ಬಾಣಂತಿ ಸಾವು, ಕುಟುಂಬಸ್ಥರ ನಿರ್ಲಕ್ಷ್ಯ ಆರೋಪ: ಹೆರಿಗೆಯಾದ ಗಂಟೆಯೊಳಗೆ ಕುಸಿದುಬಿದ್ದು ಮೃತಪಟ್ಟ ಮಹಿಳೆ

ಹೆರಿಗೆಯಾದ ಬಳಿಕ ರೇವತಿ ಸ್ನಾನದ ಮನೆಗೆ ತೆರಳಿದ್ದ ವೇಳೆ ಕುಸಿದು ಬಿದ್ದು ಅಸುನೀಗಿದ್ದಾರೆ ಎಂದು ತಿಳಿದುಬಂದಿದೆ.  ಪ್ರತಿ ತಿಂಗಳು ಆಸ್ಪತ್ರೆಗೆ ತೋರಿಸುತ್ತಿದ್ದ ಇವರು, ಹೆರಿಗೆ ನೋವು ಕಾಣಿಸಿಕೊಂಡಾಗ ಮನೆಯಲ್ಲೇ ಹೆರಿಗೆ ಮಾಡಿಸಿದ್ದಾರೆ. ಇನ್ನು ಮಹಿಳೆ ಮೃತಪಟ್ಟಿದ್ದ ಹಿನ್ನೆಲೆ ಹನೂರು ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ರಾಜೇಶ್ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡಿ ಕುಟುಂಬಸ್ಥರಿಂದ ಮಾಹಿತಿ ಪಡೆದುಕೊಂಡಿದ್ದಾರೆ.

Written by - Bhavishya Shetty | Last Updated : Dec 23, 2024, 09:18 PM IST
    • ಹೆರಿಗೆಯಾದ ಬಳಿಕ ರೇವತಿ ಸ್ನಾನದ ಮನೆಗೆ ತೆರಳಿದ್ದ ವೇಳೆ ಕುಸಿದು ಬಿದ್ದು ಅಸುನೀಗಿದ್ದಾರೆ
    • ಅರ್ಧನಾರಿಪುರದ ರಾಜೇಶ್ ಎಂಬವರ ಪತ್ನಿ ರೇವತಿ ಮೃತ ದುರ್ದೈವಿ
    • ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡಿ ಕುಟುಂಬಸ್ಥರಿಂದ ಮಾಹಿತಿ ಪಡೆದುಕೊಂಡಿದ್ದಾರೆ.
ಬಾಣಂತಿ ಸಾವು, ಕುಟುಂಬಸ್ಥರ ನಿರ್ಲಕ್ಷ್ಯ ಆರೋಪ: ಹೆರಿಗೆಯಾದ ಗಂಟೆಯೊಳಗೆ ಕುಸಿದುಬಿದ್ದು ಮೃತಪಟ್ಟ ಮಹಿಳೆ title=
File Photo

ಚಾಮರಾಜನಗರ: ಮನೆಯಲ್ಲಿ ಹೆರಿಗೆಯಾಗಿ ತಾಯಿ ಮೃತಪಟ್ಟಿರುವ ಘಟನೆ ಹನೂರು ತಾಲೂಕಿನ ಅರ್ಧನಾರಿಪುರದಲ್ಲಿ ನಡೆದಿದೆ. ಅರ್ಧನಾರಿಪುರದ ರಾಜೇಶ್ ಎಂಬವರ ಪತ್ನಿ ರೇವತಿ ಮೃತ ದುರ್ದೈವಿ. ರೇವತಿ ಅವರಿಗೆ ಎರಡನೇ ಹೆರಿಗೆ ಇದಾಗಿದ್ದು ಹೊಟ್ಟೆನೋವು ಕಾಣಿಸಿಕೊಂಡಾಗ ಮನೆಯಲ್ಲೇ ಹೆರಿಗೆ ಮಾಡಿಸಿದ್ದಾರೆ.

ಇದನ್ನೂ ಓದಿ: ಅಫೇರ್ ವದಂತಿಗಳ ಬಗ್ಗೆ ಅನುಷ್ಕಾ ಓಪನ್ ಕಾಮೆಂಟ್ಸ್, ಒಬ್ಬರಲ್ಲ, ಐವರೂ... ಯಾರು ಗೊತ್ತಾ?

ಹೆರಿಗೆಯಾದ ಬಳಿಕ ರೇವತಿ ಸ್ನಾನದ ಮನೆಗೆ ತೆರಳಿದ್ದ ವೇಳೆ ಕುಸಿದು ಬಿದ್ದು ಅಸುನೀಗಿದ್ದಾರೆ ಎಂದು ತಿಳಿದುಬಂದಿದೆ.  ಪ್ರತಿ ತಿಂಗಳು ಆಸ್ಪತ್ರೆಗೆ ತೋರಿಸುತ್ತಿದ್ದ ಇವರು, ಹೆರಿಗೆ ನೋವು ಕಾಣಿಸಿಕೊಂಡಾಗ ಮನೆಯಲ್ಲೇ ಹೆರಿಗೆ ಮಾಡಿಸಿದ್ದಾರೆ. ಇನ್ನು ಮಹಿಳೆ ಮೃತಪಟ್ಟಿದ್ದ ಹಿನ್ನೆಲೆ ಹನೂರು ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ರಾಜೇಶ್ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡಿ ಕುಟುಂಬಸ್ಥರಿಂದ ಮಾಹಿತಿ ಪಡೆದುಕೊಂಡಿದ್ದಾರೆ.

ನಿರ್ಲಕ್ಷದಿಂದ ಸಾವು?:
ಅರ್ಧನಾರಿಪುರ ಗ್ರಾಮದ ರಾಜೇಶ್ ರವರ ಪತ್ನಿಯ ರೇವತಿ ಗರ್ಭಿಣಿಯಾಗಿದ್ದ ಹಿನ್ನೆಲೆ ಆಶಾ ಕಾರ್ಯಕರ್ತೆ ಪ್ರತಿ ತಿಂಗಳು ಆಸ್ಪತ್ರೆಗೆ ಕರೆದು ತಜ್ಞ ವೈದ್ಯರಿಂದ ತಪಾಸಣೆ ನಡೆಸಿದ್ದಾರೆ. ಆದರೆ  ಹೆರಿಗೆ ಹೊಟ್ಟೆ ನೋವು ಕಾಣಿಸಿಕೊಂಡಾಗ ಮಾಹಿತಿ ನೀಡದೆ ಕುಟುಂಬಸ್ಥರೇ ಹೆರಿಗೆ ಮಾಡಿಸಿದ್ದಾರೆ, ನಂತರ ಆಶಾ ಕಾರ್ಯಕರ್ತೆಗೆ ದೂರವಾಣಿ ಮುಖಾಂತರ ಹೆರಿಗೆ ಆಗಿರುವ ವಿಚಾರ ತಿಳಿಸಿದ್ದಾರೆ. ಅವರು ತಡ ಮಾಡದೆ ಆಸ್ಪತ್ರೆಗೆ ಕರೆದುಕೊಂಡು ಬನ್ನಿ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ತಿಂಗಳಿಗೆ ಇಷ್ಟು ಬಾರಿ ಸಂಭೋಗ, ಹಸ್ತಮೈಥುನ ಮಾಡಿಕೊಂಡ್ರೆ ಈ ಮಾರಕ ಕಾಯಿಲೆ ಬರೋದೇ ಇಲ್ಲ..!

ಕುಟುಂಬಸ್ಥರು ಹೆರಿಗೆಯಾದ ಒಂದು ಗಂಟೆಗೆ ಬಿಸಿ ನೀರಿನಲ್ಲಿ ಸ್ನಾನ ಮಾಡಿಕೊಂಡು ಆಸ್ಪತ್ರೆಗೆ ಹೋಗೋಣ ಎಂದು ಸ್ನಾನ ಮಾಡಿಸಲು ಕಳುಹಿಸಿದ್ದಾರೆ ಈ ವೇಳೆ ಪ್ರಜ್ಞೆ ಕಳೆದುಕೊಂಡು ಸ್ಥಾನದ ಮನೆಯಲ್ಲಿಯೇ ಕುಸಿದು ಬಿದ್ದಿದ್ದಾರೆ. ನಂತರ ಇವರೇ ಸರಿ ಹೋಗಬಹುದು ಎಂದು ತಿಳಿದುಕೊಂಡು ಮನೆಯಲ್ಲಿಯೇ ಇರಿಸಿಕೊಂಡಿದ್ದಾರೆ. ಯಾವಾಗ ಪ್ರಜ್ಞೆ ಬಾರದಿದ್ದಾಗ ಸುಮಾರು ಒಂದು ಗಂಟೆ ವೇಳೆಗೆ ಪಿ ಜಿ ಪಾಳ್ಯ ಆಸ್ಪತ್ರೆಗೆ ಕರೆದುೊಯ್ದಿದ್ದಾರೆ ಆ ವೇಳೆಗಾಗಲೇ ಮೃತಪಟ್ಟಿದ್ದರು ಎಂದು ಆಸ್ಪತ್ರೆಯ ಸಿಎಚ್‌ಒ ಮಲ್ಲೇಶ್ ರವರಿಂದ ತಿಳಿದು ಬಂದಿದೆ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್
  ಮಾಡಿ

 

Trending News