ಅಕ್ಕಿನೇನಿ ಕುಟುಂಬಕ್ಕೆ ಬಿಗ್‌ಶಾಕ್..‌ ಮದುವೆಯಾದ ಕೆಲವೇ ದಿನಕ್ಕೆ ಶೋಭಿತಾ ಬಾಯ್​ಫ್ರೆಂಡ್ ಜೊತೆಗಿನ ಫೋಟೋ ಲೀಕ್!

sobhita dhulipala Ex Boyfriend: ರಂಗುರಂಗಿನ ಪ್ರಪಂಚ ಚಿತ್ರರಂಗದಲ್ಲಿ ಪ್ರೀತಿ ಮತ್ತು ಮದುವೆ ಸಾಮಾನ್ಯ. ಸ್ಟಾರ್ ಹೀರೋಯಿನ್ ಆಗಿ ನಟಿಸುತ್ತಿರುವಾಗಲೇ ಶೋಭಿತಾ ಧೂಳಿಪಾಲ ನಾಗ ಚೈತನ್ಯ ಅವರನ್ನು ಪ್ರೀತಿಸಿ ಮದುವೆಯಾದರು. ಇದೀಗ ಇವರ ಕುರಿತಾದ ಶಾಕಿಂಗ್‌ ಸಂಗತಿಯೊಂದು ಬಹಿರಂಗವಾಗಿದೆ.. 

Written by - Savita M B | Last Updated : Dec 16, 2024, 04:49 PM IST
  • ನಾಗ ಚೈತನ್ಯ ಮತ್ತು ಸಮಂತಾ ತಮ್ಮ ವೃತ್ತಿಜೀವನದ ಅಗ್ರ ಹಂತದಲ್ಲಿರುವಾಗಲೇ ಪ್ರೀತಿಸಿ ಮದುವೆಯಾಗಿದ್ದು ಗೊತ್ತೇ ಇದೆ.
  • ಮದುವೆಗೆ ಸಂಬಂಧಿಸಿದ ಫೋಟೋಗಳನ್ನು ಅಕ್ಕಿನೇನಿ ಕುಟುಂಬ ಬಿಡುಗಡೆ ಮಾಡಿದೆ.
ಅಕ್ಕಿನೇನಿ ಕುಟುಂಬಕ್ಕೆ ಬಿಗ್‌ಶಾಕ್..‌ ಮದುವೆಯಾದ ಕೆಲವೇ ದಿನಕ್ಕೆ ಶೋಭಿತಾ ಬಾಯ್​ಫ್ರೆಂಡ್ ಜೊತೆಗಿನ ಫೋಟೋ ಲೀಕ್!  title=

sobhita dhulipalas-naga chaitanya: ಟಾಲಿವುಡ್ ನ ಯಂಗ್ ಹೀರೋ ನಾಗ ಚೈತನ್ಯ ಮತ್ತು ಸಮಂತಾ ತಮ್ಮ ವೃತ್ತಿಜೀವನದ ಅಗ್ರ ಹಂತದಲ್ಲಿರುವಾಗಲೇ ಪ್ರೀತಿಸಿ ಮದುವೆಯಾಗಿದ್ದು ಗೊತ್ತೇ ಇದೆ. ವೈಯಕ್ತಿಕ ಕಾರಣಗಳಿಂದ ದಂಪತಿ ಬೇರ್ಪಟ್ಟಿದ್ದರು. ಸಮಂತಾ ವಿಚ್ಛೇದನದ ಕೆಲವೇ ದಿನಗಳಲ್ಲಿ ನಾಗ ಚೈತನ್ಯ ಮತ್ತು ಶೋಭಿತಾ ಜೊತೆಗಿನ ಸಂಬಂಧದ ಬಗ್ಗೆ ಗಾಸಿಪ್‌ಗಳು ಹರಿದಾಡಿದ್ದವು. ಬಳಿಕ ಇವರಿಬ್ಬರು ಆಗಸ್ಟ್ 8 ರಂದು  ನಿಶ್ಚಿತಾರ್ಥ ಮಾಡಿಕೊಂಡು.. ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ವಿವಾಹ ಸಮಾರಂಭ ಕೆಲವೇ ಅತಿಥಿಗಳ ನಡುವೆ ನಡೆಯಿತು. ಮದುವೆಗೆ ಸಂಬಂಧಿಸಿದ ಫೋಟೋಗಳನ್ನು ಅಕ್ಕಿನೇನಿ ಕುಟುಂಬ ಬಿಡುಗಡೆ ಮಾಡಿದೆ.

ಇದನ್ನೂ ಓದಿ-Jio, Airtel ಬಳಿಕ 5G ಸರ್ವಿಸ್ ಆರಂಭಿಸಿದ Vi ! 17 ನಗರಗಳಲ್ಲಿ ಶುರುವಾಯಿತು ಸೇವೆ ! 

ಮದುವೆಯ ನಂತರ ನಾಗ ಚೈತನ್ಯ ಮತ್ತು ಶೋಭಿತಾ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.. ಶೋಭಿತಾ ಅವರು ತುಂಬಾ ಕಷ್ಟಪಟ್ಟು ತನಗಾಗಿ ಒಂದು ಸ್ಥಾನವನ್ನು ಗಳಿಸಿದ್ದಾರೆ. ಶೋಭಿತಾ ಅವರ ಕುಟುಂಬ ಕೆಲವು ವರ್ಷಗಳ ಹಿಂದೆ ಹೈದರಾಬಾದ್‌ನಲ್ಲಿ ನೆಲೆಸಿತ್ತು. ಮಾಡೆಲಿಂಗ್‌ನಲ್ಲಿ ಅವರ ಆಸಕ್ತಿ ಅವರನ್ನು ಚಿತ್ರರಂಗಕ್ಕೆ ಪ್ರವೇಶಿಸುವಂತೆ ಮಾಡಿತು. ಇದೀಗ ಇವರು ಮದುವೆಗೂ ಮುನ್ನವೇ ವಿಚ್ಛೇದನ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಶಾಕಿಂಗ್ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದರ ನಡುವೆವೇ ಮತ್ತೊಂದು ಸುದ್ದಿ ಹೊರಬಂದಿದ್ದು, ನಾಗ ಚೈತನ್ಯ ಜೊತೆಗಿನ ಸಂಬಂಧಕ್ಕೂ ಮುನ್ನ ಆಕೆ ಬೇರೊಬ್ಬರೊಂದಿಗೆ ಡೇಟಿಂಗ್ ಮಾಡಿದ್ದಾಳೆ ಎನ್ನಲಾಗುತ್ತಿದೆ.. ಹೌದು ನಟಿ ಶೋಭಿತಾ ಫ್ಯಾಶನ್ ಡಿಸೈನರ್ ಜೊತೆ ರಿಲೇಶನ್ ಶಿಪ್ ನಲ್ಲಿದ್ದರು ಎಂಬ ಸುದ್ದಿ ಹರಿದಾಡುತ್ತಿದೆ.

ಇದನ್ನೂ ಓದಿ-ಸಿಸೇರಿಯನ್ ಹೆರಿಗೆಗಳಿಗೆ ಕಡಿವಾಣ ಹಾಕಲು ನೂತನ ಕಾರ್ಯಕ್ರಮ ಜಾರಿ - ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ 

ಅಷ್ಟೇ ಅಲ್ಲ, ಸಂಬಂಧದ ಸಮಯದಲ್ಲಿ ಅವರೊಂದಿಗೆ ತೆಗೆದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮದುವೆಯಾದ ಕೆಲವೇ ದಿನಗಳಲ್ಲಿ ಈ ಫೋಟೋ ಹೊರಬೀಳುತ್ತಿದ್ದಂತೆ ನೆಟ್ಟಿಗರು ಶಾಕ್ ಆಗಿದ್ದಾರೆ. ಇನ್ನು ಶೋಭಿತಾ ಧೂಳಿಪಾಲ ಸದ್ಯ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ನಾಗ ಚೈತನ್ಯ ಅಭಿನಯದ ತಾಂಡೇಲ್ ಸಿನಿಮಾ ಚಿತ್ರೀಕರಣ ಮುಗಿಸಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ಇದರಲ್ಲಿ ನಾಯಕಿಯಾಗಿ ಸಾಯಿ ಪಲ್ಲವಿ ನಟಿಸಲಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News