Valentines Day Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರೀತಿಯ ಬಗ್ಗೆಯೂ ತಿಳಿಸಲಾಗುತ್ತದೆ. ವೈದಿಕ ಜ್ಯೋತಿಷ್ಯದ ಪ್ರಕಾರ, ಗ್ರಹಗಳ ಸ್ಥಾನಗಳ ಆಧಾರದ ಮೇಲೆ 2025ರ ಫೆಬ್ರವರಿ 14ರಂದು ದ್ವಾದಶ ರಾಶಿಗಳಲ್ಲಿ ಕೆಲವು ರಾಶಿಯವರ ಬದುಕಿನಲ್ಲಿ ಅನಿರೀಕ್ಷಿತ ತಿರುವುಗಳಲ್ಲಿ ಆತ್ಮ ಸಂಗಾತಿ ಸಿಗಲಿದ್ದಾರೆ. ಅವರ ಜೀವನದಲ್ಲಿ ಪ್ರೀತಿಯ ಆಗಮನವಾಗಲಿದೆ ಎನ್ನಲಾಗುತ್ತಿದೆ. ಪ್ರೇಮಿಗಳ ದಿನ ನಿಮ್ಮ ರಾಶಿಯವರಿಗೆ ಹೇಗಿದೆ ತಿಳಿಯಿರಿ.
ಮೇಷ ರಾಶಿಯವರ ಪ್ರೇಮಿಗಳ ದಿನದ ಭವಿಷ್ಯ (Aries Valentines Day Horoscope):
ನಿಮ್ಮ ಸಂಗಾತಿಯೊಂದಿಗೆ ವಿಹಾರಕ್ಕೆ ಹೋಗುವ ಯೋಜನೆಯನ್ನು ಅನಿರೀಕ್ಷಿತವಾಗಿ ಕ್ಯಾನ್ಸಲ್ ಮಾಡಬೇಕಾಗಬಹುದು. ಇದು ನಿಮ್ಮ ಪ್ರಣಯ ಜೀವನದಲ್ಲಿ ಏರಿಳಿತಕ್ಕೆ ಕಾರಣವಾಗಬಹುದು. ಅವಿವಾಹಿತರಿಗೆ ವಿಶೇಷ ವ್ಯಕ್ತಿಯ ಭೇಟಿ ಸಾಧ್ಯತೆ ಇದೆ.
ವೃಷಭ ರಾಶಿಯವರ ಪ್ರೇಮಿಗಳ ದಿನದ ಭವಿಷ್ಯ (Taurus Valentines Day Horoscope):
ಈ ಬಾರಿಯ ಪ್ರೇಮಿಗಳ ದಿನವು ನಿಮಗೆ ಸವಾಲಿನ ದಿನವಾಗಿರಬಹುದು. ಕನಸಿನ ಸಂಗಾತಿಯ ಅನುಪಸ್ಥಿತಿ ಹೆಚ್ಚು ಕಾಡಬಹುದು. ದಾಂಪತ್ಯದಲ್ಲಿ ವಿರಸ, ಘರ್ಷಣೆ ಸಂಭವವಿದೆ. ಭವಿಷ್ಯದ ಯೋಜನೆಗಳ ಬಗ್ಗೆ ಮಾತನಾಡದಿರುವುದು ಒಳ್ಳೆಯದು.
ಮಿಥುನ ರಾಶಿಯವರ ಪ್ರೇಮಿಗಳ ದಿನದ ಭವಿಷ್ಯ (Gemini Valentines Day Horoscope):
ಬ್ರೇಕ್ ಅಪ್ ಆಗಿದ್ದರೆ ಸಂಗಾತಿಯೊಂದಿಗೆ ಪುನರ್ಮಿಲನ ಸಾಧ್ಯತೆ ಇದೆ. ಜೀವನದಲ್ಲಿ ಹೊಸತನವನ್ನು ಅನುಭವಿಸುವಿರಿ. ಪ್ರೀತಿ ಮತ್ತೆ ಚಿಗುರುವ ಭರವಸೆಯನ್ನು ಕಾಣುವಿರಿ. ಆತ್ಮಸಂಗಾತಿಯನ್ನು ಕಂಡುಕೊಳ್ಳುವಿರಿ. ದಾಂಪತ್ಯದ ಬಂಧ ಬಲಗೊಳ್ಳಲಿದೆ.
ಕರ್ಕಾಟಕ ರಾಶಿಯವರ ಪ್ರೇಮಿಗಳ ದಿನದ ಭವಿಷ್ಯ (Cancer Valentines Day Horoscope):
ನಿಮ್ಮ ಹಳೆಯ ಸ್ನೇಹಿತರೇ ನಿಮ್ಮ ಆತ್ಮ ಸಂಗಾತಿ ಎಂಬುದನ್ನು ನೀವು ಕಂಡು ಕೊಳ್ಳುತ್ತೀರಿ. ನಿಮಗಾಗಿ ಸಂಗಾತಿಯ ಬದಲಾವಣೆಯು ಅಚ್ಚರಿ ಉಂಟು ಮಾಡುವ ಸಂಭವವಿದೆ. ನಿಜವಾದ ಪ್ರೀತಿಯನ್ನು ಅನುಭವಿಸುವಿರಿ. ಪರಸ್ಪರರ ನಡುವೆ ಪ್ರೀತಿ ಹೆಚ್ಚಾಗಲಿದೆ.
ಇದನ್ನೂ ಓದಿ- 2025ರಲ್ಲಿ ಈ ರಾಶಿಯವರಿಗೆ ಸಿಗಲಿದೆ ನಿಜವಾದ ಪ್ರೀತಿ, ನಿಮ್ಮ ಲವ್ ಲೈಫ್ ಹೇಗಿರುತ್ತೆ ಗೊತ್ತಾ...!
ಸಿಂಹ ರಾಶಿಯವರ ಪ್ರೇಮಿಗಳ ದಿನದ ಭವಿಷ್ಯ (Leo Valentines Day Horoscope):
ದೀರ್ಘ ಸಮಯದಿಂದ ಲವ್ ನಲ್ಲಿರುವವರಿಗೆ ಕುಟುಂಬದಿಂದ ವಿವಾಹಕ್ಕೆ ಗ್ರೀನ್ ಸಿಗ್ನಲ್ ಸಿಗಲಿದೆ. ವಿವಾಹಿತರಲ್ಲಿ ಭಿನ್ನಾಭಿಪ್ರಾಯಗಳು ಸರಿದು ಒತ್ತಡ ಕಡಿಮೆಯಾಗಲಿದೆ. ಜಗತ್ತಿನಲ್ಲಿ ಎಲ್ಲದಕ್ಕಿಂತ ಪ್ರೀತಿಯೇ ಉನ್ನತ ಸ್ಥಾನದಲ್ಲಿದೆ ಎಂಬುದನ್ನು ಅರಿತುಕೊಳ್ಳುವಿರಿ.
ಕನ್ಯಾ ರಾಶಿಯವರ ಪ್ರೇಮಿಗಳ ದಿನದ ಭವಿಷ್ಯ (Virgo Valentines Day Horoscope):
ಈ ರಾಶಿಯವರು ಇಂದು ನಿಮ್ಮ ಸಂಬಂಧದಲ್ಲಿ ಗಂಭೀರತೆಯನ್ನು ಅಳವಡಿಸಿಕೊಂಡರೆ ಮಾತ್ರವೇ ನಿಜವಾದ ಪ್ರೀತಿಯನ್ನು ಕಂಡುಕೊಳ್ಳುವಿರಿ. ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಬರಬಹುದು. ದಾಂಪತ್ಯದಲ್ಲಿ ತಾಳ್ಮೆಯನ್ನು ಕಾಪಾಡಿಕೊಳ್ಳಿ.
ತುಲಾ ರಾಶಿಯವರ ಪ್ರೇಮಿಗಳ ದಿನದ ಭವಿಷ್ಯ (Libra Valentines Day Horoscope):
ಈ ರಾಶಿಯ ದಂಪತಿಗಳು ನಿಮ್ಮ ದಾಂಪತ್ಯದಲ್ಲಿ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಲು ಶಾಂತಿಯಿಂದ ಕುಳಿತು ಮಾತನಾಡುವುದು ಒಳ್ಳೆಯದು. ಅವಿವಾಹಿತರು ವಿವಾಹದ ಬಗ್ಗೆ ಯೋಚಿಸಬಹುದು. ನಿಮ್ಮ ಜೀವನದಲ್ಲಿ ಹೊಸ ವ್ಯಕ್ತಿಯ ಆಗಮನವಾಗಲಿದೆ.
ವೃಶ್ಚಿಕ ರಾಶಿಯವರ ಪ್ರೇಮಿಗಳ ದಿನದ ಭವಿಷ್ಯ (Scorpio Valentines Day Horoscope):
ಪ್ರೇಮಿಗಳ ದಿನದಂದು ಈ ರಾಶಿಯವರಿಗೆ ಪಾಲುದಾರರೊಂದಿಗೆ ಭಾವನಾತ್ಮಕ ಸಂಬಂಧ ಗಾಢವಾಗುತ್ತದೆ. ಪರಸ್ಪರರ ನಡುವಿನ ಗೌರವದಿಂದ ಸಂಬಂಧ ಬಲಗೊಳ್ಳುತ್ತದೆ. ಇನ್ನೂ ಒಂಟಿಯಾಗಿರುವವರ ಬದುಕಿನಲ್ಲಿ ನಿಜವಾದ ಪ್ರೀತಿಯ ಆಗಮನ ಸಾಧ್ಯತೆ.
ಧನು ರಾಶಿಯವರ ಪ್ರೇಮಿಗಳ ದಿನದ ಭವಿಷ್ಯ (Sagittarius Valentines Day Horoscope):
ಪ್ರೇಮ ಜೀವನ, ಪ್ರಣಯ ಮಿಂಚುವ ದಿನ. ದಂಪತಿಗಳು ಮರೆಯಲಾರದ ಸುಮಧುರ ದಿನವನ್ನು ಅನುಭವಿಸುವಿರಿ. ಸಂಗಾತಿಯಿಂದ ಸರ್ಪ್ರೈಸ್ ಗಿಫ್ಟ್ ಸ್ವೀಕರಿಸುವ ಸಾಧ್ಯತೆ ಇದೆ. ಅವಿವಾಹಿತರಿಗೆ ಹೊಸ ಪ್ರೀತಿ ಕಂಡುಕೊಳ್ಳುವ ದಿನ.
ಮಕರ ರಾಶಿಯವರ ಪ್ರೇಮಿಗಳ ದಿನದ ಭವಿಷ್ಯ (Capricorn Valentines Day Horoscope):
ಹಿಂದಿನ ಕಹಿ ಘಟನೆಗಳನ್ನು ಮರೆತು ಜೀವನದಲ್ಲಿ ಸಿಹಿಯನ್ನಷ್ಟೇ ನೆನೆದರೆ ಒಳ್ಳೆಯದು. ಸಂಗಾತಿಯೊಂದಿಗೆ ಹಳೆಯ ವಿಚಾರಗಳಿಗೆ ಜಗಳವಾಡುವುದು ಕಿರಿಕಿರಿ ಉಂಟು ಮಾಡಬಹುದು. ವದಂತಿಗಳನ್ನು ನಂಬಿ ಪ್ರೀತಿಯನ್ನು ಕಳೆದುಕೊಳ್ಳಬೇಡಿ.
ಕುಂಭ ರಾಶಿಯವರ ಪ್ರೇಮಿಗಳ ದಿನದ ಭವಿಷ್ಯ (Aquarius Valentines Day Horoscope):
ಅನಾವಶ್ಯಕ ಸಂಭಾಷಣೆಯು ಪ್ರಣಯ ಜೀವನದಲ್ಲಿ ಬಿರುಗಾಳಿ ಎಬ್ಬಿಸಬಹುದು. ಆದಾಗ್ಯೂ, ತಾಳ್ಮೆಯಿಂದ ವರ್ತಿಸಿದರೆ ಬೆಟ್ಟದಂತ ಸಮಸ್ಯೆ ಮಂಜಿನಂತೆ ಕರಗಲಿದೆ. ಅವಿವಾಹಿತರಿಗೆ ನಿಜವಾದ ಪ್ರೀತಿ ಸಿಗಬಹುದು.
ಮೀನ ರಾಶಿಯವರ ಪ್ರೇಮಿಗಳ ದಿನದ ಭವಿಷ್ಯ (Pisces Valentines Day Horoscope):
ನಿಮ್ಮ ಸಂಗಾತಿಯೊಂದಿಗೆ ಭಾವನಾತ್ಮಕ ಸಂಪರ್ಕ ಸಾಧಿಸಲು ಅವರೊಂದಿಗೆ ಉತ್ತಮ ಸಮಯವನ್ನು ಕಳೆಯಿರಿ. ಹೊರಹೋಗಲು, ಕ್ಯಾಂಡಲ್ ಲೈಟ್ ಡಿನ್ನರ್ ಯೋಜಿಸುವುದು ನಿಮ್ಮ ಸಂಬಂಧವನ್ನು ಬಲಗೊಳಿಸಲು, ಸಂಗಾತಿಯ ಪ್ರೀತಿಯನ್ನು ಸೆಳೆಯಲು ಅನುಕೂಲವಾಗಲಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.