Money Vastu: 2025ರಲ್ಲಿ ಈ 7 ರಾಶಿಗಳಿಗೆ ದುಡ್ಡಿನ ಕೊರತೆಯೇ ಬರುವುದಿಲ್ಲ!! ನಿಮ್ಮ ರಾಶಿಯೂ ಇದ್ಯಾ ನೋಡಿ

2025ರ ಹೊಸ ವರ್ಷಕ್ಕೆ ಕಾಲಿಟ್ಟ ಮೇಲೆ ಬಹುತೇಕ ಜನರು ತಮ್ಮ ಆರ್ಥಿಕ ಸ್ಥಿತಿಗತಿ ಮತ್ತು ಸಂಪತ್ತಿನ ಭವಿಷ್ಯದ ಬಗ್ಗೆ ಯೋಚಿಸುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಗಳಿಗೆ ಈ ವರ್ಷ ಶ್ರೀಮಂತಿಕೆ ಮತ್ತು ಸಂಪತ್ತು ಹೆಚ್ಚಾಗುವ ಸಾಧ್ಯತೆ ಇದೆ. ಈ ವರ್ಷ ಅಪಾರ ಸುಖ-ಸಂಪತ್ತು ಗಳಿಸುವ ರಾಶಿಯಗಳು ಯಾವುದು ಎಂದು ತಿಳಿಯಿರಿ...  

Written by - Puttaraj K Alur | Last Updated : Dec 22, 2024, 08:43 PM IST
  • ಮಕರ ರಾಶಿಯವರು ಶಿಸ್ತು & ಕಠಿಣ ಪರಿಶ್ರಮದಿಂದ 2025ರಲ್ಲಿ ಆರ್ಥಿಕ ಯಶಸ್ಸು ಸಾಧಿಸುತ್ತಾರೆ
  • ಮೀನ ರಾಶಿಯವರಿಗೆ ಆರ್ಥಿಕವಾಗಿ 2025ರ ಹೊಸ ವರ್ಷವು ಸಮೃದ್ಧ ವರ್ಷವಾಗಿರುತ್ತದೆ
  • ಈ ಅವಧಿಯಲ್ಲಿ ಮೇಷ ರಾಶಿಯವರು ಮಾಡಿದ ಹೂಡಿಕೆಗಳು ಸಾಕಷ್ಟು ಲಾಭ ತರುವ ಸಾಧ್ಯತೆ ಇದೆ
Money Vastu: 2025ರಲ್ಲಿ ಈ 7 ರಾಶಿಗಳಿಗೆ ದುಡ್ಡಿನ ಕೊರತೆಯೇ ಬರುವುದಿಲ್ಲ!! ನಿಮ್ಮ ರಾಶಿಯೂ ಇದ್ಯಾ ನೋಡಿ title=
ಹಣದ ವಾಸ್ತು

Astro Money Tips: 2025ರ ಹೊಸ ವರ್ಷಕ್ಕೆ ಕಾಲಿಟ್ಟ ಮೇಲೆ ಬಹುತೇಕ ಜನರು ತಮ್ಮ ಆರ್ಥಿಕ ಸ್ಥಿತಿಗತಿ ಮತ್ತು ಸಂಪತ್ತಿನ ಭವಿಷ್ಯದ ಬಗ್ಗೆ ಯೋಚಿಸುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಗಳಿಗೆ ಈ ವರ್ಷ ಶ್ರೀಮಂತಿಕೆ ಮತ್ತು ಸಂಪತ್ತು ಹೆಚ್ಚಾಗುವ ಸಾಧ್ಯತೆ ಇದೆ. ಈ ವರ್ಷ ಅಪಾರ ಸುಖ-ಸಂಪತ್ತು ಗಳಿಸುವ ರಾಶಿಯಗಳು ಯಾವುದು ಎಂದು ತಿಳಿಯಿರಿ...  

ಮೇಷ ರಾಶಿ(Aries): ಮೇಷ ರಾಶಿಯವರಿಗೆ ಆರ್ಥಿಕವಾಗಿ ಹೊಸ ವರ್ಷವು ಉತ್ತಮವಾಗಿರುತ್ತದೆ. ನಿಮ್ಮ ದೃಢ ಸಂಕಲ್ಪ ಮತ್ತು ಎಚ್ಚರಿಕೆಯಿಂದ ಹೊಸ ಅವಕಾಶಗಳು ಸಿಗಲಿವೆ. ನಿಮ್ಮ ವ್ಯಾಪಾರ-ವ್ಯವಹಾರಗಳು ಅತ್ಯಂತ ಯಶಸ್ವಿಯಾಗಿ ನಡೆಯುತ್ತವೆ. ಈ ಅವಧಿಯಲ್ಲಿ ಮಾಡಿದ ಹೂಡಿಕೆಗಳು ನಿಮಗೆ ಸಾಕಷ್ಟು ಲಾಭವನ್ನು ತರುವ ಸಾಧ್ಯತೆ ಇದೆ.

ಸಿಂಹ ರಾಶಿ(Leo): ಸಿಂಹ ರಾಶಿಯವರು ಆರ್ಥಿಕ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲಿದ್ದಾರೆ. ನಿಮ್ಮ ನಾಯಕತ್ವ ಗುಣಗಳಿಂದ ಉತ್ತಮ ವ್ಯವಹಾರಗಳು ನಡೆಯಲಿವೆ. ವ್ಯಾಪಾರದಲ್ಲಿ ನೀವು ಭರ್ಜರಿ ಲಾಭವನ್ನು ಗಳಿಸುತ್ತೀರಿ. ಈ ವರ್ಷ ಸಿಂಹ ರಾಶಿಯವರು ತಮ್ಮ ದೀರ್ಘಾವಧಿಯ ಆರ್ಥಿಕ ಗುರಿಗಳನ್ನು ಸಾಧಿಸಬಹುದು.

ಕನ್ಯಾ ರಾಶಿ (Virgo): ಕನ್ಯಾ ರಾಶಿಯವರು ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವತ್ತ ಗಮನಹರಿಸಿಬೇಕು. 2025ರಲ್ಲಿ ನೀವು ಉತ್ತಮ ಆರ್ಥಿಕ ಸಾಧನೆ ಮಾಡುತ್ತೀರಿ. ನೀವು ಉತ್ತಮ ಹೂಡಿಕೆಗಳ ಮೂಲಕ ಭರ್ಜರಿ ಲಾಭವನ್ನು ಗಳಿಸುತ್ತೀರಿ. ನಿಮ್ಮ ಸಂಪತ್ತಿನಲ್ಲಿ ಸ್ಥಿರವಾದ ಬೆಳವಣಿಗೆ ನೋಡುತ್ತೀರಿ.

ಇದನ್ನೂ ಓದಿ: Astro Tips: 2025ರ ಹೊಸ ವರ್ಷದಲ್ಲಿ ಈ 4 ರಾಶಿಯ ಜನರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ!!

ತುಲಾ ರಾಶಿ(Libra): ತುಲಾ ರಾಶಿಯವರು ತಮ್ಮ ಆರ್ಥಿಕ ವಿಷಯಗಳಲ್ಲಿ ಸಮತೋಲನ & ಶಾಂತಿಯನ್ನು ಕಾಪಾಡಿಕೊಳ್ಳಬೇಕು. ನೀವು ವ್ಯಾಪಾರದಲ್ಲಿ ಉತ್ತಮ ಲಾಭ ಕಂಡುಕೊಳ್ಳುತ್ತೀರಿ. ಈ ವರ್ಷ ತುಲಾ ರಾಶಿಯವರು ಆರ್ಥಿಕ ಸ್ಥಿರತೆ ಮತ್ತು ಬೆಳವಣಿಗೆಯಲ್ಲಿ ಭಾರೀ ಪ್ರಗತಿಯನ್ನು ಕಾಣುತ್ತೀರಿ. ಶೀಘ್ರವೇ ನೀವು ಒಳ್ಳೆಯ ಸುದ್ದಿಗಳನ್ನು ಪಡೆಯುತ್ತೀರಿ.

ವೃಶ್ಚಿಕ ರಾಶಿ (Scorpio): ವೃಶ್ಚಿಕ ರಾಶಿಯವರು ಆರ್ಥಿಕ ವಿಷಯದಲ್ಲಿ ಪ್ರಗತಿ ಸಾಧಿಸುತ್ತಾರೆ. ನಿಮ್ಮ ದೃಢಸಂಕಲ್ಪ ಮತ್ತು ಚಿಂತನೆಯನ್ನು ನಿಮಗೆ ಅಪಾರ ಯಶಸ್ಸು ಸಿಗಲಿದೆ. ಈ ವರ್ಷ ವೃಶ್ಚಿಕ ರಾಶಿಯವರಿಗೆ ಅಪಾರ ಸುಖ-ಸಂಪತ್ತು ಗಳಿಸುತ್ತಾರೆ. 

ಮಕರ ರಾಶಿ (Capricorn): ಮಕರ ರಾಶಿಯವರು ತಮ್ಮ ಶಿಸ್ತು ಮತ್ತು ಕಠಿಣ ಪರಿಶ್ರಮದಿಂದ 2025ರಲ್ಲಿ ಉತ್ತಮ ಆರ್ಥಿಕ ಯಶಸ್ಸನ್ನು ಸಾಧಿಸುತ್ತಾರೆ. ಉಳಿತಾಯ ಮತ್ತು ಹೂಡಿಕೆಗಳಲ್ಲಿ ಉತ್ತಮ ಬೆಳವಣಿಗೆಯನ್ನು ಕಾಣುತ್ತಾರೆ. ಇದು ನಿಮಗೆ ಹೆಚ್ಚು ಸುರಕ್ಷಿತ ಆರ್ಥಿಕ ಭವಿಷ್ಯವನ್ನು ತರುತ್ತದೆ.

ಮೀನ ರಾಶಿ (Pisces): ಮೀನ ರಾಶಿಯವರಿಗೆ ಆರ್ಥಿಕವಾಗಿ ಇದು ಸಮೃದ್ಧ ವರ್ಷವಾಗಿದೆ. ನಿಮ್ಮ ಸೃಜನಶೀಲತೆಯಿಂದ ಹೊಸ ಆದಾಯದ ಮಾರ್ಗಗಳು ಮತ್ತು ಅವಕಾಶಗಳು ಸಿಗಲಿವೆ. ಈ ವರ್ಷ ಮೀನ ರಾಶಿಯವರು ಅಪಾರ ಸಂಪತ್ತು ಗಳಿಸುತ್ತಾರೆ. ಒಟ್ಟಾರೆ ಹೊಸ ವರ್ಷವು ಈ ರಾಶಿಯವರಿಗೆ ಉತ್ತಮವಾಗಿರುತ್ತದೆ. 

ಇದನ್ನೂ ಓದಿ: ಕುಂಭದಲ್ಲಿ ಶುಕ್ರ.. ಈ ರಾಶಿಗೆ ಸುವರ್ಣಯುಗ, ಹೊಸ ವರ್ಷದ ಆರಂಭದಿಂದಲೇ ಚಿನ್ನದಂತೆ ಹೊಳೆಯುವುದು ಅದೃಷ್ಟ, ಬಹುದೊಡ್ಡ ಕನಸೊಂದು ನನಸಾಗುವ ಸುವರ್ಣ ಕಾಲ!

(ಗಮನಿಸಿರಿ: ಇಲ್ಲಿ ನೀಡಿರುವ ಮಾಹಿತಿ ಸಾಮಾನ್ಯ ಮಾಹಿತಿ ಮತ್ತು ಜ್ಯೋತಿಷ್ಯಶಾಸ್ತ್ರವನ್ನು ಆಧರಿಸಿರುತ್ತದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News