ಹೈ ಬಿಪಿಯನ್ನು ನ್ಯಾಚ್ಯುರಲ್ ಆಗಿ ನಾರ್ಮಲ್ ಮಾಡಬೇಕಾದರೆ ಈ ಒಂದು ಎಲೆಯನ್ನು ಜಗಿದು ಉಗುರು ಬೆಚ್ಚಗಿನ ನೀರು ಕುಡಿಯಿರಿ !

Home Remedy to normalise Blood Pressure : ಹೆಚ್ಚುತ್ತಿರುವ ರಕ್ತದೊತ್ತಡವನ್ನು ನಿಯಂತ್ರಿಸಲು ಕೆಲವು ಮನೆಮದ್ದುಗಳು ಪರಿಹಾರವಾಗಿ ಕೆಲಸ ಮಾಡುತ್ತವೆ. 

Written by - Ranjitha R K | Last Updated : Feb 7, 2025, 03:36 PM IST
  • ಹೈ ಬಿಪಿ ಹೃದಯಾಘಾತದಂತಹ ಮಾರಕ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತಿದೆ
  • ಅಧಿಕ ರಕ್ತದೊತ್ತಡಕ್ಕೆ ಯಾವುದೇ ಚಿಕಿತ್ಸೆ ಇಲ್ಲ.
  • ರಕ್ತದೊತ್ತಡವನ್ನು ನಿಯಂತ್ರಿಸಲು ಕೆಲವು ಮನೆಮದ್ದುಗಳು
ಹೈ ಬಿಪಿಯನ್ನು ನ್ಯಾಚ್ಯುರಲ್ ಆಗಿ ನಾರ್ಮಲ್ ಮಾಡಬೇಕಾದರೆ ಈ ಒಂದು ಎಲೆಯನ್ನು ಜಗಿದು ಉಗುರು ಬೆಚ್ಚಗಿನ ನೀರು ಕುಡಿಯಿರಿ !  title=

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಅಧಿಕ ರಕ್ತದೊತ್ತಡದ ಸಮಸ್ಯೆ ಹೆಚ್ಚಾಗಿದ್ದು, ಹೃದಯಾಘಾತದಂತಹ ಮಾರಕ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತಿದೆ.  ಅಧಿಕ ರಕ್ತದೊತ್ತಡಕ್ಕೆ ಯಾವುದೇ ಚಿಕಿತ್ಸೆ ಇಲ್ಲ. ಇದು ದೀರ್ಘಕಾಲದ ಕಾಯಿಲೆಯಾಗಿದ್ದು, ಸರಿಯಾದ ಆಹಾರ, ಆರೋಗ್ಯಕರ ಜೀವನಶೈಲಿ ಮತ್ತು ಸೂಕ್ತ ಔಷಧಿಗಳ ಸಹಾಯದಿಂದ ಮಾತ್ರ ರಕ್ತದೊತ್ತಡದ ಮಟ್ಟವನ್ನು ನಿಯಂತ್ರಿಸಬಹುದು. ಆದರೆ ಹೆಚ್ಚುತ್ತಿರುವ ರಕ್ತದೊತ್ತಡವನ್ನು ನಿಯಂತ್ರಿಸಲು ಕೆಲವು ಮನೆಮದ್ದುಗಳು ಪರಿಹಾರವಾಗಿ ಕೆಲಸ ಮಾಡುತ್ತವೆ. 

ಹಸಿರು ಎಲೆಯ ವಿಶೇಷತೆ : 
ರಕ್ತದೊತ್ತಡದ ಮಟ್ಟವನ್ನು ನಿಯಂತ್ರಿಸಬೇಕಾದರೆ ವೀಳ್ಯದ ಎಲೆಯ ಪ್ರಯೋಜನಗಳ ಬಗ್ಗೆಯೂ ತಿಳಿದಿರಲೇಬೇಕು. ವೀಳ್ಯದ ಎಲೆಗಳಲ್ಲಿ ಕೆಲವು ವಿಶೇಷ ಅಂಶಗಳಿದ್ದು, ದೇಹವು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. 

ಸೇವಿಸುವ ಸರಿಯಾದ ವಿಧಾನ : 
ವೀಳ್ಯದೆಲೆ ಅಗಿಯಲು ಯಾವುದೇ ವಿಶೇಷ ತಂತ್ರದ ಅಗತ್ಯವಿಲ್ಲದ ಕಾರಣ ನೀವು ಚಿಂತಿಸಬೇಕಾಗಿಲ್ಲ. ಬಿಪಿ ನಾರ್ಮಲ್ ಆಗಬೇಕಾದರೆ ಖಾಲಿ ಹೊಟ್ಟೆಯಲ್ಲಿ ತಾಜಾ ವೀಳ್ಯದೆಲೆ ಸೇವಿಸಬೇಕು. ಬೆಳಿಗ್ಗೆ ತಾಜಾ ವೀಳ್ಯದ ಎಲೆಗಳನ್ನು ತೆಗೆದುಕೊಂಡು ಶುದ್ಧ ನೀರಿನಿಂದ ಚೆನ್ನಾಗಿ ತೊಳೆಯಿರಿ. ನಂತರ, ವೀಳ್ಯದೆಲೆಗಳನ್ನು ಒಂದೊಂದಾಗಿ ಚೆನ್ನಾಗಿ ಅಗಿದು ರಸ ನುಂಗಿ. ನಂತರ ಅರ್ಧ ಗ್ಲಾಸ್ ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ. 

ಇದನ್ನೂ ಓದಿ : 5 ದಿನದಲ್ಲಿ 3 ಕೆಜಿಯಷ್ಟು ತೂಕ ಇಳಿಸಬಲ್ಲ ಪವರ್ಫುಲ್ ಹಣ್ಣು... ಮಧುಮೇಹಕ್ಕೂ ಇದೇ ಮದ್ದು; ವಾರಕ್ಕೊಮ್ಮೆ ತಿಂದರೂ ಜನ್ಮದಲ್ಲಿ ಹೆಚ್ಚಾಗಲ್ಲ ಬಿಪಿ-ಶುಗರ್‌

ವೀಳ್ಯದ ಎಲೆಯನ್ನು ಅಗಿಯುವುದರಿಂದಾಗುವ ಇತರ ಪ್ರಯೋಜನಗಳು : 
ವೀಳ್ಯದ ಎಲೆಯನ್ನು ಅಗಿಯುವುದರಿಂದ ರಕ್ತದೊತ್ತಡದ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುವುದು ಮಾತ್ರವಲ್ಲ, ಇದು ಹಲವಾರು ಇತರ ಪ್ರಯೋಜನಗಳನ್ನು ಹೊಂದಿದೆ. ಜೀರ್ಣಕ್ರಿಯೆ ಸರಿಯಾಗಿ ಇಲ್ಲದವರಿಗೆ, ವೀಳ್ಯದ ಎಲೆಗಳು ಉತ್ತಮ ಆಯ್ಕೆಯಾಗಿರಬಹುದು. ಮಲಬದ್ಧತೆಯಿಂದ ಬಳಲುತ್ತಿದ್ವರು ಕೂಡಾ ವೀಳ್ಯದ ಎಲೆಯನ್ನು ಅಗಿದು ರಸ ಸೇವಿಸುವುದರಿಂದ ಪರಿಹಾರ ಪಡೆಯಬಹುದು. ಇದು ಫೈಬರ್‌ನ ಉತ್ತಮ ಮೂಲವಾಗಿದೆ.

ರಕ್ತದೊತ್ತಡದ ಮಟ್ಟವನ್ನು ನಿಯಂತ್ರಿಸಬೇಕಾದರೆ ವೀಳ್ಯದೆಲೆಗಳನ್ನು ಸೇವಿಸುವುದರ ಜೊತೆಗೆ, ಸರಿಯಾದ ಆಹಾರ ಕ್ರಮವನ್ನು ಅನುಸರಿಸುವುದು ಕೂಡಾ ಬಹಳ ಮುಖ್ಯವಾಗುತ್ತದೆ. ಇದರ ಜೊತೆಗೆ ಉತ್ತಮ ಜೀವನಶೈಲಿಯನ್ನು ಕಾಪಾಡಿಕೊಂದು ಹೋಗಬೇಕಾಗುತ್ತದೆ. 

ಇದನ್ನೂ ಓದಿ :  ಈ ಸಲಾಡ್‌ನೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸಿ, ಇದು ರುಚಿಯ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು..!

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

 

( ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದನ್ನು ಆಧರಿಸಿ ಬರೆಯಲಾಗಿದೆ. ಇದನ್ನು ಜೀ ನ್ಯೂಸ್ ಅನುಮೋದಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News