ನವದೆಹಲಿ: ನೂತನವಾಗಿ ರಚನೆಯಾಗಿರುವ ಕೇಂದ್ರದ ಸಚಿವ ಸಂಪುಟದಲ್ಲಿ ಶೇ 42 ರಷ್ಟು ಸಚಿವರು ಕ್ರಿಮಿನಲ್ ಹಿನ್ನಲೆಯನ್ನು ಹೊಂದಿದ್ದಾರೆ ಎನ್ನಲಾಗಿದೆ, ಒಟ್ಟು 78 ಜನರ ಸಚಿವ ಸಂಪುಟದಲ್ಲಿ ನೂತನವಾಗಿ 36 ಜನರನ್ನು ಹೊಸದಾಗಿ ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸಲಾಗಿದೆ. ಇದರಲ್ಲಿ 33 ಸಚಿವರ (ಶೇ 42) ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.
ಈ ಪೈಕಿ 24 ಕೊಲೆ, ಕೊಲೆ ಯತ್ನ ಮತ್ತು ದರೋಡೆಗೆ ಸಂಬಂಧಿಸಿದ ಗಂಭೀರ ಪ್ರಕರಣಗಳಿವೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ತನ್ನ ವರದಿಯಲ್ಲಿ ಪ್ರಕಟಿಸಿದೆ.ಸಚಿವರ ವಿರುದ್ಧದ ಪ್ರಕರಣಗಳನ್ನು ಚುನಾವಣಾ ಅಫಿಡವಿಟ್‌ಗಳ ಮೂಲಕ ಉಲ್ಲೇಖಿಸಿ ಎಡಿಆರ್ ವರದಿ ಮಾಡಿದೆ.
ಇದನ್ನೂ ಓದಿ: UP Population Bill: ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೆತ್ತರೆ ಸರ್ಕಾರಿ ಕೆಲಸವಿಲ್ಲ..!
ಅಲ್ಲದೆ, ಎಡಿಆರ್ ತನ್ನ ವಿಶ್ಲೇಷಣೆಯಲ್ಲಿ, ಹೊಸ ಕೇಂದ್ರ ಸಂಪುಟದಲ್ಲಿ (70 ಮಂತ್ರಿಗಳು) ಸುಮಾರು ಶೇ 90 ರಷ್ಟು ಸದಸ್ಯರು ಕೋಟ್ಯಾಧಿಪತಿಗಳು ಎಂದು ತಿಳಿಸಿದೆ, ಅಂದರೆ ಅವರು ಒಟ್ಟು ಆಸ್ತಿಯನ್ನು 1 ಕೋಟಿ ರೂ ಅಥವಾ ಅದಕ್ಕಿಂತಲೂ ಅಧಿಕವಗಿದೆ. ನಾಲ್ಕು ಮಂತ್ರಿಗಳಾದ ಜ್ಯೋತಿರಾದಿತ್ಯ ಸಿಂಧಿಯಾ (Jyotiraditya Scindia) (379 ಕೋಟಿ ರೂ.), ಪಿಯೂಷ್ ಗೋಯಲ್ (95 ಕೋಟಿ ರೂ.), ನಾರಾಯಣ್ ರಾಣೆ (87 ಕೋಟಿ ರೂ.), ಮತ್ತು ರಾಜೀವ್ ಚಂದ್ರಶೇಖರ್ (64 ಕೋಟಿ ರೂ.) ಅವರನ್ನು ಅತಿ ಶ್ರೀಮಂತ ಮಂತ್ರಿಗಳು ಎಂದು ವರ್ಗೀಕರಿಸಲಾಗಿದೆ. ಅಂದರೆ ಅವರು 50 ಕೋಟಿ ರೂ.ಗಿಂತ ಹೆಚ್ಚಿನ ಆಸ್ತಿಯನ್ನು ಘೋಷಿಸಿದ್ದಾರೆ.
17th Lok Sabha Analysis of Criminal, Financial, and Other background details of Union Council of Ministers Post Cabinet Expansion on 7th July, 2021
Full report: https://t.co/u4449cxG0C#LokSabha #CabinetMinisters #Ministers #17thLokSabha #KnowYourNeta #ADRReport pic.twitter.com/Ewcd7QHO6S
— ADR India & MyNeta (@adrspeaks) July 9, 2021
ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿರುವ ಕೇಂದ್ರ ಸಚಿವರ ಪ್ರಮಾಣ ವಿಸ್ತರಣೆಯ ನಂತರ ಶೇಕಡಾ 3 ರಷ್ಟು ಏರಿಕೆಯಾಗಿದೆ. 2019 ರಲ್ಲಿ ಎಡಿಆರ್ ನಡೆಸಿದ ವಿಶ್ಲೇಷಣೆಯಲ್ಲಿ, ಮೊದಲ ಕ್ಯಾಬಿನೆಟ್ ಪ್ರಮಾಣವಚನ ಸ್ವೀಕರಿಸಿದಾಗ, 56 ಮಂತ್ರಿಗಳಲ್ಲಿ ಶೇ 39 ಜನರು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿದ್ದಾರೆ ಎಂದು ತೋರಿಸಿದೆ.ಆ ಕ್ಯಾಬಿನೆಟ್ನಲ್ಲಿಯೂ ಸಹ, ಬಹುಪಾಲು ಸಚಿವರು ( ಶೇ 91) ಕೊಟ್ಯಾಧಿಶರಾಗಿದ್ದರು.
ಪ್ರತಿ ಸಚಿವರಿಗೆ ಸರಾಸರಿ 16.24 ಕೋಟಿ ರೂ. ಆಸ್ತಿ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕನಿಷ್ಠ ಪ್ರಮಾಣದ ಆಸ್ತಿ ಹೊಂದಿರುವ ಕ್ಯಾಬಿನೆಟ್ ಮಂತ್ರಿಗಳಲ್ಲಿ: ತ್ರಿಪುರದ ಪ್ರತಿಮಾ ಭೂಮಿಕ್ (ಸುಮಾರು 6 ಲಕ್ಷ ರೂ.), ಪಶ್ಚಿಮ ಬಂಗಾಳದ ಜಾನ್ ಬಾರ್ಲಾ (ಸುಮಾರು 14 ಲಕ್ಷ ರೂ.), ರಾಜಸ್ಥಾನದಿಂದ ಕೈಲಾಶ್ ಚೌಧರಿ (ಸುಮಾರು 24 ಲಕ್ಷ ರೂ.), ಒಡಿಶಾದ ಬಿಶ್ವೇಶ್ವರ ತುಡು (ಸುಮಾರು 27 ಲಕ್ಷ ರೂ.), ಮತ್ತು ಮಹಾರಾಷ್ಟ್ರದ ವಿ ಮುರಳಿಧರನ್ (ಸುಮಾರು 27 ಲಕ್ಷ ರೂ.).ಅವರು ಸೇರಿದ್ದಾರೆ.
ಇದನ್ನೂ ಓದಿ: 7th Pay Commission Update : ಕೇಂದ್ರ ಸರ್ಕಾರಿ ನೌಕರರ ವೇತನದಲ್ಲಿ ಈ 5 ಪ್ರಮುಖ ಬದಲಾವಣೆಗಳು!
ಹೊಸ ಮಂತ್ರಿಗಳ ಶೈಕ್ಷಣಿಕ ಅರ್ಹತೆಯನ್ನು ವಿಶ್ಲೇಷಿಸಿದಾಗ, ಅವರಲ್ಲಿ ಹೆಚ್ಚಿನವರು (21) ಸ್ನಾತಕೋತ್ತರ ಪದವೀಧರರು ಎಂದು ವರದಿಯಲ್ಲಿ ತಿಳಿಸಲಾಗಿದೆ. ಒಂಬತ್ತು ಮಂತ್ರಿಗಳು ಡಾಕ್ಟರೇಟ್ ಪಡೆದರೆ, ತಲಾ 17 ಮಂದಿ ಪದವೀಧರರು ಮತ್ತು ವೃತ್ತಿಪರ ಪದವೀಧರರು. ಇಬ್ಬರು ಮಂತ್ರಿಗಳು ತಮ್ಮ ಎಂಟನೇ ತರಗತಿಯ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ, ಮೂವರು ಹತ್ತನೇ ತರಗತಿ ಹಾಗೂ ಏಳು ಜನರು 12 ನೇ ತರಗತಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.