SHOCKING Viral Video: ಸ್ಕೂಟರ್, ಬೈಕ್ ಮತ್ತು ಇತರ ವಾಹನಗಳನ್ನು ಚಲಾಯಿಸುವಾಗ ಅನೇಕರು ಮೊಬೈಲ್ ನೋಡುತ್ತಾರೆ. ಆದರೆ ಕೆಲವೊಂದು ಸರಿ ನೀವು ಮಾಡುವ ಈ ತಪ್ಪಿನಿಂದ ಜೀವಕ್ಕೆ ಕುತ್ತು ಬರಬಹುದು. ಸಣ್ಣ ಅಜಾಗರೂಕತೆಯು ಸಹ ಅಪಘಾತಕ್ಕೆ ಕಾರಣವಾಗುತ್ತದೆ. ಇದಕ್ಕೆ ನಿದರ್ಶನದಂತಿದೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋ...
ಹೌದು, ರಸ್ತೆಯಲ್ಲಿ ಮೊಬೈಲ್ ನೋಡುತ್ತಾ ಸ್ಕೂಟರ್ ಚಾಲನೆ ಮಾಡುತ್ತಿದ್ದ ಯುವಕನೊಬ್ಬ ಕಾರಿಗೆ ಮುಖಾಮುಖಿ ಡಿಕ್ಕಿ ಹೊಡೆಸಿದ್ದಾನೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ. ವೈರಲ್ ಆಗಿರುವ ಈ ವಿಡಿಯೋದಲ್ಲಿ ಮೊಬೈಲ್ ನೋಡುತ್ತಾ ಸ್ಕೂಟರ್ ಓಡಿಸಿಕೊಂಡು ಬಂದ ಯುವಕನೊಬ್ಬ ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆಸಿದ್ದಾನೆ. ಈ ಘಟನೆಯು ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೊಬೈಲ್ನಲ್ಲಿ ಮಗ್ನನಾಗಿ ಸ್ಕೂಟರ್ ಓಡಿಸಿದ್ದರಿಂದಲೇ ಈ ಅಪಘಾತ ಸಂಭವಸಿದೆ.
ಇದನ್ನೂ ಓದಿ: ಕಪ್ಪು ಮಗು ಹುಟ್ಟಿದ್ದಕ್ಕೆ ಹೆಂಡತಿಯ ಮೇಲೆ ಅನುಮಾನ: ನನಗೆ ಡೈವೋರ್ಸ್ ಬೇಕೆಂದ ಗಂಡ..!!
Don't look at ur phone while Driving pic.twitter.com/SvN0LLmLgE
— Ghar Ke Kalesh (@gharkekalesh) November 14, 2024
ಇಂದು ಅನೇಕರು ಬೈಕ್ ಮತ್ತು ಸ್ಕೂಟರ್ ಓಡಿಸುವ ವೇಳೆ ಮೊಬೈಲ್ ನೋಡಿಕೊಂಡು ಬರುತ್ತಿರುತ್ತಾರೆ. ಎದುರಿಗೆ ಮತ್ತು ರಸ್ತೆಯಲ್ಲಿ ಯಾವ ವಾಹನ ಬರುತ್ತಿದೆ, ಜನರು ಇದ್ದಾರೆ ಅನ್ನೋ ಪ್ರಜ್ಞೆಯೇ ಇರುವುದಿಲ್ಲ. ಹೀಗೆ ಮೊಬೈಲ್ ನೋಡಿಕೊಂಡು ವಾಹನ ಚಲಾಯಿಸಿಕೊಂಡು ಬರುವ ಅವರು ಬೇರೆಯವರಿಗೆ ತೊಂದರೆ ನೀಡುತ್ತಾರೆ.
ಅಂದಹಾಗೆ ಈ ವಿಡಿಯೋವನ್ನು @gharkekalesh ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಶೇರ್ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಬಹುತೇಕರು ಮೊಬೈಲ್ ನೋಡುತ್ತಾ ಸ್ಕೂಟರ್ ನೋಡಿಕೊಂಡ ಬಂದು ಕಾರಿಗೆ ಡಿಕ್ಕಿ ಹೊಡೆಸಿದ ಯುವಕನಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ರೀತಿ ಅಜಾಗರೂಕತೆಯಿಂದ ವಾಹನ ಓಡಿಸುವ ಮುನ್ನ ಎಚ್ಚರಿಕೆ ಅಗತ್ಯವೆಂದು ಹೇಳಿದ್ದಾರೆ.
ಇದನ್ನೂ ಓದಿ: ಕರೋನಾ ಬಳಿಕ ಇದೀಗ ಕವಾಸಕಿ ನೊರೊವೈರಸ್ ಸೋಂಕಿನ ಅಪಾಯ !ಹೀಗಿರಲಿದೆ ಈ ರೋಗದ ಲಕ್ಷಣಗಳು
ಬೈಕ್, ಸ್ಕೂಟರ್ ಮತ್ತು ಇನ್ನಿತರ ವಾಹನಗಳನ್ನು ಓಡಿಸುವಾಗ ಯಾವುದೇ ಕಾರಣಕ್ಕೂ ಮೊಬೈಲ್ ನೋಡಬಾರದು. ಒಂದು ವೇಳೆ ಮೊಬೈಲ್ ನೋಡಿಕೊಂಡು ವಾಹನ ಚಲಾಯಿಸಿದರೆ ಅಪಾಯವೇ ಹೆಚ್ಚು. ಹೀಗಾಗಿ ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು ಅಂತಾ ಅನೇಕರು ಸಲಹೆ ನೀಡಿ ಕಾಮೆಂಟ್ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.