ಆಂಧ್ರ ರಾಜಭವನದ ನಾಲ್ವರು ಸಿಬ್ಬಂದಿಗೆ ಕೊರೋನಾ ಪಾಸಿಟಿವ್

ದೇಶದ ಇತರೆ ಭಾಗಗಳಂತೆ ಆಂಧ್ರದಲ್ಲೂ ಕೊರೋನಾ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ನಿನ್ನೆ ಒಂದೇ ದಿನ ಆಂಧ್ರದಲ್ಲಿ 81 ಹೊಸ ಪ್ರಕರಣಗಳು ಪತ್ತೆಯಾಗಿವೆ. 

Last Updated : Apr 27, 2020, 08:00 AM IST
ಆಂಧ್ರ ರಾಜಭವನದ ನಾಲ್ವರು ಸಿಬ್ಬಂದಿಗೆ ಕೊರೋನಾ ಪಾಸಿಟಿವ್ title=
Image courtesy: India.com

ನವದೆಹಲಿ: ಇತ್ತೀಚೆಗೆ ರಾಷ್ಟ್ರಪತಿ ಭವನದಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ಈಗ ಆಂಧ್ರ ಪ್ರದೇಶದ ರಾಜಭವನದಲ್ಲೂ  ಕರೋನಾವೈರಸ್ (Coronavirus)  ಅಟ್ಟಹಾಸ ಕಂಡುಬಂದಿದೆ.

ಆಂಧ್ರ ಪ್ರದೇಶ (Andhra Pradesh)ದ ರಾಜಭವನದ ನಾಲ್ವರು ಸಿಬ್ಬಂದಿಗಳಿಗೆ ಕೊರೋನಾ  ಪಾಸಿಟಿವ್ ಇರುವುದನ್ನು ರಾಜಭವನದ ಹಿರಿಯ ಅಧಿಕಾರಿಗಳು ಮಾಧ್ಯಮಗಳಿಗೆ ದೃಢಪಡಿಸಿದ್ದಾರೆ‌. ರಾಜಭವನದ ಚೀಫ್ ಸೆಕ್ರೆಟರಿ ಅಧಿಕಾರಿ, ನರ್ಸ್ ಮತ್ತು ಇಬ್ಬರು ಅಟೆಂಡರುಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಎಲ್ಲರಿಗೂ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ಸದ್ಯ ಅವರೆಲ್ಲರನ್ನೂ ರಾಜಭವನದ ಅಧಿಕಾರಿಗಳು ಆಸ್ಪತ್ರೆಗೆ ಕಳುಹಿಸಿದ್ದಾರೆ.

ದೇಶದ ಇತರೆ ಭಾಗಗಳಂತೆ ಆಂಧ್ರದಲ್ಲೂ ಕೊರೋನಾ  ಕೋವಿಡ್-19 (Covid-19) ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ನಿನ್ನೆ ಒಂದೇ ದಿನ ಆಂಧ್ರದಲ್ಲಿ 81 ಹೊಸ ಪ್ರಕರಣಗಳು ಪತ್ತೆಯಾಗಿವೆ. ಆಂಧ್ರಪ್ರದೇಶದ ಕೊರೋನಾ ಸೋಂಕು ಪೀಡಿತರ ಸಂಖ್ಯೆ 1,097ಕ್ಕೆ ಏರಿಕೆಯಾಗಿದೆ. ಆಂಧ್ರಪ್ರದೇಶದಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ.

ಮೇ 3ರ ಬಳಿಕವೂ ಲಾಕ್​ಡೌನ್ ಇರಬೇಕೋ, ಬೇಡವೋ ಎಂಬ ಬಗ್ಗೆ ಇಂದು ಸಿಎಂಗಳ ಜೊತೆ ಚರ್ಚೆ

ಜಾಗತಿಕ ಪಿಡುಗಾಗಿ ಪರಿಣಮಿಸಿರುವ ಮಹಾಮಾರಿ‌ ಕೊರೋನಾವೈರಸ್ ಭಾರತಕ್ಕೆ ಕಾಲಿಟ್ಟಾಗಿನಿಂದ ದಿನವೊಂದರಲ್ಲಿ ಅತಿ ಹೆಚ್ಚು ಜನರಲ್ಲಿ ಸೋಂಕು ಕಂಡುಬಂದ ದಾಖಲೆ ನಿನ್ನೆಯಾಗಿದೆ. ನಿನ್ನೆ ಒಂದೇ ದಿನ ಭಾರತದಲ್ಲಿ 1.975 ಜನರಲ್ಲಿ ಕೊರೋನಾ ವೈರಸ್ ಪತ್ತೆಯಾಗಿದೆ.

ಚೀನಾ (China)ದ ವುಹಾನ್ ಪ್ರಾಂತ್ಯದಲ್ಲಿ ಜನ್ಮತೆಳೆದ ಮಾರಕ‌ ಕೊರೋನಾ ವೈರಸ್ ಭಾರತಕ್ಕೆ ಕಾಲಿಟಿದ್ದು ಈ ವರ್ಷದ ಜನವರಿ 30ರಂದು. ಅಂದು ಕೇರಳದಲ್ಲಿ ಮೊದಲ ಪ್ರಕರಣ ಕಂಡುಬಂದಿತ್ತು. ಅಂದಿನಿಂದ ನಿನ್ನೆಯವರೆಗೆ ಕೊರೋನಾ ವೈರಸ್ ಹರಡಿದ ಮಾಹಿತಿ ನೋಡಿದರೆ ದಿನವೊಂದರಲ್ಲಿ ಅತಿ ಹೆಚ್ಚು ಹರಡಿದ್ದು ನಿನ್ನೆಯೇ. ನಿನ್ನೆ ಒಂದೇ ದಿನ 1,975 ಜನರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ.

ಇದರಿಂದ ನಿನ್ನೆ ಸಂಜೆ 5ಗಂಟೆವರೆಗಿನ ದೇಶದ ಕೊರೋನಾ ಪೀಡಿತರ ಸಂಖ್ಯೆ 26,917ಕ್ಕೆ ಏರಿಕೆಯಾಗಿದೆ‌. ಆ ಪೈಕಿ 5.913 ಮಂದಿ ಮಾತ್ರ ಗುಣಮುಖರಾಗಿದ್ದಾರೆ. ಉಳಿದಂತೆ ದೇಶಾದ್ಯಂತ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 826ಕ್ಕೆ ಏರಿಕೆಯಾಗಿದೆ.

Trending News