ಕಾಂಗ್ರೆಸ್-ಬಿಜೆಪಿ ನಡುವೆ PM ಪ್ರೋಟೋಕಾಲ್ ಫೈಟ್.. ಕಾಲೆಳೆದ ಕೇಸರಿಗೆ ಕೈ 'ಪರಮಾಧಿಕಾರಿ' ಕೌಂಟರ್!

Protocol fight : ಚಂದ್ರಯಾನ 3ರ ಯಶಸ್ವಿಯಾದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸಿದ್ರು.. ಶ್ರಮದ ಹಿಂದಿದ್ದ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಲು ಆಗಮಿಸಿದ್ದು, ಪ್ರಧಾನಿ ಸ್ವಾಗತ ಮಾಡುವ ವಿಚಾರ ಈಗ ರಾಜಕೀಯ ತಿರುವು ಪಡೆದಿದೆ..

Written by - Savita M B | Last Updated : Aug 26, 2023, 08:10 PM IST
  • ಪ್ರಧಾನಿ ಮೋದಿ ಸ್ವಾಗತ ವಿಚಾರದಲ್ಲಿ ಪ್ರೋಟೋಕಾಲ್ ವಾರ್.‌‌!
  • ಸ್ವಾಗತ ಕೋರಲಿಲ್ಲ ಅಂತ ಬಿಜೆಪಿ ಆಕ್ರೋಶ, ಕಾಂಗ್ರೆಸ್ ತಿರುಗೇಟು..!
  • ಶಿಷ್ಟಾಚಾರದ ಪ್ರಕಾರ ಪ್ರಧಾನಿಗೆ ಕಾಂಗ್ರೆಸ್ ಸ್ವಾಗತ ಮಾಡಲಿಲ್ಲ ಅಂತ ಬಿಜೆಪಿ ಆರೋಪಿಸಿದೆ
ಕಾಂಗ್ರೆಸ್-ಬಿಜೆಪಿ  ನಡುವೆ PM ಪ್ರೋಟೋಕಾಲ್ ಫೈಟ್.. ಕಾಲೆಳೆದ ಕೇಸರಿಗೆ ಕೈ 'ಪರಮಾಧಿಕಾರಿ' ಕೌಂಟರ್! title=

Congress-BJP : ಶಿಷ್ಟಾಚಾರದ ಪ್ರಕಾರ ಪ್ರಧಾನಿಗೆ ಕಾಂಗ್ರೆಸ್ ಸ್ವಾಗತ ಮಾಡಲಿಲ್ಲ ಅಂತ ಬಿಜೆಪಿ ಆರೋಪಿಸಿದ್ದು, ಬಿಜೆಪಿಗೆ ಕಾಂಗ್ರೆಸ್ ನಾಯಕರು ತಿರುಗೇಟು ನೀಡಿದ್ದಾರೆ..  ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿ, ಸಿಎಂ, ಡಿಸಿಎಂಗೆ ಅಭಿನಂದನೆ ಸಲ್ಲಿಸಿದ್ದು ಎಲ್ಲರ ಬಾಯಿ ಮುಚ್ಚಿಸುವಂತಾಗಿದೆ..

ಚಂದ್ರಯಾನ 3 ಯಶಸ್ವಿಯಾದ ಬೆನ್ನಲ್ಲೆ, ವಿದೇಶ ಪ್ರಯಾಣದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ನೇರವಾಗಿ ಬೆಂಗಳೂರಿಗೆ ಬಂದಿಳಿದ್ರು.. ಈ ವೇಳೆ ಪ್ರಧಾನಿಯನ್ನ ಅಧಿಕಾರಿಗಳು ಮಾತ್ರ ಸ್ವಾಗತಿಸಿದ್ದು ತೀವ್ರ ಕುತೂಹಲ ಕೆರಳಿಸಿತ್ತು.. ಪ್ರೊಟೋಕಾಲ್ ಪ್ರಕಾರ ರಾಜ್ಯಪಾಲರು, ಸಿಎಂ ಸೇರಿದಂತೆ ಅಧಿಕಾರಿಗಳು ಸ್ವಾಗತ ಮಾಡಬೇಕಿತ್ತು.. ಆದ್ರೆ ಕೇವಲ ಅಧಿಕಾರಿಗಳು ಮಾತ್ರ ಸ್ವಾಗತ ಕೋರಿದ್ದು, ದೊಡ್ಡ ವಿವಾದಕ್ಕೆ ಕಾರಣವಾಗಿದೆ.. ಈ ಬಗ್ಗೆ ಬಿಜೆಪಿ ನಾಯಕರು ಆಕ್ರೋಶ ಹೊರ ಹಾಕಿದ್ದಾರೆ..

ದೇಶದ ಪ್ರಧಾನಿ ರಾಜ್ಯಕ್ಕೆ ಬಂದಾಗ ಅವರನ್ನ ಗೌರವಯುತವಾಗಿ ನಡೆಸಿಕೊಂಡಿಲ್ಲ.. ಸರ್ಕಾರದಿಂದ ನಿಯಮದಂತೆ ಎಲ್ಲರೂ ಹಾಜರಿರೋ ಮೂಲಕ ಗೌರವಯುತವಾಗಿ ಅವರನ್ನ ಸ್ವಾಗತ ಕೋರಬೇಕಿತ್ತು.. ಆದ್ರೆ, ಪ್ರಧಾನಿ ನರೇಂದ್ರ ಮೋದಿಯವರನ್ನ ನಿಯಮದಂತೆ ಸ್ವಾಗತ ಕೋರದೆ, ಅವರಿಗೆ ಅಪಮಾನ ಮಾಡಿದ್ದಾರೆ ಅಂತ ಮಾಜಿ ಡಿಸಿಎಂ ಆರ್ ಅಶೋಕ್ ಆಕ್ರೋಶ ಹೊರ ಹಾಕಿದ್ರು.. 

ನಿಯಮ ಪಾಲನೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಎಡವಿದೆ ಅಂತ ಆರೋಪಿಸಿದ್ದು, ಪ್ರಧಾನಿ ಬೆಳಗ್ಗೆ ಬಂದ್ರು ಅಂತ ಸಿಎಂ ಸಿದ್ದರಾಮಯ್ಯ ನಿದ್ದೆ ಮಾಡ್ತಿದ್ರಾ ಅಂತ ಪ್ರಶ್ನೆ ಮಾಡೋ ಮೂಲಕ, ಕಾಂಗ್ರೆಸ್ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡರು.. ಇದು ಆಡಳಿತ ಮತ್ತು ವಿಪಕ್ಷಗಳ ನಡುವೆ ದೊಡ್ಡ ವಿವಾದಕ್ಕೆ ಕಾರಣವಾಗಿದೆ.

ಇದನ್ನೂ ಓದಿ-ಪ್ರಧಾನಿ ಮೋದಿ ಜನಪ್ರಿಯತೆ ಕುಸಿತ! ಈಗಲೇ ಲೋಕಸಭೆ ಚುನಾವಣೆ ನಡೆದರೆ ಯಾರಿಗೆ ಅಧಿಕಾರ ಗೊತ್ತಾ?

ಆದ್ರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಡಿಸಿಎಂ ಡಿ.ಕೆ ಶಿವಕುಮಾರ್, ಅಶೋಕ್‌ ಇತ್ತೀಚೆಗೆ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಅನಿಸುತ್ತಿದೆ.. ಅವರ ಈ ರೀತಿಯ ಮಾತುಗಳಿಂದಲೇ ಕೇಂದ್ರದ ನಾಯಕರು ಅವರನ್ನ ದೂರ ಇಟ್ಟಿದ್ದಾರೆ ಅಂತ ಅಶೋಕ್ ಕಾಲೆಳೆದ್ರು.. ಇನ್ನು ಪ್ರೊಟೋಕಾಲ್ ನೀಡುವ ವಿಚಾರದಲ್ಲಿ ಬಿಜೆಪಿ ಅವರಿಗಿಂತ ಹೆಚ್ಚು ಗೊತ್ತಿದ್ದು, ಯಾರಿಗೆ ಎಷ್ಟು ಗೌರವ ಕೊಡಬೇಕು ಅಂತ ಅವರಿಗಿಂತ ಚೆನ್ನಾಗಿ ಗೊತ್ತಿದೆ ಅಂತ ತರಾಟೆಗೆ ತೆಗೆದುಕೊಂಡರು..

ಪ್ರಧಾನಿ ಕಚೇರಿಯಿಂದ ಅಧಿಕಾರಿಗಳು ಸಾಕು ಅಂತ ತಿಳಿಸಿದ್ದು, ಅಧಿಕೃತವಾಗಿ ಪತ್ರ ಕೂಡ ಪಡೆದುಕೊಂಡಿದ್ದೇವೆ.. ಬೇಕಿದ್ರೆ ಈ ಬಗ್ಗೆ ದಾಖಲೆ ಕೂಡ ಬಿಡುಗಡೆ ಮಾಡೋದಾಗಿ ಸ್ಪಷ್ಟಪಡಿಸಿದ್ರು.. ಇನ್ನು ಪ್ರಧಾನಿ ಸ್ವಾಗತ ವಿಚಾರ ನನ್ನ ಗಮನಕ್ಕೆ ಬಂದಿಲ್ಲ ಅಂತ, ಗೃಹಸಚಿವ ಪರಮೇಶ್ವರ್ ಸ್ಪಷ್ಟಪಡಿಸಿದ್ರು.. ಪ್ರೊಟೋಕಾಲ್ ಪಾಲನೆ ಮಾಡಲು ಪ್ರತ್ಯೇಕ ಇಲಾಖೆ ಇದ್ದು, ಡಿಪಿಆರ್ ಸಿಎಂ ಅಧೀನದಲ್ಲಿದೆ.. ಅವರೇ ಅದನ್ನ ನೋಡಿಕೊಳ್ತಾರೆ ಅಂತ ಪರಮೇಶ್ವರ್ ಅಭಿಪ್ರಾಯ ವ್ಯಕ್ತಪಡಿಸಿದರು..

ಇದನ್ನೂ ಓದಿ-ಮಂಡ್ಯದಲ್ಲಿ ಆರದ ಕಾವೇರಿ ಕಿಚ್ಚು.. ಕನ್ನಡಪರ ಸಂಘಟನೆಗಳ ಹೋರಾಟ, KRS ಬಳಿ ಹೈಡ್ರಾಮಾ  

ಇದೆಲ್ಲದರ ನಡುವೆ ಇಸ್ರೋ ವಿಜ್ಞಾನಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ, ಹೆಚ್.ಎ.ಎಲ್ ನಲ್ಲಿ ಪ್ರಧಾನಿ ಮೋದಿ ಜನರನ್ನ ಉದ್ದೇಶಿಸಿ ಭಾಷಣ ಮಾಡಿದ್ರು.. ಈ ವೇಳೆ ವಿದೇಶದಿಂದ ನೇರವಾಗಿ ಬೆಂಗಳೂರಿಗೆ ಆಗಮಿಸಿದ್ದು, ಮೊದಲು ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸ್ತೇನೆ.. 

ನಾನು ತುಂಬಾ ಬೇಗ ಬರ್ತೀನಿ ಹಾಗಾಗಿ ಸಿಎಂ, ಡಿಸಿಎಂ ಹಾಗೂ ರಾಜ್ಯಪಾಲರು ಬರೋದು ಬೇಡ ಅಂತ ಹೇಳಿದ್ದೆ.. ಸ್ವಾಗತ ಕೋರಿದ್ದಕ್ಕೆ ಸಿಎಂ, ಡಿಸಿಎಂಗೆ ಅಭಿನಂದನೆ ಸಲ್ಲಿಸೋದಾಗಿ ಮೋದಿ ಅವರೇ ಹೇಳಿದ್ದಾರೆ.. ಶಿಷ್ಟಾಚಾರ ವಿಚಾರದಲ್ಲಿ ಪ್ರಧಾನಿಯೇ ಸ್ಪಷ್ಟನೆ ನೀಡಿದ್ದು, ಬಿಜೆಪಿಗೆ ಈಗ ಮುಜುಗರ ತರಿಸಿದೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News