Nalini Wear Daily new sarees: ಸಾಧಾರಣವಾಗಿ ಮಧ್ಯಮ ವರ್ಗದ ಕುಟುಂಬಗಳಲ್ಲಿ ಹೆಂಗಸರು 30 ಸೀರೆಗಳಿದ್ದರೆ ಮನೆಯಲ್ಲಿ ಗಂಡಸರು 300 ಸೀರೆಗಳನ್ನು ಖರೀದಿಸಿ ಸಂಗ್ರಹಿಸಿಟ್ಟಂತೆ ಮಾತನಾಡುತ್ತಾರೆ. ಇದನ್ನು ಕೇಳುವ ಮಹಿಳೆಯರೂ ನಾವೇ ಸೀರೆಯನ್ನು ಹೆಚ್ಚು ಉಡುತ್ತೇವೆ ಎಂದು ಭಾವಿಸಿಕೊಳ್ಳುತ್ತೇವೆ.. ಆದರೆ ಇದೆಲ್ಲವನ್ನೂ ಮೀರಿಸುವಂತೆ ನಟಿ ನಳಿನಿ ಅವರು ದಿನಕ್ಕೆ ಒಂದು ಸೀರೆ, ಒಮ್ಮೆ ಉಟ್ಟ ಸೀರೆಯನ್ನು ಮತ್ತೆಂದು ಉಡಲ್ಲ ಎಂದು ಹೇಳಿರುವುದು ನಿಜವಾದ ಹೈಲೈಟ್ ಆಗಿದೆ..
ಕೆಲವು ಸೆಲೆಬ್ರಿಟಿಗಳು, ಮಹಿಳೆಯರು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದಾಗ ತಮ್ಮ ಬಳಿ ಐದು ಸಾವಿರ ಸೀರೆಗಳಿವೆ.. ಪ್ರತಿ ತಿಂಗಳು 5 ಸೀರೆ.. ಹತ್ತು ಸೀರೆ ಖರೀದಿಸುತ್ತೇವೆ ಎಂದು ಹೇಳುವವರನ್ನು ಮೀರಿಸಿದ್ದಾರೆ..
ಇದನ್ನೂ ಓದಿ-ಡ್ರೈವಿಂಗ್ ಲೈಸನ್ಸ್ ಇಲ್ಲದೆಯೂ ಈ ಸ್ಕೂಟರ್ ಗಳನ್ನು ಓಡಿಸಬಹುದು: ಹೇಗ್ ಗೊತ್ತಾ...!
ನಟಿ ನಳಿನಿ 1980 ರಲ್ಲಿ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರು. ಆದರೆ ಈ ಚಿತ್ರದಲ್ಲಿ ನಳಿನಿ ನಾಯಕಿಯಾಗಿ ನಟಿಸಿರಲಿಲ್ಲ. ಇದಾದ ನಂತರ ತೆರೆಕಂಡ ಆರ್ಮಿ ವೀರನ್ ಚಿತ್ರದಲ್ಲಿ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ನಂತರ, ಅವರು ಹಲವು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದರು.
ಅನೇಕ ಚಿತ್ರದಲ್ಲಿ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ ನಳಿನಿ, ನಟ ರಾಮರಾಜನ್ ಅವರನ್ನು ಪ್ರೀತಿಸಿ 1987 ರಲ್ಲಿ ವಿವಾಹವಾದರು, ನಂತರ ಚಿತ್ರರಂಗದಿಂದ ಸಂಪೂರ್ಣವಾಗಿ ನಿವೃತ್ತರಾದರು. ನಳಿನಿ-ರಾಮರಾಜನ್ಗೆ ಅರುಣಾ-ಅರುಣ್ ಅವಳಿ ಮಕ್ಕಳಿದ್ದರು, ಆದರೆ ಅವರ ಪತಿ ರಾಮರಾಜನ್ನೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ, ನಳಿನಿ ಅವರಿಗೆ ವಿಚ್ಛೇದನ ನೀಡಿದರು. ಬೇರೆಯಾಗಿದ್ದರೂ ಇಬ್ಬರ ನಡುವಿನ ತಿಳುವಳಿಕೆ ಮತ್ತು ಸ್ನೇಹ ತುಂಬಾ ಚೆನ್ನಾಗಿದೆ ಎಂದು ನಳಿನಿ ಹಲವು ಸಂದರ್ಶನಗಳಲ್ಲಿ ಹೇಳಿದ್ದಾರೆ. ತನ್ನ ಪತಿ ರಾಮರಾಜನನ್ನು ಈಗಲೂ ಪ್ರೀತಿಸುತ್ತಿದ್ದೇನೆ ಎಂದೂ ಹೇಳಿದ್ದಾರೆ ನಟಿ..
ಇದನ್ನೂ ಓದಿ-ಮಂಜಣ್ಣನ ತಲೆಗೆ ಬಾಟಲಿಯಿಂದ ಹೊಡೆದ ಮೋಕ್ಷಿತಾ.! ರಾತ್ರೋ ರಾತ್ರಿ ಮನೆಯಿಂದ ಔಟ್?
ನಳಿನಿ, ನಿಷ್ಠುರ ನಟಿ, ಕಾಲಕಾಲಕ್ಕೆ ಕೆಲವು ಚಲನಚಿತ್ರಗಳಲ್ಲಿ ನಟಿಸಿದ ಅವರು ಈಗ ಧಾರಾವಾಹಿಗಳಲ್ಲಿ ನಟಿಸುವುದನ್ನು ಮುಂದುವರೆಸಿದ್ದಾರೆ. ಪ್ರಸ್ತುತ, ಅವರು ಸನ್ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಮಲ್ಲಿ ಧಾರಾವಾಹಿಯಲ್ಲಿ ಮತ್ತು ಜೀ ತಮಿಳಿನಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಯೊಂದರಲ್ಲಿ ನಟಿಸುತ್ತಿದ್ದಾರೆ.
ಇತ್ತೀಚಿಗೆ ನೀಡಿದ ಸಂದರ್ಶನದಲ್ಲಿ ನಳಿನಿ ತಾನು ಪ್ರತಿದಿನ ಹೊಸ ಸೀರೆಯನ್ನು ಮಾತ್ರ ಉಡುತ್ತೇನೆ ಎಂದು ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು "ನಾನು ಹೊಸ ಸೀರೆ ಉಡದೇ ಹೊರಹೋಗುವುದಿಲ್ಲ.. ಒಮ್ಮೆ ಉಟ್ಟ ಸೀರೆಯನ್ನ ಮತ್ತೆಂದೂ ಉಡೋದಿಲ್ಲ.. ನನ್ನ ಸೀರೆಗಳನ್ನು ಇಡಲು ಪ್ರತ್ಯೇಕ ಮನೆ ಇದೆ" ಎಂದು ಹೇಳುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.