ಮ್ಯಾಕ್ಸ್ ’ಕಿಚ್ಚು ಹಚ್ಚುತ್ತೆ, ಮಾಸ್ ಅಂಡ್ ಮ್ಯಾಕ್ಸಿಮಮ್ ಎಂಟರ್ಟೈನ್ಮೆಂಟ್ ಫಿಕ್ಸ್ !

ಇದೀಗ ಮಾಸ್ ಆಗಿ ಮ್ಯಾಕ್ಸಿಮಮ್ ಎಂಟರ್ಟೈನ್ಮೆಂಟ್ ಕೊಡಲು ಮ್ಯಾಕ್ಸ್ ಅವತಾರದಲ್ಲಿ ಕಿಚ್ಚನ ಎಂಟ್ರಿ ಆಗಿದೆ. 

Written by - YASHODHA POOJARI | Last Updated : Dec 25, 2024, 01:38 PM IST
  • ಕಿಚ್ಚನ ಈ ಅವತಾರ ಪ್ರೇಕ್ಷಕರನ್ನು ರಂಜಿಸುವುದು ಪಕ್ಕಾ.
  • ಹಲವು ರೋಚಕ ಟ್ವಿಸ್ಟ್‌ಗಳು ಸಿನಿಮಾದಲ್ಲಿದೆ.
  • ಅರೆ ಘಳಿಗೆಗೂ ಈ ಸಿನಿಮಾ ಬೋರ್ ಹೊಡಿಸುವುದಿಲ್ಲ
ಮ್ಯಾಕ್ಸ್ ’ಕಿಚ್ಚು ಹಚ್ಚುತ್ತೆ, ಮಾಸ್ ಅಂಡ್ ಮ್ಯಾಕ್ಸಿಮಮ್ ಎಂಟರ್ಟೈನ್ಮೆಂಟ್ ಫಿಕ್ಸ್ !  title=

ಬೆಂಗಳೂರು : ಒಂದಲ್ಲ, ಎರಡೂವರೆ ವರ್ಷ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್  ಅವರನ್ನ ಬಿಗ್ ಸ್ಕ್ರೀನ್ ಮೇಲೆ ನೋಡಲು ಫ್ಯಾನ್ಸ್ ನಿದ್ದೆಬಿಟ್ಟು ಕಾದಿದ್ದಾರೆ. ಮ್ಯಾಕ್ಸ್ ಸಿನಿಮಾ ರಿಲೀಸ್ ಯಾವಾಗ ಅನ್ನೋ ಪ್ರಶ್ನೆ ಕಿಚ್ಚನ ಅಭಿಮಾನಿಗಳಿಂದ ಕೇಳಿ ಬರುತ್ತಲೇ ಇತ್ತು. ಇದೀಗ ಮಾಸ್ ಆಗಿ ಮ್ಯಾಕ್ಸಿಮಮ್ ಎಂಟರ್ಟೈನ್ಮೆಂಟ್ ಕೊಡಲು ಮ್ಯಾಕ್ಸ್ ಅವತಾರದಲ್ಲಿ ಕಿಚ್ಚನ ಎಂಟ್ರಿ ಆಗಿದೆ. 

ಕಿಚ್ಚನ ಈ ಅವತಾರ ಪ್ರೇಕ್ಷಕರನ್ನು ರಂಜಿಸುವುದು ಪಕ್ಕಾ. ಮಿನಿಸ್ಟರ್ ಮಕ್ಕಳ ಕಾಟಕ್ಕೆ  ಆ ಪ್ರದೇಶದ ಜನ ಮತ್ತು ಪೊಲೀಸ್ ಸಿಬ್ಬಂದಿ ಬಳಲಿ ಬೆಂಡಾಗಿ ಹೋಗಿರುತ್ತಾರೆ. ಆ  ಪೊಲೀಸ್ ಸ್ಟೇಷನ್ ಗೆ ಅರ್ಜುನ್ ಮಹಾಕ್ಷಯ್ (ಮ್ಯಾಕ್ಸ್) ವರ್ಗಾವಣೆ ಆಗಿ ಬರುತ್ತಾರೆ. ಬರುವಾಗಲೇ ಮಿನಿಸ್ಟರ್ ಮಕ್ಕಳ ದುರ್ವರ್ತನೆ ಕಂಡು  ಅವರನ್ನ ಮ್ಯಾಕ್ಸ್ (ಸುದೀಪ್ ) ಅರೆಸ್ಟ್ ಮಾಡುತ್ತಾರೆ. ಹೀಗೇ ಅರೆಸ್ಟ್ ಆದ ಬಳಿಕ ಸ್ಟೇಷನ್ ಒಳಗೆ ಮಿನಿಸ್ಟರ್ ಮಕ್ಕಳ ಮರ್ಡರ್  ಆಗುತ್ತದೆ. ಮರ್ಡರ್ ಮುಚ್ಚಿ ಹಾಕಲು ಆರಕ್ಷಕರು ಮಾಡೋ ಸಖತ್ ಪ್ಲಾನ್ ಸೀಟಿನ ಅಂಚಿನಲ್ಲಿ ಕೂರಿಸುತ್ತದೆ.

ಇದನ್ನೂ ಓದಿ : ಶಿವರಾಜ್ ಕುಮಾರ್ ಗೆ ಯಶಸ್ವಿ ಶಸ್ತ್ರ ಚಿಕಿತ್ಸೆ :ಈ ಆಪರೇಷನ್ ತೆಗೆದುಕೊಂಡ ಗಂಟೆಗಳೆಷ್ಟು?
  
ಹಲವು ರೋಚಕ ಟ್ವಿಸ್ಟ್‌ಗಳು ಸಿನಿಮಾದಲ್ಲಿದೆ. ಅರೆ ಘಳಿಗೆಗೂ ಈ ಸಿನಿಮಾ ಬೋರ್ ಹೊಡಿಸುವುದಿಲ್ಲ. ಸ್ಟಾರ್ಟಿಂಗ್ 10ನಿಮಿಷ ಅರ್ಥ ಆಗೋದು ಕಷ್ಟ. ಕಾಮಿಡಿ, ಲವ್ ಗೆ ಜಾಗ ಇಲ್ಲವೇ ಇಲ್ಲ. ಕಂಪ್ಲೀಟ್ ಸೀರಿಯಸ್  ಆಗಿ ಸಿನಿಮಾ ಸಾಗಿದರೂ ಖುಷಿ ಕೊಡುತ್ತೆ ಸಿನಿಮಾ. ಕಿಚ್ಚನ ಖಡಕ್ ಡೈಲಾಗ್ ಕೇಳೋದೇ ಮಜಾ.  ಉಗ್ರಂ ಮಂಜುಗೆ ಕಿಚ್ಚನ ಜೊತೆ ಉತ್ತಮ ಸ್ಕ್ರೀನ್ ಸ್ಪೇಸ್ ಸಿಕ್ಕಿದೆ.ಕ್ರೈಮ್ ಇನ್ಸ್‌ಪೆಕ್ಟರ್ ಪಾತ್ರ ಮಾಡಿರೋ ವರಲಕ್ಷ್ಮಿ ಶರತ್‌ಕುಮಾರ್ ಅವರ ನಟನೆ ಮನ  ಮುಟ್ಟುತ್ತದೆ. 

ನಿರ್ದೇಶಕ ವಿಜಯ್ ಕಾರ್ತಿಕೇಯ ಹೆಣೆದ ಕಥೆಯಲ್ಲಿ ಥ್ರಿಲ್ ನೀಡುವ ಗುಣ ಇದೆ. ಸುಕೃತಾ ವಾಗ್ಳೆ, ಸಂಯುಕ್ತಾ ಹೊರನಾಡು, ವಿಜಯ್ ಚಂಡೂರು, ಉಗ್ರಂ ಮಂಜು ಮುಂತಾದವರು ಸುದೀಪ್‌ಗೆ ಸಾಥ್ ನೀಡಿದ್ದಾರೆ.ಒಂದೇ ರಾತ್ರಿಯ ಕಥೆ ಆದ್ದರಿಂದ ಚಿತ್ರಕಥೆ ಚುರುಕಾಗಿದೆ.ಇನ್ನೂ ಹೆಚ್ಚಿನ ಆ್ಯಕ್ಷನ್ ಸೀನ್ಸ್ ನೋಡಲು ಸೆಕೆಂಡ್‌ಹಾಫ್‌ಗೆ ಕಾಯಬೇಕು. ಸುದೀಪ್ ಅವರ ಮಾಸ್ ಲುಕ್ ಇಷ್ಟಪಡುವವರಿಗೆ ಈ ಚಿತ್ರದಲ್ಲಿದೆ ಮನರಂಜನೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಸುನಿಲ್, ಉಗ್ರಂ ಮಂಜು, ಶರತ್ ಲೋಹಿತಾಶ್ವ, ಸುಕೃತಾ ವಾಗ್ಳೆ, ವರಲಕ್ಷ್ಮಿ ಶರತ್ ಕುಮಾರ್ , ಸಂಯುಕ್ತಾ ಹೊರನಾಡು, ಪ್ರಮೋದ್ ಶೆಟ್ಟಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಿದ ‘ಮ್ಯಾಕ್ಸ್’ ಸಿನಿಮಾಗೆ ಕಲೈಪುಲಿ ಎಸ್ . ಧಾನು ಅವರು ಬಂಡವಾಳ ಹೂಡಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News