ಸ್ಕೂಲ್‌.. ಕಾಲೇಜು.. ಆಫೀಸ್‌ ಲವ್‌ ಯಾವುದು ಬೆಸ್ಟ್‌ ಲವ್‌ ಗೊತ್ತಾ..?

Valentine Day: ಕ್ರಶ್‌ ಇದ್ದೋರು ಕ್ರಶ್‌ ಆಗಿಯೇ ಉಳಿದು SSLC ಮುಗಿಸಿ ಮುಂದೇ PUC ಗೆ ಹೋಗಿಬಿಡ್ತೀವಿ.. ಇಲ್ಲಿಂದ ನೋಡಿ ಅಸಲಿ ಕಥೆ ಶುರುವಾಗೋದು... ಯವ್ವನದ ತುಳಿತದಲ್ಲಿ ಹೊಸ ಹುಡುಗಿ ಎಂಟ್ರಿ ಆಗಿರುತ್ತಾಳೆ.. ಕೆಲವೊಬ್ಬರಿಗೆ ಸ್ನೇಹದ ಹೆಸರಲ್ಲಿ ಮೊದಲು ಆರಂಭ ಆದ್ರೂ ಸಲಿಗೆ ಜಾಸ್ತಿಯಾಗಿ ಲವ್‌ ಆಗಿಬಿಡುತ್ತೆ. 

Written by - MALLIKARJUN PATIL | Edited by - Yashaswini V | Last Updated : Feb 14, 2025, 03:24 PM IST
  • ಎಲ್ಲರಿಗೂ ಆಗುವಂತೆ ಸ್ಕೂಲ್‌ ಲೈಫ್‌ ಅಲ್ಲಿ ಒಂದು ಕ್ರಶ್‌ ಖಂಡಿತ ಇದ್ದೇ ಇರುತ್ತೆ..
  • ಆದ್ರೆ ಲವ್‌ ಮಾಡ್ತೀನಿ ಅಂತ ಹೇಳೋ ಧೈರ್ಯವಾಗಲಿ.. ಅವಳ ಮುಂದೆ ಹೋಗಿ ಮಾತನಾಡುವ ಧೈರ್ಯವಾಗಲಿ ಇರೋದಿಲ್ಲ..
  • ಇತ್ತೀಚೆಗೆ ಮೊಬೈಲ್‌ ಬಂದು ಎಲ್ಲವೂ....
ಸ್ಕೂಲ್‌.. ಕಾಲೇಜು.. ಆಫೀಸ್‌ ಲವ್‌ ಯಾವುದು ಬೆಸ್ಟ್‌ ಲವ್‌ ಗೊತ್ತಾ..? title=

Valentine Day: ಪ್ರೀತಿ ಪ್ರೇಮ ಪುಸ್ತಕದ ಬದನೆಕಾಯಿ ಅಂತ ಉಪ್ಪಿ ಸರ್‌ ಹೇಳಿದ್ರು.. ಆದ್ರೆ ಲವ್‌ ಮಾಡೋರು ಕಮ್ಮಿ ಆಗಿಲ್ಲ.. ಲವರ್‌ಗಳೂ ಕಡಿಮೆ ಆಗಿಲ್ಲ.. ಆದ್ರೆ ಸ್ಕೂಲ್‌ನಲ್ಲಿ ಒಬ್ಬಳು.. ಕಾಲೇಜ್‌ ಒಳೆಗೆ ಒಬ್ಬಳು.. ಏರಿಯಾದಲ್ಲಿ ಒಬ್ಬಳು.. ಆಫೀಸ್‌ಲ್ಲಿ ಒಬ್ಬಳು ಹೀಗೆ ಒಂದೊಂದು ಬ್ರೇಕ್‌ಅಪ್‌ ಬಳಿಕ ಒಂದೊಂದು ಲವ್‌ ಆಗ್ತಾನೆ ಇದ್ರೆ ಅದಕ್ಕೆ ಏನ್‌ ಅನಬೇಕು ಅನ್ನೋದು ಈಗಿನ ಯುವಜನತೆಗೆ ಮುಂದೆ ಇರೋ ಅತಿದೊಡ್ಡ ಪ್ರಶ್ನೆ...!

ಎಲ್ಲರಿಗೂ ಆಗುವಂತೆ ಸ್ಕೂಲ್‌ ಲೈಫ್‌ ಅಲ್ಲಿ ಒಂದು ಕ್ರಶ್‌ ಖಂಡಿತ ಇದ್ದೇ ಇರುತ್ತೆ.. ಆದ್ರೆ ಲವ್‌ ಮಾಡ್ತೀನಿ ಅಂತ ಹೇಳೋ ಧೈರ್ಯವಾಗಲಿ.. ಅವಳ ಮುಂದೆ ಹೋಗಿ ಮಾತನಾಡುವ ಧೈರ್ಯವಾಗಲಿ ಇರೋದಿಲ್ಲ.. ಇತ್ತೀಚೆಗೆ ಮೊಬೈಲ್‌ ಬಂದು ಎಲ್ಲವೂ ಆಗ್ತೀದೆ ಆದ್ರೆ 90s ಬಾಯ್ಸ್‌ಗೆ ಇದು ಕಷ್ಟ ಆಗ್ತಿತ್ತು.. ಕ್ರಶ್‌ ಇದ್ದೋರು ಕ್ರಶ್‌ ಆಗಿಯೇ ಉಳಿದು SSLC ಮುಗಿಸಿ ಮುಂದೇ PUC ಗೆ ಹೋಗಿಬಿಡ್ತೀವಿ.. ಇಲ್ಲಿಂದ ನೋಡಿ ಅಸಲಿ ಕಥೆ ಶುರುವಾಗೋದು... ಯವ್ವನದ ತುಳಿತದಲ್ಲಿ ಹೊಸ ಹುಡುಗಿ ಎಂಟ್ರಿ ಆಗಿರುತ್ತಾಳೆ.. ಕೆಲವೊಬ್ಬರಿಗೆ ಸ್ನೇಹದ ಹೆಸರಲ್ಲಿ ಮೊದಲು ಆರಂಭ ಆದ್ರೂ ಸಲಿಗೆ ಜಾಸ್ತಿಯಾಗಿ ಲವ್‌ ಆಗಿಬಿಡುತ್ತೆ. ಇನ್ನೂ ಕೆಲವರು ಕಾಡಿ ಬೇಡಿ ಲವ್‌ ಮಾಡಿರ್ತಾರೆ.. ಲವ್‌ ಮಾಡೋಕೆ ಹೋಗಿ ದೊಡ್ಡ ದೊಡ್ಡ ಸರ್ಕಸ್‌ ಮಾಡೋದೂ ಕೂಡ ಈ PUC ಲೆವೆಲ್‌ ಅಲ್ಲಿ ಜಾಸ್ತಿ.. 

ಅಂತೂ ಇಂತೂ ಲವ್‌ ಮಾಡಿ ಹುಡಗಿ ಜೊತೆ ಸ್ವಲ್ಪ ನಾಚಿಕೆಯಲ್ಲೇ ಮಾತನಾಡಿ, ರಾತ್ರಿಯಿಡೀ ಅದೆ ಗುಂಗಲ್ಲಿ ನಿದ್ದೆ ಕೂಡ ಮಾಡದೇ ಬೆಳಗ್ಗೆ ಎದ್ದು ನೀಟಾಗಿ ರೆಡಿ ಆಗಿ ಕಾಲೇಜಿಗೆ ಬ್ಯಾಗ್‌ಹಿಡಿದು ಅವಳ ನೆನಪಲ್ಲೇ ಬಸ್‌ ಹತ್ತಿ ಹೋಗ್ತಾರೆ. ಲವ್‌ ಮಾಡಿದೀನಿ ಅಂದ್ರೆ ಕೇಳಬೇಕಾ ಹುಡುಗರ ಗ್ರೂಪ್‌ ಅಲ್ಲಿ ಆಗ ಲವರ್‌ ಬಾಯ್‌ ಹವಾ ಜೋರಾಗಿಯೇ ಇರುತ್ತೆ. ಸ್ನೇಹಿತರಿಗೆಲ್ಲ ಲವ್‌ ಸ್ಟೋರಿ ಹೇಳೋದೇ ದೊಡ್ಡ ಖುಷಿ. ಚಿಕ್ಕವರಿಂದ ಹಿಡಿದು ಇಲ್ಲಿವರೆಗೆ ಆಗದ ಅದೆನೋ ಹೊಸ ಚೈತನ್ಯ ನಮ್ಮ ಒಳಗೆ ಲವ್‌ ಟೈಮ್‌ನಲ್ಲಿ ಆಗುತ್ತೆ. ಇದೆಲ್ಲದರ ಜೊತೆಗೆ ನಾವು ನಮಗೆ ಸ್ಪಲ್ಪ ಜಾಸ್ತಿನೇ ಚನ್ನಾಗಿ ಕಾಣೋಕೆ ಶುರು ಮಾಡ್ತೀವಿ. ಲವರ್‌ ಮಾತಾಡೋ ಮಾತುಗಳಿಂದಲೇ ಹೊಟ್ಟೆ ತುಂಬಿ ಊಟ ಕೂಡ ಅರ್ಧ ಆಗಿರುತ್ತೆ. ಪ್ರೇಂಡ್ಸ್‌ ಎಲ್ಲೇ ಕರೆದರೂ ಹೋಗೋಕೂ ಆಗ್ತಿರಲ್ಲ. ಹೀಗೆ ಕಾಲೇಜು ಭೇಟಿ, ಲೈಬ್ರರಿ ಮಾತು.. ಲವ್‌ ಲೇಟರ್‌.. ಗಸುಗಸು ಪಿಸುಪಿಸು ಅಂತ ಎರಡು ವರ್ಷ ಕಳೆದು ಹೋಗತ್ತೆ.. ಅಲ್ಲಿ ಕೆಲವರು ಡಿಗ್ರಿಗೆ ಅದನ್ನ ಮುಂದುವರೆಸೋಕೆ ರೆಡಿ ಆದ್ರೆ ಇನ್ನೂ ಕೆಲವರು ಎರಡು ವರ್ಷದ ಪ್ರೀತಿಗೆ ಎಳ್ಳುನೀರು ಬಿಟ್ಟು ಮುಂದೆ ಹೋಗ್ತಾರೆ.. ಇನ್ನೂ ಕೆಲ ಹುಡಗಿಯರಂತೂ 18ನೇ ವಯಸ್ಸಿಗೆ ಮದುವೆ ಆಗಿ ಹುಡುಗನಿಗೆ ಟಾಟಾ ಅಂತ ಬೇರೆಯವರನ್ನ ಮದುವೆ ಆಗಿಬಿಡ್ತಾರೆ.. ಹೋಗೋಕು ಮುಂಚೆ ನನಗಿಂತ ನಿನಗೆ ಒಳ್ಳೆ ಹುಡುಗಿ ಸಿಗ್ತಾಳೆ ಬಿಡು ಅಂತ ಉಪದೇಶ ಕೂಡ ಮಾಡಿ ಹೋಗ್ತಾರೆ...

ಇದನ್ನೂ ಓದಿ- Valentine’s Day 2025: ಪ್ರೀತಿ ಪವಿತ್ರ.. ಬ್ರೇಕ್‌ಆಪ್‌ ಅಪವಿತ್ರ.. ಮದುವೆ ಮಕ್ಕಳು.....!

ಇಲ್ಲಿಂದ ಈಗ ಡಿಗ್ರಿ ಕಾಲೇಜು ಲೆಕ್ಕಾ..ಇಲ್ಲಿ ಹೊಸ ಜಾಗ.. ಹೊಸ ಸೆಳೆತ.. ಅದರಲ್ಲೂ ಕಲರ್‌ಫುಲ್‌ ಲೈಫ್‌.. ಒಂದೇ ದಿನದಲ್ಲಿ ನಾಲ್ಕೇದು ಜನರ ಮೇಲೆ ಕ್ರಶ್‌ ಆದ್ರೂ ಆಗಿರತ್ತೆ.. ಆದ್ರೆ ಅದರಲ್ಲಿ ಒಬ್ಬರೂ ಮಾತ್ರ ಜಗತ್ತಿನಲ್ಲೇ ಅತ್ಯಂತ ಸುಂದರವಾಗಿ ಕಾಣಿಸ್ತಾರೆ.. ಕಾಲೇಜು ಅಂದ್ರೆ ಸ್ನೇಹ ಮಾಡೋಕೆ ಜಾಸ್ತಿ ಕಷ್ಟ ಪಡಬೇಕಿಲ್ಲ. ಯಾರದ್ದೋ ನೆಪದಲ್ಲಿ ಲವ್‌ ಮಾಡೋರು ತುಂಬಾ ಬೇಗನೇ ಸ್ನೇಹಿತರಾಗಿಬಿಡ್ತಾರೆ. ಮೊಬೈಲ್‌ ನಂಬರ್‌ ಎಕ್ಸ್‌ಚೆಂಜ್‌ ಆಗಿ ಚಾಟ್‌ ಶುರುವಾಗತ್ತೆ.. ಅವರಿಗೆ ಬೇರೆ ಯಾರು ಲವರ್‌ ಇರಲಿಲ್ಲ ಅಂದ್ರೆ ಚಾಟಿಂಗ್‌ ಮಧ್ಯರಾತ್ರಿವರೆಗೂ ಹೋಗತ್ತೆ.. ಒಂದೇ ಒಂದು ವಾರದಲ್ಲಿ I LOVE YOU ಅಂತ ಮೇಸೆಜ್‌ ಕೂಡ ಬರುತ್ತೆ. ಸಣ್ಣ ಪುಟ್ಟ ಕಂಡೀಷನ್‌ ಹಾಕಿ ಲವ್‌ ಮಾಡೋಕೆ ಇಬ್ಬರು ಒಪ್ಪಿಕೊಂಡು ಬಿಡ್ತಾರೆ. 

ಕಾಲೇಜು ಲವ್‌ ಅಂದ್ರೆ ಕೇಳಬೇಕಾ ಹೇಳಿ.. ಇಲ್ಲಿ ಸುತ್ತಾಟವೂ ಜಾಸ್ತಿ ಇರುತ್ತೆ, ಅವರು ನಮ್ಮವರು ಮಾತ್ರ ನನ್ನ ಜೊತೆಗೆ ಮಾತಾಡಬೇಕು ಅನ್ನೋ ಆಸೆಯೂ ಜಾಸ್ತಿ.. ಬೇರೆ ಅವರ ಜೊತೆಗೆ ಮಾತನಾಡಿದಾಗ ದೊಡ್ಡ ಜಗಳವೇ ನಡೆದು ಹೋಗತ್ತೆ. ಆಸೆಗೆ ಒಂದು ಟೈಂ ಅಂತ ಆಗಾಗ ಪಾರ್ಕ್‌ ದರ್ಶನ ಕೂಡ ಆಗ್ತಾ ಇರುತ್ತೆ.. ಕಾಲೇಜಿಗೆ ಚಕ್ಕರ್‌ ಹಾಕಿ ಸಿನಿಮಾ, ಸುತ್ತಾಟ ಅಂತ ಜಾಲಿ ಜಾಲಿ ಆಗಿ ಸುತ್ತಾಡ್ತಾ ಇರ್ತೀವಿ ಅಷ್ಟೇ.. ಹೇಗೆ ಮೂರು ವರ್ಷ ಮುಗಿತು ಗೊತ್ತಾಗಲ್ಲ. ಇಲ್ಲಿ ಕೆಲವರು ನಿಯತ್ತಾಗಿ ಒಬ್ಬರ ಜೊತೆಗೆ ಇದ್ದು ಪ್ರೀತಿಗೆ ಗೌರವ ಕೊಟ್ರೆ ಇನ್ನೂ ಕೆಲವರು ಬೇರೆಬೇರೆ ಆಸೆಗೆ ಪ್ರೀತಿಗೆ ಎಳ್ಳುನೀರು ಬಿಟ್ಟು ಮುಂದೆ ಹೋಗ್ತಾರೆ. ಈ ಸಮಯದಲ್ಲಿ ಹುಡುಗಿ ಮನೆಯಲ್ಲಿ ಮದುವೆ ಒತ್ತಾಯ ಮಾಡ್ತಾರೆ. ಲವ್‌ ಮಾಡೋ ಹುಡಗನ್ನೇ ಮದುವೆ ಆಗಬೇಕು ಅಂದ್ರೆ ಅವರು ಸಂಪಾದನೆ ಮಾಡ್ತಾ ಇರೋಲ್ಲ.. ಇಲ್ಲೂ ಕೂಡ ಪೋಷಕರ ಒತ್ತಾಯದ ಮೇರೆಗೆ ಯಾರೋ ಒಬ್ರು ಇನ್ನೋಬ್ಬರನ್ನ ಮದುವೆ ಆಗಿ ಲವ್‌ಗೆ ತಿಲಾಂಜಲಿ ಇಟ್ಟು ನಿನ್ನ ದಾರಿ ನಿಂಗೆ ನನ್ನ ದಾರಿ ನಂಗೆ ಅಂತಾ ಹೇಳಿ ಮರೆಯಾಗಿ ಹೋಗ್ತಾರೆ...

ಇದನ್ನೂ ಓದಿ- ಸುಂದರ ಸಂಸಾರ ಹಾಳು ಮಾಡುತ್ತಿದೆ ಹಳೆ ಲವ್‌ ಸ್ಟೋರಿ...!

ಅಂತೂ ಇಂತೂ ಯಾವುದೋ ಒಂದು ಕೆಲಸ ಹಿಡಿದು ಜವಾಬ್ಧಾರಿ ಬಂತು ಇನ್ಮೇಲೆ ದುಡ್ಡು ಗಳಿಸಿ ಅರಾಮ ಆಗಿ ಇರೋಣ ಅಂದುಕೊಳ್ಳುತ್ತೇವೆ.. ಅಷ್ಟರಲ್ಲೇ ಆಫೀಸ್‌ನಲ್ಲಿ ಸಕತ್ತಾಗಿರೋ ಹುಡುಗಿ ಕಾಣಿಸ್ತಾಳೆ. ಅವಳ ಮೇಲೆ ಕ್ರಶ್‌ ಆಗಿ ಹೇಗೋ ಆಫೀಸ್‌ ಕೆಲಸದ ನೆಪ ಮಾಡಿಕೊಂಡು ಮಾತಾಡಿಸ್ತಾ ಮಾತಾಡಿಸ್ತಾ ಕ್ಲೋಸ್‌ ಆಗ್ತಾರೆ.. ಆಫೀಸ್‌ ಗಾಸಿಪ್‌ ಮಾತಾಡ್ತಾ ಯಾವಾಗ ಕ್ಲೋಸ್‌ ಆಗ್ತಾರೋ ಗೊತ್ತಿಲ್ಲ.. ಇದೇ ಟೈಮ್‌ಲ್ಲಿ ಅವರಿಬ್ಬರ ಹಳೆ ಬ್ರೇಕ್‌ಅಪ್‌ ಲವ್‌ ಸ್ಟೋರಿ ಬಗ್ಗೆನೂ ಮಾತಾಡ್ತಾರೆ.. ಈಗ ಇಬ್ರೂ ಸಿಂಗಲ್‌ ಆಗಿದ್ರೆ ಲವ್‌ ಕೂಡ ಶುರುವಾಗತ್ತೆ.. ಲವ್‌ ಜೊತೆಗೆ ಮನೆ ಜವಾಬ್ದಾರಿ, ಆಫೀಸ್‌ ಕೆಲಸ ಹೀಗೆ ಲೈಫ್‌ ತುಂಬಾ ಬ್ಯೂಸಿ ಆಗಿಬಿಡುತ್ತೆ. ಕೆಲವರು ಮದುವೆ ಆಗಿ ಸೆಟಲ್‌ ಆದ್ರೆ ಇನ್ನೂ ಕೆಲವರು ಕಿತ್ತಾಡಿಕೊಂಡು ಬೇರೆ ಬೇರೆ ಆಗ್ತಾರೆ..

ಇಷ್ಟೆಲ್ಲ ಆದಮೇಲೆ ಲೈಫ್‌ನಲ್ಲಿ ಇನ್ಮೇಲೆ ಯಾರನ್ನೂ ಲವ್‌ ಮಾಡಬಾರದು, ಇಷ್ಟು ದಿನ ಆಗಿರೋ ಕಷ್ಟಗಳೇ ಸಾಕು ಅಂತ ಸುಮ್ಮನೇ ಇರೋಕೆ ಹೋದಾಗ ಮನೆಯಲ್ಲಿ ಮದುವೆ ಆಗು ಅಂತ ಕಾಟ ಕೋಡೋಕೆ ಶುರುಮಾಡ್ತಾರೆ.. ಇನ್ನೇನು ಮಾಡೋದು ಲೈಫ್‌ನ ಕೊನೆಯ ಕ್ಷಣಗಳು ಅಂತ ಮದುವೆ ಆಗಿ ಸಂಸಾರ ಶುರು ಮಾಡ್ತೀವಿ.. ಮದುವೆ ಮಕ್ಕಳು ಅಂತ ಲೈಫ್‌ ಚನ್ನಾಗಿ ಹೋಗ್ತಾ ಇರೋವಾಗ ಅದೆಷ್ಟೋ ಮಂದಿ ಹಳೆ ಲವ್‌ ನೆನಪು ಮಾಡಿಕೊಂಡು ಜೀವನ ಕೂಡ ಸಾಗಿಸ್ತಾರೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News