ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ 'ಮಿಸ್ಟರ್ ಇಂಡಿಯಾ' ಅನಿಲ್ ಕಪೂರ್

ಇತ್ತೀಚೆಗೆ ಅನೇಕ ಬಾಲಿವುಡ್ ನಟರು ರಣಬೀರ್ ಸಿಂಗ್, ವಿಕಿ ಕೌಶಲ್, ರಣಬೀರ್ ಕಪೂರ್, ಅಲಿಯಾ ಭಟ್, ಎಕ್ತಾ ಕಪೂರ್ ಮತ್ತು ಪ್ರಧಾನಿ ಅವರನ್ನು ಭೇಟಿಯಾಗಿದ್ದರು.

Last Updated : Jan 17, 2019, 08:50 AM IST
ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ 'ಮಿಸ್ಟರ್ ಇಂಡಿಯಾ' ಅನಿಲ್ ಕಪೂರ್  title=
ಫೋಟೋ ಕ್ರೆಡಿಟ್: ಟ್ವಿಟರ್ @Anilkapoor

ನವದೆಹಲಿ: ಇತ್ತೀಚೆಗೆ ಅನೇಕ ಬಾಲಿವುಡ್ ನಟರಾದ ರಣಬೀರ್ ಸಿಂಗ್, ವಿಕಿ ಕೌಶಲ್, ರಣಬೀರ್ ಕಪೂರ್, ಅಲಿಯಾ ಭಟ್, ಎಕ್ತಾ ಕಪೂರ್ ಮತ್ತು ಪ್ರಧಾನಿ ಅವರನ್ನು ಭೇಟಿಯಾಗಿದ್ದರು. ಅದಕ್ಕೂ ಕೆಲ ದಿನಗಳ ಹಿಂದೆ ಚಲನಚಿತ್ರ ನಿರ್ಮಾಪಕರ ತಂಡ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ತಮ್ಮ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದರು. ಇದೀಗ, ಬಾಲಿವುಡ್ನ ಎನರ್ಜಿಟಿಕ್ ನಟ 'ಮಿಸ್ಟರ್ ಇಂಡಿಯಾ' ಅನಿಲ್ ಕಪೂರ್ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಪ್ರಧಾನಿ ಮೋದಿ ಭೇಟಿ ಬಳಿಕ ಕಪೂರ್ ಟ್ವಿಟ್ಟರ್ ನಲ್ಲಿ ತಮ್ಮ ಭೇಟಿಯ ಬಗ್ಗೆ ಮಾಹಿತಿ ನೀಡುತ್ತಾ ಅವರ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಅನಿಲ್ ಕಪೂರ್ ಪ್ರಧಾನಿ ಮೋದಿ ಅವರೊಂದಿಗಿನ ತಮ್ಮ ಭೇಟಿಯ ಛಾಯಾಚಿತ್ರವನ್ನು ಟ್ವೀಟ್ ಮಾಡಿದ್ದು, "ನಾನು ಗೌರವಾನ್ವಿತ ಪ್ರಧಾನ ಮಂತ್ರಿ ಮೋದಿಯವರನ್ನು ಇಂದು ಭೇಟಿಯಾಗಲು ನನಗೆ ಅವಕಾಶ ಸಿಕ್ಕಿದೆ, ನಾನು ಅವರೊಂದಿಗಿನ ಸಂಭಾಷಣೆಯಿಂದ ಪ್ರೇರೇಪಿಸಲ್ಪಟ್ಟಿದ್ದೇನೆ, ಅವನ ಮುಂದಾಲೋಚನೆ ಮತ್ತು ವರ್ಚಸ್ಸಿಗೆ ತ್ವರಿತ ಪರಿಣಾಮ ಬೀರುತ್ತಿದೆ ಮತ್ತು ವೈಯಕ್ತಿಕವಾಗಿ ಅವರನ್ನು ಭೇಟಿ ಮಾಡುವ ಅವಕಾಶಕ್ಕಾಗಿ ನಾನು ಕೃತಜ್ಞನಾಗಿದ್ದೇನೆ" ಎಂದು ಬರೆದುಕೊಂಡಿದ್ದಾರೆ.

ಫೋಟೋ ಕ್ರೆಡಿಟ್: ಟ್ವಿಟರ್ @Anilkapoor 

ಫೋಟೋದಲ್ಲಿ ಮಿಸ್ಟರ ಇಂಡಿಯಾ ದ ನಟ ಪ್ರಧಾನಿ ಮೋದಿಯವರೊಂದಿಗೆ ಕುಳಿತು ಮಾತುಕತೆ ನಡೆಸುತ್ತಿದ್ದಾರೆ. ಫೋಟೋದಲ್ಲಿ ನೋಡುವಾಗ ಅನಿಲ್ ಕಪೂರ್ ಬಹಳ ಉತ್ಸುಕರಾಗಿರುವಂತೆ ತೋರುತ್ತದೆ. ಮುಂಬರುವ ದಿನಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೊಂದಿಗಿನ ಬಾಲಿವುಡ್ನ ದೀರ್ಘಕಾಲದ ಸೂಪರ್ ಸ್ಟಾರ್ ಅನಿಲ್ ಕಪೂರ್ ಅವರ ಈ ಸಭೆಯು ಹಲವು ಉತ್ತಮ ಫಲಿತಾಂಶಗಳನ್ನು ತರಬಲ್ಲದು ಎಂಬುದು ಸ್ಪಷ್ಟವಾಗುತ್ತದೆ.

ಇತ್ತೀಚೆಗೆ ಅನೇಕ ಬಾಲಿವುಡ್ ನಟರಾದ ರಣಬೀರ್ ಸಿಂಗ್, ವಿಕಿ ಕೌಶಲ್, ರಣಬೀರ್ ಕಪೂರ್, ಅಲಿಯಾ ಭಟ್, ಎಕ್ತಾ ಕಪೂರ್ ಕೂಡ ಮೋದಿಯವರನ್ನು ನವದೆಹಲಿಯಲ್ಲಿ ಭೇಟಿಯಾಗಿದ್ದರು. ಈ ಸಭೆಯಲ್ಲಿ ಫಿಲಂ ಟಿಕೆಟ್ ನಲ್ಲಿ ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್ಟಿ) ಯ ಕಡಿತಕ್ಕೆ ಧನ್ಯವಾದ ಹೇಳಿದರು. ಇದಲ್ಲದೆ, ಅವರು ರಾಷ್ಟ್ರ ನಿರ್ಮಾಣದಲ್ಲಿ ಆಡಲು ಪಾತ್ರವನ್ನು ವಹಿಸುವ ವಿಷಯದ ಕುರಿತು ಮಾತನಾಡಲು ಬಯಸಿದ್ದರು.

Trending News