ಧಾರವಾಡ : ಧಾರವಾಡದ ಮಹೇಂದ್ರಕರ ಚಾಳ ನಿವಾಸಿ ಕಾರ್ತಿಕ ಎಲಿಗಾರ ಎಂಬುವವರು ಕಾಲೇಜ ವಿದ್ಯಾರ್ಥಿಯಾಗಿದ್ದು ಗಿಟಾರ್ ವಾದ್ಯ ಕಲಿಯುತ್ತಿದ್ದರು. ಅವರು ತಮ್ಮ ವಿದ್ಯಾಭ್ಯಾಸ ಮತ್ತು ಗಿಟಾರ ಕಲಿಯಲು ಸಹಾಯವಾಗಲೆಂದು ಆನ್ಲೈನ್ ಮೂಲಕ ಪ್ಲಿಪ್‍ಕಾರ್ಟ್‍ನಿಂದ ದಿ:22/09/2022 ರಂದು ರೂ.54,019/- ಮೌಲ್ಯದ ಆಪಲ್ ಐಫೋನ್ ಖರೀದಿಸಿದ್ದರು. ಆ ಐಫೋನ್ ದಿ.25/09/2022 ರಂದು ದೂರುದಾರನಿಗೆ ತಲುಪಿತ್ತು. ಆ ಫೋನ್ ಖರೀದಿಸಿದ ಒಂದೇ ದಿನದಲ್ಲಿ ಅದರಲ್ಲಿ ದೋಷ ಉಂಟಾಗಿ ಸರಿಯಾಗಿ ಕಾರ್ಯ ನಿರ್ವಹಿಸುತ್ತಿರಲಿಲ್ಲ. ಆ ವಿಷಯವನ್ನು ದೂರುದಾರ ಕೂಡಲೇ ಫ್ಲಿಪ್‍ಕಾರ್ಟ ಹಾಗೂ ಐಫೋನ್ ಕಂಪನಿಯವರಿಗೆ ಫೋನ ಮೂಲಕ ತಿಳಿಸಿದ್ದರು.
ಇದನ್ನೂ ಓದಿ- Rahul Gandhi: ವಯನಾಡ್ ಕ್ಷೇತ್ರದ ಮೇಲೆ CPI ಕಣ್ಣು! ಲೋಕ ಚುನಾವಣೆಯಲ್ಲಿ ರಾಹುಲ್ ಗಾಂಧಿಗೆ ಕುತ್ತುತರುತ್ತಾ ಮಿತ್ರಪಕ್ಷ?
ಮೊಬೈಲ್ ಉತ್ಪಾದಕರ ಸೂಚನೆಯಂತೆ ದೂರುದಾರ ಹುಬ್ಬಳ್ಳಿಯ ಸರ್ವಿಸ್ ಸೆಂಟರ್‍ನಲ್ಲಿ ತಪಾಸಣೆ ಮಾಡಿಸಿದಾಗ ಅದರಲ್ಲಿ ದೋಷ ಇರುವುದು ಖಚಿತವಾಯಿತು. ನಂತರ ದೂರುದಾರ ಬೆಂಗಳೂರಿನ ಆಪಲ್ ಕಂಪನಿಯ ಅಧಿಕೃತ ಸರ್ವಿಸ್ ಸೆಂಟರನಲ್ಲಿ ತೋರಿಸಿದಾಗಲೂ ದೋಷ ಇರುವುದು ಕಂಡುಬಂತು. ಸದರಿ ಐಫೋನ್ ಮೇಲೆ ಜಖಂಗಳು ಇರುವುದರಿಂದ ಅವುಗಳು ವಾರಂಟಿಯಲ್ಲಿ ಕವರ ಆಗುವುದಿಲ್ಲ ಅಂದರು. ಅದಕ್ಕೆ ತಗಲುವ ವೆಚ್ಚ ಕೊಟ್ಟಲ್ಲಿ ಸರಿಪಡಿಸಿಕೊಡುವುದಾಗಿ ಬೆಂಗಳೂರಿನ ಸರ್ವಿಸ್ ಸೆಂಟರನವರು ಹೇಳಿದರು. ಐಫೋನ್ ಖರೀದಿಸಿದ ಒಂದೇ ದಿನದಲ್ಲಿ ದೋಷ ಕಂಡುಬಂದಿರುವುದರಿಂದ ಅದನ್ನು ಪುಕ್ಕಟೆಯಾಗಿ ಸರಿಪಡಿಸಿಕೊಡುವುದು ಉತ್ಪಾದರು ಮತ್ತು ಇತರೆ ಎದುರುದಾರರ ಕರ್ತವ್ಯವಾಗಿದೆ. ಅದರೆ ಎಲ್ಲ ಎದುರುದಾರರು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ವಿಫಲರಾಗಿ ತನಗೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಎಸಗಿದ್ದಾರೆ ಅಂತಾ ಹೇಳಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೋರಿ ದೂರುದಾರ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ:28.02.2023 ರಂದು ದೂರು ಸಲ್ಲಿಸಿದ್ದರು.
ಇದನ್ನೂ ಓದಿ- ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ : ಯಾರಾಗಲಿದ್ದಾರೆ ಬಿಜೆಪಿ ಅಭ್ಯರ್ಥಿ..?
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ.ಭೂತೆ, ಸದಸ್ಯರಾದ ವಿಶಾಲಾಕ್ಷಿ.ಅ. ಬೋಳಶೆಟ್ಟಿ ಹಾಗೂ ಪ್ರಭು .ಸಿ ಹಿರೇಮಠ ಸದರಿ ಆಪಲ್ ಐಫೋನ್ ಖರೀದಿಸಿದ ಒಂದೇ ದಿನದಲ್ಲಿ ಅದರಲ್ಲಿ ದೋಷ ಕಂಡುಬಂದಿದ್ದರಿಂದ ಮತ್ತು ಆ ಬಗ್ಗೆ ದೂರುದಾರ ದೂರಿದರೂ ಎದುರುದಾರ ನಂ.3/ಆಪಲ್ ಕಂಪನಿಯವರು ಅದರ ದೋಷ ಸರಿಪಡಿಸಲು ಸೂಕ್ತ ಕ್ರಮ ಕೈಗೊಳ್ಳದೇ ಸೇವಾ ನ್ಯೂನ್ಯತೆ ಎಸಗಿರುವುದು ಮೇಲ್ನೊಟಕ್ಕೆ ಕಂಡುಬಂದಿದೆ ಅಂತಾ ಆಯೋಗ ಅಭಿಪ್ರಾಯ ಪಟ್ಟುತೀರ್ಪು ನೀಡಿದೆ. ಸದರಿ ಐಫೋನಿನಲ್ಲಿ ಉತ್ಪಾದನಾ ದೋಷ ಕಂಡು ಬಂದಿದ್ದರಿಂದ ಎದುರುದಾರ ನಂ.3/ಆಪಲ್
ಕಂಪನಿಯವರನ್ನು ಮಾತ್ರ ಹೊಣೆಗಾರರನ್ನಾಗಿಸಿ ಆಯೋಗ ಆದೇಶಿಸಿದೆ. ಸದರಿ ಆಪಲ್ ಕಂಪನಿಯವರು ಈ ತೀರ್ಪು ನೀಡಿದ ಒಂದು ತಿಂಗಳೊಳಗೆ ದೂರುದಾರನಿಂದ ಹಳೆಯ ಆಪಲ್ ಐಫೋನ್ ಪಡೆದುಕೊಂಡು ನೂತನ ಐಫೋನ್ ಕೊಡುವಂತೆ ಆಯೋಗ ನಿರ್ದೇಶಿಸಿದೆ. ತಪ್ಪಿದ್ದಲ್ಲಿ ಆ ಐಫೋನಿನ ಒಟ್ಟು ಮೊತ್ತ ರೂ.54,019/- ಮತ್ತು ಅದರ ಮೇಲೆ ಶೇ8% ರಂತೆ ತೀರ್ಪು ಆದ ದಿನದಿಂದ ಪೂರ್ತಿ ಹಣ ಸಂದಾಯವಾಗುವವರೆಗೆ ಬಡ್ಡಿ ಲೆಕ್ಕ ಹಾಕಿ ಹಣ ಸಂದಾಯ ಮಾಡುವಂತೆ ಎದುರುದಾರ ಆಪಲ್ ಕಂಪನಿಗೆ ಆಯೋಗ ತನ್ನ ತೀರ್ಪಿನಲ್ಲಿ ತಿಳಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ತೊಂದರೆಗಾಗಿ ಎದುರುದಾರ ನಂ.3/ಕಂಪನಿಯವರು ರೂ.25,000/-ಗಳ ಪರಿಹಾರ ಹಾಗೂ ರೂ.10,000/- ಪ್ರಕರಣದ ಖರ್ಚು ವೆಚ್ಚ ನೀಡುವಂತೆ ಆಯೋಗ ನಿರ್ದೇಶಿಸಿದೆ. ಅಲ್ಲದೇ ಉಳಿದ ಎಲ್ಲ ಎದುರುದಾರರ ವಿರುದ್ಧದ ದೂರನ್ನು ಆಯೋಗ ವಜಾಗೊಳಿಸಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.