ಬೆಂಗಳೂರು : ಇಂದು ಖಾಸಗಿ ಹೋಟೆಲ್ ನಲ್ಲಿ ನಡೆಯಬೇಕಿದ್ದ ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿ ಹಾಗೂ ಪಂಗಡ ಸಚಿವರ ಹಾಗೂ ಶಾಸಕರ ಔತಣ ಕೂಟಕ್ಕೆ AICC ಬೇಡ ಎಂದಿದ್ದು, ಭೋಜನ ಕೂಟದ ಉದ್ದೇಶವನ್ನು ಗೃಹ ಸಚಿವ ಪರಮೇಶ್ವರ್ ಸಾಧಿಸಿದಂತೆ ಕಾಣುತ್ತಿದೆ.
ರಾಜ್ಯ ಕಾಂಗ್ರೆಸ್ ನಲ್ಲಿ ಬಣ ಬಡಿದಾಟ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದೆ. ಈ ಪ್ರಕಾರ ಕಾಂಗ್ರೆಸ್ ಪಕ್ಷದ ದಲಿತ ನಾಯಕರು ನಾವು ಕೂಡ ಸಿಎಂ ಅಥವಾ ಕೆಪಿಸಿಸಿ ಅಧ್ಯಕ್ಷ ಪಟ್ಟದ ರೇಸ್ ನಲ್ಲಿ ಇದ್ದೀವಿ ಎಂದು ಒಗ್ಗಟ್ಟು ಪ್ರದರ್ಶನ ಮಾಡುವ ಜೊತೆಗೆ ಇತರೆ ಬಣಕ್ಕೂ ಸಂದೇಶ ರವಾನಿಸಬೇಕಿತ್ತು. ಈ ಉದ್ದೇಶ ಗೃಹ ಸಚಿವರ ಒಂದು ಪತ್ರಿಕಾ ಪ್ರಕಟಣೆ ಮೂಲಕ ಸಾಧಿಸಿದಂತಿದೆ.
ಇದನ್ನೂ ಓದಿ: ಇಸ್ರೋ ನೂತನ ಅಧ್ಯಕ್ಷ ಡಾ ವಿ ನಾರಾಯಣನ್ ಯಾರು? ಇಲ್ಲಿದೆ ಪರಿಚಯ
ಬೆಂಗಳೂರಿನ ಹೊಟೆಲ್ ರಾಡಿಸನ್ ಬ್ಲೂನಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಪಕ್ಷದ ಪರಿಶಿಷ್ಟಜಾತಿ ಹಾಗೂ ಪರಿಶಿಷ್ಟ ಪಂಗಡದ ಸಚಿವರುಗಳು, ಶಾಸಕರುಗಳು, ಸಂಸದರು ಹಾಗೂ ಮುಖಂಡರುಗಳ ಸಭೆಯನ್ನ ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ. ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯದ ಉಸ್ತುವಾರಿಗಳಾದ ರಣದೀಪ್ ಸಿಂಗ್ ಸುರ್ಜೇವಾಲ ಸೂಚನೆಯ ಮೇರೆಗೆ ಮುಂದೂಡಲಾಗಿದೆ ಸಭೆಯನ್ನ ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.
17 ಎಸ್ ಸಿ ಶಾಸಕರು, 15 ಎಸ್ ಟಿ ಶಾಸಕರು, ಹಾಗೂ ಎರಡು ಸಮುದಾಯದಿಂದ 6 ಸಚಿವರು ಒಟ್ಟು 32 ನಾಯಕರು ಸೇರಿ ನಡೆಯಬೇಕಿದ್ದ ಭೋಜನ ಕೂಟದ ಹೆಸರಿನಲ್ಲಿ ಹೈ ಕಮಾಂಡ್ ಗೆ ರವಾನಿಸಬೇಕಿದ್ದ ಒಗ್ಗಟ್ಟು ಮತ್ತು ಶಕ್ತಿ ಪ್ರದರ್ಶನ ಒಂದು ಪ್ರಕಟಣೆ ಇಂದ ನಡೆದಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಡುತ್ತಿದ್ದಾರೆ. ಜೊತೆಗೆ ಕಾಂಗ್ರೆಸ್ ಎಸ್ ಸಿ ಎಸ್ ಟಿ ಬಣದ ಸಭೆ ಮಾಡದಂತೆ ಹೈ ಕಮಾಂಡ್ ಹೇಳಿದೆ ಎಂಬ ಸಂದೇಶವನ್ನು ಪರಮೇಶ್ವರ್ ಹೇಳಿದ್ದಾರೆ.
ಒಟ್ಟಾರೆ ಡಿಕೆ ಬಣದ ವಿರುದ್ಧ ಮತ್ತಷ್ಟು ಬಣಗಳು ಮುಖ್ಯಮಂತ್ರಿ ಅಥವಾ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಪೈಪೋಟಿ ನಡೆಸುತ್ತಿರುವುದು ಕಾಣುತ್ತಿದೆ. ಹೈ ಕಮಾಂಡ್ ಅವರಿಗೆ ರಾಜಸ್ಥಾನದಲ್ಲಿ ಅಶೋಕ್ ಗೆಲ್ಹೋಟ್ vs ಸಚಿನ್ ಪೈಲೇಟ್ ರೀತಿ ಆಗಬಾರದು ಎಂಬ ಆತಂಕ ಕೂಡ ಇದೇ. ಇದಕ್ಕೆ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರಜೆವಾಲ ಅವರಿಗೆ ಪರಿಸ್ಥಿತಿ ನಿಭಾಯಿಸಲು ಸೂಚನೆ ನೀಡಲಾಗಿದೆ.
ಇದನ್ನೂ ಓದಿ: ಈ ಬ್ಯಾಂಕ್ ನಲ್ಲಿ ನಿಮ್ಮ ಲೋನ್ ಇದ್ದರೆ ನೀವು ಲಕ್ಕಿ ! ಕಡಿಮೆಯಾಗಲಿದೆ ಲೋನ್ ಮೊತ್ತ
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.