ಅನುಷ್ಕಾ ಶೆಟ್ಟಿ ಮದುವೆಗೆ ಕಾಯುತ್ತಿದ್ದವರಿಗೆ ಬಿಗ್‌ ಶಾಕ್‌! ಎಲ್ಲ ತೊರೆದು ʻಸನ್ಯಾಸಿಯಾಗುವ ನಿರ್ಧಾರʼ ಮಾಡಿದ್ರಾ?

Anushka Shetty: ಅನುಷ್ಕಾ ಶೆಟ್ಟಿ ಪ್ರಸ್ತುತ ಲೇಡಿ ಓರಿಯೆಂಟೆಡ್ ಚಿತ್ರಗಳಲ್ಲಿ ಮಿಂಚುತ್ತಿದ್ದಾರೆ. ಆದರೆ ಹೆತ್ತವರಲ್ಲಿ ಒಂದು ಭಯ ಕಾಡ್ತಿದೆ ಎನ್ನಲಾಗುತ್ತಿದೆ. 

Written by - Chetana Devarmani | Last Updated : Nov 14, 2024, 07:57 AM IST
  • ಟಾಲಿವುಡ್‌ ಖ್ಯಾತ ನಟಿ ಅನುಷ್ಕಾ ಶೆಟ್ಟಿ
  • ಹೆತ್ತವರನ್ನು ಕಾಡಿದ ಆ ಭಯ ಯಾವುದು?
  • ಅನುಷ್ಕಾ ಶಟ್ಟಿ ಈ ನಿರ್ಧಾರ ಮಾಡಿದ್ದೇಕೆ?
ಅನುಷ್ಕಾ ಶೆಟ್ಟಿ ಮದುವೆಗೆ ಕಾಯುತ್ತಿದ್ದವರಿಗೆ ಬಿಗ್‌ ಶಾಕ್‌! ಎಲ್ಲ ತೊರೆದು ʻಸನ್ಯಾಸಿಯಾಗುವ ನಿರ್ಧಾರʼ ಮಾಡಿದ್ರಾ?  title=
Anushka Shetty

ಬೆಂಗಳೂರು: ಅನುಷ್ಕಾ ಶೆಟ್ಟಿ ಇತ್ತೀಚಿಗೆ ತುಂಬಾ ಸೆಲೆಕ್ಟಿವ್ ಆಗಿ ಸಿನಿಮಾ ಮಾಡುತ್ತಿದ್ದಾರೆ. 'ಬಾಹುಬಲಿ' ನಂತರ ಅವರು ಚಿತ್ರಗಳನ್ನು ಮಾಡುವುದನ್ನು ಕಡಿಮೆ ಮಾಡಿದ್ದಾರೆ. ಮೇಲಾಗಿ 'ಸೈಜ್ ಝೀರೋ' ಸಿನಿಮಾ ನಂತರ ಚಿತ್ರಗಳನ್ನು ಮಾಡುವುದು ಕಷ್ಟವಾಗುತ್ತಿದೆ ಎನ್ನಲಾಗಿದೆ. ಕಾರಣ ಅವರ ತೂಕ. ಈ ಸಿನಿಮಾದಿಂದ ಅನುಷ್ಕಾ ಶೆಟ್ಟಿ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಇದರಿಂದ ಸಿನಿಮಾ ಮಾಡಲು ಕಷ್ಟವಾಗುತ್ತಿದೆ ಎಂದು ಹೇಳಲಾಗಿದೆ. ತೂಕವನ್ನು ನಿಯಂತ್ರಣದಲ್ಲಿಟ್ಟುಕೊಂಡು ಸಿನಿಮಾ ಮಾಡುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಹಾಗಾಗಿಯೇ ಅನುಷ್ಕಾ ಸಿನಿಮಾಗಳ ಬಗ್ಗೆ ಸೆಲೆಕ್ಟಿವ್ ಆಗಿದ್ದಾರೆ.

ಅನುಷ್ಕಾ ಶೆಟ್ಟಿಗೆ 43 ವರ್ಷ ವಯಸ್ಸು ಹೀಗಿರುವಾಗ ಇನ್ನೂ ಮದುವೆ ಆಗಿಲ್ಲ. ವಯಸ್ಸು ಹೆಚ್ಚಾದಂತೆ ಅನುಷ್ಕಾ ಪೋಷಕರಲ್ಲಿ ಆತಂಕ ಕಾಡುತ್ತಿದೆ. ಮಗಳು ಮದುವೆಯಾಗದೇ ಉಳಿದುಬಿಡುತ್ತಾಳೆನೋ ಎಂಬ ಆತಂಕ ಕಾಡುತ್ತಿದೆ ಎಂದು ಕೆಲವು ವರದಗಳಲ್ಲಿ ತಿಳಿಸಲಾಗಿದೆ.
 
ಅನುಷ್ಕಾ ಶೆಟ್ಟಿ ನಟಿಯಾಗಬೇಕೆಂಬ ಕನಸು ಕಂಡವರಲ್ಲ. ಯೋಗ ಮಾಡುತ್ತಿದ್ದ ಅನುಷ್ಕಾರನ್ನು ಕಂಡು ನಾಗಾರ್ಜುನ್ ಆಕೆಯನ್ನು ಸಿನಿಮಾಗೆ ಕರೆತಂದರು. ನಟನೆ ಬರುವುದಿಲ್ಲ ಎಂದು ಹೇಳಿದರೂ ಕಲಿಸುತ್ತೇವೆ ಎಂದರು. ಆದರೆ ಅನುಷ್ಕಾ ಚಿತ್ರರಂಗಕ್ಕೆ ಬರಲು ಬಯಸಿರಲಿಲ್ಲ. ಅವರ ಯೋಗ ಶಿಕ್ಷಕರು ನೀವು ಚಿತ್ರರಂಗಕ್ಕೆ ಹೋಗಿ ನಟಿಯಾಗುತ್ತೀರಿ ಎಂದು ಮೊದಲೇ ಹೇಳಿದ್ದರಂತೆ. ಅವರು ಹೇಳಿದ್ದೇ ಆಯಿತು ಎನ್ನುತ್ತಾರೆ ಅನುಷ್ಕಾ.

ಇದನ್ನೂ ಓದಿ: ಸಮಂತಾ ಮಾಜಿ ಪತಿ ನಾಗಚೈತನ್ಯ ಬಾಳಲ್ಲಿ ಮತ್ತೇ ಬಿರುಗಾಳಿ! ಶೋಭಿತಾ ಜೊತೆ ಎರಡನೇ ಮದುವೆ ನಡೆಯೋದೆ ಡೌಟ್?!‌

ಮೊದಲು ಅನುಷ್ಕಾ ಶೆಟ್ಟಿಗೆ ಡಾಕ್ಟರ್ ಆಗಬೇಕೆಂಬ ಆಸೆ ಇತ್ತು. ಆದರೆ ಆಕಸ್ಮಿಕವಾಗಿ ಜಿಯೋಗ್ರಾಫಿ ಓದಬೇಕಾಯಿತಂತೆ. ಡಿಗ್ರಿ ಮಾಡುವಾಗ ಯೋಗ ಶಿಕ್ಷಕ ಭರತ್ ಠಾಕೂರ್ ಅವರನ್ನು ಭೇಟಿಯಾದರು. ಅವರೊಂದಿಗಿನ ಸಂಪರ್ಕವೇ ತನ್ನನ್ನು ಯೋಗದೆಡೆಗೆ ಕರೆದೊಯ್ಯಿತು ಎನ್ನುತ್ತಾರೆ ಅನುಷ್ಕಾ. 

ಯೋಗ ತರಗತಿಗಳಿಗೆ ಹೋಗುವಾಗ, ತನಗೆ ಇದೇ ಬೇಕು ಎನಿಸಿತಂತೆ. ಯೋಗ ಮಾಡುವಾಗ ತುಂಬಾ ಸಂತೋಷವಾಗುತ್ತದೆ ಮತ್ತು ಇದು ತನ್ನ ಜೀವನ ಎಂದು ನಿರ್ಧರಿಸಿದರಂತೆ. ಆದರೆ ಇದನ್ನು ಮನೆಯಲ್ಲಿ ಹೇಳಿದಾಗ ಪಾಲಕರು ಶಾಕ್‌ ಆದರಂತೆ. ಅಪ್ಪ ಮಗಳು ಸನ್ಯಾಸ ದೀಕ್ಷೆ ಪಡೆದುಬಿಡುತ್ತಾಳಾ ಎಂದು ಗಾಬರಿಯಾಗಿದ್ದರಂತೆ. ಆದ್ರೆ ಇಂದು ಅನುಷ್ಕಾ ಶೆಟ್ಟಿ ಸಿನಿರಂಗವನ್ನೇ ಆಳಿದ ಖ್ಯಾತ ನಟಿಯಾಗಿದ್ದಾರೆ.

ಇದನ್ನೂ ಓದಿ: ಅಂಡರ್ ವರ್ಲ್ಡ್ ಡಾನ್ ಜೊತೆ ಲವ್.. 17 ವರ್ಷ ಹಿರಿಯ ನಿರ್ದೇಶಕನೊಂದಿಗೆ ಮದುವೆ.. ಕೊನೆಗೆ ದೇಶ ಬಿಟ್ಟು ಓಡಿ ಹೋದ ಸ್ಟಾರ್‌ ನಟಿ ಈಕೆ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News