Annamalai supports Allu Arjun: ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ವಿಚಾರದಲ್ಲಿ ಇದೀಗ ರಾಜಕೀಯ ಬಿಸಿ ಶುರುವಾಗಿದೆ. ಥಿಯೇಟರ್ನಲ್ಲಿ ಕಾಲ್ತುಳಿತ ಮತ್ತು ಮಹಿಳೆಯ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲು ಅರ್ಜುನ್ ಮತ್ತು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ನಡುವೆ ಸಂಘರ್ಷ. ಪೊಲೀಸರು ಮಂಗಳವಾರ ಅಲ್ಲು ಅರ್ಜುನ್ ಅವರನ್ನು ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಇದಕ್ಕೂ ಮುನ್ನ ಅಲ್ಲು ಅರ್ಜುನ್ ನಿವಾಸದ ಮೇಲೂ ದಾಳಿ ನಡೆದಿತ್ತು. ಈ ಪ್ರಕರಣ ಸಂಬಂಧ ನಟ ಅಲ್ಲು ಅರ್ಜುನ್ ಅವರನ್ನು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಬೆಂಬಲಿಸಿದ್ದಾರೆ. ಇದೇ ವೇಳೆ ಅವರು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ರೇವಂತ್ ರೆಡ್ಡಿ ʼಸೂಪರ್ ಸ್ಟಾರ್ʼ ಎಂದುಕೊಂಡಿದ್ದಾರೆ!
ಬಿಜೆಪಿ ನಾಯಕ ಕೆ.ಅಣ್ಣಾಮಲೈ ಮಂಗಳವಾರ ಸಿಎಂ ರೇವಂತ್ ರೆಡ್ಡಿ ಅವರನ್ನು ಗುರಿಯಾಗಿಸಿಕೊಂಡು ಕಿಡಿಕಾರಿದ್ದಾರೆ. "ರೇವಂತ್ ರೆಡ್ಡಿ ತೆಲಂಗಾಣದಲ್ಲಿ ಸೂಪರ್ಸ್ಟಾರ್ ಯಾರು ಎಂಬ ಸ್ಪರ್ಧೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಅವರು ಅಲ್ಲು ಅರ್ಜುನ್ಗಿಂತ ದೊಡ್ಡ ಸೂಪರ್ಸ್ಟಾರ್ ಎಂದು ತೋರಿಸಲು ಪ್ರಯತ್ನಿಸುತ್ತಿದ್ದಾರೆ. ಈಗಲೂ ಸಹ ಅವರು ಕಾಂಗ್ರೆಸ್ನಲ್ಲಿ ನಟಿಸುತ್ತಿದ್ದಾರೆ, ಅವರು ತೆಲಂಗಾಣದ ಪ್ರಮುಖ ನಟʼ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ: ಬಂಡೀಪುರದಲ್ಲಿ ಮತ್ತೇ ಹೊಸ ಚರ್ಚೆಗೆ ನಾಂದಿ ಹಾಡಿದೆ ಸುರಂಗ ಮಾರ್ಗದ ಮಾತು
#WATCH | Chennai: Tamil Nadu BJP president K Annamalai says, " I think he (Revanth Reddy) is trying to compete regarding who is the superstar in Telangana, he trying to show he is superstar than Allu Arjun...right now also he is acting in Congress, he is the main actor in… pic.twitter.com/zjqPDj5BCY
— ANI (@ANI) December 24, 2024
ಅಲ್ಲು ಅರ್ಜುನ್ಗೆ ಅಂತಹ ಉದ್ದೇಶವಿದೆಯೇ?
"ಅಲ್ಲು ಅರ್ಜುನ್ ನಿವಾಸಕ್ಕೆ ಬಂದು ಗಲಾಟೆ, ಕಲ್ಲು ತೂರಾಟ ನಡೆಸಿದವರು, ಅವರ (ರೇವಂತ್ ರೆಡ್ಡಿ) ಕ್ಷೇತ್ರದಿಂದ 2-3 ಮಂದಿ ಬಂದಿದ್ದಾರೆ. ಇದು ರಾಜಕೀಯ ಪ್ರೇರಿತವಾಗಿದೆ. ಯಾರನ್ನಾದರೂ ಬಲಿಪಶು ಮಾಡುವುದು ಮತ್ತು ಬೆದರಿಕೆ ಹಾಕುವುದು ತಪ್ಪು. ಕಾಲ್ತುಳಿತ ಉಂಟಾಗಿ ಮಹಿಳೆ ಸಾವನ್ನಪ್ಪಿರುವುದು ವಿಷಾದನೀಯ. ಆದರೆ ಈ ಘಟನೆ ನಡೆಯಬೇಕೆಂದು ಅಲ್ಲು ಅರ್ಜುನ್ಗೆ ಉದ್ದೇಶವಿತ್ತಾ? ಹೀಗಾಗಿ ಅವರನ್ನು ಈ ಪ್ರಕರಣದಲ್ಲಿ ಬಲಿಪಶು ಮಾಡುವುದು ಮತ್ತು ಬೆದರಿಕೆ ಹಾಕುವುದು ಸರಿಯಲ್ಲʼವೆಂದು ಅಣ್ಣಾಮಲೈ ಹೇಳಿದ್ದಾರೆ.
ರಾಜಕೀಯ ಮಾಡುವುದು ಸರಿಯಲ್ಲ!
ಇದೇ ವೇಳೆ ಈ ವಿಚಾರದಲ್ಲಿ ಬಿಜೆಪಿ ಸಂಸದ ಕೆ.ಲಕ್ಷ್ಮಣ್ ಮಾತನಾಡಿ, ತೆಲಂಗಾಣ ಚಿತ್ರರಂಗದ ವಿರುದ್ಧ ರೇವಂತ್ ರೆಡ್ಡಿ ಸರ್ಕಾರಕ್ಕೆ ಏನು ದ್ವೇಷವಿದೆಯೋ ನಮಗೆ ತಿಳಿದಿಲ್ಲ. ಅಲ್ಲು ಅರ್ಜುನ್ ರಾಷ್ಟ್ರ ಪ್ರಶಸ್ತಿ ವಿಜೇತ ನಟ. ಆದರೆ ಅಲ್ಲು ಅರ್ಜುನ್ ನೇರವಾಗಿ ಈ ಪ್ರಕರಣದಲ್ಲಿ ಭಾಗಿಯಾಗಿಲ್ಲ, ಅವರ ವಿರುದ್ಧ 'ಕೊಲೆ ಯತ್ನ' ಪ್ರಕರಣ ದಾಖಲಿಸುವುದು ಅಥವಾ ಠಾಣೆಗೆ ಕರೆಸುವುದು ಸರಿಯಲ್ಲ. ಕಾಂಗ್ರೆಸ್ ಸಚಿವರು ಮತ್ತು ನಾಯಕರು ಈ ರೀತಿಯ ರಾಜಕೀಯ ಮಾಡುತ್ತಿರುವುದು ಸರಿಯಲ್ಲವೆಂದು ಅವರು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್; ಅಸ್ಪೃಶ್ಯತೆ, ಅಸಮಾನತೆ ವಿರುದ್ಧ ಹೋರಾಡಿದ ಸಮಾನತೆಯ ಹರಿಕಾರ!!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.