ನವದೆಹಲಿ: ಪಾಟ್ನಾದ ಫುಲ್ವಾರಿ ಶರೀಫ್ ಖಾಸಗಿ ಶಾಲೆಯ ಪ್ರಿನ್ಸಿಪಾಲ್ ಮತ್ತು ಕ್ಲರ್ಕ್ 5 ನೇ ತರಗತಿಯ 5ನೇ ತರಗತಿ ವಿದ್ಯಾರ್ಥಿನಿಯನ್ನು ಒಂಬತ್ತು ತಿಂಗಳ ಕಾಲ ಶಾಲಾ ಆವರಣದಲ್ಲಿ ಅತ್ಯಾಚಾರ ಮಾಡಿದ್ದಕ್ಕಾಗಿ ಬಂಧಿಸಲಾಗಿದೆ.
ವಿದ್ಯಾರ್ಥಿನಿ ಶಾಲೆಯಿಂದ ಹಿಂದಿರುಗಿ ವಾಂತಿ ಮಾಡಲು ಪ್ರಾರಂಭಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ.ಈ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಆಕೆ ಗರ್ಭಿಣಿ ಎಂದು ಹೇಳಲಾಗಿದೆ.
ಈ ಸಂಗತಿ ತಿಳಿದ ನಂತರ ವಿದ್ಯಾರ್ಥಿನಿಯನ್ನು ನಂತರ ಪ್ರಿನ್ಸಿಪಾಲ್ ಮತ್ತು ಗುಮಾಸ್ತರಿಂದ ಲೈಂಗಿಕವಾಗಿ ಬಳಸಿಕೊಂಡಿದ್ದರೆಂದು ಆಕೆ ಪೋಷಕರ ಎದುರು ಬಾಯಿಬಿಟ್ಟಿದ್ದಾಳೆ. ಇದಾದ ನಂತರ ಆಕೆಯ ಪೋಷಕರು ಪೊಲೀಸರಿಗೆ ದೂರುಸಲ್ಲಿಸಿದ್ದಾರೆ.
ಪಾಟ್ನಾ ಹಿರಿಯ ಪೊಲೀಸ್ ಸೂಪರಿಂಟೆಂಡೆಂಟ್ (ಎಸ್ಎಸ್ಪಿ) ಮನು ಮಹಾರಾಜ್ ಈ ಘಟನೆಯನ್ನು ದೃಢಪಡಿಸಿದ್ದು ಮತ್ತು ಈ ಘಟನೆಯ ವಿಚಾರವಾಗಿ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.