Delhi Election Results 2025 : ಇಂದು ದೆಹಲಿ ಚುನಾವಣೆ ಫಲಿತಾಂಶ.. ಯಾರ ಪಾಲಾಗುತ್ತೆ ಗೆಲುವು?

Delhi Elections Result 2025: ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಇಂದು ಅಂದರೆ ಫೆಬ್ರವರಿ 8 ರಂದು ಪ್ರಕಟಗೊಳ್ಳಲಿದೆ. ದೆಹಲಿಯಲ್ಲಿ ಮತದಾನ ಪ್ರಕ್ರಿಯೆಯು ಫೆಬ್ರವರಿ 5 ರಂದು ಪೂರ್ಣಗೊಂಡಿತು. 

Written by - Chetana Devarmani | Last Updated : Feb 8, 2025, 06:40 AM IST
  • ದೆಹಲಿ ವಿಧಾನಸಭಾ ಚುನಾವಣೆ 2025
  • ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶ
  • ದೆಹಲಿ ವಿಧಾನಸಭಾ ಚುನಾವಣೆ ಮತ ಎಣಿಕೆ
Delhi Election Results 2025 : ಇಂದು ದೆಹಲಿ ಚುನಾವಣೆ ಫಲಿತಾಂಶ.. ಯಾರ ಪಾಲಾಗುತ್ತೆ ಗೆಲುವು?  title=

Delhi Elections Result 2025: ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಇಂದು ಅಂದರೆ ಫೆಬ್ರವರಿ 8 ರಂದು ಪ್ರಕಟಗೊಳ್ಳಲಿದೆ. ದೆಹಲಿಯಲ್ಲಿ ಮತದಾನ ಪ್ರಕ್ರಿಯೆಯು ಫೆಬ್ರವರಿ 5 ರಂದು ಪೂರ್ಣಗೊಂಡಿತು. ಚುನಾವಣಾ ಆಯೋಗ ಅಂತಿಮ ಮತದಾನದ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. ಚುನಾವಣಾ ಆಯೋಗದ ಪ್ರಕಾರ, ರಾಜಧಾನಿಯಲ್ಲಿ ಒಟ್ಟು ಶೇ. 60.54 ರಷ್ಟು ಮತದಾನ ನಡೆದಿದೆ. ದೆಹಲಿಯ ಮುಖ್ಯ ಚುನಾವಣಾ ಅಧಿಕಾರಿ ಒದಗಿಸಿದ ಮಾಹಿತಿಯ ಪ್ರಕಾರ, ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು ಮತದಾನ ಪ್ರಮಾಣ 60.54% ಆಗಿತ್ತು. ಮುಸ್ತಫಾಬಾದ್ ವಿಧಾನಸಭಾ ಕ್ಷೇತ್ರದಲ್ಲಿ ಗರಿಷ್ಠ ಮತದಾನ ನಡೆದಿದೆ. 69.09% ಮತದಾರರು ಮತ ಚಲಾಯಿಸಿದರೆ, ಕಡಿಮೆ ಮತದಾನ ನಡೆದಿದ್ದು ಮಾಡೆಲ್ ಟೌನ್‌ನಲ್ಲಿ, ಅಲ್ಲಿ 53.62% ಮತದಾರರು ಮತ ಚಲಾಯಿಸಿದರು.

ಚುನಾವಣಾ ಆಯೋಗದ ಪ್ರಕಾರ, ದೆಹಲಿಯಲ್ಲಿ 50,42,988 ಪುರುಷ ಮತದಾರರು ಮತ ಚಲಾಯಿಸಿದ್ದರೆ, ಮಹಿಳಾ ಮತದಾರರ ಸಂಖ್ಯೆ 44,08,606. ನರೇಲಾದಲ್ಲಿ ಶೇ.61.85, ಬುರಾರಿಯಲ್ಲಿ ಶೇ.59.48, ತಿಮಾರ್ಪುರದಲ್ಲಿ ಶೇ.55.98, ಆದರ್ಶ್ ನಗರದಲ್ಲಿ ಶೇ.56.43, ಬದ್ಲಿಯಲ್ಲಿ ಶೇ.63.03, ರಿಥಾಲಾದಲ್ಲಿ ಶೇ.57.89, ಬವಾನಾದಲ್ಲಿ ಶೇ.59.46, ಮುಂಡ್ಕಾದಲ್ಲಿ ಶೇ.60.3, ಕಿರಾಡಿಯಲ್ಲಿ ಶೇ.62.39, ಸುಲ್ತಾನ್ ಮಜ್ರಾದಲ್ಲಿ ಶೇ.60.25, ನಂಗ್ಲೋಯ್ ಜಾಟ್‌ನಲ್ಲಿ ಶೇ.59.7, ಮಂಗೋಲ್‌ಪುರಿಯಲ್ಲಿ ಶೇ.64.81, ಚಾಂದನಿ ಚೌಕ್‌ನಲ್ಲಿ ಶೇ.55.96, ಬಲ್ಲಿಮಾರನ್‌ನಲ್ಲಿ ಶೇ.65.11 ಮತ್ತು ಕರೋಲ್ ಬಾಗ್‌ನಲ್ಲಿ ಶೇ.54.55 ರಷ್ಟು ಮತದಾನ ದಾಖಲಾಗಿದೆ.

ರಾಜಧಾನಿಯ ಎಲ್ಲಾ 70 ಸ್ಥಾನಗಳಿಗೂ 699 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮತದಾನ ಮುಗಿಯುತ್ತಿದ್ದಂತೆ, ಅಭ್ಯರ್ಥಿಗಳ ಭವಿಷ್ಯ ಇವಿಎಂನಲ್ಲಿ ಸೆರೆಹಿಡಿಯಲ್ಪಡುತ್ತದೆ. ಶನಿವಾರ ಅಂದರೆ ಫೆಬ್ರವರಿ 8 ರಂದು ಮತೆಣಿಕೆ ಕಾರ್ಯ ನಡೆಯಲಿದೆ. 

ಇದನ್ನೂ ಓದಿ: Delhi Election Result: ದೆಹಲಿ ಚುನಾವಣೋತ್ತರ ಸಮೀಕ್ಷೆ: ಯಾವ ಪಕ್ಷದತ್ತ ಮತದಾರನ ಒಲವು? ಬಿಜೆಪಿ ಗೆದ್ದರೆ ಮುಂದಿನ ಸಿಎಂ ಯಾರು? ಇಲ್ಲಿದೆ ವಿವರ

ಸದ್ಯ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರವಿದೆ. 2013, 2015, 2020 ರಲ್ಲಿ ಎಎಪಿ ಸತತವಾಗಿ ಗೆಲುವು ಸಾಧಿಸಿತ್ತು. ಈ ಬಾರಿ ಹ್ಯಾಟ್ರಿಕ್‌ ನಿರೀಕ್ಷೆಯಲ್ಲಿ ಎಎಪಿ ಇದ್ದರೆ, ಬಿಜೆಪಿ ಗೆಲ್ಲಬಹುದಾ ಎಂಬ ಕುತೂಹಲ ಕೂಡ ಹೆಚ್ಚಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ. ಆಮ್ ಆದ್ಮಿ ಪಕ್ಷ (ಎಎಪಿ), ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ, ಬಹುತೇಕ ಬಿಜೆಪಿಗೆ ಬಹುಮತ ಸಿಗಲಿದೆ ಎಂದು ಹೇಳಲಾಗಿದೆ. 

ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ಪ್ರಕಾರ, ಬಿಜೆಪಿ ದೆಹಲಿಯ 70 ಸ್ಥಾನಗಳಲ್ಲಿ 45ರಿಂದ 55 ಸ್ಥಾನಗಳನ್ನು ಗೆಲ್ಲುತ್ತದೆ. ಅರವಿಂದ್ ಕೇಜ್ರಿವಾಲ್ ಅವರ ಎಎಪಿ 15 ರಿಂದ 25 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಹೇಳಿದೆ. ಸಿಎನ್‌ಎಕ್ಸ್ ಪ್ರಕಾರ,  ರಿಂದ 61 ಸ್ಥಾನಗಳನ್ನು ಪಡೆದು ಬಿಜೆಪಿ ಅಧಿಕಾರಕ್ಕೇರುವ ಸಾಧ್ಯತೆ ಇದೆ. ಮ್ಯಾಟ್ರಿಜ್ ಸಮೀಕ್ಷೆ ಪ್ರಕಾರ, ಎಎಪಿ 32ರಿಂದ 37 ಸ್ಥಾನಗಳನ್ನು ಪಡೆಯುತ್ತದೆ. ಬಿಜೆಪಿಗೆ 35-40 ಸ್ಥಾನ ಸಿಗಲಿದೆ ಎಂದು ಹೇಳಿದೆ.

ಪಿ-ಮಾರ್ಕ್ ಸಮೀಕ್ಷೆ ಪ್ರಕಾರ, ಆಮ್ ಆದ್ಮಿ 39ರಿಂದ 44 ಸ್ಥಾನಗಳು ಸಿಗಬಹುದು, ಹೀಗಾಗಿ ಮತ್ತೆ ಎಎಪಿ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದೆ. ಇದೊಂದೇ ಸಮೀಕ್ಷೆ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬರುವ ಸಾಧ್ಯತೆಯಿದೆ ಎಂದು ಹೇಳಿದೆ. ಪೋಲ್ ಡೈರಿ ಪ್ರಕಾರ, ಬಿಜೆಪಿಗೆ 42ರಿಂದ 50 ಸ್ಥಾನ, ಜೆವಿಸಿ 39ರಿಂದ 45 ಸ್ಥಾನ ಪಡೆಯಬಹುದು ಎಂದು ಹೇಳಿದೆ.

ಇದನ್ನೂ ಓದಿ: Daily GK Quiz: ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಸಾಹಿತಿ ಯಾರು..?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News