Mirai Movie: ಬಹು ಬೇಡಿಕೆಯ ನಟ ಹನು-ಮ್ಯಾನ್ ಖ್ಯಾತಿಯ ತೇಜಾ ಸಜ್ಜಾ ಅವರ ಮುಂದಿನ ಚಿತ್ರ "ಮಿರಾಯ್" ಇದೇ ಆಗಸ್ಟ್ 1ರಿಂದ ವಿಶ್ವದಾದ್ಯಂತ ತೆರೆ ಕಾಣಲಿದೆ.
ಕಾರ್ತಿಕ್ ಘಟ್ಟಮನೇನಿ ನಿರ್ದೇಶಿಸಿ, ಟಿ.ಜಿ. ವಿಶ್ವ ಪ್ರಸಾದ್ ಮತ್ತು ಕೃತಿ ಪ್ರಸಾದ್ ಪೀಪಲ್ ಮೀಡಿಯಾ ಫ್ಯಾಕ್ಟರಿ ಲಾಂಛನದಡಿಯಲ್ಲಿ ನಿರ್ಮಿಸುತ್ತಿರುವ ಪ್ಯಾನ್ ಇಂಡಿಯಾ ಚಿತ್ರ "ಮಿರಾಯ್" ಈಗಾಗಲೇ ಸಾಕಷ್ಟು ಸಂಚಲನ ಮೂಡಿಸಿದ್ದು, ಇದೀಗ ಬಿಡುಗಡೆ ದಿನಾಂಕವನ್ನು ಘೋಷಿಸಿ ಮತ್ತಷ್ಟು ಸುದ್ದಿ ಮಾಡಿದೆ.
ಭಾರತೀಯ ಚಿತ್ರರಂಗದ ಉದಯೋನ್ಮುಖ ನಟ, ರೈಸಿಂಗ್ ಸ್ಟಾರ್ ಎಂದೇ ಖ್ಯಾತರಾಗಿರುವ ತೇಜಾ ಸಜ್ಜಾ ಸೂಪರ್ ಹೀರೋ ಚಿತ್ರಗಳನ್ನು ಭಾರತ ಚಿತ್ರರಂಗಕ್ಕೆ ನೀಡುವ ಗುರಿಯನ್ನು ಹೊಂದಿದ್ದು,ಅದಕ್ಕಾಗಿ ಹನು-ಮ್ಯಾನ್ ಮುನ್ನುಡಿಯಾಗಿತ್ತು. ಇದೀಗ ಅವರ "ಮಿರಾಯ್" ಚಿತ್ರ ಈ ಸೂಪರ್ ಹೀರೋ ಚಿತ್ರಗಳನ್ನು ಮೂರು ವ್ಯಾಖ್ಯಾನಿಸಲಿದೆ ಎಂಬುದು ಸಿನಿ ಪ್ರೇಮಿಗಳ ಅಭಿಪ್ರಾಯವಾಗಿದೆ. "ಮಿರಾಯ್" ಒಂದು ಆಕ್ಷನ್- ಸಾಹಸಗಳ ಚಿತ್ರವಾಗಿದ್ದು, ಇದರಲ್ಲಿ ತೇಜಾ ಸಜ್ಜಾ ಒಬ್ಬ ಸೂಪರ್ ಯೋಧನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಈ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ಆಗಸ್ಟ್ 1ರಿಂದ 8 ಭಾಷೆಗಳಲ್ಲಿ, 2D ಮತ್ತು 3D ವಿಧಾನಗಳಲ್ಲಿ ತೆರೆ ಕಾಣಲಿದೆ. ಈಗಾಗಲೇ ಬಿಡುಗಡೆ ಮಾಡಿರುವ ರಿಲೀಸ್ ದಿನಾಂಕದ ಪೋಸ್ಟರ್ ಅಲ್ಲಿ, ತೇಜಾ ಸಜ್ಜಾ ಹಿಮ ಪರ್ವತಗಳ ನಡುವೆ ಆಯುಧ ಒಂದನ್ನು ಹಿಡಿದು ನಿಂತಿರುವುದನ್ನು ಕಾಣಬಹುದು. ಚಿತ್ರದ ಭವ್ಯತೆಯನ್ನು ಈ ಪೋಸ್ಟರ್ ಒಂದರಲ್ಲಿ ಕಾಣಬಹುದು.
"ಮಿರಾಯ್" ಚಿತ್ರವು ಭವ್ಯ ತಾರಾಗಣವನ್ನೇ ಹೊಂದಿದೆ. ಟಾಲಿವುಡ್ ನ ರಾಕಿಂಗ್ ಸ್ಟಾರ್ ಮನೋಜ್ ಮಂಚು ಖಳನಾಯಕನ ಪಾತ್ರ ವಹಿಸುತ್ತಿರುವುದು ವಿಶೇಷ ಸಂಗತಿಯಾಗಿದೆ. ರಿತಿಕಾ ನಾಯಕ್ ಚಿತ್ರದ ನಾಯಕಿ ಆಗಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ಮತ್ತೊಂದು ವಿಶೇಷವೆಂದರೆ, ಚಿತ್ರ ತಂಡ ಬಿಡುಗಡೆ ಮಾಡಿರುವ ಪ್ರೋಮೋ ವಿಡಿಯೋಗಳು, ಅದರಲ್ಲಿ ನಟ ತೇಜಾ ಸಜ್ಜಾ ಅವರ ಸಾಹಸ ದೃಶ್ಯಗಳು,
ಸಿನಿಮಾ ಮೇಲೆ ಆತನಿಗಿರುವ ಗೌರವ, ಇವೆಲ್ಲವೂ ಪ್ರೇಕ್ಷಕರ ಗಮನ ಸೆಳೆದಿವೆ. ತೇಜಾ ಸಜ್ಜಾ ಸೂಪರ್ ಯೋಧನ ಪಾತ್ರಕ್ಕೆ ಜೀವ ತುಂಬಿದ್ದಾರೆ ಎಂಬುದು ಎಲ್ಲರ ಅಭಿಪ್ರಾಯವಾಗಿದೆ.
ಕಾರ್ತಿಕ್ ಘಟ್ಟಮನೇನಿ ನಿರ್ದೇಶನದಲ್ಲಿ ಹಿಂದೆಂದೂ ಕಾಣದಷ್ಟು ಭರ್ಜರಿಯಾಗಿ "ಮಿರಾಯ್" ಚಿತ್ರ ಮೂಡಿಬರಲಿದೆ ಎಂಬುದು ಸಿನಿ ತಂಡದ ಅಭಿಪ್ರಾಯವಾಗಿದೆ. ಈ ಚಿತ್ರವು ಆಕ್ಷನ್- ಸಾಹಸ ಚಿತ್ರಗಳಲ್ಲಿ ಹೊಸ ಅಲೆಯನ್ನು ಸೃಷ್ಟಿಸಲಿದೆ ಎಂಬ ವಿಷಯ ಮತ್ತಷ್ಟು ಕುತೂಹಲಕ್ಕೆ ದಾರಿ ಮಾಡಿ ಕೊಟ್ಟಿದಿ.
"ಮಿರಾಯ್" ಚಿತ್ರದಲ್ಲಿ ನಿರ್ದೇಶಕ ಕಾರ್ತಿಕ್ ಘಟ್ಟಮನೇನಿ ಮುಖ್ಯ ಛಾಯಾಗ್ರಹಣವನ್ನು ಕೈಗೊಂಡಿದ್ದು, ಚಿತ್ರದ ಸಂಭಾಷಣೆಯನ್ನು ರಚಿಸಿರುವ ಮಣಿ ಬಾಬು ಕರಣಮ್ ಅವರೊಡನೆ ಚಿತ್ರಕಥೆ ರಚನೆಗೂ ಕೈ ಜೋಡಿಸಿದ್ದಾರೆ. ಚಿತ್ರಕ್ಕೆ ಗೌರಾ ಹರಿ ಸಂಗೀತ ಸಂಯೋಜನೆ ಮಾಡಿದ್ದಾರೆ ಹಾಗೂ ಶ್ರೀ ನಾಗೇಂದ್ರ ತಂಗಾಲ ಪ್ರೊಡಕ್ಷನ್ ವಿನ್ಯಾಸವನ್ನು ಮಾಡಿದ್ದಾರೆ. ವಿವೇಕ್ ಕುಚ್ಚಿಬೋಟ್ಲಾ ಚಿತ್ರದ ಸಹ ನಿರ್ಮಾಪಕರಾಗಿದ್ದಾರೆ.
ತಾರಾಗಣ: ತೇಜಾ ಸಜ್ಜಾ, ಮನೋಜ್ ಮಂಚು, ರಿತಿಕಾ ನಾಯಕ್
ತಾಂತ್ರಿಕ ಸಿಬ್ಬಂದಿ:
ನಿರ್ದೇಶನ: ಕಾರ್ತಿಕ್ ಘಟ್ಟಮನೇನಿ
ನಿರ್ಮಾಣ: ಟಿ ಜಿ ವಿಶ್ವ ಪ್ರಸಾದ್ ಮತ್ತು ಕೃತಿ ಪ್ರಸಾದ್
ಲಾಂಛನ: ಪೀಪಲ್ ಮೀಡಿಯಾ ಫ್ಯಾಕ್ಟರಿ
ಸಹ-ನಿರ್ಮಾಪಕ: ವಿವೇಕ್ ಕುಚ್ಚಿಬೋಟ್ಲಾ
ಕಾರ್ಯನಿರ್ವಾಹಕ ನಿರ್ಮಾಪಕ: ಸುಜಿತ್ ಕುಮಾರ್ ಕೊಳ್ಳಿ
ಮುಖ್ಯ ಕೋ ಆರ್ಡಿನೇಟರ್: ಮೇಘ ಶ್ಯಾಮ್
ಸಂಗೀತ ಸಂಯೋಜನೆ: ಗೌರಾ ಹರಿ
ಪ್ರೊಡಕ್ಷನ್ ವಿನ್ಯಾಸ: ಶ್ರೀ ನಾಗೇಂದ್ರ ತಂಗಾಲ
ರಚನೆ: ಮಣಿ ಬಾಬು ಕರಣಮ್
ಪಿ. ಆರ್. ಒ. : ಹರೀಶ್ ಅರಸು
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.