Hardik Pandya Record: ಹಾರ್ದಿಕ್ ಪಾಂಡ್ಯ ಏನಾದರೂ ಒಂದು ದಾಖಲೆ ಮಾಡುತ್ತಲೇ ಇರುತ್ತಾರೆ. ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಇಂದಿನ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಆರಂಭಿಕ ಆಘಾತ ನೀಡಿದರು. ಪಾಕ್ ತಂಡದ ಮಾಜಿ ನಾಯಕ ಬಾಬರ್ ಅಜಮ್‌ರನ್ನ ಔಟ್ ಮಾಡುವ ಮೂಲಕ ಟೀಂ ಇಂಡಿಯಾಗೆ ಆರಂಭಿಕ ಯಶಸ್ಸು ನೀಡಿದರು. ಬಳಿಕ ಮತ್ತೊಂದು ವಿಕೆಟ್ ಪಡೆಯುವ ಮೂಲಕ ಹಾರ್ದಿಕ್ ಪಾಂಡ್ಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೊಸ ಮೈಲಿಗಲ್ಲು ತಲುಪಿದ್ದಾರೆ. ಪಾಂಡ್ಯ ಮಾಡಿದ ವಿಶೇಷ ಸಾಧನೆ ಏನು ಅನ್ನೋದರ ಮಾಹಿತಿ ಇಲ್ಲಿದೆ ನೋಡಿ...
ಬಾಬರ್ ಅಜಮ್ & ಸೌದ್ ಶಕೀಲ್ ಪೆವಿಲಿಯನ್‌ಗೆ ಕಳುಹಿಸಿದ ಪಾಂಡ್ಯ!
ಹಾರ್ದಿಕ್ ಪಾಂಡ್ಯ ಮೊದಲು 23 ರನ್ ಗಳಿಸಿ ಉತ್ತಮವಾಡಿ ಆಡುತ್ತಿದ್ದ ಬಾಬರ್ ಅಜಮ್‌ರನ್ನ ಔಟ್ ಮಾಡಿದರು. ಇದಾದ ನಂತರ ಸೌದ್ ಶಕೀಲ್‌ಗೂ ಪೆವಿಲಿಯನ್ ದಾರಿ ತೋರಿಸುವ ಮೂಲಕ ಟೀಂ ಇಂಡಿಯಾಕ್ಕೆ ದೊಡ್ಡ ಯಶಸ್ಸನ್ನು ನೀಡಿದರು. ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದ ಸೌದ್ ಶಕೀಲ್ ಆಕರ್ಷಕ ಅರ್ಧಶತಕ ಪೂರೈಸಿದ್ದರು. ಆದರೆ ಹಾರ್ದಿಕ್ ಪಾಂಡ್ಯ ತಮ್ಮ ಎರಡನೇ ಸ್ಪೆಲ್‌ನಲ್ಲಿ ಬಂದ ತಕ್ಷಣ, ಸೌದ್‌ರನ್ನ ಔಟ್ ಮಾಡಿದರು. ಹಾರ್ದಿಕ್ ಎಸೆದ ಬೌಲಿಂಗ್‌ನಲ್ಲಿ 76 ಎಸೆತಗಳಲ್ಲಿ 62 ರನ್ ಗಳಿಸಿದ್ದ ಸೌದ್ ಶಕೀಲ್, ಅಕ್ಷರ್ ಪಟೇಲ್‌ಗೆ ಕ್ಯಾಚ್ ನೀಡಿದರು. ಇದರೊಂದಿಗೆ ಹಾರ್ದಿಕ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 200 ವಿಕೆಟ್ ಪಡೆದ ಹೊಸ ಮೈಲಿಗಲ್ಲು ತಲುಪಿದರು.
ಇದನ್ನೂ ಓದಿ: IND vs PAK live : ಸ್ಟೇಡಿಯಂನಲ್ಲಿ ಪಾಂಡ್ಯ ಹುಡುಗಿ ಪ್ರತ್ಯಕ್ಷ..! 2ನೇ ಅತ್ತಿಗೆ ಸೂಪರ್ ಎಂದ ಫ್ಯಾನ್ಸ್.. ಫೋಟೋ ವೈರಲ್
Innings Break!
A fine bowling display from #TeamIndia and Pakistan are all out for 2⃣4⃣1⃣
3⃣ wickets for Kuldeep Yadav
2⃣ wickets for Hardik Pandya
A wicket each for Axar Patel & Ravindra JadejaOver to our batters 🙌
Scorecard ▶️ https://t.co/llR6bWyvZN#PAKvIND |… pic.twitter.com/Xo9DGpaIrX
— BCCI (@BCCI) February 23, 2025
ಟೆಸ್ಟ್, ಏಕದಿನ & ಟಿ-20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಪಾಂಡ್ಯ ಸಾಧನೆ
ಭಾರತ ಪರ 11 ಟೆಸ್ಟ್ ಪಂದ್ಯಗಳಲ್ಲಿ ಹಾರ್ದಿಕ್ ಪಾಂಡ್ಯ 17 ವಿಕೆಟ್ ಕಬಳಿಸಿದ್ದಾರೆ. ಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರು 114 ಪಂದ್ಯಗಳನ್ನು ಆಡಿದ್ದು 94 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದಲ್ಲದೆ ಏಕದಿನ ಕ್ರಿಕೆಟ್ ಬಗ್ಗೆ ಹೇಳುವುದಾದರೆ, 90 ಪಂದ್ಯಗಳಲ್ಲಿ ಅವರು 89 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಮೂಲಕ ಅವರು ಮೂರು ಸ್ವರೂಪಗಳಲ್ಲಿ 200 ವಿಕೆಟ್‌ಗಳನ್ನು ಪಡೆದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದು ಕೇವಲ ಬೌಲಿಂಗ್ ಸಾಧನೆ ಮಾತ್ರ, ಬ್ಯಾಟಿಂಗ್‌ನಲ್ಲಿಯೂ ಅವರು ಅನೇಕ ದಾಖಲೆಗಳನ್ನ ನಿರ್ಮಿಸಿದ್ದಾರೆ.
ದುಬೈನಲ್ಲಿ ಭಾರತ vs ಪಾಕಿಸ್ತಾನ ಪಂದ್ಯ
ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಪಂದ್ಯ ನಡೆಯುತ್ತಿದೆ. ಈ ಟೂರ್ನಿಯಲ್ಲಿ ಉಭಯ ತಂಡಗಳಿಗೆ ಇದು ಎರಡನೇ ಪಂದ್ಯ. ಇದಕ್ಕೂ ಮುನ್ನ ಟೀಂ ಇಂಡಿಯಾ ಬಾಂಗ್ಲಾದೇಶವನ್ನು ಸೋಲಿಸಿದ್ದರೆ, ಪಾಕಿಸ್ತಾನವು ನ್ಯೂಜಿಲ್ಯಾಂಡ್ ಕೈಯಲ್ಲಿ ಹೀನಾಯ ಸೋಲು ಕಂಡಿದೆ. ಇಂದಿನ ಪಂದ್ಯವನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ಸೆಮಿಫೈನಲ್ ಕಡೆಗೆ ಮತ್ತೊಂದು ಹೆಜ್ಜೆ ಇಡಲಿದೆ. ಆದರೆ ಇಂದು ಸೋತರೆ ಪಾಕಿಸ್ತಾನದ ಸೆಮಿಫೈನಲ್ ಹಾದಿ ಇನ್ನಷ್ಟು ಕಷ್ಟಕರವಾಗಲಿದೆ. ಸದ್ಯದ ಮಾಹಿತಿ ಪ್ರಕಾರ, 49.4 ಓವರ್‌ಗಳಲ್ಲಿ ಪಾಕಿಸ್ತಾನವು ತನ್ನೆಲ್ಲಾ ವಿಕೆಟ್‌ಗಳನ್ನ ಕಳೆದುಕೊಂಡು 241 ರನ್ ಗಳಿಸಿದೆ.
ಇದನ್ನೂ ಓದಿ: AUS vs ENG: ಡಕೆಟ್ ಶತಕ ವ್ಯರ್ಥ; ಆಂಗ್ಲರ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಆಸ್ಟ್ರೇಲಿಯಾ!!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.