ಆಮೀರ್‌ ಖಾನ್‌ ಸಿನಿಮಾ ಜೀವನದಲ್ಲೇ ಇದು ಅತ್ಯಂತ ಕಳಪೆ ಓಪನಿಂಗ್..!

Written by - Malathesha M | Edited by - Manjunath N | Last Updated : Aug 13, 2022, 06:30 PM IST
  • ಬಾಲಿವುಡ್‌ ಸ್ಟಾರ್‌ಗಳ ಗ್ರಹಚಾರ ಸರಿಯಿಲ್ಲ ಅಂತಾ ಕಾಣುತ್ತೆ, ಯಾಕಂದ್ರೆ ಹಿಂದಿ ಸಿನಿಮಾ ರಂಗದಲ್ಲಿ ಒಂದಾದ ಬಳಿಕ ಒಂದು ಚಿತ್ರಗಳು ತೋಪೆದ್ದು ಹೋಗುತ್ತಿವೆ.
ಆಮೀರ್‌ ಖಾನ್‌ ಸಿನಿಮಾ ಜೀವನದಲ್ಲೇ ಇದು ಅತ್ಯಂತ ಕಳಪೆ ಓಪನಿಂಗ್..! title=

ಬಾಲಿವುಡ್‌ ಸ್ಟಾರ್‌ಗಳ ಗ್ರಹಚಾರ ಸರಿಯಿಲ್ಲ ಅಂತಾ ಕಾಣುತ್ತೆ, ಯಾಕಂದ್ರೆ ಹಿಂದಿ ಸಿನಿಮಾ ರಂಗದಲ್ಲಿ ಒಂದಾದ ಬಳಿಕ ಒಂದು ಚಿತ್ರಗಳು ತೋಪೆದ್ದು ಹೋಗುತ್ತಿವೆ. ಇದೀಗ ಅದೇ ಸಾಲಿಗೆ ಒಂದಾನೊಂದು ಕಾಲದ ಬಾಲಿವುಡ್‌ನ 'ಮಿಸ್ಟರ್‌ ಪರ್ಫೆಕ್ಟ್‌' ಆಮೀರ್‌ ಖಾನ್‌ ಸಿನಿಮಾ ಕೂಡ ಸೇರ್ಪಡೆಯಾಗಿದೆ. ಆಮೀರ್‌ ಖಾನ್‌ ನಟನೆಯ 'ಲಾಲ್ ಸಿಂಗ್ ಚಡ್ಡಾ' ಹೀನಾಯ ಸೋಲುಂಡು, ಆಮೀರ್‌ ಸಿನಿಮಾ ಕರಿಯರ್‌ನಲ್ಲೇ ಅತ್ಯಂತ ಕಳಪೆ ಓಪನಿಂಗ್‌ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.

ಅಷ್ಟಕ್ಕೂ ರೀಮೇಕ್‌ ಮಾಡೋದು ಕೂಡ ಒಂದು ಕಲೆ.ಅಥವಾ ಹಾಲಿವುಡ್‌ ಸೇರಿದಂತೆ ಬೇರೆ ಬೇರೆ ಭಾಷೆಗಳ ಸಿನಿಮಾಗಳಿಂದ ಸ್ಫೂರ್ತಿ ಪಡೆದು ಸಿನಿಮಾ ತೆಗೆಯೋದು ಬೇರೆ. ಆದರೆ ಆಮೀರ್‌ ಖಾನ್‌ ಮಾಡಿಕೊಂಡ ಎಡವಟ್ಟು ಈಗ ಅವರ ಹೀನಾಯ ಸೋಲಿಗೆ ಕಾರಣವಾಗಿದೆ ಎಂಬ ಚರ್ಚೆಗಳು ನಡೆಯುತ್ತಿವೆ.ಅದು ಯಾವ ಮಟ್ಟಿಗೆ ಎಫೆಕ್ಟ್‌ ಕೊಟ್ಟಿದೆ ಅಂದ್ರೆ ದೇಶಾದ್ಯಂತ 1300ಕ್ಕೂ ಹೆಚ್ಚು ಶೋ ಒಂದೇ ದಿನ ಕ್ಯಾನ್ಸಲ್‌ ಆಗಿವೆ. ಈ ಬೆಳವಣಿಗೆ ಆಮೀರ್‌ ಖಾನ್‌ ಸಿನಿಮಾ ಕರಿಯರ್‌ ಮುಗಿಯಿತಾ..? ಎಂಬ ಅನುಮಾನ ಹುಟ್ಟಿಸಿದೆ.

ಇದನ್ನೂ ಓದಿ: "ಮೊದಲು ವಿಧಾನಸೌಧದ 3ನೇ ಮಹಡಿ ಸ್ವಚ್ಚ ಮಾಡಿ ": ಹೆಚ್.ಡಿ.ಕುಮಾರಸ್ವಾಮಿ

 ₹100 ಕೋಟಿ ನಷ್ಟ..?
ಹೌದು, 'ಲಾಲ್ ಸಿಂಗ್ ಚಡ್ಡಾ' ಸಿನಿಮಾಗೆ ₹180 ಕೋಟಿ ಖರ್ಚು ಮಾಡಿದ್ದರು.ಆದರೆ ಈವರೆಗೂ 'ಲಾಲ್ ಸಿಂಗ್ ಚಡ್ಡಾ' ಗಳಿಸಿರುವ ಹಣದ ಲೆಕ್ಕಾಚಾರ ₹25 ಕೋಟಿಯನ್ನೂ ದಾಟಿಲ್ಲ.ಮೊದಲ ದಿನ ಕೇವಲ ₹12 ಕೋಟಿ ರೂಪಾಯಿ ಗಳಿಸಿದ್ದ 'ಲಾಲ್ ಸಿಂಗ್ ಚಡ್ಡಾ', 2ನೇ ದಿನ ಸುಮಾರು ₹7 ಕೋಟಿ ಗಳಿಸಿದೆ ಎನ್ನಲಾಗಿದೆ.ಇದರ ಜೊತೆಗೆ ದೇಶಾದ್ಯಂತ ಸುಮಾರು 1300 ಸ್ಕ್ರೀನ್‌ಗಳಲ್ಲಿ 'ಲಾಲ್ ಸಿಂಗ್ ಚಡ್ಡಾ' ಪ್ರದರ್ಶನವನ್ನ ರದ್ದು ಮಾಡಲಾಗಿದೆ.ಈ ಮೂಲಕ ₹100 ಕೋಟಿಗೂ ಹೆಚ್ಚು ನಷ್ಟವಾಗಿರಬಹುದು ಎಂದು ಬಾಕ್ಸ್‌ ಆಫಿಸ್‌ ತಜ್ಞರು ಅಂದಾಜಿಸಿದ್ದಾರೆ.

ಥಿಯೇಟರ್‌ ಖಾಲಿ..!

ಜನರೇ ಇಲ್ಲದೆ ಖಾಲಿ ಥಿಯೇಟರ್‌ಗಳಲ್ಲಿ 'ಲಾಲ್ ಸಿಂಗ್ ಚಡ್ಡಾ' ಪ್ರದರ್ಶನ ಆಗುತ್ತಿದೆ.ಈ ಮೂಲಕ ಆಮೀರ್‌ ಖಾನ್‌ ಸಿನಿಮಾ ಜೀವನದಲ್ಲೇ ಇದು ಕಳಪೆ ಓಪನಿಂಗ್ ಎಂಬ ಅಪಖ್ಯಾತಿಗೆ 'ಲಾಲ್ ಸಿಂಗ್ ಚಡ್ಡಾ' ಪಾತ್ರವಾಗಿದೆ. ಹಾಗೇ ಬಾಲಿವುಡ್‌ ಇಂಡಸ್ಟ್ರಿಗೆ ದೊಡ್ಡ ಶಾಕ್‌ ನೀಡಿದೆ.ಮತ್ತೊಂದು ಕಡೆ ಮೊದಲ ದಿನಕ್ಕೂ 3ನೇ ದಿನಕ್ಕೂ ಸುಮಾರು 40% ಪ್ರೇಕ್ಷಕರ ಎಂಟ್ರಿ ಕಡಿಮೆಯಾಗಿದೆ. ಆದರೆ ವೀಕೆಂಡ್‌ನಲ್ಲಿ ಹೆಚ್ಚು ಪ್ರೇಕ್ಷಕರು ಬರಬೇಕಿತ್ತು.ಈ ಎಲ್ಲಾ ಬೆಳವಣಿಗೆ ಬಾಲಿವುಡ್‌ನಲ್ಲಿ ಬಿರುಗಾಳಿ ಎಬ್ಬಿಸಿಬಿಟ್ಟಿದೆ.

ಇದನ್ನೂ ಓದಿ: 'ಬಿಜೆಪಿಯವರು ಪ್ರತಿ ಮನೆಯಲ್ಲೂ ಬಾವುಟ ಹಾರಿಸಿ ಎನ್ನುತ್ತಿದ್ದಾರೆ.ಮನೆಗಳೇ ಇಲ್ಲದವರು ಎಲ್ಲಿಂದ ಧ್ವಜ ಹಾರಿಸಬೇಕು?'

ಇದು, 1994ರಲ್ಲಿ ರಿಲೀಸ್‌ ಆಗಿದ್ದ ಹಾಲಿವುಡ್‌ ಲೆಜೆಂಡ್‌ ಟಾಮ್‌ ಹ್ಯಾಂಕ್ಸ್ ಅಭಿನಯದ 'ಫಾರೆಸ್ಟ್ ಗಂಪ್' ರೀಮೇಕ್.‌ 'ಲಾಲ್ ಸಿಂಗ್ ಚಡ್ಡಾ' ಸಿನಿಮಾ 'ಫಾರೆಸ್ಟ್ ಗಂಪ್' ರೀಮೇಕ್‌ ಆಗಿದ್ದರೂ ಒಂದಷ್ಟು ವಿಶೇಷತೆ ಇರಬಹುದು ಎಂಬ ಲೆಕ್ಕಾಚಾರ ಅಭಿಮಾನಿಗಳಿಗೆ ಇತ್ತು. ಆದರೆ ಎಲ್ಲಾ ಲೆಕ್ಕಾಚಾರಗಳು 'ಲಾಲ್ ಸಿಂಗ್ ಚಡ್ಡಾ' ಬಿಡುಗಡೆಯಾದ ನಂತರ ಉಲ್ಟಾ ಹೊಡೆದಿವೆ. ₹180 ಕೋಟಿ ಸುರಿದು ಆಮೀರ್‌ ಖಾನ್‌ ತೆಗೆದಿದ್ದ ಸಿನಿಮಾ ಸೋತು ಸುಣ್ಣವಾಗಿದೆ. ಅದೆಷ್ಟೋ ಹಿಟ್‌ ಸಿನಿಮಾಗಳನ್ನ ನೀಡಿದ್ದ, ಬಾಲಿವುಡ್‌ 'ಮಿಸ್ಟರ್‌ ಪರ್ಫೆಕ್ಟ್‌' ಎಂಬ ಕೀರ್ತಿ ಪಡೆದಿದ್ದ ಆಮೀರ್‌ ಖಾನ್‌ ತೀವ್ರ ನಷ್ಟ ಅನುಭವಿಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

 

 

 

 

 

 

 

 

Trending News