ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೊಸ ಸಾರಥಿ: ಅಹಿಂದ ಸಚಿವರ ಹೆಚ್ಚಾದ ಒತ್ತಡ

ಹಿಂದುಳಿದ ವರ್ಗಗಳ ಒಳಗೊಂಡ ಅಹಿಂದ (ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು) ಸಮುದಾಯದ ಹಲವು ನಾಯಕರು ಈ ಹುದ್ದೆಗೆ ತಮ್ಮ ದಾವೆಯನ್ನು ಮುಂದಿಟ್ಟಿದ್ದಾರೆ. ಹಿರಿಯ ಸಚಿವರು ಹಾಗೂ ಅಹಿಂದ ಸಮುದಾಯದ ಪ್ರಮುಖರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೈಕಮಾಂಡ್ ಗಮನ ಸೆಳೆಯಲು ತೀವ್ರ ಕಸರತ್ತು ನಡೆಸುತ್ತಿದ್ದಾರೆ.

Written by - Prashobh Devanahalli | Last Updated : Jan 13, 2025, 08:26 AM IST
  • ಪ್ರಸ್ತುತ, ಡಾ. ಜಿ. ಪರಮೇಶ್ವರ್, ಸತೀಶ್ ಜಾರಕಿಹೊಳಿ, ಕೆ. ಎನ್.ರಾಜಣ್ಣ, ಹಾಗೂ ಡಾ. ಮಹಾದೇವಪ್ಪರಂತಹ ಹಿರಿಯ ನಾಯಕರು ಈ ಹುದ್ದೆಗೆ ತೀವ್ರ ಸ್ಪರ್ಧೆ ನಡೆಸುತ್ತಿರುವುದು ತಿಳಿದುಬಂದಿದೆ.
  • ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಕೆಲವು ನಾಯಕರು ತಮ್ಮ ಸಚಿವ ಸ್ಥಾನಕ್ಕೂ ರಾಜೀನಾಮೆ ನೀಡಲು ಸಿದ್ಧರಾಗಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೊಸ ಸಾರಥಿ: ಅಹಿಂದ ಸಚಿವರ  ಹೆಚ್ಚಾದ ಒತ್ತಡ  title=

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೊಸ ನಾಯಕನ ಆಯ್ಕೆ ಪ್ರಸ್ತಾಪ ಮುನ್ನೆಲೆಗೆ ಬಂದಿದೆ. "ಒಂದು ವ್ಯಕ್ತಿಗೆ ಒಂದೇ ಹುದ್ದೆ" ಎಂಬ ನಿಯಮವನ್ನು ಕಟ್ಟುನಿಟ್ಟಾಗಿ ಅನುಸರಿಸಲು ಹೈಕಮಾಂಡ್ ಒತ್ತಾಯಿಸುತ್ತಿರುವುದರಿಂದ, ನಾಯಕತ್ವ ಬದಲಾವಣೆಗೆ ಸಾಧ್ಯತೆ ತೀವ್ರವಾಗಿದೆ.

ಹಿಂದುಳಿದ ವರ್ಗಗಳ ಒಳಗೊಂಡ ಅಹಿಂದ (ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು) ಸಮುದಾಯದ ಹಲವು ನಾಯಕರು ಈ ಹುದ್ದೆಗೆ ತಮ್ಮ ದಾವೆಯನ್ನು ಮುಂದಿಟ್ಟಿದ್ದಾರೆ. ಹಿರಿಯ ಸಚಿವರು ಹಾಗೂ ಅಹಿಂದ ಸಮುದಾಯದ ಪ್ರಮುಖರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೈಕಮಾಂಡ್ ಗಮನ ಸೆಳೆಯಲು ತೀವ್ರ ಕಸರತ್ತು ನಡೆಸುತ್ತಿದ್ದಾರೆ.

ಅಹಿಂದ ಸಮುದಾಯದ ಮುಖಂಡರ ಲೆಕ್ಕಾಚಾರ:
ಹಿಂದುಳಿದ ವರ್ಗಗಳಿಗೆ ಪಕ್ಷದಲ್ಲಿ ಹೆಚ್ಚಿನ ಪ್ರಾತಿನಿಧ್ಯ ನೀಡುವ ಮೂಲಕ ಕಾಂಗ್ರೆಸ್ ತಮ್ಮ ಬೂತ್ ಮಟ್ಟದ ಸಂಘಟನೆಗೆ ಬಲ ನೀಡಲು ಸಹಕಾರಿಯಾಗಲಿದೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ಸಮುದಾಯದ ಮುಖಂಡನನ್ನು ನೇಮಕ ಮಾಡುವ ಉದ್ದೇಶ ಅಹಿಂದ ನಾಯಕರಿಂದ ವ್ಯಕ್ತವಾಗಿದೆ.

ಸಜ್ಜಾದ ನಾಯಕರು:
ಪ್ರಸ್ತುತ, ಡಾ. ಜಿ. ಪರಮೇಶ್ವರ್, ಸತೀಶ್ ಜಾರಕಿಹೊಳಿ, ಕೆ. ಎನ್.ರಾಜಣ್ಣ, ಹಾಗೂ ಡಾ. ಮಹಾದೇವಪ್ಪರಂತಹ ಹಿರಿಯ ನಾಯಕರು ಈ ಹುದ್ದೆಗೆ ತೀವ್ರ ಸ್ಪರ್ಧೆ ನಡೆಸುತ್ತಿರುವುದು ತಿಳಿದುಬಂದಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಕೆಲವು ನಾಯಕರು ತಮ್ಮ ಸಚಿವ ಸ್ಥಾನಕ್ಕೂ ರಾಜೀನಾಮೆ ನೀಡಲು ಸಿದ್ಧರಾಗಿದ್ದಾರೆ.

ಸಮುದಾಯ ರಾಜಕೀಯದ ಪ್ರಭಾವ:
ಹಿಂದುಳಿದ ಸಮುದಾಯಗಳನ್ನೆತ್ತಿ ಹಿಡಿಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪೂರ್ಣ ಬೆಂಬಲವೂ ಅಹಿಂದ ನಾಯಕರು ಪಡೆಯುತ್ತಿದ್ದಾರೆ. ರಾಜ್ಯ ಮಟ್ಟದಲ್ಲಿ ಪಕ್ಷ ಸಂಘಟನೆಯ ಬಲವರ್ಧನೆಗೆ ಈ ನಿರ್ಧಾರ ಸಹಾಯಕವಾಗಲಿದೆ ಎಂಬ ಲೆಕ್ಕಾಚಾರದಲ್ಲಿ ಅಹಿಂದ ನಾಯಕರು ತೊಡಗಿದ್ದಾರೆ.

ಹೈಕಮಾಂಡ್ ತೀರ್ಮಾನಕ್ಕಾಗಿ ಕಸರತ್ತು:
ಹೈಕಮಾಂಡ್ ಗಮನ ಸೆಳೆಯಲು ಅಹಿಂದ ಸಚಿವರು ಅಲರ್ಟ್ ಆಗಿದ್ದು, ಸಭೆಗಳಿಗೆ ಸಿದ್ಧರಾಗಿದ್ದಾರೆ. ಪರಸ್ಪರ ತೀರ್ಮಾನಕ್ಕೆ ತಲುಪಲು ಈಗಾಗಲೇ ಹೈಕಮಾಂಡ್ ಮತ್ತು ರಾಜ್ಯ ನಾಯಕತ್ವದ ನಡುವೆ ಚರ್ಚೆಗಳು ನಡೆದಿವೆ.

ಕಾಂಗ್ರೆಸ್ ಸರ್ಕಾರದ ಲೆಕ್ಕಾಚಾರ:
ಪ್ರಸ್ತುತ ಸರ್ಕಾರದ ಶಕ್ತಿ ಬಳಸಿ ಪಕ್ಷ ಸಂಘಟನೆಯನ್ನು ಸುಲಭಗೊಳಿಸುವ ಹಾಗೂ ಮುಂದಿನ ಚುನಾವಣೆಗೆ ಸಿದ್ದಾವಾಗಲು, ಈ ನಿರ್ಧಾರ ಶೀಘ್ರದಲ್ಲಿ ಹೊರಬರುವ ಸಾಧ್ಯತೆಯಿದೆ.

ವಿಳಂಬ ಆದರೆ ಮುಂದಿನ ಚುನಾವಣೆ ಮೇಲೆ ಪ್ರಭಾವ ಬೀರಲಿದೆ ಎಂದು ಕಾಂಗ್ರೆಸ್ ಪಕ್ಷದ ಚಿಂತಕರು ಮುಖಂಡರಿಗೆ ತಿಳಿಸಿದ್ದಾರೆ. ಹಾಗಾದರೆ ಮುಂದೆ ಹೈಕಮಾಂಡ್ ಈ ನಿರ್ಣಯವನ್ನು ಹೇಗೆ ಕೈಗೊಳ್ಳುತ್ತದೆ ಕಾದುನೋಡಬೇಕಿದೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News