ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯು ಜಾರ್ಖಂಡ್ ವಿಧಾನಸಭಾ ಕುನವನೆಯೊಂದಿಗೆ ನಡೆಯುವುದಿಲ್ಲ. 2020ರ ಜನವರಿಯಲ್ಲಿ ದೆಹಲಿ ಚುನಾವಣೆಗೆ ದಿನಾಂಕ ಘೋಷಣೆಯಾಗಲಿದ್ದು, ಫೆಬ್ರವರಿಯಲ್ಲಿ ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.
ಫೆಬ್ರವರಿ 2020ಕ್ಕೆ ದೆಹಲಿ ವಿಧಾನಸಭೆಯ ಅಧಿಕಾರಾವಧಿ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ವರ್ಷದ ಅಂತ್ಯಕ್ಕೆ ಚುನಾವಣೆ ಘೋಷಣೆಯಾಗಬಹುದು ಎಂದು ಎಎಪಿ ಊಹಿಸಿತ್ತು. ಆದರೀಗ ಎಲ್ಲಾ ಲೆಕ್ಕಾಚಾರ ತಲೆಕೆಳಗಾಗಿದೆ.
ಪ್ರಸ್ತುತ ದೆಹಲಿ ವಿಧಾನಸಭೆಯ ಅವಧಿ 2020ರ ಫೆಬ್ರವರಿ 22 ರಂದು ಮುಕ್ತಾಯಗೊಳ್ಳಲಿರುವುದರಿಂದ 2020ರ ಆರಂಭದಲ್ಲಿ ದೆಹಲಿ ಚುನಾವಣೆ ನಡೆಯಲಿವೆ.