಬ ಸುದ್ದಿ , ಈ ಜೋಡಿ ದೂರದ ಹೊಸತರಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು, ಆದರೆ ಈ ವಿಚಾರಕ್ಕೆ ಯಾವುದೇ ಸಾಕ್ಷಿ ಸಿಗದೇ ಇದ್ದ ಕಾರಣ , ಈ ವಿಚಾರ ಕೇವಲ ಊಹ ಪೋಹ ಎಂದು ಅಲ್ಲಿಗೆ ಮುಚ್ಚಿ ಹೋಗಿತ್ತು. ಆದರೆ ಇದೀಗ ಈ ವಿಚಾರ ಮತ್ತೆ ಜ್ವಾಲೆಯಂತೆ ಒತ್ತಿ ಉರಿಯಲು ಆರಂಭಿಸಿದೆ.
ಇತ್ತೀಚೆಗೆ ನಟಿ ಸಮಂತಾ, ಖಾಸಗಿ ಯೂಟ್ಯೂಬ್ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದರು, ಇದೇ ವೇಳೆ ನಟಿಗೆ ಸಂದೇಶವೊಂದು ಬಂದಿತ್ತು, ಇದನ್ನು ನೋಡಿ ನಟಿಯ ಮುಖದಲ್ಲಿ ಮಂದಹಾಸ ಮೂಡಿತ್ತು, ಇನ್ನೂ ಈ ಸಂದರ್ಶನದ ವೇಳೆ ನಟಿ ಸಮಂತಗೆ ನಿರ್ದೇಶಕನಿಂದ ಪ್ರೇಮ ಸಂದೇಶ ಬಂದಿತ್ತು, ಇದನ್ನು ನೋಡಿ ನಟಿ ಸಮಂತಾ ನಾಚಿ ನೀರಾಗಿದ್ದು, ಅದೊಂದು ಆಡಿಯೋ ಸಂದೇಶವಾಗಿತ್ತು ಎಂದು ಲೇಹ್ರೆನ್ ವೆಬ್ ಸೈಟ್ ವರದಿ ಮಾಡಿತ್ತು.
ಇದೀಗ ಈ ನಿರ್ದೇಶಕ ಯಾರು? ನಟಿಗೆ ಸಂದರ್ಶನದ ವೇಳೆ ಬಂದ ಸಂದೇಶ ಏನು? ಆಡಿಯೋ ಸಂದೇಶದಲ್ಲಿ ಇದ್ದಿದೇನು? ನಟಿ ನಾಚಿ ನೀರಾಗಿದ್ದೇಕೆ? ಎಂಬ ಎಲ್ಲಾ ಪ್ರಶ್ನೆಗಳು ಹುಟ್ಟಿಕೊಂಡಿವೆ.ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರದ ಬಗ್ಗೆ ಚರ್ಚೆಗಳು ಬುಗಿಲೆದ್ದಿವೆಯಾದರು, ಇವುಗಳಲ್ಲಿ ಯಾವುದು ಸುಳ್ಳು, ಯಾವುದು ಸತ್ಯ ಎಂಬುದನ್ನು ಇನ್ನೂ ಮುಂದಷ್ಟೇ ಕಾದು ನೋಡಬೇಕಿದೆ.