ಬಿಜೆಪಿಗೆ ಬಾಲಿವುಡ್ ಹಿರಿಯ ನಟಿ ಮೌಸಮಿ ಚಟರ್ಜಿ ಸೇರ್ಪಡೆ

ಮೌಸಮಿ ಚಟರ್ಜಿ ಬಿಜೆಪಿ ಸೇರ್ಪಡೆಗೊಂಡಿರುವ ಹಿನ್ನೆಲೆಯಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅವರು ಪಶ್ಚಿಮ ಬಂಗಾಳದಿಂದ ಕಣಕ್ಕಿಳಿಯುವ ಸಾಧ್ಯತೆಗಳಿವೆ.

Last Updated : Jan 2, 2019, 08:43 PM IST
ಬಿಜೆಪಿಗೆ ಬಾಲಿವುಡ್ ಹಿರಿಯ ನಟಿ ಮೌಸಮಿ ಚಟರ್ಜಿ ಸೇರ್ಪಡೆ title=

ನವದೆಹಲಿ: ಬಾಲಿವುಡ್ ಹಿರಿಯ ನಟಿ ಮೌಸಮಿ ಚಟರ್ಜಿ(70) ಅವರು ಬುಧವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. 

2004 ರಲ್ಲಿ ಕಾಂಗ್ರೆಸ್ ಪಕ್ಷದಿಂದ ಕೋಲ್ಕತ್ತಾ ಈಶಾನ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಮೌಸಮಿ ಚಟರ್ಜಿ ಎಡ ಪಕ್ಷದ ಅಭ್ಯರ್ಥಿ ಮಹಮ್ಮದ್ ಸಲೀಂ ವಿರುದ್ಧ ಸೋಲನುಭವಿಸಿದ್ದರು. ಆ ಬಳಿಕ ರಾಜಕೀಯದಿಂದ ಹಿಂದೆ ಸರಿದಿದ್ದರು. ಆದರೀಗ ಬಿಜೆಪಿ ಸೇರ್ಪಡೆಗೊಂಡಿರುವ ಹಿನ್ನೆಲೆಯಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅವರು ಪಶ್ಚಿಮ ಬಂಗಾಳದಿಂದ ಕಣಕ್ಕಿಳಿಯುವ ಸಾಧ್ಯತೆಗಳಿವೆ.

1948 ರ ಏಪ್ರಿಲ್ 26 ರಂದು ಕೋಲ್ಕತ್ತಾದಲ್ಲಿ ಜನಿಸಿದ ಮೌಸಮಿ ಚಟರ್ಜಿ ಅವರು ಹಿಂದಿ ಮತ್ತು ಬಂಗಾಳಿ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಗಳಿಸಿದರು. 1967 ರಲ್ಲಿ ಬಾಲಿಕಾ ವಧು ಎಂಬ ಬೆಂಗಾಲಿ ಚಿತ್ರದೊಂದಿಗೆ ಅವರು ತಮ್ಮ ಚಲನಚಿತ್ರ ವೃತ್ತಿ ಜೀವನ ಪ್ರಾರಂಭಿಸಿದ ಮೌಸಮಿ, 1972 ರಲ್ಲಿ ಶಕ್ತಿ ಸಾಮಂತಾ ಅವರ ಅನುರಾಗ್ ಚಿತ್ರದಿಂದ ಬಾಲಿವುಡ್ ಪ್ರವೇಶ ಮಾಡಿದರು. ತಮ್ಮ ಮೊದಲನೇ ಚಿತ್ರಕ್ಕಾಗಿ ಬಾಲಿವುಡ್ ಫಿಲ್ಮ್ಫೇರ್ ಪ್ರಶಸ್ತಿಯನ್ನು ಗೆದ್ದ ಕೆಲವೇ ನಟಿಯರಲ್ಲಿ ಮೌಸಮಿ ಒಬ್ಬರು. 

Trending News