ಆರ್ಟ್ ಆಫ್ ಲಿವಿಂಗ್‌ನ 10ನೇ ಅಂತಾರಾಷ್ಟ್ರೀಯ ಮಹಿಳಾ ಸಮಾವೇಶದಲ್ಲಿ ಬಾಗಿಯಾಗಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮ

ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್‌ ಆಯೋಜಿಸಿರುವ 10ನೇ ಅಂತಾರಾಷ್ಟ್ರೀಯ ಮಹಿಳಾ ಸಮಾವೇಶದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮ ಭಾಗವಹಿಸಲಿದ್ದಾರೆ

Written by - Zee Kannada News Desk | Last Updated : Feb 13, 2025, 06:45 PM IST
  • 10ನೇ ಅಂತರಾಷ್ಟ್ರೀಯ ಮಹಿಳಾ ಸಮಾವೇಶದಲ್ಲಿ ದ್ರೌಪದಿ ಮುರ್ಮು ಭಾಗಿ
  • ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ನಡೆಸಲಿರುವ ಸಮಾವೇಶ
  • ರಾಷ್ಟ್ರಪತಿ ಉಪಸ್ಥಿತಿಯಲ್ಲಿ ವಿವಿಧ ಕ್ಷೇತ್ರಗಳ ಮಹಿಳೆಯರು ಭಾಗಿ
ಆರ್ಟ್ ಆಫ್ ಲಿವಿಂಗ್‌ನ 10ನೇ ಅಂತಾರಾಷ್ಟ್ರೀಯ ಮಹಿಳಾ ಸಮಾವೇಶದಲ್ಲಿ ಬಾಗಿಯಾಗಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮ title=

10ನೇ ಅಂತಾರಾಷ್ಟ್ರೀಯ ಮಹಿಳಾ ಸಮಾವೇಶದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮ ಅವರ ಉಪಸ್ಥಿತಿಯಲ್ಲಿ ವಿವಿಧ ಕ್ಷೇತ್ರಗಳ ಅಂದರೆ ರಾಜಕೀಯ, ವಾಣಿಜ್ಯ, ಕಲೆ ಮತ್ತು ಸಾಮಾಜಿಕ ಕ್ಷೇತ್ರಗಳ ಪ್ರಮುಖ ಮಹಿಳೆಯರು ಭಾಗವಹಿಸಲಿದ್ದಾರೆ. ಈ ಮೂಲಕ ಐತಿಹಾಸಿಕ ಸಮಾವೇಶದಲ್ಲಿ 60ಕ್ಕೂ ಹೆಚ್ಚು ವಕ್ತಾರರು ಹಾಗೂ 500ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ.

 

ಇದಕ್ಕೂ ಮುಂಚೆ ಸುಮಾರು ಎರಡು ದಶಕಗಳಿಂದ ನಡೆದು ಬಂದಿರುವ ಈ ವೇದಿಕೆಯಲ್ಲಿ ಸುಮಾರು 115 ದೇಶಗಳಿಂದ 463 ವಕ್ತಾರರು ಹಾಗೂ 6,000ಕ್ಕೂ ಹೆಚ್ಚು ಪ್ರತಿನಿಧಿಗಳು ಸೇರಿದ್ದಾರೆ.

 

ಯಾರೆಲ್ಲಾ ಭಾಗಿ:

ಈ ಬಾರಿ ರಾಷ್ಟ್ರಪತಿಯವರ ಜೊತೆಗೆ ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋತ್, ಕೇಂದ್ರ ಸಚಿವೆ ಶ್ರೀಮತಿ ಅನ್ನಪೂರ್ಣಾ ದೇವಿ, ಸಂಸದರಾದ ಶ್ರೀಮತಿ ಶೋಭಾ ಕರಂದ್ಲಾಜೆ, ಮಾಜಿ ವಿದೇಶಾಂಗ ಮತ್ತು ಸಂಸ್ಕೃತಿ ಸಚಿವರಾದ ಶ್ರೀಮತಿ ಮೀನಾಕ್ಷಿ ಲೇಖಿ, ಕಾರ್ಮಿಕ ಮತ್ತು ಸಣ್ಣ-ಮಧ್ಯಮ ಉದ್ಯಮಗಳ ರಾಜ್ಯ ಸಚಿವರಾದ ಶ್ರೀಮತಿ ಶೋಭಾ ಕರಂದ್ಲಾಜೆ, ಕಾಮನ್ವೆಲ್ತ್ ಮಹಾಸಚಿವರಾದ ಪ್ಯಾಟ್ರಿಸಿಯಾ ಸ್ಕಾಟ್‌ಲ್ಯಾಂಡ್, ಜಪಾನ್‌ನ ಮಾಜಿ ಪ್ರಧಾನಿಯವರ ಪತ್ನಿಯಾದ ಅಕಿ ಅಬೆ, ಚಲನಚಿತ್ರ ನಿರ್ದೇಶಕಿ ಅಶ್ವಿನಿ ಅಯ್ಯರ್ ತಿವಾರಿ, ಹಿರಿಯ ನಟಿಯರಾದ ಹೇಮಾ ಮಾಲಿನಿ ಮತ್ತು ಶರ್ಮಿಳಾ ಟಾಗೋರ್, ಬಾಲಿವುಡ್ ನಟಿಯರಾದ ಸಾರಾ ಅಲಿ ಖಾನ್ ಮತ್ತು ಸೊನಾಕ್ಷಿ ಸಿನ್ಹಾ, ಮತ್ತು ಉದ್ಯಮದ ನಾಯಕರಾದ ರಾಧಿಕಾ ಗುಪ್ತಾ ಮತ್ತು ಕನಿಕಾ ಟೆಕ್ರೀವಾಲ್ ಉಪಸ್ಥಿತರಿರುತ್ತಾರೆ

 

ಆರ್ಟ್ ಆಫ್ ಲಿವಿಂಗ್ ಅಡಿಯಲ್ಲಿ ಮಹಿಳಾ ಕಲ್ಯಾಣ ಮತ್ತು ಮಕ್ಕಳ ಕಲ್ಯಾಣ ಕಾರ್ಯಕ್ರಮಗಳನ್ನು ಮುನ್ನಡೆಸುತ್ತಿರುವ ಗುರುದೇವ ಶ್ರೀ ಶ್ರೀ ರವಿಶಂಕರ್ ಅವರ ಸಹೋದರಿ ಭಾನುಮತಿ ನರಸಿಂಹನ್ ಈ ಸಮಾವೇಶದ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಂತಿಯುತ, ಹಿಂಸಾಮುಕ್ತ ಜಗತ್ತನ್ನು ರೂಪಿಸುವ ಗುರುದೇವರ ಕನಸನ್ನು ಧ್ಯೇಯವಾಗಿಸಿಕೊಂಡಿರುವ ಅವರು, ಶಿಕ್ಷಣ, ಪರಿಸರ ಸುಸ್ಥಿರತೆ, ಮತ್ತು ಮಹಿಳಾ ಸಬಲೀಕರಣದ ಮೂಲಕ ಸಾಮಾಜಿಕ ಪರಿವರ್ತನೆಗೆ ಕಳೆದ ನಾಲ್ಕು ದಶಕಗಳಿಂದ ಸೇವೆ ಸಲ್ಲಿಸಿದ್ದಾರೆ.

 

ಗುರುದೇವ ಶ್ರೀ ಶ್ರೀ ರವಿಶಂಕರವರ ಕವನದಿಂದ ಸ್ಫೂರ್ತಿ ಪಡೆದಿರುವ "ಜಸ್ಟ್ ಬಿ" ಎಂಬ ಥೀಮ್‌ನಲ್ಲಿ ಈ ಸಮಾವೇಶ ನಡೆಯಲಿದೆ. ನಾಯಕತ್ವ, ಸ್ವ-ಅನ್ವೇಷಣೆ ಹಾಗೂ ಸಬಲೀಕರಣದ ಕುರಿತಂತೆ ಆಳವಾದ ಚರ್ಚೆಗಳು ನಡೆಯಲಿವೆ. ಜೊತೆಗೆ, ಅಂತರರಾಷ್ಟ್ರೀಯ ಆಹಾರ ಮೇಳ ಹಾಗೂ "ಸೀತಾ ಚರಿತಂ" ಎಂಬ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ರಾಮ ಮತ್ತು ಸೀತೆಯ ಮಹಾಕಾವ್ಯದ ನೂತನ ಪ್ರತಿಮೆಯನ್ನು ತರುವ ಈ ಕಾರ್ಯಕ್ರಮದಲ್ಲಿ 500ಕ್ಕೂ ಹೆಚ್ಚು ಕಲಾವಿದರು ಹಾಗೂ ತಾಂತ್ರಿಕ ತಂಡ ಪಾಲ್ಗೊಳ್ಳಲಿದ್ದಾರೆ. 

 

ಈ ಬಾರಿ ಸಮಾವೇಶದಲ್ಲಿ "ಸ್ಟೈಲಿಷ್ ಇನ್‌ಸೈಡ್‌ಔಟ್: ಫ್ಯಾಷನ್ ಫಾರ್ ಅ ಕಾಜ್" ಎಂಬ ವಿಶೇಷ ವಿಭಾಗವಿದೆ. ಇದರಲ್ಲಿ ಪ್ರಖ್ಯಾತ ಭಾರತೀಯ ಫ್ಯಾಷನ್ ವಿನ್ಯಾಸಕರಾದ ಸಬ್ಯಸಾಚಿ, ರಾಹುಲ್ ಮಿಶ್ರಾ, ಮನೀಷ್ ಮಲ್ಹೋತ್ರಾ, ಹಾಗೂ ರಾ ಮ್ಯಾಂಗೋ ಮುಂತಾದವರ ವಿನ್ಯಾಸಗಳನ್ನು ಪ್ರದರ್ಶಿಸಲಾಗುತ್ತದೆ. ಈ ವಿನ್ಯಾಸಗಳನ್ನು ಹರಾಜು ಮಾಡಲಾಗುತ್ತಿದ್ದು, ಅದರಲ್ಲಿ ಬಂದ ಆದಾಯವನ್ನು ಆರ್ಟ್ ಆಫ್ ಲಿವಿಂಗ್‌ನ ಉಚಿತ ಶಾಲೆಗಳ ಮಕ್ಕಳ ಶಿಕ್ಷಣಕ್ಕಾಗಿ ಬಳಸಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ. ಈ ಸಮಾವೇಶದಿಂದ ದೊರಕುವ ಆದಾಯವನ್ನು ಬಾಲಕಿಯರ ಉಚಿತ ಶಿಕ್ಷಣಕ್ಕೆ ವಿನಿಯೋಗಿಸಲಾಗುತ್ತದೆ. ದೇಶದಾದ್ಯಂತ 1,300ಕ್ಕೂ ಹೆಚ್ಚು ಉಚಿತ ಶಾಲೆಗಳನ್ನು ನಿರ್ವಹಿಸುತ್ತಿರುವ ಆರ್ಟ್ ಆಫ್ ಲಿವಿಂಗ್, 1,00,000 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಜೀವನವನ್ನು ಪ್ರಭಾವಿತಗೊಳಿಸುತ್ತಿದೆ.

 

ಸಾಮಾನ್ಯ ನಾಯಕತ್ವ ಶೃಂಗಸಭೆಗಳಂತೆ ಅಲ್ಲದೆ, ಈ ಸಮಾವೇಶವು ಬೌದ್ಧಿಕ ಚರ್ಚೆ, ಆಧ್ಯಾತ್ಮಿಕ ಅಭ್ಯಾಸ, ಸಾಂಸ್ಕೃತಿಕ ಪ್ರದರ್ಶನ ಮತ್ತು ಸೇವಾ ಶ್ರದ್ಧೆಯುಳ್ಳ ಸಾಮಾಜಿಕ ಯೋಜನೆಗಳೊಂದಿಗೆ ಸಮಗ್ರ ಅನುಭವವನ್ನು ಒದಗಿಸುತ್ತದೆ. ಇದು ನಗರ ಮತ್ತು ಗ್ರಾಮೀಣ ಮಹಿಳೆಯರ ನಡುವಿನ ಸೇತುವೆಯಂತೆ ಕಾರ್ಯನಿರ್ವಹಿಸುತ್ತಿದ್ದು, ಗ್ರಾಮೀಣ ಮಹಿಳೆಯರ ಅಂತರಾಷ್ಟ್ರೀಯ ವೇದಿಕೆಯಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳಲು ಅವಕಾಶ ಒದಗಿಸುತ್ತದೆ. ಈ ಸಮಾವೇಶ ಕೇವಲ ಸಂವಾದವಷ್ಟೇ ಅಲ್ಲ, ಇದು ಮಹಿಳಾ ನಾಯಕತ್ವವನ್ನು ಉತ್ಸವಗೊಳಿಸುವ ಮತ್ತು ‘ಜಸ್ಟ್ ಬಿ’ ಎಂಬ ಆಂತರಿಕ ಯಾತ್ರೆಯ ಶುಭಾರಂಭವನ್ನು ಸೂಚಿಸುವ ಒಂದು ಸಂಚಲನವೇ ಆಗಿ ಈ ಸಮಾವೇಶ ಮೂಡಿಬರಲಿದೆ.

Trending News