White Hair Problem: ಪ್ರಸ್ತುತ ಯುಗದಲ್ಲಿ ನೆಗಡಿ, ಚಳಿ ಎಂಬಂತೆ ಕೂದಲು ಬಿಳಿಯಾಗುವುದು ಸಾಮಾನ್ಯವಾಗಿದೆ. 20ರಿಂದ 25ರ ವಯೋಮಾನದ ಯುವಕ-ಯುವತಿಯರೂ ಸಹ ಈ ಸಮಸ್ಯೆ ಎದುರಿಸುತ್ತಿದ್ದಾರೆ. ಇದಕ್ಕೆ ಅನುವಂಶಿಕ ಕಾರಣಗಳನ್ನು ಮಾತ್ರ ಹೇಳಲಾಗುವುದಿಲ್ಲ, ಕೆಲವೊಮ್ಮೆ ಬದಲಾಗುತ್ತಿರುವ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿ ಕೂಡ ಕೂದಲು ಬಿಳಿಯಾಗಲು ಕಾರಣವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ದುಬಾರಿ ಉತ್ಪನ್ನಗಳನ್ನು ಬಳಸುವ ಬದಲು ಮನೆಮದ್ದುಗಳನ್ನು ಬಳಸಿ ಕೂದಲನ್ನು ಕಪ್ಪಾಗಿಸಬಹುದು.
ನೈಸರ್ಗಿಕವಾಗಿ ಬಿಳಿ ಕೂದಲನ್ನು ಕಪ್ಪಾಗಿಸುವುದು ಹೇಗೆ?
1. ಆಮ್ಲಾ ಪೌಡರ್ :
ಒಂದು ಕಪ್ ಆಮ್ಲಾ ಪೌಡರ್ ಅನ್ನು ಕಬ್ಬಿಣದ ಪಾತ್ರೆಯಲ್ಲಿ ಬೂದಿಯಾಗುವವರೆಗೆ ಬಿಸಿ ಮಾಡಿ. ನಂತರ 500 ಮಿಲಿ ತೆಂಗಿನ ಎಣ್ಣೆಯನ್ನು ಹಾಕಿ 20 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬಿಸಿಯಾಗಲು ಬೀಡಿ. ನಂತರ ಅದನ್ನು ತಣ್ಣಗಾಗಲು ಬಿಡಿ. 24 ಗಂಟೆಗಳ ಕಾಲ ಹಾಗೆಯೇ ಬೀಡಿ. ಸಿದ್ಧಪಡಿಸಿದ ಎಣ್ಣೆಯನ್ನು ಗಾಳಿಯಾಡದ ಬಾಟಲಿಯಲ್ಲಿ ಸಂಗ್ರಹಿಸಿ ಮತ್ತು ವಾರಕ್ಕೆ ಎರಡು ಬಾರಿ ಹಚ್ಚಿ ಕೂದಲು ಮಸಾಜ್ ಮಾಡಿ.
2. ಕರಿಬೇವಿನ ಎಲೆಗಳು :
ಕರಿಬೇವಿನ ಎಲೆಗಳನ್ನು ತೆಗೆದುಕೊಂಡು ಅವುಗಳನ್ನು 2 ಚಮಚ ಆಮ್ಲಾ ಪುಡಿ ಮತ್ತು 2 ಚಮಚ ಬ್ರಾಹ್ಮಿ ಪುಡಿಯೊಂದಿಗೆ ರುಬ್ಬಿಕೊಳ್ಳಿ. ಈ ಹೇರ್ ಮಾಸ್ಕ್ ಅನ್ನು ಕೂದಲಿನ ಬೇರುಗಳ ತನಕ ಅನ್ವಯಿಸಿ. ಒಂದು ಗಂಟೆಗಳ ಕಾಲ ಹಾಗೆ ಒಣಗಲು ಬೀಡಿ. ನಂತರ ಹರ್ಬಲ್ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ.
ಇದನ್ನೂ ಓದಿ- ಡ್ಯಾಂಡ್ರಫ್ ಮುಕ್ತ, ಉದ್ದವಾದ ಕೂದಲಿಗಾಗಿ ವಾರದಲ್ಲಿ ಎರಡು ದಿನ ಈ ಎಣ್ಣೆಯನ್ನು ಕೂದಲಿಗೆ ಹಚ್ಚಿ
3. ಕಪ್ಪು ಚಹಾ:
ಬ್ಲ್ಯಾಕ್ ಟೀ ಮೂಲಕವೂ ನೀವು ಬಿಳಿ ಕೂದಲನ್ನು ಕಪ್ಪಾಗಿಸಬಹುದು. ನೀವು ಶಾಂಪೂವನ್ನು ಕೂದಲಿಗೆ ಹಚ್ಚುವ ಮೊದಲು ಅದಕ್ಕೆ 200 ಮಿಲಿ ಕಪ್ಪು ಚಹಾವನ್ನು ಮಿಶ್ರಣ ಮಾಡಿ ಬಳಸಿ. ಇದರಿಂದಲೂ ಬಿಳಿ ಕೂದಲ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.
4. ತೆಂಗಿನ ಎಣ್ಣೆ ಮತ್ತು ನಿಂಬೆ :
ತೆಂಗಿನೆಣ್ಣೆ ಮತ್ತು ನಿಂಬೆ ರಸವನ್ನು ಒಟ್ಟಿಗೆ ಬೆರೆಸಿದರೆ, ಅದು ಕೂದಲನ್ನು ಕಪ್ಪಾಗಿಸಲು ಸಹಾಯ ಮಾಡುತ್ತದೆ. ಏಕೆಂದರೆ ಇದು ರಾಸಾಯನಿಕ ಕ್ರಿಯೆಯನ್ನು ಉಂಟುಮಾಡುತ್ತದೆ, ಇದರಿಂದಾಗಿ ಕೂದಲು ನೈಸರ್ಗಿಕವಾಗಿ ಕಪ್ಪಾಗುತ್ತದೆ.
ಇದನ್ನೂ ಓದಿ- ಎಣ್ಣೆ ಹಚ್ಚಿದ ನಂತರ ನಿಮ್ಮ ಕೂದಲು ಉದುರುತ್ತದೆಯೇ? ಅದಕ್ಕೆ ಕಾರಣ ತಿಳಿಯಿರಿ
5. ಗೋರಂಟಿ ಮತ್ತು ನೀಲ್ :
ಅನಾದಿ ಕಾಲದಿಂದಲೂ ಗೋರಂಟಿ ಮತ್ತು ನೀಲ್ ಅನ್ನು ನೈಸರ್ಗಿಕ ಬಣ್ಣಗಳಾಗಿ ಬಳಸಲಾಗುತ್ತದೆ. ಈ ಎರಡು ವಸ್ತುಗಳು ಮಿಶ್ರಣವಾಗಿದ್ದರೆ, ಅದು ನೀಲಿ-ಕಪ್ಪು ಬಣ್ಣವನ್ನು ಸೃಷ್ಟಿಸುತ್ತದೆ ಮತ್ತು ಕೂದಲನ್ನು ಕಪ್ಪಾಗಿಸಲು ಸಹಾಯ ಮಾಡುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.