Black Hair Remedies: ತೆಂಗಿನೆಣ್ಣೆಯಲ್ಲಿ ಈ ಒಂದು ಪದಾರ್ಥ ಬೆರೆಸಿ ತಲೆಗೆ ಹಚ್ಚಿ, ಕೆಲವೇ ದಿನಗಳಲ್ಲಿ ಕಪ್ಪಾಗುತ್ತವೆ ಬಿಳಿ ಕೂದಲು!

White Hair Treatment: ಇಂದಿನ ಬದಲಾದ ಹವಾಮಾನದಲ್ಲಿ ಮತ್ತು ತಪ್ಪು ಜೀವನಶೈಲಿಯ ಕಾರಣ ಅಕಾಲದಲ್ಲಿಯೇ ಜನರ ಕಪ್ಪು ಕೂದಲುಗಳು ಬಿಳಿಯಾಗುತ್ತಿವೆ. ಬಿಳಿ ಕೂದಲನ್ನು (White Hair Prevention) ಕಪ್ಪಾಗಿಸಲು ತೆಂಗಿನೆಣ್ಣೆಯು ಸಾಕಷ್ಟು ಪರಿಣಾಮಕಾರಿಯಾಗಿದೆ. ಬನ್ನಿ ಅದನ್ನು ಹೇಗೆ ಬಳಸಬೇಕು ತಿಳಿದುಕೊಳ್ಳೋಣ (Lifestyle News In Kannada)  

Written by - Nitin Tabib | Last Updated : Mar 2, 2024, 07:50 PM IST
  • ನಿಮ್ಮ ಬೂದು ಕೂದಲು ಕಪ್ಪಾಗಲು ತೆಂಗಿನೆಣ್ಣೆ ಮತ್ತು ಕಪ್ಪು ಜೀರಿಗೆ ಬೀಜಗಳನ್ನು ನೀವು ಬಳಸಬಹುದು.
  • ಹೌದು, ಈ ಎರಡೂ ವಸ್ತುಗಳು ಕೂದಲಿಗೆ ತುಂಬಾ ಪ್ರಯೋಜನಕಾರಿಯಾಗಿವೆ.
  • ಕಪ್ಪು ಜೀರಿಗೆಯಲ್ಲಿ ಕೊಬ್ಬಿನಾಮ್ಲಗಳು, ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದ ಗುಣಲಕ್ಷಣಗಳಿವೆ,
Black Hair Remedies: ತೆಂಗಿನೆಣ್ಣೆಯಲ್ಲಿ ಈ ಒಂದು ಪದಾರ್ಥ ಬೆರೆಸಿ ತಲೆಗೆ ಹಚ್ಚಿ, ಕೆಲವೇ ದಿನಗಳಲ್ಲಿ ಕಪ್ಪಾಗುತ್ತವೆ ಬಿಳಿ ಕೂದಲು! title=

Black Hair Home Remedy: ವಯಸ್ಸಿಗೆ ತಕ್ಕಂತೆ ಕಪ್ಪು ಕೂದಲುಗಳು ಬಿಳಿ ಬಣ್ಣಕ್ಕೆ ತಿರುಗುವುದು ಒಂದು ವಯೋಸಹಜ ಪ್ರಕ್ರಿಯೆ. ಇಂದಿನ ಕಾಲದಲ್ಲಿ ಚಿಕ್ಕವಯಸ್ಸಿನಲ್ಲೇ ಜನರ ತಲೆಗೂದಲು ಬಿಳಿಯಾಗುತ್ತಿದೆ. ಇದಕ್ಕೆ ಕಾರಣ ಎಂದರೆ ಮಾಲಿನ್ಯ ಮತ್ತು ತಪ್ಪು ಆಹಾರ ಪದ್ಧತಿ, ಅಸಮರ್ಪಕ ಜೀವನಶೈಲಿ ಮತ್ತು ರಾಸಾಯನಿಕ ಉತ್ಪನ್ನಗಳ ಬಳಕೆ ಕೂದಲಿಗೆ ಹಾನಿಯನ್ನುಂಟು ಮಾಡುತ್ತವೆ. ಬಹುತೇಕರು ತಮ್ಮ ಬಿಳಿ ಕೂದಲನ್ನು (Hair Care Tips) ಕಪ್ಪಾಗಿಸಲು ಹೇರ್ ಡೈ, ಗೋರಂಟಿ ಮತ್ತು ಬಣ್ಣವನ್ನು ಬಳಸುತ್ತಾರೆ. ಆದರೆ ಅವು ಹಾನಿಕಾರಕ ರಾಸಾಯನಿಕಗಳನ್ನು ಒಳಗೊಂಡಿರುತ್ತವೆ ಮತ್ತು ಅವು ಕೂದಲಿಗೆ ಹಾನಿಯನ್ನುಂಟು ಮಾಡುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ನೀವು ಕೆಲವು ಮನೆಮದ್ದುಗಳ ಸಹಾಯ ತೆಗೆದುಕೊಳ್ಳಬಹುದು. ಇಂದು ನಾವು ನಿಮಗೆ ಅಂತಹುದೇ ಒಂದು ಮನೆಮದ್ದಿನ ಕುರಿತು ಮಾಹಿತಿಯನ್ನು ನೀಡುತ್ತಿದ್ದು, ಅದರಿಂದ ನೀವು ನಿಮ್ಮ ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಬಹುದು. ಬನ್ನಿ ತಿಳಿದುಕೊಳ್ಳೋಣ,  (Lifestyle News In Kannada)

ಬಿಳಿ ಕೂದಲು ಕಪ್ಪಾಗಲು ತೆಂಗಿನೆಣ್ಣೆಯಲ್ಲಿ ಕಪ್ಪು ಜೀರಿಗೆ ಬೆರೆಸಿ
ನಿಮ್ಮ ಬೂದು ಕೂದಲು ಕಪ್ಪಾಗಲು ತೆಂಗಿನೆಣ್ಣೆ ಮತ್ತು ಕಪ್ಪು ಜೀರಿಗೆ ಬೀಜಗಳನ್ನು ನೀವು ಬಳಸಬಹುದು. ಹೌದು, ಈ ಎರಡೂ ವಸ್ತುಗಳು ಕೂದಲಿಗೆ ತುಂಬಾ ಪ್ರಯೋಜನಕಾರಿಯಾಗಿವೆ. ಕಪ್ಪು ಜೀರಿಗೆಯಲ್ಲಿ ಕೊಬ್ಬಿನಾಮ್ಲಗಳು, ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದ ಗುಣಲಕ್ಷಣಗಳಿವೆ, ಇದು ತಲೆಹೊಟ್ಟು ತೆಗೆದುಹಾಕುವುದರ ಜೊತೆಗೆ ಬಿಳಿ ಕೂದಲಿನ ಸಮಸ್ಯೆಯನ್ನು ಪರಿಹರಿಸುತ್ತದೆ. ಇದಲ್ಲದೆ, ಇದು ಕೂದಲಿನ ಬೆಳವಣಿಗೆಗೆ ಕೂಡ ಸಹಾಯ ಮಾಡುತ್ತದೆ. ತೆಂಗಿನ ಎಣ್ಣೆಯು ನೆತ್ತಿಯನ್ನು ಪೋಷಿಸುತ್ತದೆ. ಇದಲ್ಲದೆ, ಕೂದಲನ್ನು ಉದ್ದ ಮತ್ತು ಕಪ್ಪಾಗಿಸಲು ಇದು ಸಹಕಾರಿಯಾಗಿದೆ.

ಬೇಕಾಗುವ ಸಾಮಗ್ರಿಗಳು
>> 1 ಬೌಲ್ ತೆಂಗಿನ ಎಣ್ಣೆ
>> 2-3 ಟೀಸ್ಪೂನ್ ಕಪ್ಪು ಜೀರಿಗೆ ಬೀಜಗಳು

ತಯಾರಿಸುವ ವಿಧಾನ
ಬಿಳಿ ಕೂದಲಿನ ಸಮಸ್ಯೆಯನ್ನು ಪರಿಹಾರಿಸಲು, ಮೊದಲು ತೆಂಗಿನ ಎಣ್ಣೆಯನ್ನು ಬಿಸಿ ಮಾಡಿ. ನಂತರ ಅದರಲ್ಲಿ ಕಪ್ಪು ಜೀರಿಗೆಯನ್ನು ಬೆರೆಸಿ ಮತ್ತು 5 ರಿಂದ 10 ನಿಮಿಷ ಬೇಯಿಸಿ. ಎಣ್ಣೆ ಕುದಿಯಲು ಆರಂಭಗೊಂಡಾಗ, ಅದನ್ನು ಗ್ಯಾಸ್ ಮೆಲಿಂದ ಇಳಿಸಿ ತಣ್ಣಗಾಗಿಸಿ ಮತ್ತು ಫಿಲ್ಟರ್ ಮಾಡಿ. ಇದರ ನಂತರ ನೀವು ಅದನ್ನು ಬಳಸಬಹುದು.

ಈ ರೀತಿ ತಲೆಗೆ ಅನ್ವಯಿಸಿ
ಈ ಎಣ್ಣೆಯನ್ನು ನಿಮ್ಮ ನೆತ್ತಿ ಮತ್ತು ಕೂದಲಿಗೆ ಹಚ್ಚಿ. ಸುಮಾರು 10 ನಿಮಿಷಗಳ ಕಾಲ ನಿಧಾನವಾಗಿ ಮಸಾಜ್ ಮಾಡಿ. ರಾತ್ರಿಯಿಡೀ ನಿಮ್ಮ ಕೂದಲಿನ ಮೇಲೆ ಬಿಡಿ. ಸೌಮ್ಯವಾದ ಶಾಂಪೂ ಸಹಾಯದಿಂದ ಬೆಳಗ್ಗೆ ಕೂದಲನ್ನು ತೊಳೆಯಿರಿ. ವಾರದಲ್ಲಿ 2-3 ಬಾರಿ ಈ ಎಣ್ಣೆಯನ್ನು ಬಳಸುವುದರಿಂದ ಕೂದಲು ಕ್ರಮೇಣ ಕಪ್ಪಾಗಲು ಆರಂಭಿಸುತ್ತವೆ. ಜೊತೆಗೆ ಕೂದಲು ಉದುರುವ ಸಮಸ್ಯೆಯೂ ದೂರಾಗುತ್ತದೆ. 

ಇದನ್ನೂ ಓದಿ-Hair Loss Home Remedies: ಬೋಳು ತಲೆ ಸಮಸ್ಯೆ ನಿವಾರಣೆಗೆ ಈ ಸೂಪರ್ ಡ್ರಿಂಕ್ ಎಂದಾದರೂ ಸೇವಿಸಿದ್ದೀರಾ?

ತೆಂಗಿನೆಣ್ಣೆ ಮತ್ತು ಕಪ್ಪು ಜೀರಿಗೆಮಿಶ್ರಣವು ಬಿಳಿ ಕೂದಲನ್ನು ಕಪ್ಪಾಗಿಸಲು ತುಂಬಾ ಪ್ರಯೋಜನಕಾರಿ ಎಂದು ಸಾಬೀತಾಗುತ್ತದೆ. ಆದರೂ ಕೂಡ ಯಾವುದೇ ಪದಾರ್ಥಗಳಿಗೆ ನೀವು ಅಲರ್ಜಿಯನ್ನು ಹೊಂದಿದ್ದರೆ, ಅದನ್ನು ಬಳಸಬೇಡಿ.

ಇದನ್ನೂ ಓದಿ-Weight Loss Home Remedy: ಅದ್ಭುತ ರೀತಿಯಲ್ಲಿ ತೂಕ ಇಳಿಕೆ ಮಾಡುವ ಸಾಮರ್ಥ ಈ ಪಾನೀಯದಲ್ಲಿದೆ, ಟ್ರೈ ಮಾಡಿ ನೋಡಿ!

(ಹಕ್ಕುತ್ಯಾಗ- ಆತ್ಮೀಯ ಓದುಗರೇ, ನಮ್ಮ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮ್ಮಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನೀವು ಎಲ್ಲಾದರು ಓದಿದ್ದರೆ, ಅದನ್ನು ಅನುಸರಿಸುವ ಮುನ್ನ ವೈದ್ಯರನ್ನು ಅಥವಾ ವಿಷಯ ತಜ್ನರನ್ನು ಸಂಪರ್ಕಿಸಿ.)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News