ಬೆಳಗಾವಿ: ಸಂಗೊಳ್ಳಿ ರಾಯಣ್ಣನವರ ಜೀವನಚರಿತ್ರೆ ಕಟ್ಟಿಕೊಡಲು ನಿರ್ಮಿಸಿರುವ ಶೌರ್ಯ ಭೂಮಿ (ರಾಕ್ ಗಾರ್ಡನ್) ಈಗ ಪ್ರೇಕ್ಷಣೀಯ ಕೇಂದ್ರವಾಗಿ ಮಾರ್ಪಟ್ಟಿದೆ. ಪ್ರತಿಯೊಂದು ಕಲಾಕೃತಿಯು ನೈಜವಾಗಿ ಮೂಡಿ ಬಂದಿದ್ದು, ಪ್ರವಾಸಿಗರನ್ನು ಮಂತ್ರಮುಗ್ದಗೊಳಿಸುತ್ತಿವೆ. ಆದರೆ, ಪ್ರವೇಶ ಶುಲ್ಕ ಹೆಚ್ಚಾಗಿದ್ದರಿಂದ ಜನರಿಗೆ ಅದು ಹೊರೆಯಾಗಿದೆ ಎಂಬ ಆರೋಪವಿದೆ.
ಕ್ರಾಂತಿವೀರ ರಾಯಣ್ಣನ ಹುಟ್ಟೂರು ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಗ್ರಾಮದ ಹೊರವಲಯದ 10 ಎಕರೆ ವಿಶಾಲ ಪ್ರದೇಶದಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ಶೌರ್ಯ ಭೂಮಿ ತಲೆ ಎತ್ತಿದೆ. ರಾಯಣ್ಣನ ಜೀವನ ಚರಿತ್ರೆ ಸಾರುವ ಒಟ್ಟು 64 ಸನ್ನಿವೇಶಗಳು ಮತ್ತು 1,800ಕ್ಕೂ ಅಧಿಕ ಕಲಾಕೃತಿಗಳು ಇಲ್ಲಿವೆ. ಹಾವೇರಿ ಜಿಲ್ಲೆಯ ಗೋಟಗೋಡಿಯ ಶಿಲ್ಪಕಲಾ ಕುಟೀರದ ವ್ಯವಸ್ಥಾಪಕರಾದ ರಾಜಹರ್ಷ ಸೊಲಬಕ್ಕನವರ ನೇತೃತ್ವದಲ್ಲಿ ಕಲಾವಿದರ ಕೈಚಳಕದಲ್ಲಿ ಕಲಾಕೃತಿಗಳು ಅದ್ಭುತವಾಗಿ ಮೂಡಿ ಬಂದಿದ್ದು, ರಾಯಣ್ಣನ ಇತಿಹಾಸವನ್ನು ಮನೋಜ್ಞವಾಗಿ ತೆರೆದಿಟ್ಟಿವೆ.
ಇದನ್ನೂ ಓದಿ : ಹಸುಗಳ ಕೆಚ್ಚಲು ಕೊಯ್ದ ಘಟನೆಯ ಹಿಂದೆ ಇರುವವರನ್ನು ಪೊಲೀಸರು ಪತ್ತೆ ಮಾಡಲಿ: ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹ
ಕಳೆದ ವರ್ಷ ಜ. 17ರಂದು ಈ ಶೌರ್ಯ ಭೂಮಿಯನ್ನು ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟಿಸಿದ್ದರು. ಅಂದಿನಿಂದ ಅಪಾರ ಸಂಖ್ಯೆಯಲ್ಲಿ ಜನರು ಇಲ್ಲಿಗೆ ಆಗಮಿಸುತ್ತಿದ್ದಾರೆ. ದೊಡ್ಡವರಿಗೆ ಒಬ್ಬ ವ್ಯಕ್ತಿಗೆ ಪ್ರವೇಶ ಶುಲ್ಕ 100 ರೂ. ಇದ್ದರೆ, ಮಕ್ಕಳಿಗೆ 50 ರೂ. ನಿಗದಿಪಡಿಸಿದ್ದಾರೆ. ಶುಲ್ಕ ಹೆಚ್ಚಾದರೂ ಜನ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದು ವಿಶೇಷ.
ಯಾವ್ಯಾವ ಕಲಾಕೃತಿಗಳು..? :
ಕಿತ್ತೂರು ಸಂಸ್ಥಾನದ ರಾಜ ವೀರಪ್ಪ ದೇಸಾಯಿ ಅವರು ರಾಯಣ್ಣನ ಅಜ್ಜ ರೋಗಪ್ಪ ಅವರಿಗೆ ರಕ್ತಮಾನ್ಯ ಭೂಮಿ ನೀಡಿ ಗೌರವಿಸುವ ಸಂದರ್ಭ, ರಾಯಣ್ಣನ ತಂದೆ ಭರಮಪ್ಪ ಅವರು ಹುಲಿ ಬೇಟೆಯಾಡಿ ಕಿತ್ತೂರು ಸಂಸ್ಥಾನಕ್ಕೆ ಹೊತ್ತು ತಂದ ಘಟನೆ, ರಾಯಣ್ಣನಿಗೆ ನಾಮಕರಣ ಮಾಡುವ ದಿನ, ಗರಡಿಮನೆಯಲ್ಲಿ ಕಸರತ್ತು ಪ್ರದರ್ಶಿಸಿ, ಸಾಹಸ ಕಲೆ ಕರಗತ ಮಾಡಿಕೊಳ್ಳುತ್ತಿರುವುದು, ರಾಣಿ ಚನ್ನಮ್ಮಾಜಿ ಕೈಯಿಂದ ಖಡ್ಗ ಸ್ವೀಕರಿಸಿದ್ದು, ರಾಯಣ್ಣನ ತಂದೆ ಭರಮಪ್ಪ ಅವರನ್ನು ಬ್ರಿಟಿಷರು ಹೊಡೆದುರುಳಿಸಿದ್ದು, ಆಗಿನ ಧಾರವಾಡದ ಜಿಲ್ಲಾಧಿಕಾರಿ ಥ್ಯಾಕರೆ ಕಿತ್ತೂರು ಅರಮನೆಗೆ ಬಂದು ಪುತ್ರ ದತ್ತಕ ನಿರಾಕರಿಸಿದ್ದು, ಕಿತ್ತೂರು ಕೋಟೆ, ಕುಸ್ತಿ ಮೈದಾನ, ವೀರಭದ್ರ ದೇವಸ್ಥಾನ, ದರ್ಬಾರ್ ಹಾಲ್, ಬ್ರಿಟಿಷರೊಂದಿಗಿನ ಯುದ್ಧದ ಸನ್ನಿವೇಶಗಳು, ಸಂಪಗಾವಿ ಜೈಲಿನ ಮೇಲೆ ದಾಳಿ, ಸುಂಕ ಪಾವತಿ ಮಾಡದಿರುವುದಕ್ಕೆ ರಾಯಣ್ಣನ ತಾಯಿಯ ತಲೆ ಮೇಲೆ ಕುಲಕರ್ಣಿ ಕಲ್ಲು ಹೊರಿಸಿದ್ದು ನಮ್ಮ ಮುಂದೆಯೇ ಘಟನೆ ನಡೆಯುತ್ತಿದೆಯೇ ಎನ್ನುವಷ್ಟು ನೈಜವಾಗಿದೆ.
ಆಗಿನ ಕಾಲದ ಸಂತೆ, ಗ್ರಾಮೀಣ ಸಂಸ್ಕೃತಿ, ಪ್ರಥಮ ಆಂಗ್ಲೊ-ಕಿತ್ತೂರು ಯುದ್ಧದಲ್ಲಿ ಗೆಲುವು ಸಾಧಿಸಿದ್ದು, ಎರಡನೇ ಯುದ್ಧದಲ್ಲಿ ಸೋತಿದ್ದು, ರಾಣಿ ಚನ್ನಮ್ಮಾ ಬಂಧನ, ರಾಯಣ್ಣನ ಸೆರೆ ಮತ್ತು ಬಿಡುಗಡೆ, ಪಶ್ಚಿಮಘಟ್ಟದ ಗವಿಯಲ್ಲಿ ಮುಂದಿನ ಹೋರಾಟದ ಯೋಜನೆ ಹಾಕುತ್ತಿರುವುದು, ಡೋರಿಹಳ್ಳದಲ್ಲಿ ರಾಯಣ್ಣನನ್ನು ಮೋಸದಿಂದ ಬಂಧಿಸಿದ್ದು, ನಂದಗಡ ಹೊರವಲಯದ ಆಲದ ಮರಕ್ಕೆ ರಾಯಣ್ಣನೊಂದಿಗೆ ಆರು ಜನರಿಗೆ ಗಲ್ಲಿಗೇರಿಸುತ್ತಿರುವ ದೃಶ್ಯ ಎಂಥವರ ಕಣ್ಣಲ್ಲೂ ನೀರು ತರಿಸುವಂತಿದೆ. ಒಂದೊಂದು ದೃಶ್ಯವೂ ಒಂದೊಂದು ರಾಯಣ್ಣನ ಕಥೆ ಹೇಳುತ್ತದೆ. ಈ ಎಲ್ಲವನ್ನೂ ಕಣ್ತುಂಬಿಕೊಳ್ಳುತ್ತಿರುವ ಜನರು ಸೆಲ್ಫಿ, ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಿದ್ದಾರೆ.
ಇದನ್ನೂ ಓದಿ : ಪಕ್ಷದ ಪದಾಧಿಕರಗಳ ವಿರುದ್ಧ HDK ಗರಂ
ಬೆಳಗಾವಿಯಿಂದ 50 ಕಿ.ಮೀ, ಧಾರವಾಡ 45 ಕಿ.ಮೀ, ಬೈಲಹೊಂಗಲ 16 ಕಿ.ಮೀ ಹಾಗೂ ಚನ್ನಮ್ಮನ ಕಿತ್ತೂರಿನಿಂದ 15 ಕಿ.ಮೀ ದೂರದಲ್ಲಿ ಸಂಗೊಳ್ಳಿ ಗ್ರಾಮವಿದೆ. ಸಂಗೊಳ್ಳಿ ಹೊರವಲಯದಲ್ಲಿ ಹಾದು ಹೋಗಿರುವ ಇಟಗಿ ಕ್ರಾಸ್-ಬೆಳವಡಿ ರಸ್ತೆ ಬಳಿಯೇ ಈ ರಾಕ್ ಗಾರ್ಡನ್ ಇದೆ. ಬೈಲಹೊಂಗಲ ಮತ್ತು ಕಿತ್ತೂರಿನಿಂದ ಸಂಗೊಳ್ಳಿಗೆ ಕೆಎಸ್ ಆರ್ ಟಿಸಿ ಬಸ್ ಸೌಕರ್ಯವಿದೆ.
ಇನ್ನು ಇಲ್ಲಿನ ಪ್ರವೇಶ ಶುಲ್ಕವನ್ನು ಕಡಿಮೆ ಮಾಡಬೇಕು ಎನ್ನುವ ಒತ್ತಾಯ್ ಕೆ;ಇ ಬಂದಿದೆ. ಬಡವರು, ಮಧ್ಯಮ ವರ್ಗದ ಜನರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ 25, 50 ರೂಪಾಯಿಗೆ ಇಳಿಸಿ ಎಂಬುದು ಪ್ರವಾಸಿಗರ ಆಗ್ರಹ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.