"ಈ ಪ್ಲೇಯರ್‌ ಮುಂಬೈ ಇಂಡಿಯನ್ಸ್ ಸೇರಿರೋದು ನಮ್ಮ ಹೆಮ್ಮೆ"- ನೀತಾ ಅಂಬಾನಿ ಹೇಳಿದ್ದು ಯಾರ ಬಗ್ಗೆ?

Nita Ambani: ಬೆಂಗಳೂರಿನಲ್ಲಿ ನಡೆದ ಹರಾಜಿನ ನಂತರ ಮಾತನಾಡಿದ ಅವರು, “ನಾವೆಲ್ಲರೂ ತುಂಬಾ ಸಂತೋಷವಾಗಿದ್ದೇವೆ. ಇಂದು ನಾವು ಒಟ್ಟುಗೂಡಿಸಿದ ತಂಡದಿಂದ ತೃಪ್ತರಾಗಿದ್ದೇವೆ. ಇದೇ ಸಮಯದಲ್ಲಿ ಹರಾಜು ಪ್ರಕ್ರಿಯೆಗಳು ಅತ್ಯಾಕರ್ಷಕ ಮತ್ತು ಭಾವನಾತ್ಮಕವಾಗಿರುತ್ತವೆ.

Written by - Bhavishya Shetty | Last Updated : Dec 16, 2024, 04:16 PM IST
    • ಬೆಂಗಳೂರಿನಲ್ಲಿ ಭಾನುವಾರ ನಡೆದ ಡಬ್ಲ್ಯೂಪಿಎಲ್ 2025ರ ಮಿನಿ ಹರಾಜು ಪ್ರಕ್ರಿಯೆ
    • ತಂಡದ ಬಲಾಬಲದ ಬಗ್ಗೆ ಫ್ರಾಂಚೈಸಿ ಓನರ್‌ ನೀತಾ ಎಂ. ಅಂಬಾನಿ ಮಾತು
    • ಯುವ ಆಟಗಾರ್ತಿಯರನ್ನು ಬೆಳೆಸುವ ತಂಡದ ಬಯಕೆಯನ್ನು ಹಂಚಿಕೊಂಡರು
"ಈ ಪ್ಲೇಯರ್‌ ಮುಂಬೈ ಇಂಡಿಯನ್ಸ್ ಸೇರಿರೋದು ನಮ್ಮ ಹೆಮ್ಮೆ"- ನೀತಾ ಅಂಬಾನಿ ಹೇಳಿದ್ದು ಯಾರ ಬಗ್ಗೆ? title=
File Photo

ಮುಂಬೈ: ಬೆಂಗಳೂರಿನಲ್ಲಿ ಭಾನುವಾರ ನಡೆದ ಡಬ್ಲ್ಯೂಪಿಎಲ್ 2025ರ ಮಿನಿ ಹರಾಜು ಪ್ರಕ್ರಿಯೆಯಲ್ಲಿ ನಾಲ್ವರು ಹೊಸ ಆಟಗಾರ್ತಿಯರನ್ನು ಮುಂಬೈ ಇಂಡಿಯನ್ಸ್‌ಗೆ ಸೇರ್ಪಡೆಗೊಳಿಸಿದ ಬಳಿಕ ತಂಡದ ಬಲಾಬಲದ ಬಗ್ಗೆ ಫ್ರಾಂಚೈಸಿ ಓನರ್‌ ನೀತಾ ಎಂ. ಅಂಬಾನಿ ಮಾತನಾಡಿದರು. ಜೊತೆಗೆ ತಂಡದ ದೃಷ್ಟಿಕೋನವನ್ನು ವಿವರಿಸಿದ ಅವರು, ಯುವ ಆಟಗಾರ್ತಿಯರನ್ನು ಬೆಳೆಸುವ ತಂಡದ ಬಯಕೆಯನ್ನು ಹಂಚಿಕೊಂಡರು.

ಇದನ್ನೂ ಓದಿ: ನಿಮಗೆ ಕಡಿಮೆ ದರದಲ್ಲಿ ಚಿನ್ನ ಬೇಕೇ? ಇಲ್ಲಿ ಸಿಗುತ್ತೆ ಅಗ್ಗದ ಚಿನ್ನ.! ಖರೀದಿಸಲು ಯಾವ ನಿಯಮಗಳನ್ನು ಅನುಸರಿಸಬೇಕು ಗೊತ್ತೇ?

ಬೆಂಗಳೂರಿನಲ್ಲಿ ನಡೆದ ಹರಾಜಿನ ನಂತರ ಮಾತನಾಡಿದ ಅವರು, “ನಾವೆಲ್ಲರೂ ತುಂಬಾ ಸಂತೋಷವಾಗಿದ್ದೇವೆ. ಇಂದು ನಾವು ಒಟ್ಟುಗೂಡಿಸಿದ ತಂಡದಿಂದ ತೃಪ್ತರಾಗಿದ್ದೇವೆ. ಇದೇ ಸಮಯದಲ್ಲಿ ಹರಾಜು ಪ್ರಕ್ರಿಯೆಗಳು ಅತ್ಯಾಕರ್ಷಕ ಮತ್ತು ಭಾವನಾತ್ಮಕವಾಗಿರುತ್ತವೆ. ಇಂದು ಹರಾಜಿನಲ್ಲಿ ಭಾಗವಹಿಸಿದ ಎಲ್ಲಾ ಆಟಗಾರ್ತಿಯರ ಬಗ್ಗೆ ಮತ್ತು ಈಗ ಮುಂಬೈ ಇಂಡಿಯನ್ಸ್ ಕುಟುಂಬದ ಭಾಗವಾಗಿರುವ ಜಿ. ಕಮಲಿನಿ, ನಾಡಿನ್ ಡಿ ಕ್ಲರ್ಕ್, ಸಂಸ್ಕೃತಿ ಗುಪ್ತಾ ಮತ್ತು ಅಕ್ಷಿತಾ ಮಹೇಶ್ವರಿ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ” ಎಂದರು.

ನಾಲ್ವರು ನೂತನ ಆಟಗಾರ್ತಿಯರನ್ನು ವಿಶೇಷ ಸಂದೇಶದೊಂದಿಗೆ ಸ್ವಾಗತಿಸಿದ ಅವರು, “ಮುಂಬೈ ಇಂಡಿಯನ್ಸ್ ಕುಟುಂಬಕ್ಕೆ ನಾವು ನಿಮ್ಮನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ. ಮುಂಬೈ ಇಂಡಿಯನ್ಸ್ ಯಾವಾಗಲೂ ಯುವ ಪ್ರತಿಭೆಗಳನ್ನು ಶೋಧಿಸಲು, ಪೋಷಿಸಲು ಮತ್ತು ಬೆಳೆಸಲು ಪ್ರಯತ್ನಿಸುತ್ತದೆ.  ಪುರುಷರ ತಂಡದಲ್ಲೂ ಇದೇ ಆಶಯವನ್ನು ಇಟ್ಟುಕೊಂಡಿದ್ದೇವೆ. ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ ಮತ್ತು ಈಗ ತಿಲಕ್ ವರ್ಮ ಅವರು ಜಾಗತಿಕ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸುವುದನ್ನು ನೋಡುವಾಗ ಹೆಮ್ಮೆಯ ಭಾವನೆ ಬರುತ್ತದೆ. ನಾವು ನಮ್ಮ ಆಟಗಾರ್ತಿಯರ ವಿಚಾರದಲ್ಲೂ ಇದನ್ನೇ ಮಾಡಲು ಪ್ರಯತ್ನಿಸುತ್ತಿದ್ದೇವೆ. ಕಳೆದ ವರ್ಷ ನಾವು ಸಜನಾ ಅವರನ್ನು ಹರಾಜಿನಲ್ಲಿ ಖರೀದಿಸಿದ್ದೆವು. ಆಕೆ ಈಗ ಟೀಮ್ ಇಂಡಿಯಾ ಪರ ಆಡುತ್ತಿರುವುದನ್ನು ನೋಡಲು ಅದ್ಭುತವೆನಿಸುತ್ತದೆ" ಎಂದು ಹೇಳಿದರು.

ಮುಂಬೈ ಇಂಡಿಯನ್ಸ್ ಈ ಬಾರಿ ಹೆಚ್ಚು ರೇಟಿಂಗ್ ಪಡೆದ ಮತ್ತು ಹೆಚ್ಚು ಅಪೇಕ್ಷಿತ ಆಟಗಾರ್ತಿ ಎನಿಸಿದ ಜಿ ಕಮಲಿನಿ ಅವರನ್ನು ತನ್ನ ಬಳಗಕ್ಕೆ ಸೇರಿಸುವಲ್ಲಿ ಯಶಸ್ವಿಯಾಗಿದೆ. ತಮಿಳುನಾಡಿನ 16 ವರ್ಷದ ಈ ಆಟಗಾರ್ತಿ 19 ವಯೋಮಿತಿಯ ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಕಿರಿಯರ ತಂಡದ ಪರ ತನ್ನ ಚೊಚ್ಚಲ ಪಂದ್ಯವನ್ನು ಆಡಿದ್ದರು.

ಈ ಬಗ್ಗೆಯೂ ಸಂತಸ ವ್ಯಕ್ತಪಡಿಸಿದ ಅವರು, “ಈ ವರ್ಷ ನಾವು 16ರ ಹರೆಯದ ಕಮಲಿನಿ ಸೇರ್ಪಡೆಯಿಂದ ತುಂಬಾ ಉತ್ಸುಕರಾಗಿದ್ದೇವೆ. ನಮ್ಮ ಪ್ರತಿಭಾ ಶೋಧಕರು ಕಳೆದ ಸ್ವಲ್ಪ ಸಮಯದಿಂದ ಈಕೆಯ ಆಟವನ್ನು ಗಮನಿಸುತ್ತಿದ್ದರು. ಕಮಲಿನಿ ತುಂಬಾ ಉತ್ತೇಜಕ ಹೊಸ ಪ್ರತಿಭೆ ಎನಿಸಿದ್ದಳು. ಒಟ್ಟಾರೆಯಾಗಿ, ಹರಾಜಿನಲ್ಲಿ ನಮ್ಮ ತೃಪ್ತಿಕರ ದಿನವಾಗಿತ್ತು" ಎಂದರು.

ಇದನ್ನೂ ಓದಿ: ಆಘಾತದಲ್ಲಿ ಕ್ರಿಕೆಟ್‌ ಲೋಕ... ಜಗತ್ತೇ ಕೊಂಡಾಡಿದ ಬೌಲರ್‌ಗೆ ಕ್ರಿಕೆಟ್‌ನಿಂದ ನಿಷೇಧ: 712 ವಿಕೆಟ್ ಕಬಳಿಸಿ ಮೆರೆಯುತ್ತಿದ್ದ ಆಟಗಾರನಿಗೆ ಐಸಿಸಿಯಿಂದ ಕಠಿಣ ಶಿಕ್ಷೆ.. ಕಾರಣವೇನು?

ಮುಂಬೈ ಇಂಡಿಯನ್ಸ್ ಡಬ್ಲ್ಯೂಪಿಎಲ್‌ನಲ್ಲಿ ಉದ್ಘಾಟನಾ ಆವೃತ್ತಿಯ ಚಾಂಪಿಯನ್ ಆಗಿದೆ. ಕಮಲಿನಿ ಜೊತೆಗೆ ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ನಾಡಿನ್ ಡಿ ಕ್ಲರ್ಕ್, ಮಧ್ಯಪ್ರದೇಶದ ಆಲ್‌ರೌಂಡರ್ ಸಂಸ್ಕೃತಿ ಗುಪ್ತಾ ಮತ್ತು ರಾಜಸ್ಥಾನದ ವೇಗಿ ಅಕ್ಷಿತಾ ಮಹೇಶ್ವರಿ ಅವರನ್ನು ಪಡೆಯುವ ಮೂಲಕ ತಂಡ 18 ಸದಸ್ಯರ ಪೂರ್ಣ ಬಲವನ್ನು ಹೊಂದಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News